ಶೀಘ್ರವೇ.. ಗ್ರಾಹಕರ ಮನೆಬಾಗಿಲಿಗೆ KSRTC ಕೊರಿಯರ್ ಸರ್ವಿಸ್..

0

ಬೆಂಗಳೂರು: ಕೇವಲ ಸುಖಕರ ಪ್ರಯಾಣಕ್ಕೆ ಮಾತ್ರ ತಾನು  ಸೀಮಿತವಲ್ಲ,ಜನೋಪಯೋಗಿ ಉದ್ದೇಶಕ್ಕೂ ಒದಗಬಲ್ಲೆ ಎನ್ನುವುದನ್ನು ಸಾರಹೊರಟಿದೆ ಕೆಎಸ್ ಆರ್ ಟಿಸಿ. ದೇಶದ ಅತ್ಯುತ್ತಮ ಸಾರಿಗೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದಿರುವ ಕೆಎಸ್ ಆರ್ ಟಿಸಿ ಸ್ಥಾಪಿಸಲಿಕ್ಕೆ ಹೊರಟಿರುವ  ಮತ್ತೊಂದು ಮೈಲಿಗಲ್ಲಿದು. ಶೀಘ್ರವೇ  ಗ್ರಾಹಕರ ಮನೆ ಬಾಗಿಲಿಗೆ  ಕೊರಿಯರ್ ಸೇವೆ ಸೇಫ್ ಹಾಗೂ ರಿಯಾಯ್ತಿ ದರದಲ್ಲಿ ಲಭ್ಯವಾಗಲಿದೆ.ಇದರಿಂದೆ ಲಾಭದ ಲೆಕ್ಕಾಚಾರ ಸ್ಪಷ್ಟ.

ಕೆಎಸ್ ಆರ್ ಟಿಸಿ,4 ಸಾರಿಗೆ ನಿಗಮಗಳ ಪೈಕಿ ಒಂದಷ್ಟು ಲಾಭದಲ್ಲಿರುವ ಸಂಸ್ಥೆ. ಇರೋದ್ರಲ್ಲೇ ಹೇಗೋ ವ್ಯವಸ್ಥೆಯನ್ನು ಸಂಭಾಳಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಆದಾಯ ಬರುತ್ತಿದ್ದ ನಿಗಮ ಇದೀಗ ಕೊರೊನಾದ ಕಾರಣಕ್ಕೆ ಸಹಜವಾಗೇ ಸಂಕಷ್ಟಕ್ಕೆ ಸಿಲುಕಿದೆ.ಸರ್ಕಾರದಿಂದ  ದೊರೆಯಬೇಕಿದ್ದ ನೆರವಿಗೆ ಬ್ರೇಕ್ ಬಿದ್ದಿರೋದ್ರಿಂದ ನಿಗಮ ಮೊದಲಿದ್ದ ಸ್ಥಿತಿಗೆ ಬರೊಕ್ಕೆ ವರ್ಷಗಳೇ ಕಾಯ್ಬೇಕಾಗಿ ಬಂದ್ರೂ ಆಶ್ಚರ್ಯಪಡಬೇಕಿಲ್ಲ.ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಸರ್ಕಾರದಿಂದ ಎಲ್ಲಾ ಇಲಾಖೆಗಳಿಗೆ ದೊರೆತಂತೆ ಆದೇಶ-ಸೂಚನೆ ಸಾರಿಗೆ ನಿಗಮಕ್ಕೂ ದೊರೆತ ಹಿನ್ನಲೆಯಲ್ಲಿ ಹಣ ಸೇರಿಸುವ ಪ್ಲ್ಯಾನ್ ಗಳನ್ನು ಹುಡುಕಿಕೊಳ್ಳುತ್ತಿದೆ.  “ಕೊರಿಯರ್ ಸೇವೆ”ಕೂಡ ಈ ಪ್ಲ್ಯಾನ್ ನ ಭಾಗ ಎನ್ನಲಾಗ್ತಿದೆ.

ಕೊರೊನಾದಿಂದ ಸಂಭವಿಸಿರುವ ನಷ್ಟದಿಂದ ಚೇತರಿಸಿಕೊಳ್ಳೊಕ್ಕೆ ಕೊರಿಯರ್ ಸೇವೆ ಆರಂಭಿಸಲಾಗ್ತಿದೆ ಎನ್ನುತ್ತೆ ಕೆಎಸ್ ಆರ್ ಟಿಸಿ.ಅಂದ್ಹಾಗೆ ಇದರಿಂದ  ನಿರೀಕ್ಷಿಸಿರುವ ಆದಾಯ ಹತ್ತಿರತ್ತಿರ ವರ್ಷಕ್ಕೆ100 ಕೋಟಿಯಂತೆ. ಹಳ್ಳಿಹಳ್ಳಿಗೂ ತಲುಪುವಂಥ ಏಕೈಕ ಸಾರಿಗೆ ವ್ಯವಸ್ಥೆ ಇದ್ದರೆ ಅದು ಕೇವಲ ಕೆಎಸ್ ಆರ್ ಟಿಸಿ ಮಾತ್ರ.ಜೊತೆಗೆ ಕೆಎಸ್ ಆರ್ ಟಿಸಿ ಎಂದ್ರೆ ಜನ ನಂಬುತ್ತಾರೆ ಕೂಡ.ಕೊರಿಯರ್ ಸೇವೆ ಆರಂಭಿಸಬೇಕೆನ್ನುವ ಚಿಂತನೆಗೆ ಕಾರಣವೂ ಇದೇ.

ಕೆಎಸ್ ಆರ್ ಟಿಸಿ ಸೇವೆ  ಕೊರಿಯರ್ ಸೇವೆ ಆರಂಭಿಸ್ತೇವೆ ಎಂದ್ರೆ ಯಾರ್ ತಾನೇ ಬೇಡ ಎನ್ನುತ್ತಾರೆ. ಬೇರೆ ಕಂಪೆನಿಗಳು ಕೊರಿಯರ್ ನ್ನು ತಲುಪಿಸೊಕ್ಕೆ ಒಂದಷ್ಟು ಕಾಲ ತೆಗೆದುಕೊಳ್ಳಬಹುದು.ಆದ್ರೆ ಕೆಎಸ್ ಆರ್ ಟಿಸಿ ಕ್ಷಿಪ್ರವಾಗಿ ಕೊರಿಯರ್ ತಲುಪಿಸುವಂಥ ವ್ಯವಸ್ಥೆ ಮಾಡಿದ್ರೆ ಜನಪ್ರಿಯ ಹಾಗೆಯೇ ಜನಜನಿತವಾಗೋದ್ರಲ್ಲಿ ಅನುಮಾನವೇ ಇಲ್ಲ..ಹಾಗಾಗಿ ಈ ಕೊರಿಯರ್ ಸೇವೆ ಆರಂಭಿಸುವ ಉದ್ದೇಶಕ್ಕೆ ಬರಲಾಗಿದೆಯಂತೆ.

ಕೆಎಸ್ ಆರ್ ಟಿಸಿ ಅಧ್ಯಕ್ಷ ಚಂದ್ರಪ್ಪ
ಕೆಎಸ್ ಆರ್ ಟಿಸಿ ಅಧ್ಯಕ್ಷ ಚಂದ್ರಪ್ಪ

ಕೊರಿಯರ್ ಸೇವೆ,ಸಾರಿಗೆ ಸಚಿವ ಲಕ್ಷ್ಮಣ ಸವದಿಯವರ ಕನಸು. ಕೆಎಸ್ ಆರ್ ಟಿಸಿ ವತಿಯಿಂದ ಕೊರಿಯರ್  ಆರಂಭಿಸಿದ್ರೆ ಯಾವೆಲ್ಲಾ ರೀತಿಯಲ್ಲಿ ಜನರಿಗೆ ಪ್ರಯೋಜನವಾಗಬಹುದು ಎನ್ನುವುದರ ಬಗ್ಗೆ ನಿಗಮದ ಅಧಿಕಾರಿಗಳು ರಾಜ್ಯಾದ್ಯಂತ ಸಂಚ ರಿಸಿ ವರದಿ ಸಿದ್ಧಪಡಿಸಿ ರವಾನಿಸಿದೆ ಕೂಡ.ಈ ಕೊರಿಯರ್ ಸರ್ವಿಸ್ ಕಾನ್ಸೆಪ್ಟ್ ಗೆ ಇತರೆ ಮೂರು ನಿಗಮಗಳನ್ನು ಬಳಸಿಕೊಳ್ಳ ಲಾಗ್ತಿದೆ.ಈ ಬಗ್ಗೆ ಮಾಡಿರುವ ಪ್ಲ್ಯಾನ್ ಗೆ ತಾಂತ್ರಿಕ ಸಮಿತಿ  ಹಾಗೂ ತಜ್ಞರು ಕೂಡ ಸಮ್ಮತಿ ಸೂಚಿಸಿದ್ದಾರೆ.ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಚಾಂಪಿಯನ್ ಗ್ರೂಪ್ ಎನ್ನುವ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆಯಂತೆ.

ಇನ್ನು ಚಾಂಪಿಯನ್  ಸಂಸ್ಥೆಗೆ ಶೇಕಡಾ 17.5 ರಷ್ಟು ಕಮಿಷನ್ ನೀಡಲು ಕೂಡ ನಿರ್ದರಿಸಲಾಗಿದೆ.ಇದಕ್ಕಾಗಿ ಗೋದಾಮು..ಸಿಬ್ಬಂದಿ ಎಲ್ಲವನ್ನೂ ಆ ಸಂಸ್ಥೆಯೇ ನೋಡಿಕೊಳ್ಳಲಿದೆ.ಹೊರಗುತ್ತಿಗೆ ಸಂಸ್ಥೆ ಏನೇ ಮಾಡಿದ್ರೂ ಅದರ ವಹಿವಾಟು ಕೆಎಸ್ ಆರ್ ಟಿಸಿ ಕೈಯಲ್ಲೇ ಇರಲಿದೆ.ಹಾಗಾಗಿ ಹಣ ದುರ್ಬಳಕೆ ಪ್ರಶ್ನೆಯೇ ಬರುವುದಿಲ್ಲ  ಎಂದು ಎನ್ನುತ್ತಾರೆ ಕೆಎಸ್ ಆರ್ ಟಿಸಿ ಅಧಿಕಾರಿಗಳು.

ಶೀಘ್ರವೇ ಮುಖ್ಯಮಂತ್ರಿ ಯಡಿಯೂರಪ್ಪ ಲೋಕಾರ್ಪಣೆ ಮಾಡಲಿರುವ ಈ  ಕೊರಿಯರ್ ಸೇವೆ ನಿರ್ವಹಣೆ ಹಾಗೂ ಬಳಕೆಗೆ ಪ್ರತ್ಯೇಕ ಸಾಫ್ಟ್ ವೇರ ಕೂಡ ಸಿದ್ದವಾಗಿದೆಯಂತೆ.ಇದಕ್ಕಾಗಿ ಅಂಚೆ ಇಲಾಖೆಯ ಜತೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ.ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕೆಎಸ್ ಆರ್ ಟಿಸಿ  ಗೆ ವರ್ಷಕ್ಕೆ 100 ಕೋಟಿ ಹಿಡಿಗಂಟು ತಂದ್ ಕೊಡಲಿರುವ ಈ ಕೊರಿಯರ್ ಸೇವೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಗಿರುವುದಂತೂ ಸ್ಪಷ್ಟ.  

Spread the love
Leave A Reply

Your email address will not be published.

Flash News