ಜೀವದ ಹಂಗು ತೊರೆದು ಜನರನ್ನು ಕಾಯುವ ಪೊಲೀಸರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಕೊಡೊಲ್ಲ ಎಂದ್ರೇನು ಅರ್ಥ..!!

0

ಬೆಂಗಳೂರು: ದಿನದ 24 ಗಂಟೆ ಜನರು ನೆಮ್ಮದಿಯಾಗಿರೊಕ್ಕೆ ತಮ್ಮ ಆಸೆ-ಆಕಾಂಕ್ಷೆಗಳನ್ನೆಲ್ಲಾ ಬಲಿಗೊಟ್ಟು ದುಡಿವ ಪೊಲೀಸ್ರು ಪಡುವ ಕಷ್ಟ- ಅನುಭವಿಸುವ ತೊಳಲಾಟ ಮೇಲಾಧಿಕಾರಿಗಳಿಗೆ ಗೊತ್ತಾಗ್ತಲೇ ಇಲ್ಲ..ಗೊತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲವೇನೋ ..ಹಾಗಾಗಿನೇ ಕನ್ನಡ ಫ್ಲಾಶ್ ನ್ಯೂಸ್ ನೇರವಾಗಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಏನ್ ಸರ್ ಇದೆಲ್ಲಾ ಎಂದು ನೇರವಾಗೇ ಪ್ರಶ್ನಿಸಲು ಇಚ್ಛಿಸುತ್ತೆ.

ಎಲ್ಲರಿಗೂ ಗೊತ್ತಿರುವಂತೆ ನಮ್ಮ ಪೊಲೀಸ್ರು  ದಿನದ ಬಹುತೇಕ ಸಮಯವನ್ನು ಜನರ ನಡುವೆ-ಟ್ರಾಫಿಕ್ ಕಿರಿಕಿರಿ ಮಧ್ಯೆಯೇ ಕಳೆಯುತ್ತಾರೆ  ಜನರ ಶಾಪ-ಬೈಗುಳದ ಜೊತೆಗೆ ಟ್ರಾಫಿಕ್ ನ ಮಾಲಿನ್ಯ ಅವರ ನೆಮ್ಮದಿಯನ್ನಷ್ಟೇ ಅಲ್ಲ,ಆರೋಗ್ಯವನ್ನೂ ಹಾಳು ಮಾಡ್ತಿದೆ.ಹೃದಯ-ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುತ್ತಲೇ ಇರುತ್ತಾರೆ.ಜನರಿಗೋಸ್ಕರ ದುಡಿಯುವ ಪೊಲೀಸರ ಆರೋಗ್ಯ ಚೆನ್ನಾಗಿರಬೇಕೆಂದು ಸರ್ಕಾರ ಪ್ರತ್ಯೇಕವಾಗಿ ಜಾರಿಗೊಳಿಸಿದ್ದೇ ಆರೋಗ್ಯಭಾಗ್ಯ ಯೋಜನೆ.ಆದ್ರೆ ದುರಂತ ನೋಡಿ,ಸರ್ಕಾರ ಬಿಡುಗಡೆ ಮಾಡಿದ್ದ 30 ಕೋಟಿ ಹಣದಲ್ಲಿ ನಯಾಪೈಸೆಯನ್ನೂ ಪೊಲೀಸ್ ಇಲಾಖೆ ಬಳಸಿಯೇಕೊಂಡಿಲ್ಲ..ಹೀಗಿರುವಾಗ ಪೊಲೀಸ್ ರು ಆರೋಗ್ಯದಿಂದಿರಬೇಕೆಂದ್ರೆ ಹೇಗಾಗುತ್ತೆ ಹೇಳಿ..ಇದನ್ನು ಸೂದ್ ಸಾಹೇಬ್ರೇ ಹೇಳ್ಬೇಕು..

ತನ್ನ ಸಿಬ್ಬಂದಿಗೆ  ಖರ್ಚು ಮಾಡಬೇಕೆಂದು ಪೊಲೀಸ್ ಇಲಾಖೆ ಗೆ ಸರ್ಕಾರ ಬಿಡುಗಡೆ ಮಾಡಿದ್ದ 30 ಕೋಟಿ ಹಣದಲ್ಲಿ ನಯಾ ಪೈಸೆ ಕೂಡ ಖರ್ಚು ಮಾಡಿಲ್ಲದಿರುವುದನ್ನು “ದಿ ಫೈಲ್ “ವೆಬ್  ಸೈಟ್  ವರದಿ ಮಾಡಿದೆ.ಪೊಲೀಸ್ ರ ಆರೋಗ್ಯಕ್ಕೆ ಸಂಬಂಧಿ ಸಿದಂತೆ 42 ಕೋಟಿಯಷ್ಟು ಹಣದ ಲೆಕ್ಕ ಕೊಟ್ಟಿದ್ದ ಇಲಾಖೆಗೆ ಸರ್ಕಾರದ ಆರ್ಥಿಕ ಇಲಾಖೆ ಜೂನ್ 4 ರಂದು 30 ಕೋಟಿ ಬಿಡುಗ ಡೆ ಮಾಡಿತ್ತು. ಒಟ್ಟಾರೆ ಆರೋಗ್ಯಭಾಗ್ಯಕ್ಕೆ 85 ಕೋಟಿ 74 ಲಕ್ಷದ 49 ಸಾವಿರದ 289ರೂ ಗಳ ಅಂದಾಜು ವೆಚ್ಚದ ಪ್ರಸ್ತಾವನೆ ಯನ್ನು ಇಲಾಖೆ ಸರ್ಕಾರದ ಮುಂದಿಟ್ಟಿತ್ತು.ತೂಗಿ ಅಳೆದು 30 ಕೋಟಿ ಬಿಡುಗಡೆ ಮಾಡಿದ್ರೆ,  ಆದೇಶ ಹೊರಬಿದ್ದು ತಿಂಗಳುಗಳೇ ಕಳುದ್ರೂ ನಯಾಪೈಸೆ ಹಣವನ್ನು ಆರೋಗ್ಯದ ಉದ್ದೇಶಗಳಿಗೆ ಖರ್ಚು ಮಾಡಿಯೇ ಇಲ್ಲ.

ವಿವಿಧ ಆರೋಗ್ಯದ ಸಮಸ್ಯೆಗಳಿಂದ ಪೊಲೀಸರು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದ ಬಿಲ್ ನ್ನು ಈವರೆಗೂ ಪಾವತಿಸಿಲ್ಲ. ಇದರ ಮೊತ್ತವೇ ಅದೆಷ್ಟೋ ಕೋಟಿಗಳಷ್ಷಿದೆ.ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗಿರುವುದಕ್ಕೆ ಕೆಂಡಾಮಂಡಲವಾಗಿರುವ ಆಡಳಿತಮಂಡಳಿಗಳು ಇಲಾಖೆಯ ಮುಖ್ಯಸ್ಥರಿಗೆ ನೇರವಾಗಿಯೇ ಚಿಕಿತ್ಸೆ ನೀಡೊಲ್ಲ ಎಂದ್ಹೇಳಿ ಕಳುಹಿಸುತ್ತಿವೆಯಂತೆ.

ಲಾಕ್ ಡೌನ್ ನಂಥ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿಯೂ ಚಿಕಿತ್ಸೆ ಕೊಟ್ಟು ಬಾಕಿ ಪಾವತಿಸದೆ ಇರೋದ್ರಿಂದ ಖಾಸಗಿ ಆಸ್ಪತ್ರೆಗಳು ಸಾರಾಸಗಟಾಗಿ ಚಿಕಿತ್ಸೆಗೆ ನಿರಾಕರಿಸ್ತಿವೆ. ಈ ಬಗ್ಗೆ ಗೃಹಸಚಿವ ಬಸವರಾಜ  ಬೊಮ್ಮಾಯಿ ಕೂಡ ಇಲಾಖೆಯ ಮುಖ್ಯಸ್ಥರುಗಳ ಧೋರಣೆಗೆ ವ್ಯಗ್ರಗೊಂಡಿದ್ದಾರಷ್ಟೇ ಅಲ್ಲ,ಈ ಕೂಡಲೇ ಹಣ ಬಿಡುಗಡೆ ಮಾಡಿ ಎಂದು ಖಡಕ್ಕಾಗಿಯೇ ಆದೇಶಿಸಿದ್ದಾರಂತೆ.

ಅಂದ್ಹಾಗೆ ಕಳೆದೊಂದಷ್ಟು ವರ್ಷಗಳಲ್ಲಿ ಸರ್ಕಾರ ಪೊಲೀಸ್ ಇಲಾಖೆಗೆ ಆರೋಗ್ಯಭಾಗ್ಯಕ್ಕಾಗಿ ಬಿಡುಗಡೆ ಮಾಡಿದ ಹಣದ ಲೆಕ್ಕ ದೊಡ್ಡದಿದೆ.2015ರಿಂದ 2018 ಅಂದ್ರೆ ಮೂರು ವರ್ಷಗಳಲ್ಲಿ 211 ಕೋಟಿ 98 ಲಕ್ಷದಷ್ಟು ಹಣ ಮಂಜೂರು ಮಾಡಿತ್ತು.ಉಳಿದ 168 ಕೋಟಿ 27 ಲಕ್ಷದಷ್ಟು ಹಣವನ್ನು ಮರುಪಾವತಿಸಲು ಸಮ್ಮತಿ ಸೂಚಿಸಿದೆ.ಇದಷ್ಟೇ ಅಲ್ಲ ಕರ್ನಾಟಕ ಪೊಲೀಸ್ ವೆಲ್ಫೇರ್ ಟ್ರಸ್ಟ್ ನಿಂದಲೂ 43 ಕೋಟಿ,71 ಲಕ್ಷದ 49 ಸಾವಿರದಷ್ಟು ಹಣವನ್ನು ಪಾವತಿಸಿತ್ತು.

ಅಂದ್ಹಾಗೆ ಈವರೆಗೆ ಬಿಡುಗಡೆ ಮಾಡಿದ 211 ಕೋಟಿ ರೂಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ 2015 ರಲ್ಲಿ 51  ಕೋಟಿ 87 ಲಕ್ಷ,2016ರಲ್ಲಿ 45 ಕೋಟಿ  47 ಲಕ್ಷ ,2017ರಲ್ಲಿ 50 ಕೋಟಿ ಹಾಗೂ 2018 ರಲ್ಲಿ 64 ಕೋಟಿ 55 ಲಕ್ಷದಷ್ಟು ಹಣವನ್ನು ಪಾವತಿಸಿದೆ.ಈ ನಡುವೆ ಅವರಲ್ಲಿ ತೀವ್ರ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮೊದ್ಲು ಅಡ್ವಾನ್ಸ್ ಮಾಡಿ..ನಂತ್ರ ಚಿಕಿತ್ಸೆ ಕೊಡ್ತೀವಂಥ ಆಸ್ಪತ್ರೆಗಳು ಡಿಮ್ಯಾಂಡ್  ಕ್ರಿಯೇಟ್ ಮಾಡುತ್ತಿವೆಯಂತೆ..ಇದು ಪೊಲೀಸ್ ಇಲಾಖೆಗೆ ಮತ್ತೊಂದು ದೊಡ್ಡ ತಲೆನೋವಾಗಿದೆ.

ಇಷ್ಟೆಲ್ಲಾ ಆದ್ಮೇಲೂ ಪ್ರವೀಣ್ ಸೂದ್ ಸಾಹೇಬ್ರು ಸುಮ್ಮನಿದ್ದರೆ ನಿಜಕ್ಕೂ ಚೆನ್ನಾಗಿರೊಲ್ಲ..30 ಕೋಟಿ ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ಕೊಟ್ಟು ತಮ್ಮ ಇಲಾಖೆಯವರಿಗೆ  ಕ್ಲೋಸ್ ಆಗಿರುವ ಆಸ್ಪತ್ರೆಗಳ ಬಾಗಿಲನ್ನು ತೆಗೆಯಿಸೋ ಕೆಲಸ ಮಾಡಬೇಕಿದೆ..   

Spread the love
Leave A Reply

Your email address will not be published.

Flash News