ತುಮಕೂರಿನಲ್ಲಿ ಗಂಡು ರೈತರ ಶಾಧಿಭಾಗ್ಯಕ್ಕೆ “ಬಾಂಡ್” ಭಾಗ್ಯ..!

0

ತುಮಕೂರು:ಜನರನ್ನು ಆಕರ್ಷಿಸೊಕ್ಕೆ ಸರ್ಕಾರ ನಾನಾ ರೀತಿಯ ಆಫರ್ಸ್ ಗಳನ್ನು ಬಾಂಡ್ ರೂಪದಲ್ಲಿ ನೀಡುತ್ತಾ ಬಂದಿದೆ.ಆದರೆ ತುಮಕೂರಿನಲ್ಲಿ ಒಂದು ವಿಚಿತ್ರವಾದ ಬಾಂಡ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ.

ರೈತ ನಮ್ಮ ದೇಶದ ಬೆನ್ನುಲುಬು..ಅವರಿಲ್ಲದೆ ದೇಶ ಕಲ್ಪಿಸಿಕೊಳ್ಳೊಕ್ಕೋ ಸಾಧ್ಯಇಲ್ಲ. ಈಗಾಗಲೇ ಸರಕಾರಗಳು ರೈತರಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿವೆ. ಆದರೆ ಅದೆಷ್ಟೋ ಯೋಜನೆಗೂ ಈಗಲೂ ರೈತರಿಗೆ ಸಿಗದೇ ಮರೀಚಿಕೆಯಾಗಿ ಉಳಿದಿದೆ.  ಈ ನಡುವೆಯೇ ತುಮಕೂರಿನಲ್ಲಿ ವಿಚಿತ್ರ ಬೇಡಿಕೆಯೊಂದು ಸದ್ದು ಮಾಡುತ್ತಿದೆ… ಆ ವಿಭಿನ್ನ ಬೇಡಿಕೆಯೆ ಗಂಡು ರೈತರಿಗೆ ಬಾಂಡ್ ಭಾಗ್ಯ….

 ಹೆಣ್ಣುಮಕ್ಕಳು ತಾವು ಮದುವೆ ಆಗುವವರು ಸರಕಾರಿ ಉದ್ಯೋಗದಲ್ಲಿರಬೇಕು, ಐಟಿ ಬಿಟಿಯಲ್ಲಿ ಕಾರ್ಯನಿರ್ವಸುತ್ತಿರಬೇಕು ಹಾಗಿರಬೇಕು ಹೀಗಿರಬೇಕು ಅಂತ ಕನಸು ಕಾಣ್ತಾರೆ. ಆದರೆ  ತಾನು ರೈತನನ್ನ ಮದುವೆ ಆಗಬೇಕು ಅನ್ನೋ ಹೆಣ್ಣುಮಕ್ಕಳು ತೀರಾ ಕಡಿಮೆ. ಈ ನಿಟ್ಟಿನಲ್ಲಿ ಪುರುಷ  ರೈತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಯಾರು ಮದುವೆ ವಯಸ್ಸಿನ ರೈತರನ್ನ ಮದುವೆ ಆಗ್ತಾರೋ ಅಂತವರಿಗೆ 3  ಲಕ್ಷ ಬಾಂಡ್ ನೀಡುವ ಯೋಜನೆ ಗಂಡು ರೈತರ ಬಾಂಡ್ ಭಾಗ್ಯ.

ಗ್ರಾಮೀಣ ಭಾಗದ ಅದೆಷ್ಟೋ ರೈತರು ತಮಗೊಂದು ಮದ್ವೆ ಆದ್ರೆ ಚೆನ್ನಾಗಿರುತ್ತೆ. ಆದ್ರೆ ನಮಗೆಲ್ಲಿ ಯಾರು ಹೆಣ್ಣು ಕೊಡ್ತಾರೆ ಅನ್ನೊ ಯೋಚನೆಯಲ್ಲಿ ಮುಳುಗಿದ್ದಾರೆ. ಒಂದು ವೇಳೆ ಈ ಗಂಡು ರೈತರ ಬಾಂಡ್ ಯೋಜನೆ ಜಾರಿಗೆ ಬಂದ್ರೆ ಸಾಕಷ್ಟು ರೈತರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.

ಅಲ್ಲದೇ,  ಹೆಣ್ಣಿನ ಕಡೆಯವರಿಗೂ ಕೂಡ ರೈತರಿಗೆ ತಮ್ಮ ಹೆಣ್ಣು ಮಕ್ಕಳನ್ನ ಕೊಟ್ಟು ಮದುವೆ ಮಾಡಲು ಮುಂದಾಗುತ್ತಾರೆ.ಒಟ್ಟಾರೆ ಗಂಡು ರೈತರಿಗೆ ಬಾಂಡ್ ಭಾಗ್ಯ ಜಾರಿಗೆ ಬಂದ್ರೆ ರಾಜ್ಯದಲ್ಲಿ ಕೃಷಿ ಮಾಡಿಕೊಂಡಿರುವ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಹಾಗೆ ಹೆಣ್ಣು ಮಕ್ಕಳು ಕೂಡ ರೈತ ವರನನ್ನ ಮದುವೆ ಆಗಲು ಉತ್ಸಾಹ ತೋರುತ್ತಾರೆ. ನೀವು ತುಮಕೂರಿನ ಗಂಡು ರೈತರಾಗಿದ್ರೆ,ಅದರಲ್ಲೂ ಮದುವೆ ವಯಸ್ಸಿಗೆ ಬಂದಿದ್ರೆ ಮರೆಯದೆ ಈ ಬಾಂಡ್ ನ ಪ್ರಯೋಜನವನ್ನು ಪಡೆದುಕೊಳ್ಳಿ.  

Spread the love
Leave A Reply

Your email address will not be published.

Flash News