ಗುಜರಿ  ಸೇರಬೇಕಿದ್ದ KSRTC ಸ್ಕ್ರಾಪ್ ಬಸ್ ಮಹಿಳೆಯರ ಟಾಯ್ಲೆಟ್ ಆದ ಕಥೆ-ಗಮನ ಸೆಳೆಯುತ್ತಿದೆ ಮೆಜೆಸ್ಟಿಕ್ ನಲ್ಲಿ ನಿಂತಿರುವ ಅತ್ಯಾಧುನಿಕ ಟಾಯ್ಲೆಟ್ ಬಸ್

0

ಬೆಂಗಳೂರು:ಕೆಎಸ್ ಆರ್ ಟಿಸಿ ಸುದ್ದಿಯಲ್ಲಿದೆ.ಈ ಬಾರಿಯ ಸುದ್ದಿಗೆ ಕಾರಣ ಅದು ಮಾಡಿರುವ ಒಳ್ಳೆಯ ಕಾರ್ಯ.ಓಡದೆ ಗುಜರಿಗೆ ಸ್ಕ್ರಾಫ್ ಐಟಮ್ಮಾಗಿ ಸೇರಬೇಕಿದ್ದ ಬಸ್ಸ್ ಲೇಡಿಸ್ ಟಾಯ್ಲೆಟ್ ಆಗಿ ರೂಪಾಂತರಗೊಂಡಿದೆ.ಹೀಗೂ ಒಂದೊಳ್ಳೆ ಪ್ರಯತ್ನ ನಡೀಬೋದಾ ಎನ್ನುವುದಕ್ಕೆ ನಿದರ್ಶನದಂತಿದೆ ಬಸ್ ನೊಳಗೆ ನಿರ್ಮಾಣಗೊಂಡಿರುವ ಸುಸಜ್ಜಿತ ಟಾಯ್ಲೆಟ್.ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಲ್ಪಟ್ಟಿರುವ ಈ ಟಾಯ್ಲೆಟ್ ಎಲ್ಲರ ಗಮನ ಸೆಳೆಯುತ್ತಿದೆ.

ಕೆಂಪೇಗೌಡ ಬಸ್ ನಿಲ್ದಾಣದ ಒಂದನೇ ಟರ್ಮಿನಲ್ ಪ್ರವೇಶ ದ್ವಾರದಲ್ಲಿ ನಿಲ್ಲಿಸಲಾಗಿರುವ ಬಸ್ ನ ಒಳಗೆ ಮೂರು ಭಾರತೀಯ ಶೈಲಿ ಮೂರು ಶೌಚಾಲಯ ಹಾಗೂ ಎರಡು ಪಾಶ್ಚಾತ್ಯ ಶೈಲಿಯ ಶೌಚಾಲಯ ಸೇರಿದಂತೆ ಒಟ್ಟು ಐದು ಶೌಚಾಲಯ ನಿರ್ಮಿಸಲಾಗಿದೆ.  ಸ್ತ್ರೀಯರ ಬಳಕೆಗೆ ಮಾತ್ರ ಸೀಮಿತಗೊಳಿಸಿರುವ ಈ ಟಾಯ್ಲೆಟ್ ನಲ್ಲಿ  ಮೂತ್ರ ವಿಸರ್ಜನೆ ಮಾತ್ರ ಫ್ರೀ..ಬಹಿರ್ದೆಸೆಗೆ ಫೀಜ್ ಕಟ್ಟಲೇಬೇಕು.

ಕೆಎಸ್ ಆರ್ ಟಿಸಿ ಆರು ತಿಂಗಳಲ್ಲೇ ಕರೋನಾ ಹೊಡೆತಕ್ಕೆ ಸಿಲುಕಿದ್ದು ಅದರ ಆದಾಯ ಪಾತಾಳ ಕಚ್ಚಿದ್ದು ಎಲ್ಲರಿಗೂ ಗೊತ್ತಿರುವಂತದ್ದೇ…ಒಂದಷ್ಟು ಪ್ರಯತ್ನ ಮಾಡಿದ್ರೂ ಯಾವುದೇ ರೀತಿಯಲ್ಲೂ ಸುಧಾರಣೆ ಸಾಧ್ಯವಾಗಿಲ್ಲ..ಇಂಥ ಬೇಸರಗಳ ನಡುವೆಯೇ  ಗುಜರಿ ಸೇರಬೇಕಿದ್ದ   ಬಸ್ಸಿನಲ್ಲಿ ಒಂದಷ್ಟು ಬದಲಾವಣೆ ಮಾಡಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಟಾಯ್ಲೆಟ್ ಆಗಿ ರೂಪಾಂತರಗೊಂಡಿರುವ  ಬಸ್ ನಲ್ಲಿ ಮಹಿಳೆಯರು ಮಕ್ಕಳಿಗೆ ಹಾಲುಣಿಸಲು ಪ್ರತೇಕ ಕೊಠಡಿ, ಮಕ್ಕಳಿಗೆ ಡೈಪರ್ ಬದಲಾಯಿಸಲು ಪ್ರತ್ಯೇಕ ಸ್ಥಳ, ಕೈ ತೊಳೆಯಲು ಎರಡು ಬೇಸಿನ್, ಸ್ಯಾನಿಟರಿ ನ್ಯಾಪ್ ಕಿನ್ ವೆಂಡಿಂಗ್ ಯಂತ್ರ, ಸೆನ್ಸಾರ್ ದೀಪಗಳು,ಸೋಲಾರ್ ಲೈಟಿಂಗ್ ಸೇರಿದಂತೆ ಹಲವು ಸೌಲಭ್ಯಗಳಿವೆ.

ಗುಜರಿ ಬಸ್ ನ್ನು ಹೈಟೆಕ್ ಶೌಚಾಲಯವನ್ನಾಗಿ ಪರಿವರ್ತಿಸಲು 12 ಲಕ್ಷ ರೂಪಾಯಿ ಖರ್ಚಾಗಿದೆ. ಪೂಣೆ ಮೂಲದ ಸಂಸ್ಥೆ ಹಳೆ ಗುಜರಿ ಬಸ್ ಅನ್ನು ಹೈಟೆಕ್ ಆಗಿ ಶೌಚಾಲಯದ ಬಸ್ ಆಗಿ ಪರಿವರ್ತಿಸಿದೆ. 1ಕಾಲು ಕೋಟಿ ಜನಸಂಖ್ಯೆಯ ಬೆಂಗಳೂರಿನಲ್ಲಿ ನಿರ್ಮಲ ಶೌಚಾಲಯ ಜೊತೆಗೆ ಬಸ್ ಶೌಚಾಲಯ ನಿರ್ಮಿಸಿರುವ ಈ ಟಾಯ್ಲೆಟ್ ಹೆಣ್ಣು ಮಕ್ಕಳ ಪಾಲಿಗೆ ಅಪ್ಯಾಯಮಾನತೆಯ ಪ್ರಯತ್ನ ಎನ್ನಬಹುದೇನೋ.. ಈ ಯೋಜನೆಎಲ್ಲರಿಗು ತಲುಪಿದ್ರೆ ಪ್ರಯತ್ನ-ಉದ್ದೇಶ ಸಾರ್ಥಕವಾಗಬಹುದೇನೋ..

ಗುಜರಿ  ಸೇರಬೇಕಿದ್ದ KSRTC ಸ್ಕ್ರಾಪ್ ಬಸ್ ಮಹಿಳೆಯರ ಟಾಯ್ಲೆಟ್ ಆದ ಕಥೆ-ಗಮನ ಸೆಳೆಯುತ್ತಿದೆ  ಟಾಯ್ಲೆಟ್  ಬಸ್..

https://www.youtube.com/watch?v=qUszl38YYWI&t=8s

Spread the love
Leave A Reply

Your email address will not be published.

Flash News