“ಕ್ಷೇಮವಾಗಿ ಬಂದರೆ ನಿಮ್ಮ ಸೇವೆ.ಇಲ್ಲದಿದ್ದರೆ ಕ್ಷಮಿಸಿಬಿಡಿ” ಮಾಜಿ ಎಮ್ಮೆಲ್ಲೆ  ಮುನಿರತ್ನರ  ಬರಹದ ಹಿಂದಿರುವ ಮರ್ಮವೇನು..!!

0

ಬೆಂಗಳೂರು:ಇದೊಂದು ವಿಚಿತ್ರ ರೀತಿಯ ಸ್ಟೇಟಸ್ ಎನ್ನಿಸುತ್ತೆ…ಸಾಮಾನ್ಯವಾಗಿ ಯಾವ್ದೇ ಚುನಾಯಿತ ಪ್ರತಿನಿಧಿ ಕೊರೊನಾಕ್ಕೆ ತುತ್ತಾದ್ರೆ ಅದನ್ನು ಸಾರ್ವಜನಿಕಗೊಳಿಸುವ ರೀತಿ,ಜನರೊಂದಿಗೆ ಅದನ್ನು ಹಂಚಿಕೊಳ್ಳುವ ರೀತಿ..ಜನರಿಂದ ಆಶೀರ್ವಾದ ಪಡೆಯುವ ವಿಧಾನವೆಲ್ಲಾ ಜನರೇ ಕನ್ವಿನಿಯನ್ಸ್ ಆಗುವಂತೆ ಇರುತ್ತೆ..ಆದ್ರೆ ಕೊರೊನಾ ಸೋಂಕಿಗೆ ತುತ್ತಾದ ಮಾಜಿ ಶಾಸಕರೊಬ್ಬರ ಸ್ಟೇಟಸ್  ಗಾಬರಿ-ಅಚ್ಚರಿ ಮೂಡಿಸಿದೆ.

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ ಅವರ ಸ್ಟೇಟಸ್ಸೇ ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.ಕೊರೊನಾಗೆ ತುತ್ತಾಗಿರುವ ಅವರು ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದ ಸಂದರ್ಭದಲ್ಲಿ ಫೇಸ್ ಬುಕ್ ನಲ್ಲಿ ಹಾಕಿರುವ ಸ್ಟೇಟಸ್ ತೀರಾ ವಿಚಿತ್ರ ಎನಿಸುವಂತಿದೆ.ಹೀಗೂ ಸ್ಟೇಟಸ್ ಹಾಕ್ತಾರೆ..ಮುನಿರತ್ನ ಅವರಿಗೆ ಇಂತದ್ದೊಂದು ಅಭಾಸಪೂರ್ವಕ ಬರಹ ಹಾಕುವಂಥ ಅಗತ್ಯವೇನಿತ್ತು,,ಇಂಥಾ ಸ್ಟೇಟಸ್ ಹಾಕುವ ಹಿಂದೆ ರಾಜಕೀಯ ಕಾರಣಗಳಿವೆಯಾ ಎನ್ನುವ ಪ್ರಶ್ನೆ ಕೂಡ ಮೂಡ್ತಿದೆ.

“ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನನ್ನ ಎಲ್ಲಾ ಮತದಾರ ದೇವರುಗಳಿಗೆ ವಂದನೆಗಳು.57 ವರ್ಷ ವಯಸ್ಸಿನವನಾದ ನಾನು ಇಂದು ಕೊವಿಡ್ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ.ಕ್ಷೇಮವಾಗಿ ಬಂದರೆ ನಿಮ್ಮ ಸೇವೆ.ಇಲ್ಲದಿದ್ದರೆ ಕ್ಷಮಿಸಿಬಿಡಿ”ಎನ್ನುವ ಬರಹವನ್ನು ಅವರು ತಮ್ಮ ಫೇಸ್ ಬುಕ್ ನಲ್ಲಿ ಹಾಕ್ಕೊಂಡಿದ್ದಾರೆ.

ಈ ಬರಹವನ್ನು ನೋಡಿದ ಮುನಿರತ್ನ ಬೆಂಬಲಿಗರು ತೀವ್ರ ಆತಂಕಗೊಂಡಿದ್ದಾರೆ.ತಮ್ಮ ನಾಯಕನಿಗೆ ಏನೂ ಆಗಬಾರದೆಂದು ತಮ್ಮ ಗ್ರೂಪ್ ಗಳಲ್ಲಿ ಸಂದೇಶ ರವಾನಿಸುತ್ತಿದ್ದಾರೆ.ಇಂತದ್ದೊಂದು ಸ್ಟೇಟಸ್ ಹಾಕುವುದರ ಹಿಂದೆ ಮುನಿರತ್ನ ಅವರ ಜಾಣ್ಮೆ-ರಾಜಕೀಯ ಲೆಕ್ಕಾಚಾರಗಳಿವೆಯಾ ಎನ್ನುವ ಶಂಕೆ ಕೂಡ ವ್ಯಕ್ತವಾಗ್ತಿದೆ.ಕಾನೂನಾತ್ಮಕ ತೊಡಕು ದೂರವಾದಾಕ್ಷಣ ಯಾವುದೇ  ಸಂದರ್ಭದಲ್ಲಿ ಬೇಕಾದ್ರೂ ಆರ್ ಆರ್ ನಗರ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಅಧಿಕಾರವಿಲ್ಲದೆ ಕುಳಿತಿರುವ ಮುನಿರತ್ನ  ಮತದಾರರ ಮನವೊಲಿಸಲು,ಅವರನ್ನು ಎಮೋಷನಲ್ಲಾಗಿ ತನ್ನತ್ತ ಸೆಳೆಯೊಕ್ಕೆ ಇಂತದ್ದೊಂದು ಬರಹ ಹಾಕ್ಕೊಂಡ್ರಾ ಎನ್ನೋದು ಗೊತ್ತಾಗ್ತಿಲ್ಲ..ರಾಜಕೀಯ ಪಟ್ಟುಗಳನ್ನೆಲ್ಲಾ ಚೆನ್ನಾಗಿ ಕರಗತ ಮಾಡಿಕೊಂಡಿರುವ ಮುನಿರತ್ನ ರಾಜಕೀಯವಾಗಿ ಜನರ ಮನಸಲ್ಲಿ ಉಳಿಯೊಕ್ಕೆ ಮಾಡಿರುವ ಮತ್ತೊಂದು ಪೊಲಿಟಿಕಲ್ ಪ್ಲ್ಯಾನ್ ಇದಷ್ಟೇ ಎನ್ನುವುದು ರಾಜಕೀಯ ವಿರೋಧಿಗಳ ಮಾತು.

Spread the love
Leave A Reply

Your email address will not be published.

Flash News