ಡಾ.ರಾಜ್..ವಿಷ್ಣು..ಅಂಬಿ ಸಾರ್ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿತ್ತಾ.. ಗಾಂಧೀನಗರಿಯನ್ನು ಗಾಂಜಾನಗರಿಯಾಗೊಕ್ಕೆ ಬಿಡ್ತಿದ್ರಾ..ನೋ ಚಾನ್ಸ್..

0

ಬೆಂಗಳೂರು: ಇವರ್ ಯೋಗ್ಯತೆಗೆ ಇಷ್ಟು..ಇವ್ರ ಜನ್ಮಕ್ಕಿಷ್ಟು..ಇವರಿಗೇನ್ ನಾಚಿಕೆ ಮಾನ ಮರ್ಯಾದೆ ಇಲ್ವಾ..ಹಣ ಮಾಡ್ಲಿಕ್ಕೆ ಏನ್ ಬೇಕಾದ್ರೂ ಮಾಡ್ಲಿಕ್ಕೂ ಹೇಸದ  ಇವರನ್ನು ಉಳಿಸಿಕೊಂಡಿರುವುದೆ ಕನ್ನಡ ಚಿತ್ರರಂಗದ ದೌರ್ಭಾಗ್ಯ..

ಜೀವನಪೂರ್ತಿ ನೀಯತ್ತಾಗಿ ದುಡಿದ್ರೂ ಒಂದ್ ಮನೆ-ಕಾರು-ಸೈಟ್ ಮಾಡಿಕೊಳ್ಳಲಿಕ್ಕಾಗದೆ ನೂರಾರು ಕಲಾವಿದರು ಚಪ್ಪಲಿ ಸವೆಸುತ್ತಿದ್ದರೆ ಈ “ಬಿನ್ನಾಣಗಿತ್ತಿ”ಯರು ಬಣ್ಣದ ಚಿಟ್ಟೆಗಳು ಒಂದ್ “ಹೂವಿಂದ ಮತ್ತೊಂದು ಹೂವಿಗೆ” ಹಾರ್ತಾ….ಹಣ ಎನ್ನುವ ಮಕರಂದ ಹೀರುತ್ತಾ ನೋಡ ನೋಡುತ್ತಲೇ ಕಾರು-ಬಂಗಲೆ-ಆಳುಕಾಳು-ಹೈ ಫೈ ಲೈಫ್ ಸ್ಟೈಲ್  ಲೀಡ್ ಮಾಡುವ ಮಟ್ಟಕ್ಕೆ ಬೆಳೆಯುತ್ತಾರೆಂದ್ರೆ ಅದು ರಕ್ತಬೆವರಿನ ಶ್ರಮನಾ..ನೀಯತ್ತಿನ ದುಡ್ಡಾ..ನೋ..ನೋ..ನೋ..ಅದೆಲ್ಲಾ ಅಡಬೆ ದುಡ್ಡು..

ವಾಮಮಾರ್ಗಗಳಲ್ಲಿ ಹಣ ಮಾಡ್ಲಿಕ್ಕೆ ಹೋಗಿ ಸಿಕ್ಕಬಿದ್ದ ಅಡ್ನಾಣಿಗಳಿಂದಾಗಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಡ್ರಗ್ಸ್ ಕಳಂಕ ತಟ್ಟಿದೆ.ಉತ್ತರ ಭಾರತದ ನಟೀಮಣಿಯರಿಗೆ ಕರೆದು ರೆಡ್ ಕಾರ್ಪೆಟ್ ಹಾಸಿದ ಕನ್ನಡಿಗರ ಹೃದಯವೈಶಾಲ್ಯವೇ ಇವತ್ತು ನಮಗೆ ಮುಳುವಾಗಿದೆ.. ನಮ್ಮನ್ನು ನಾವೇ ಶಪಿಸಿಕೊಳ್ಳುವ ಸ್ತಿತಿ ಇವತ್ತು ಕನ್ನಡ ಚಿತ್ರರಂಗದ್ದು.ಕನ್ನಡ ಚಲನಚಿತ್ರರಂಗದ ಇತಿಹಾಸವನ್ನು ಒಮ್ಮೆ ನೋಡ್ರಿ.. ಪಂಡ್ರಿಬಾಯಿ, ಲೀಲಾವತಿ, ಎಂ.ವಿ.ರಾಜಮ್ಮ, ಜಯಂತಿ, ಭಾರತಿ, ಕಲ್ಪನ, ಆರತಿ, ಮಂಜುಳರಿಂದ ಹಿಡಿದು ಕನ್ನಡ ಭಾಷೆ ಹಾಗೂ ನೆಟಿವಿಟಿಗೆ ದಶಕಗಳ ಕಾಲ ದುಡಿದವರ ದೊಡ್ಡ  ದಂಡೇ ನಮಗೆ ಕಾಣಸಿಗುತ್ತೆ..ಅವರಿಂದ ಚಿತ್ರರಂಗ ಕಲಿತಿದ್ದು ಅದೆಷ್ಟೋ..ಕಲೆಯನ್ನು ಉಸಿರಾಡಿದ ಕಲಾವಿದರು ಅವರು.

ಆದರೆ…ಆದ್ರೆ  ಇವತ್ತೇನಾಗಿದೆ ನೋಡಿ,ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮ ನಿರ್ಮಾಪಕರು-ನಿರ್ದೇಶಕರಿಗೆ ನಮ್ಮ ಕನ್ನಡದ ಹುಡುಗಿಯರು ಅಪಥ್ಯ.ಅವರಿಗೆ ಪರಭಾಷಾ ನಟಿಯರೇ ಬೇಕು.ಹಾಗಾಗಿ ಪರಭಾಷಾ ನಟಿಯ ದಾಂಗುಡಿಗೆ ಅಸಲು ಕನ್ನಡ ಭಾಷೆ ನಟಿಯರೆ ಚದುರಿಹೋಗಿದ್ದಾರೆ.ಅವಕಾಶಗಳಿಲ್ಲದೆ  ಬೇರೆ ಭಾಷೆಗಳಿಗೆ ಪಲ್ಲಟಗೊಂಡಿದ್ದಾರೆ.ನೋಡಿ ಗಮನಿಸಿ, ಇತ್ತೀಚಿನ ಡ್ರಗ್ಸ್ ಮಾಫಿಯಾದಲ್ಲಿ ಕೇಳಿಬರುತ್ತಿರುವ ಹೆಸರುಗಳಾದರು ಎಂತಹವು..? ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ,..ಐಂದ್ರಿತಾ ರೈ.. ಹೀಗೆ ಸಾಲು ಸಾಲು ನಟಿಯರೆಲ್ಲಾ ನಮ್ಮವರಾ…ಸಾಧ್ಯವೇ ಇಲ್ಲ..ಉತ್ತರ ಭಾರತದವರು.

ಡ್ರಗ್ಸ್ ವಿವಾದದ ಮೂಲಕ ಕನ್ನಡ ಚಿತ್ರರಂಗದ ಘನತೆ ಗೌರವಗಳನ್ನ ಮಣ್ಣು ಪಾಲು ಮಾಡುತ್ತಿರುವ ಇಂಥಾ ನಟೀಮಣಿಯರನ್ನು  ಸಮರ್ಥಿಸಿಕೊಳ್ಳಲು ಒಂದಷ್ಟು ಗುಂಪೇ ಇದೆ ಎನ್ನುವುದಾದ್ರೆ  ಎಲ್ಲಿಗೆ ಬಂತು ನಮ್ಮ  ಗಾಂಧಿನಗರದ ಘನತೆ..?ಡಾ.ರಾಜ್,ವಿಷ್ಣುವರ್ಧನ್,ಶಂಕರ ನಾಗ್,ಅಂಬರೀಶ್  ಅವರಂಥ ಮೇರು ನಟರೆಲ್ಲಾ ಕಾಲವಶರಾಗಿದ್ದಾರೆ. ಅವರಿರುವರೆಗೂ ಒಂದ್ ಹಿಡಿತದಲ್ಲಿತ್ತು ಚಿತ್ರೋದ್ಯಮ.ಇವತ್ತು ಒಡೆಯನೇ ಇಲ್ಲದಂತಾಗಿದೆ.ಒಮ್ಮತ-ಒಗ್ಗಟ್ಟು ಎನ್ನೋದೆ ಹಾಳಾಗಿದೆ.  ಹಾಲಿ ಚಾಲ್ತಿಯಲ್ಲಿರುವ ನಟರ ಹೇಳಿಕೆಗಳಿಗೆ ಬೆಲೆ ಸಿಗುತ್ತಿಲ್ಲ.ನಿರ್ಮಾಪಕರು ನಿರ್ದೇಶಕರು ದಿವ್ಯಮೌನಕ್ಕೆ ಶರಣಾಗಿದ್ದಾರೆ. ಸ್ಥಳೀಯ ನಟ ನಟಿಯರು ಪರಭಾಷಿಯರ ಹೊಡೆತಕ್ಕೆ ಸಿಕ್ಕಿ ನಲುಗಿ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಹೊಸ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಉತ್ತರಭಾರತದ ಮೂಲೆ ಮೂಲೆಯಿಂದ ಅವಕಾಶ ಹರಸಿ ಬಂದ ನಟ ಮಣಿಗಳು ಕನ್ನಡ ಚಿತ್ರರಂಗಕ್ಕೆ ಇದ್ದ ಮಾನ-ಸಮ್ಮಾನ-ಘನತೆಯನ್ನು ಬಿಡಿಕಾಸಿಗೆ ಹರಾಜಾಕಿದ್ದಾರೆ. ಗಾಂಧಿನಗರ ಎನ್ನೋದು ಗಾಂಜಾನಗರವಾಗೋಯ್ತು. ಸದ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಲ್ಲರನ್ನು ಹೊತ್ತು ತಂದು ನಟ್ಟು ಬೋಲ್ಟು ಕಳಚುತ್ತಾ ನೋಟಿಸ್ ನೀಡದೆ ಇದ್ದರೆ ಮುಂದೊಂದು ದಿನ ದೊಡ್ಡ ದುರಂತಕ್ಕೆ ಗಾಂಧಿನಗರ ಸಾಕ್ಷಿಯಾಗುತ್ತಿತ್ತು.

ನಟಿ ರಾಗಿಣಿ ಬಂಧನ,ಈ ದಂಧೆಯಲ್ಲಿ ನಿರತವಾಗಿರಬಹುದಾದ ಮತ್ತೊಂದಷ್ಟು ನಟೀಮಣಿಯರಿಗೆ ಮುಳುವಾಗುವ ಸಾಧ್ಯತೆಗಳಿವೆ.ಮುಂದಿನ ಸರದಿ ಸಂಜನಾದ್ದು ಎನ್ನಲಾಗಿದೆ.ಅವರ ಬೆನ್ನಿಂದೆ ಇನ್ನೆಷ್ಟು ಜನ ಅರೆಸ್ಟ್ ಆಗಲಿದ್ದಾರೋ ಗೊತ್ತಾಗ್ತಿಲ್ಲ..ಹೇಳೋರಿಲ್ಲ..ಕೇಳೋರಿಲ್ಲದಂತಾಗಿರುವ ಕನ್ನಡ ಚಿತ್ರರಂಗಕ್ಕೆ ಇವತ್ತು ಅಣ್ಣಾವ್ರು..ವಿಷ್ಣು ಸರ್..ಅಂಬಿ ಸರ್ ಅವರಂಥವ್ರ ಕೊರತೆ ಹೆಚ್ಚೆಚ್ಚು ಕಾಡುತ್ತಿದೆ.ಅವರೆಲ್ಲಾ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿತ್ತಾ..ಹೀಗೆಲ್ಲಾ ಆಗಲಿಕ್ಕೆ ಬಿಡುತ್ತಿದ್ದರಾ..ಕನ್ನಡಿಗರನ್ನು ತುಳಿದಾಕಿ ಉತ್ತರ ಭಾರತದ ರಂಗೀನ್ ನಟೀಮಣಿಯರು ಕುಣಿಯುತ್ತಾ,ಕನ್ನಡ ಚಿತ್ರರಂಗದ ಮಾನ ಹರಾಜಾಕ್ಲಿಕ್ಕೆ ಅವರು ಬಿಡುತ್ತಿದ್ದರಾ..ಕನ್ನಡ ಚಿತ್ರರಂಗ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸನ್ನಿವೇಶ ಇದು.

Spread the love
Leave A Reply

Your email address will not be published.

Flash News