“ದುನಿಯಾ” ರಶ್ಮಿ ಖಾಸಗಿ ಫೋಟೋಗ್ರಾಫರ್ ನದು ಸಾವೋ..ಕೊಲೆಯೋ..? ಪೋಷಕರ ದೂರಿನಲ್ಲಿ ಕೊಲೆ ಶಂಕೆ..!!

0

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಸುದ್ದಿ ಮಾಡುತ್ತಿರುವಾಗಲೇ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮತ್ತೊಂದು ಅಸಂಭವ ನಡೆದೋಗಿದೆ.ದುನಿಯಾ ಚಿತ್ರ ಖ್ಯಾತಿಯ ರಶ್ಮಿ ಮನೆ ಮೇಲಿಂದ ಫೋಟೋಗ್ರಾಫರ್ ಆಯತಪ್ಪಿ ಬಿದ್ದು ಸಾವನ್ನಪ್ಪಿರುವುದು ಸುದ್ದಿಯಾಗಲೇ ಇಲ್ಲ.ಆದ್ರೆ ತನ್ನ ಮಗ ಸಹಜವಾಗಿ ಸಾವನ್ನಪ್ಪಿಲ್ಲ,ಆತನನ್ನು ಕೆಳಗೆ ದಬ್ಬಿ ಸಾಯಿಸಲಾಗಿದೆ ಎನ್ನುವ ಶಂಕೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಂದ್ಹಾಗೆ ಫೋಟೋಗ್ರಾಫರ್ ಪ್ರತೀಕ್  ದುನಿಯಾ ರಶ್ಮಿ ಕುಟುಂಬಕ್ಕೆ ತೀರಾ ಹತ್ತಿರವಾಗಿದ್ದ..ರಶ್ಮಿ ಅವರ ಫೋಟೋ ಶೂಟ್ ಸೇರಿದಂತೆ ಮನೆಯ ಹಲವು ಖಾಸಗಿ ಕಾರ್ಯಕ್ರಮಗಳ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ.ರಶ್ಮಿ ಜೊತೆಗೆ ತೀರಾ ಸಲಿಗೆಯಿಂದಿದ್ದ ಪ್ರತೀಕ್ ನ್ನು ಮನೆಯ ಮಗನಂತೆ ಟ್ರೀಟ್ ಮಾಡ್ತಿದ್ದರು ಎನ್ನಲಾಗಿದೆ.

ನಾಗರಬಾವಿ ಸಮೀಪದ ಅನ್ನಪೂರ್ಣೇಶ್ವರಿ ನಗರದ ವ್ಯಾಪ್ತಿಯಲ್ಲಿರುವ ರಶ್ಮಿ ಮನೆಯಲ್ಲಿ ಮೊನ್ನೆ ಖಾಸಗಿ ಕಾರ್ಯಕ್ರಮ ನಡೆಯುತ್ತಿತ್ತಂತೆ.ಅದರಲ್ಲಿ ಪ್ರತೀಕ್ ಪಾಲ್ಗೊಂಡಿದ್ದ,ಅಷ್ಟೇ ಅಲ್ಲ, ಫೋಟೋಗಳನ್ನು ತೆಗೆದಿದ್ದ.ಮನೆ ಮಹಡಿ ಮೇಲೆ ಒಂದು ಸಣ್ಣ ಪಾರ್ಟಿಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ರಶ್ಮಿ ಮನೆಯವರೊಂದಿಗೆ ಪ್ರತೀಕ್ ಹರಟುತ್ತಾ ನಿಂತಿದ್ದ ಎನ್ನಲಾಗಿದೆ.

ಪ್ರತೀಕ್ ಜೊತೆ ರಶ್ಮಿ ಸಹೋದರ ಅರುಣ್ ಮಾತನಾಡುತ್ತಿದ್ದರಂತೆ.ಈ ನಡುವೆ ಮಹಡಿ ಇಳಿದು ಅರುಣ್ ಕೆಳಗೆ ಬಂದಿದ್ರಂತೆ.ಸ್ವಲ್ಪ ಸಮಯದ ನಂತ್ರ ಬಂದ್ ನೋಡಿದಾಗ ಪ್ರತೀಕ್ ಕೆಳಗೆ ಬಿದ್ದಿದ್ದ.ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದ್ರೆ ತೀವ್ರ ರಕ್ತಸ್ರಾವವಾಗಿದ್ರಿಂದ ಸಾವನ್ನಪ್ಪಿದ್ದಾನೆ.

ಪ್ರತೀಕ್ ಸಾವಿನಿಂದ ರಶ್ಮಿ ಮನೆಯವರು ಕೂಡ ಶಾಕ್ ಗೆ ಒಳಗಾಗಿದ್ದಾರೆ.ಈ ವಿಷಯ ತಿಳಿದು ಗಾಬರಿಗೊಂಡ ಪ್ರತೀಕ್ ಮನೆಯವ್ರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತಮ್ಮ ದೂರಿನಲ್ಲಿ ಮಗನ ಸಾವು ಸಹಜವಾಗಿಲ್ಲ.ಇದರ ಹಿಂದೆ ಕೊಲೆ ಶಂಕೆ ಇದ್ದು,ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಪ್ರತೀಕ್ ಸಾವು ದುನಿಯಾ ರಶ್ಮಿ ಹಾಗೂ ಆಕೆಯ ಮನೆಯವರಿಗೆ ತೀವ್ರ ಸಂಕಷ್ಟ ಸೃಷ್ಟಿಸಿದೆ. 

Spread the love
Leave A Reply

Your email address will not be published.

Flash News