ಡ್ರಗ್ಸ್ ಮಾಫಿಯಾದಲ್ಲಿ “ಗಂಡ ಹೆಂಡ್ತಿ” ಸಂಜನಾ ಪಾತ್ರವೇ ಇಲ್ವಾ..!!ನೋಟಿಸ್ ನೀಡದಂತೆ ಪ್ರೆಷರ್ ಹಾಕ್ತಿರೋರು ಯಾರು..??ಸಿಸಿಬಿ ಗೆ ಇದ್ಯಾ ಪೊಲಿಟಿಕಲ್ ಪ್ರೆಷರ್..!?

0

ಬೆಂಗಳೂರು:ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ವಿಷಯದಲ್ಲಿ ಸಿಸಿಬಿ ತನಿಖೆ ಗತಿ ನೋಡುದ್ರೆ, ಅದೇಕೋ ಇಡೀ ದಂಧೆಗೆ ರಾಗಿಣಿ ಒಬ್ಬಳೇ ಮಾಸ್ಟರ್ ಮೈಂಡ್-ಕಿಂಗ್ ಪಿನ್ ಎನ್ನೋ ರೇಂಜ್ನಲ್ಲಿ ಟಾರ್ಗೆಟ್ ಮಾಡುವಂತೆ ಕಾಣ್ತಿದೆ.ಇಂದ್ರಜಿತ್ ಲಂಕೇಶ್ ಬಾಯ್ಬಿಟ್ಟ 15 ಹೆಸರುಗಳಲ್ಲಿ ರಾಗಿಣಿ ಒಬ್ಬಳನ್ನು ಬಿಟ್ಟರೆ ಉಳಿದ ಆ 14 ಶಂಕಿತರನ್ನು ಕರೆಯಿಸಿ ವಿಚಾರಣೆ ನಡೆಸೋ ಗೋಜಿಗೇನೇ ಸಿಸಿಬಿ ಹೋಗ್ತಿಲ್ಲ.ಇದೇಕೆ ಎನ್ನುವ ಪ್ರಶ್ನೆ ಕಾಡುತ್ತಿರುವಾಗ್ಲೇ ಗಂಡ ಹೆಂಡತಿ ನಟಿ ಸಂಜನಾ ಗರ್ಲಾನಿ ವಿಷಯದಲ್ಲಿ ತೋರಲಾಗ್ತಿರುವ “ಸಾಫ್ಟ್ ಕಾರ್ನರ್” ಧೋರಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಡ್ರಗ್ಸ್ ದಂಧೆ ಜೊತೆ ರಾಗಿಣಿಗೆ ಇರೋ ಲಿಂಕ್ ಸುತ್ತಲೇ ಸಿಸಿಬಿ ತನಿಖೆಯೇಕೋ ಗಿರಕಿ ಹೊಡೆಯುತ್ತಿದೆ.ಆಕೆ ಹಾಗೂ ಆಕೆಯ ಜತೆ ಸಂಪರ್ಕವಿರುವವರ ಹೆಡೆ ಮುರಿಕಟ್ಟುವ ಕೆಲಸವನ್ನು ಸಿಸಿಬಿ ಮಾಡುತ್ತಿರೋದು ಸ್ವಾಗತಾರ್ಹ.ಆದ್ರೆ ರಾಗಿಣಿ ಸುತ್ತವೇ ಆರಂಭವಾಗಿ “ತನಿಖೆ” ಆಕೆಯಲ್ಲೇ ಕೊನೆಯಾಗುತ್ತಾ ಎನ್ನುವ  ಅನುಮಾನ ಸಾರ್ವಜನಿಕವಾಗಿ ಕಾಡುತ್ತಿದೆ.ಏಕೆಂದ್ರೆ ರಾಗಿಣಿ ಒಬ್ಬಳನ್ನು ಬಿಟ್ಟು ಉಳಿದ ಆ 14 ಡ್ರಗ್ಸ್ ಲಿಂಕ್ ಶಂಕಿತರ ವಿಷಯದಲ್ಲಿ ಸಿಸಿಬಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.ರಾಗಿಣಿ ಯ ನ್ನೇ ಕರೆಸಿ ಡ್ರಿಲ್ ಮಾಡುವುದಕ್ಕೇನೆ ವಿಚಾರಣೆಯನ್ನು ಸೀಮಿತಗೊಳಿಸಲಾಗ್ತಿದೆ.ಉಳಿದ 14 ಶಂಕಿತರಿಗೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆಯಿಸುವ ಗೋಜಿಗೆ ಸಿಸಿಬಿ ಏಕೆ ಹೋಗ್ತಿಲ್ಲ ಎನ್ನುವುದು ಸಾರ್ವಜನಿಕರ ಆಕ್ಷೇಪ.

ರಾಗಿಣಿಗೆ ಡ್ರಗ್ಸ್ ದಂಧೆ ಲಿಂಕ್  ಇರೋ ವಿಚಾರ ಚರ್ಚೆಗೆ ಬಂದಾಗ,ಮಾಫಿಯಾದಲ್ಲಿ ಆಕೆಗಿರುವಷ್ಟೇ ಲಿಂಕ್ ಇರಬಹುದಾದ ಮತ್ತೋರ್ವ ಸೆಲಬ್ರಿಟಿಯಾಗಿ ಚರ್ಚೆಗೆ ಬಂದ ಹೆಸರೇ ಸಂಜನಾ ಗರ್ಲಾನಿದು.ರಾಗಿಣಿ ಅರೆಸ್ಟ್ ಆಗ್ತಿದ್ದಂಗೆ ಸಿಸಿಬಿ ಸಂಜನಾ ಳನ್ನು ಲಾಕ್ ಮಾಡ್ತಾರೆನ್ನುವ ವಿಷಯ ಸಾಕಷ್ಟು ಚರ್ಚೆಗೆ ಬಂದಿತ್ತು.ಮಾದ್ಯಮಗಳು ಕೂಡ ಈ ಬಗ್ಗೆ ಸುದ್ದಿ ಮಾಡಿದ್ದೇ ಮಾಡಿದ್ದು,ಆಕೆಯ ಮನೆ ಹತ್ತಿರವೇ ಟೆಂಟ್ ಹಾಕ್ಕೊಂಡು  ದಿನ ರಾತ್ರಿ ಕಾವಲು ಕಾದಿದ್ದೇ ಕಾದಿದ್ದು.ಸಂಜನಾ ಮನೆಗೇನೆ ಕ್ಯಾಮೆರಾ ಝೂಮ್ ಹಾಕ್ಕೊಂಡು ಆಕೆ ಆಗ ಬರಬಹುದು..ಈಗ ಬರಬಹುದು..ಆಕೆಯನ್ನು ಆಂಗಲ್ ಆಂಗಲ್ ಗಳಲ್ಲಿ ಸೆರೆ ಹಿಡಿಯಬಹುದು ಎಂದೆಲ್ಲಾ ಕಾದಿದ್ದೇ ಕಾದಿದ್ದು.ಆಕೆ ಬರಲಿಲ್ಲ..ಮೀಡಿಯಾಗಳು ಬೆನ್ ಬಿಡೋದು ತಪ್ಪಲಿಲ್ಲ..

ಇಂದ್ರಜಿತ್ ಕೊಟ್ಟ ಸುಳಿವಿನ ಮೇರೆಗೆ ಸಿಸಿಬಿ ಸಂಜನಾಳಿಗೆ ನೊಟೀಸ್ ಕೊಡಬಹುದೆನ್ನುವ  ನಿರೀಕ್ಷೆಈವರೆಗೂ ಕಾರ್ಯಗತವಾಗಿಲ್ಲ.ನೊಟೀಸ್ ನೀಡಿ ಯಾವಾಗ ಆಕೆಯನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸ್ತಾರೆನ್ನುವುದಕ್ಕೂ ಸ್ಪಷ್ಟನೆ ಸಿಕ್ಕಿಲ್ಲ.ಈ ಬಗ್ಗೆ ಮಾದ್ಯಮಗಳು ಪ್ರಶ್ನಿಸ್ತಿದ್ದರೂ ಸಿಸಿಬಿ ಯಾರೊಬ್ಬರೂ ಕೂಡ ತುಟಿಬಿಚ್ಚುತ್ತಿಲ್ಲವಂತೆ.ರಾಗಿಣಿ ವಿಚಾರದಲ್ಲಿ ತೆಗೆದುಕೊಂಡ ಗಟ್ಟಿ ಹಾಗೂ ಬೋಲ್ಡ್ ನಿರ್ದಾರವನ್ನು ಸಂಜನಾಳ ವಿಷಯದಲ್ಲಿ ಯಾಕೆ ಸಿಸಿಬಿ ತೆಗೆದುಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಮೂಡ್ತಿದೆ.ಆದರೆ ಸಿಸಿಬಿ ಮಾತ್ರ ಉತ್ತರಿಸಲಾಗದ ಸಂಕಷ್ಟ-ಸಂದಿಗ್ಧತೆಗೆ ಸಿಲುಕಿದೆ.

ಡ್ರಗ್ಸ್ ದಂಧೆಯಲ್ಲಿ ರಾಗಿಣಿಯಷ್ಟೇ ಸಂಜನಾಳ ಪಾತ್ರ ಇರಬಹುದೆನ್ನುವ ಶಂಕೆ ಸಿಸಿಬಿಗೆ ಇದೆ ಎನ್ನಲಾಗ್ತಿದ್ರೂ ಆಕೆಗೆ ಕನಿಷ್ಠ  ನೊಟೀಸ್ ಕೊಡ್ಲಿಕ್ಕೂ ಮೀನಾಮೇಷ ಎಣಿಸ್ತಿರೋದ್ರಕ್ಕೆ ಕಾರಣವೇ ಪೊಲಿಟಿಕಲ್ ಪ್ರೆಷರ್ ಎನ್ನಲಾಗ್ತಿದೆ.ರಾಗಿಣಿಗಿಂತ ಹೆಚ್ಚಿನ ಪೊಲಿಟಿಕಲ್ ಇನ್ ಫ್ಲುಯೆನ್ಸ್ ಸಂಜನಾಳಗಿದೆ ಎನ್ನಲಾಗ್ತಿದೆ.ರಾಗಿಣಿಯನ್ನು ಏನ್ ಬೇಕಾದ್ರೂ ಮಾಡ್ಕೊಳ್ಳಿ,ಆದ್ರೆ ಸಂಜನಾಳ ತಂಟೆಗೆ ಮಾತ್ರ ಹೋಗ್ಬೇಡಿ ಎಂದು ಸಾಕಷ್ಟು ಪ್ರಭಾವಿ ರಾಜಕಾರಣಿಗಳು ಸಿಸಿಬಿ ಮೇಲೆ ಪ್ರೆಷರ್ ಹಾಕ್ತಿದ್ದಾರೆನ್ನುವುದು ಅನೇಕ ಮೂಲಗಳಿಂದ ಕನ್ನಡ ಫ್ಲಾಶ್ ನ್ಯೂಸ್ ಗೆ ಸಿಕ್ಕಿರುವ ಮಾಹಿತಿ.

ಕೆಲವು ಮೂಲಗಳು ಹೇಳುವ ಪ್ರಕಾರ ನಟಿ ರಾಗಿಣಿಗಿಂತ ಹೆಚ್ಚಿನ ರಾಜಕಾರಣಿಗಳ ನಂಟು,ಸಂಬಂಧ, ಒಡನಾಟ, ಸಲುಗೆ..ಹೀಗೆ ಎಲ್ಲಾ ಇದೆ.ಆಕೆ ಜತೆ ನಿಕಟ ಸಂಪರ್ಕ ಹಾಗೂ ಸಂಬಂಧವನ್ನು ರಾಜಕಾರಣಿಗಳು ಹೊಂದಿದ್ದಾರೆನ್ನುವುದು ರಾಜಕಾರಣ ಹಾಗೂ ಸಿನೆಮಾ ಚಿತ್ರರಂಗದಲ್ಲಿ ಪ್ರಚಲಿತದಲ್ಲಿರುವ ಮಾತು.ರಾಜಕಾರಣಿಗಳ ಜತೆಗೆ ಇರುವ ಸಲುಗೆಯಿಂದ್ಲೇ ಸಾಕಷ್ಟು ಪ್ರಯೋಜನವನ್ನೂ ಆಕೆ ಪಡೆದು ಕೊಂಡಿದ್ದಾಳೆನ್ನುವುದು ಸಂಜನಾಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಕಂಡ ಕೆಲವರ ಮಾತು.

ಆಕೆಯ ಎಲ್ಲಾ ಸೂಕ್ಷ್ಮವನ್ನು ಚೆನ್ನಾಗಿ ತಿಳಿದ ರಾಜಕಾರಣಿಗಳಿಗೂ ಡ್ರಗ್ಸ್ ಮಾಫಿಯಾದೊಂದಿಗೆ ಆಕೆಗಿರುವ ಲಿಂಕ್ ಬಗ್ಗೆಯೂ ತಿಳಿದಿ ತ್ತಂತೆ.ಇನ್ ಫ್ಯಾಕ್ಟ್ ಇದೇ ಸಲುಗೆಯನ್ನು ವರ್ಕೌಟ್ ಮಾಡಿಕೊಂಡು ಸಾಕಷ್ಟು ರಾಜಕಾರಣಿಗಳ ಪುತ್ರ ರತ್ನರನ್ನು ಡ್ರಗ್ಸ್ ಜಾಲದಲ್ಲಿ ಬೀಳಿಸಿಕೊಂಡಿರುವ ಸಾಧ್ಯತೆಗಳಿವೆ ಎನ್ನೋ ಗುಸುಗುಸು ಗಾಂಧೀನಗರದಲ್ಲಿ ಕೇಳಿಬರುತ್ತಿದೆ.

ರಾಗಿಣಿ ಬೆನ್ನಲ್ಲಿ ಸಂಜನಾ ಸಿಸಿಬಿಗೆ ತಗಲಾಕಿಕೊಳ್ಳುವುದು ಸ್ಪಷ್ಟವಾಗಿತ್ತಾದ್ರೂ ಆಕೆಗೆ ಕನಿಷ್ಠ ನೊಟೀಸ್ ನೀಡುವ ಕೆಲಸವನ್ನು ಮಾಡಲಾಗಿಲ್ಲ ಎನ್ನೋದ್ರ ಹಿಂದೆ ಪೊಲಿಟಿಕಲ್ ಪ್ರೆಷರ್ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ.ಆಕೆನೇ ತನ್ನ ಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಕರೆ ಮಾಡಿ,ನನಗೆ ಸಿಸಿಬಿ  ನೊಟೀಸ್  ನೀಡಿದ ದಿನವೇ ನಿಮ್ಮೆಲ್ಲರ ಬಂಡವಾಳ ಬಯಲು ಮಾಡ್ತೇನೆ.ನಿಮ್ ಬಂಡವಾಳ ಬಯಲಾಗಬಾರದು ಎಂದ್ರೆ ನನಗೆ ನೊಟೀಸ್ ಬರಬಾರದು ಅಷ್ಟೇ ಎನ್ನುವ ರೇಂಜ್ನಲ್ಲಿ ಅವಾಜ್ ಹಾಕ್ತಿದ್ದಾಳೆ ಎನ್ನಲಾಗಿದೆ.

ಆಕೆಯ ಬೆದರಿಕೆ ಕರೆಗಳಿಗೆ ಕನಲಿ ಹೋಗಿಯೇ ರಾಜಕಾರಣಿಗಳು ಆಕೆಗೆ  ಯಾವುದೆ ನೊಟೀಸ್ ಆಗಲಿ,ಆ ಮೂಲಕ ವಿಚಾರಣೆಗೆ ಕರೆಯುವಂಥದ್ದೇ ಆಗಲಿ ಮಾಡಬಾರದೆನ್ನುವ ರೀತಿಯಲ್ಲಿ ಸಿಸಿಬಿ ಮೇಲೆ ಒತ್ತಡ ಹೇರುತ್ತಿದ್ದಾರಂತೆ.ಆದ್ರೆ ಇದು ಎಷ್ಟರ ಮಟ್ಟಿಗೆ ನಿಜ ಎನ್ನೋದನ್ನು ಈ ವಿಚಾರ ವಿನಿಮಯದ ವ್ಯಾಪ್ತಿಯಲ್ಲಿರುವ ಸಿಸಿಬಿ,ಸಂಜನಾ ಅಥವಾ  ರಾಜಕಾರಣಿಗಳು ತಿಳಿಸಬೇಕಷ್ಟೇ..

Spread the love
Leave A Reply

Your email address will not be published.

Flash News