ನಿನ್ನೆ ರಾಗಿಣಿ….ಇವತ್ತು ಸಂಜನಾ…..NEXT ಯಾರು..? ಸಿಸಿಬಿ “ಖೆಡ್ಡಾ”ಕ್ಕೆ ಬೀಳಲಿರೋ ಆ “ಮಿಕ, ಆಕೆ” ನಾ..??!!

0
ನಿನ್ನೆ ರಾಗಿಣಿ...
ನಿನ್ನೆ ರಾಗಿಣಿ…
ಇವತ್ತು ಸಂಜನಾ...
ಇವತ್ತು ಸಂಜನಾ..
NEXT ಶರ್ಮಿಳಾ ಮಾಂಡ್ರೆನಾ..?!
NEXT… ಶರ್ಮಿಳಾ ಮಾಂಡ್ರೆನಾ..?!

ಬೆಂಗಳೂರು:ಇದು ಕೇವಲ ಪ್ರಶ್ನೆ ಮಾತ್ರ ಅಲ್ಲ ಕುತೂಹಲ ಕೂಡ. ಡ್ರಗ್ಸ್ ಜಾಲದಾಳಕ್ಕೆ ಇಳಿದು ಲಿಂಕ್ ಗಳನ್ನೆಲ್ಲಾ ಜರಡಿ ಹಿಡಿದು ಒಬ್ಬೊಬ್ಬರನ್ನೇ ಎಳೆದು ತರುತ್ತಿರುವ ಸಿಸಿಬಿ ಖೆಡ್ಡಾಕ್ಕೆ ಸ್ಯಾಂಡಲ್ ವುಡ್ ನ ಇಬ್ಬರು ಕಿಂಗ್ ಪಿನ್ ಗಳನ್ನು ಬೀಳಿಸಿಯಾಗಿದೆ.ವಾರದ ಗ್ಯಾಪ್ ನಲ್ಲಿ ಇಬ್ಬರನ್ನು ತಂದು ಡ್ರಿಲ್-ಗ್ರಿಲ್ ಮಾಡಿರುವ ಸಿಸಿಬಿ ಮುಂದಿನ ಬೇಟೆ ಯಾರು..ಅವರ ಖೆಡ್ಡಾಕ್ಕೆ ಬೀಳಲಿರುವ ಸೆಲೆಬ್ರಿಟಿ ಯಾರೆನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.ಕೆಲವು ಸಂಗತಿಗಳನ್ನು ಕ್ರೋಢೀಕರಿಸಿ ಮುಂದಿನ ಬೇಟೆ ಯಾರು ಎನ್ನುವ ಉತ್ತರ ನೀಡ್ತಿದೆ ಕನ್ನಡ ಫ್ಲಾಶ್ ನ್ಯೂಸ್.

ರಾಗಿಣಿ ಆಯ್ತು.. ಆಕೆಯನ್ನು ಸಂಜನಾ ಹಿಂಬಾಲಿಸಿದ್ದೂ ಆಯ್ತು… ಮುಂದಿನ ಸರದಿ ಯಾರದು..?ಇದು ಎಲ್ಲರನ್ನು ಕಾಡುತ್ತಿ ರುವ ಪ್ರಶ್ನೆ ಅಷ್ಟೇ ಅಲ್ಲ ಕುತೂಹಲ ಕೂಡ. ಯಾರು..ಯಾರಿರಬಹುದು..ಯಾರನ್ನು ಸಿಸಿಬಿ ಎತ್ತಾಕೊಂಡ್ ಹೋಗೊಕ್ಕೆ ಪ್ಲ್ಯಾನ್ ಮಾ ಡ್ಕೊಂಡಿದೆ ಎನ್ನುವುದು ಸಧ್ಯಕ್ಕೆ  ಮಿಲಿಯನ್ ಡಾಲರ್ ಪ್ರಶ್ನೆ. ಕೆಲವು ಸಾಧ್ಯಾಸಾಧ್ಯತೆಗಳನ್ನು ಕ್ರೋಢೀಕರಿಸಿ ನೋಡುದ್ರೆ ಸಿಗೋ ಉತ್ತರ ಇದೇ ನಟಿನಾ..ಇದ್ದರೂ ಇರಬಹುದು..ಅಂದ್ಹಾಗೆ ಆ ನಟಿ ಶರ್ಮಿಳಾ ಮಾಂಡ್ರೆನಾ..ಸಾಧ್ಯತೆಗಳನ್ನಂತೂ ಅಲ್ಲಗೆಳೆಯೊಕ್ಕೆ ಆಗೊಲ್ಲ…

ಇಂದ್ರಜಿತ್,ಸ್ಯಾಂಡಲ್ ವುಡ್ ಗೆ  ಡ್ರಗ್ ಲಿಂಕ್ ಇದೆ ಎನ್ನುವ ಸ್ಪೋಟಕ ಮಾಹಿತಿ ಹೊರ ಹಾಕುದ್ರೋ,ಆಗ ರಾಗಿಣಿ,ಸಂಜನಾ ಜೊತೆಗೆ ಕೇಳಿಬಂದ ಮತ್ತೊಂದು ಹೆಸರೇ ಶರ್ಮಿಳಾ ಮಾಂಡ್ರೆ.ಅದಕ್ಕೆ ಕಾರಣವೂ ಇತ್ತು.ಕೆಲ ತಿಂಗಳ ಹಿಂದೆ ಆಕೆಯಿದ್ದ ಕಾರು ಅಪಘಾತವಾದಾಗ ಶರ್ಮಿಳಾ ಮಾಂಡ್ರೆ ನಶೆಯಲ್ಲಿದ್ದಳೆನ್ನುವ ಸುದ್ದಿ ಸಖತ್ ಸೌಂಡ್ ಮಾಡಿತ್ತು.ಆದ್ರೆ ಆಕೆಗಿದ್ದ ಪ್ರಭಾವ-ಹಣದ ಬ್ಯಾಕಪ್ ನಿಂದ ಕೇಸ್ ನ್ನು ಉಲ್ಟಾಪಲ್ಟಾ ಮಾಡಿದ್ಲೆನ್ನುವ ಆರೋಪಗಳು ಇಂದಿಗೂ ಇವೆ.ಅವೆಲ್ಲಾ ಹೋಗ್ಲಿ ಬಿಡಿ..ಆ ಪ್ರಕರಣದಲ್ಲಿ ಏನೇನ್ ನಡೆದಿದೆಯೋ ಅದರಲ್ಲಿ ಶಾಮೀಲಾದವ್ರಿಗೇನೇ ಗೊತ್ತು.

ಆದ್ರೆ ಡ್ರಗ್ಸ್ ವಿಚಾರಕ್ಕೆ ಬರೋದಾದ್ರೆ ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ ಬಾಯ್ಬಿಟ್ಟ ಹೆಸರುಗಳಲ್ಲಿ ರಾಗಿಣಿ.. ಸಂಜನಾ ಳಂತೆ ಶರ್ಮಿಳಾದ್ದು ಇರಬಹುದೆನ್ನುವ ಮಾತು ಅಂದೇ ಕೇಳಿಬಂದಿತ್ತು.ಅವಳ ಹೆಸರನ್ನು ಶಂಕಿತರ ಲೀಸ್ಟ್ ನಲ್ಲಿದೆ ಎಂದು ಮಾದ್ಯಮಗಳು ಸುದ್ದಿ ಮಾಡಿದಾಗ ತಕ್ಷಣ ರಿಯಾಕ್ಟ್ ಮಾಡಿ ಇದಕ್ಕೂ ನನಗೂ ಸಂಬಂಧವಿಲ್ಲ.ನನ್ನದು ತುಂಬಾ ಡಿಗ್ನಿಫೈಡ್ ಫ್ಯಾಮಿಲಿ ಎಂದೆಲ್ಲಾ ಅತ್ತುಕರೆದಿದ್ದಳು.ದಿನವೆಲ್ಲಾ ಮಾದ್ಯಮಗಳಲ್ಲಿ ಹರಿದಾಡಿದ ಆ ಸುದ್ದಿ ಮಾರನೇ ದಿನ ಎಲ್ಲೂ ರಿಪೀಟ್ ಆಗಲಿಲ್ಲ..ಅಷ್ಟಕ್ಕೆ ಶರ್ಮಿಳಾ ಹಾಗೂ ಆಕೆಯ ಫ್ಯಾಮಿಲಿ ನಿಟ್ಟುಸಿರುಬಿಡ್ತು.

ಆದ್ರೆ…ಆದ್ರೆ ರಾಗಿಣಿ..ಸಂಜನಾ ಪರಿಸ್ತಿತಿಯೂ ಮೊದಲೆಲ್ಲಾ ಹೀಗೆಯೇ ಇತ್ತು. ಸಾಕ್ಷ್ಯ ಸಂಗ್ರಹಿಸಿ ಸಿಸಿಬಿ ಎತ್ತಾಕೊಂಡು ಬರೋವರೆಗೂ ಅವರಿಬ್ಬರಿಗೂ ಈ ವಿಷಯ ಗೊತ್ತಿರಲೂ ಇಲ್ಲ.ಕಾದುನೋಡಿ, ಖೆಡ್ಡಾ ತೋಡುವ ಸಂಪ್ರದಾಯ ಬೆಳಸಿಕೊಂಡಿರುವ ಸಿಸಿಬಿ ರಾಗಿಣಿಯನ್ನು ಬಲೆಗೆ ಬೀಳಿಸಿ ಸುಮ್ಮನಾದಂತೆ ಮೌನವಹಿಸಿದ್ದಾಗ ಖುದ್ದು ಸಂಜನಾ ನಾನ್ ಸೇಫ್ ಆದೆ ಎಂದ್ಕೊಂಡಿದ್ಲು.ಜಯಕಿರಣ ಸೇರಿದಂತೆ ಬಹುತೇಕ ಮಾದ್ಯಮಗಳು ರಾಗಿಣಿ ಅರೆಸ್ಟ್ ಆಗಿ ಮೂರ್ನಾಲ್ಕು ದಿನಗಳಾದ್ರೂ ಸಂಜನಾಳನ್ನು ಅರೆಸ್ಟ್ ಮಾಡುವುದಿರಲಿ,ವಿಚಾರಣೆಗೆ ಬಾ ಎಂದು ನೊಟೀಸ ನ್ನೂ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದವು.ಆದರೆ ಕಾಲ ಪರಿಪಕ್ವವಾಗುವವರೆಗೂ ಏನೂ ನಡೆಯೊಲ್ಲ ಎನ್ನುವಂತೆ ಸಿಸಿಬಿ ಇಂದು ಬೆಳಗ್ಗೆ  ಮುಹೂರ್ತ ಫಿಕ್ಸ್ ಮಾಡಿ ಸಂಜನಾಳನ್ನು ಯಾವ್ದೇ ಪ್ರೆಷರ್ ಗು ಮಣಿಯದೆ ಎತ್ತಾಕಂಡ್ ಬಂದು ಡ್ರಿಲ್ ಮಾಡಿಸಿದೆ.ಸಾಲದ್ದಕ್ಕೆ ತಾಯಿಯನ್ನೂ ಕರೆಸಿ ಗ್ರಿಲ್ ಮಾಡಿಸಿದೆ.ಸಾಕಷ್ಟು ಸ್ಪೋಟಕ ಮಾಹಿತಿಯನ್ನೂ ನೀಡಿದ್ದಾಳೆ.ಅದರಲ್ಲಿ ಶಾಸಕ ಜಮೀರ್ ಸೇರಿದಂತೆ ತನ್ನ ಜೊತೆ ಸಂಪರ್ಕದಲ್ಲಿರಬಹುದಾದವ್ರ ಹೆಸರುಗಳನ್ನೂ ಬಾಯ್ಬಿಟ್ಟಿದ್ದಾಳೆನ್ನಲಾಗಿದೆ.

ಸಂಜನಾಳಿಗೆ ಖೆಡ್ಡಾ ತೋಡಿದ ಮೇಲೆ ಈಗ ನೆಕ್ಸ್ಟ್ ಟಾರ್ಗೆಟ್ ಶರ್ಮಿಳಾ ಮಾಂಡ್ರೆ ಇದ್ದರೂ ಇರಬಹುದೆನ್ನುತ್ತಿದೆ ಸಿಸಿಬಿ ಮೂಲಗಳು.ಇಂದ್ರಜಿತ್ ಲಂಕೇಶ್ ಕೊಟ್ಟಿರುವ ಹೆಸರುಗಳಲ್ಲಿ ಈಕೆಯದು ಸೇರಿರಬಹುದೆನ್ನಲಾಗ್ತಿದೆ.ಈ ಕಾರಣಕ್ಕೆ ಶರ್ಮಿಳಾ ಸೇಫ್ಟಿಗೆ ಬೇಕಾದೆಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರೂ ಆಶ್ಚರ್ಯವಿಲ್ಲ.

ಶರ್ಮಿಳಾ ಹೇಳಿ ಕೇಳಿ ಸಿರಿವಂತನ ಮಗಳು,ಸುಖದ ಸುಪ್ಪತ್ತಿಗೆಯಲ್ಲಿ ಮೆರೆದಾಕೆ.ಕೇವಲ ಟೈಂ ಪಾಸ್ ಗೆಂದು ಸಿನಿಜರ್ನಿ ಸ್ಟಾರ್ಟ್ ಮಾಡಿದವಳು.ಒಳ್ಳೆಯ ನಟಿಯಾಗಬೇಕೆನ್ನುವ ಆಸೆಯೇ ಆಕೆಗಿರಲಿಲ್ಲ..ಅದಕ್ಕೆ ಬೇಕಾದ ಅರ್ಹತೆಗಳೂ ಆಕೆಗಿರಲಿಲ್ಲ ಎನ್ನುವುದು ಬೇರೆ ಮಾತು. ಆಕೆಯ ಫ್ರೆಂಡ್ಸ್ ಸರ್ಕಲ್ ನಲ್ಲಿದ್ದವರದು  ಕೂಡ ಹೈ ಫೈ ಬ್ಯಾಕ್ ಗ್ರೌಂಡ್.ಇವ್ರ ನಡುವೆ ಡ್ರಗ್ಸ್-ಗಾಂಜಾ-ಚರಸ್ ನಂತ ಮಾದಕ ವ್ಯಸನಗಳು ಹರಿದಾಡಿರಬಹುದಾದ ಸಾಧ್ಯತೆಗಳನ್ನೂ ಅಲ್ಲಗೆಳೆಯಕ್ಕಾಗೊಲ್ಲ.

ಇಂದ್ರಜಿತ್  ಡ್ರಗ್ಸ್ ಲಿಂಕ್ ಬಗ್ಗೆ ಮಾಹಿತಿ ಕೊಟ್ಟಾಗ್ಲೇ ಉಳಿದವರಂತೆ ಶರ್ಮಿಳಾ ಮಾಂಡ್ರೆಯ ಚಲನಲನಗಳ ಬಗ್ಗೆಯೂ ಸಿಸಿಬಿ ಮಾಹಿತಿ ಸಂಗ್ರಹಿಸಿದೆ ಎನ್ನಲಾಗಿದೆ.ಆ ವೇಳೆ ಆಕೆಗೆ ಇರಬಹುದಾದ ಡ್ರಗ್ಸ್ ಲಿಂಕ್ ನ ಒಳಸುಳಿಗಳು ಸಿಸಿಬಿಗೆ ಸಿಕ್ಕಿವೆ ಎನ್ನೋ ಸುದ್ದಿಯಿದೆ.ಎಲ್ಲವೂ ನಿರೀಕ್ಷೆಯಂತಾದ್ರೆ,ಸಿಸಿಬಿ ಲೆಕ್ಕಾಚಾರಗಳು ಅವರ ನಿರೀಕ್ಷೆಗೆ ತಕ್ಕಂತೆ ತಾಳೆಯಾದ್ರೆ ಅವರ ಖೆಡ್ಡಾಕ್ಕೆ ಬೀಳಬಹುದಾದ  ನೆಕ್ಸ್ಟ್ ಮಿಕ ಶರ್ಮಿಳಾ ಆಗಿದ್ರೂ ಆಶ್ಚರ್ಯಪಡಬೇಕಿಲ್ಲ.

ಡ್ರಗ್ಸ್ ಲಿಂಕ್ ಹೊಂದಿರೋರ ಹೆಡೆ ಮುರಿ ಕಟ್ಟಿಯೇ ತೀರುವ ಹಠಕ್ಕೆ ಬಿದ್ದಂತಿರುವ ಸಿಸಿಬಿ ಮೇಲೆ ಯಾವ್ದೇ ಒತ್ತಡ ಹೇರಿದ್ರೂ ಪ್ರಯೋಜನವಿಲ್ಲ.ಇದಕ್ಕೆ ರಾಗಿಣಿ,ಸಂಜನಾ ಪ್ರಕರಣಗಳೇ ಸಾಕ್ಷಿಯಂತಿವೆ.ಇದರ ನಡುವೆ ಅಂತದ್ದೇ ವ್ಯರ್ಥ ಪ್ರಯತ್ನವನ್ನು ಶರ್ಮಿಳಾ ಮಾಂಡ್ರೆನೂ ಮಾಡ್ಬೋದೇನೋ..ಆಕೆ ನಿಜವಾಗ್ಲೂ ಈ ದಂಧೆಯಲ್ಲಿ ಇನ್ವಾಲ್ವ್ ಆಗಿದ್ರೆ ಹರಿಹರಬ್ರಹ್ಮ ಬಂದ್ರೂ ಸಿಸಿಬಿ ಖೆಡ್ಡಾಕ್ಕೆ ಬೀಳೋದ್ರಿಂದ ತಪ್ಪಿಸಿಕೊಳ್ಳೊಕ್ಕಂತೂ ಸಾಧ್ಯವೇ  ಇಲ್ಲ..

Spread the love
Leave A Reply

Your email address will not be published.

Flash News