ನನ್ನ ಜಿಲ್ಲೆಯಲ್ಲಿನ ರುದ್ರಭೂಮಿಗಳೆಲ್ಲಾ ಉದ್ಯಾನವನಗಳಾಗಬೇಕೆನ್ನುವುದೇ ನನ್ನ ಆಸೆ: ಮಾದ್ಯಮಗಳ ಮುಂದೆ ಕನಸನ್ನು ಬಿಚ್ಚಿಟ್ಟ ಸಚಿವ ಸುಧಾಕರ್

0

ಚಿಕ್ಕಬಳ್ಳಾಪುರ: ನನ್ನ ಜಿಲ್ಲೆಯಲ್ಲಿರುವ ಸ್ಮಶಾನ ಗಳೆಲ್ಲಾ  ಉದ್ಯಾನವ ನಗಳಂತಾಗಬೇಕು. ಯಾವುದೇ ಜಾತಿ, ಜನಾಂಗಕ್ಕೆ ತೊಂದರೆ ಆಗ ದಂತೆ ಎಚ್ಚರವಹಿಸಬೇಕು ಜಿಲ್ಲೆಯಲ್ಲಿ ರುದ್ರಭೂಮಿ ಇಲ್ಲದ ಕಡೆ ಆದ್ಯತೆ ಮೇರೆಗೆ ಭೂಮಿ ಒದಗಿಸಿ ನರೇಗಾ ಅಡಿ ಅಭಿವೃದ್ಧಿ ಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಸೂಚಿಸಿದ್ರು.

ನನ್ನ ಜಿಲ್ಲೆಯ  ಸ್ಮಶಾನ ಗಳು ಉದ್ಯಾನವನಗಳಂತೆ ರೂಪಿಸಬೇಕು. ಯಾವುದೇ ಜಾತಿ, ಜನಾಂಗಕ್ಕೆ ತೊಂದರೆ ಆಗದಂತೆ ಎಚ್ಚರವಹಿಸ ಬೇಕು ಎಂದು ತಿಳಿಸಿದರು.ಕಂದಾಯ ಇಲಾಖೆ ಆರ್ ಟಿಸಿ ಬಾಕಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇವೆ. ಗುಡಿಬಂಡೆ ಮಾದರಿಯಲ್ಲಿ ತಹಸೀಲ್ದಾರ್ ಗಳು ಗಮನಹರಿಸಿ ಕ್ರಮಜರುಗಿಸಿ ಮುಕ್ತಾಯಗೊಳಿಸಬೇಕು ಎಂದರು.

ನಾನಾ ಪಿಂಚಣಿ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಬಾಕಿ ಇರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.ಇನ್ನೂ ಯಾವುದೇ ಇಲಾಖೆಯಲ್ಲಿ ದಲ್ಲಾಳಿಗಳ ಕಾಟ ಇರಬಾರದು. ಏಜೆಂಟರು ಇಲ್ಲದೇ ಕೆಲಸ ಮಾಡಲು ಯಾಕೆ ಆಗಲ್ಲ? ಆರ್ ಟಿಒ ಮತ್ತು ಸಬ್ ರಿಜಿಸ್ಟರ್ ಇಲಾಖೆಗಳಲ್ಲಿ ಕಾಟ ಹೆಚ್ಚು ಎಂಬ ದೂರುಗಳಿವೆ. ಅನಿರೀಕ್ಷಿತ ಭೇಟಿ ನೀಡಿದಾಗ ಸ್ಥಳದಲ್ಲಿಯೇ ಅಮಾನತು ಮಾಡಿ ಸೇವಾ ಪುಸ್ತಕ ದಲ್ಲಿ ನಮೂದಿಸಲಾಗುವುದು ಎಂದು ಎಚ್ಚರಿಸಿದರು.

ಕಂದಾಯ ಇಲಾಖೆ ವಿಷಯಗಳ ಬಗ್ಗೆ ರೈತರನ್ನು ಅಲೆದಾಡಿಸುತ್ತಿರುವುದು ಗಮನಕ್ಕೆ ಬಂದಿದೆ. ಸಣ್ಣಪುಟ್ಟ ವಿಷಯಗಳಿಗೆ ಅಲೆದಾಡಿಸಬಾರದು. ಅರ್ಜಿ ಸ್ವೀಕಾರ ಮತ್ತು ವಿಲೇವಾರಿ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಕಾನೂನು ನೆಪ ಹೇಳಿ ರೈತರಿಗೆ ತೊಂದರೆ ನೀಡಬಾರದು.ಓವರ್ ಲೋಡ್ ಸಾಗಾಣಿಕೆಯಿಂದ ರಸ್ತೆ ಹಾಳಾಗುತ್ತಿವೆ. ಇದನ್ನು ಮುಂದುವರಿಯದಂತೆ ನೋಡಿಕೊಳ್ಳಬೇಕು. ಗಣಿ,ಪೋಲಿಸ್ ಮತ್ತು ಸಾರಿಗೆ ಅಧಿಕಾರಿಗಳು ಒಟ್ಟಿಗೆ ಕುಳಿತು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ಕಾರ್ಯಪಡೆ ರಚನೆ ಮಾಡಿ. ಕಾನೂನು ಬದ್ಧವಾದ ನಿರ್ಧಾರ ಕೈಗೊಳ್ಳಬೇಕು ಅಂತ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಪ್ರಕರಣಗಳ ಬಗ್ಗೆ ದೂರು ಬಂದಿವೆ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಕೆಲ ರಾಜಧನ ಕಟ್ಟದ ಪ್ರಕರಣ ಸಾಕಷ್ಟಿವೆ, ಅವುಗಳ ವಸೂಲಿಗೆ ಮತ್ತು ಅಂತಹ ಪ್ರಕರಣಗಳಲ್ಲಿ ಪರವಾನಗಿ ನವೀಕರಣ ಮಾಡಬಾರದು. ಒಂದು ವೇಳೆ ಮಾಡಿರುವ ನಿದರ್ಶನ ಇದ್ದರೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಹೊರ ರಾಜ್ಯಗಳ ಗುತ್ತಿಗೆದಾರರಿಗೆ ಕ್ವಾರಿ ಗುತ್ತಿಗೆ ನೀಡಲಾಗಿದೆ. ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದರು.

Spread the love
Leave A Reply

Your email address will not be published.

Flash News