CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆರಾಜಕೀಯ

“ಕೆಲಸ ಮಾಡದ ನಾಲಾಯಕ್ ಅಧಿಕಾರಿಗಳು ಸರ್ಕಾರಕ್ಕೆ ಬೇಡವೇ ಬೇಡ”..ಮೈಗಳ್ಳ ಅಧಿಕಾರಿಗಳಿಗೆ ಸಚಿವ ಸುಧಾಕರ್ ಖಡಕ್ ವಾರ್ನಿಂಗ್

ಚಿಕ್ಕಬಳ್ಳಾಪುರ: ಕೆಲಸ ಮಾಡದ ಅಧಿಕಾರಿಗಳನ್ನು ನಮ್ಮ ಸರಕಾರ ಇಟ್ಟುಕೊಳ್ಳುವುದಿಲ್ಲ. ಸಿಇಒ ಪ್ರತಿ ತಿಂಗಳು ಎಲ್ಲಾ ಇಲಾಖೆಯ ಪರಿಶೀಲನಾ ಸಭೆ ನಡೆಸಿ, ಚುರುಕು ಮುಟ್ಟಿಸುತ್ತಿರಬೇಕು. ಇಲ್ಲವಾದರೆ ಅಧಿಕಾರಿಗಳು ಸೋಮಾರಿಗಳಾಗುತ್ತಾರೆ ಎಂದು ಸಚಿವ ಸುಧಾಕರ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಚಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ ವಸತಿ ನೀಡುವುದು ಮೊದಲ ಆದ್ಯತೆ. ನಿವೇಶನ ಗುರುತಿಸದೇ ಜೀರೋ ಎಂದು ವರದಿ ನೀಡಿರುವ ಗ್ರಾಪಂ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಆದೇಶಿಸಿದ ಸಚಿವರು, ಶಾಲಾ ಕಟ್ಟಡ ನಿರ್ಮಾಣದಲ್ಲಿ ಗುರಿ ತಲುಪದ್ದಕ್ಕೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಶಾಲಾ ಕಟ್ಟಡ ನಿರ್ಮಾಣ ಪೂರ್ಣವಾಗದಿದ್ದರೆ ಇಲಾಖೆ ಮುಖ್ಯಸ್ಥರನ್ನೇ ತಪ್ಪಿತಸ್ಥರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡದ ಅವರು,  ಜಿಲ್ಲೆಯಾದ್ಯಂತ 225  ಅಂಬೇಡ್ಕರ್ ಭವನ ಗುರಿ ಹೊಂದಲಾಗಿದ್ದು, 118 ಪ್ರಗತಿಯಲ್ಲಿವೆ. ಇದನ್ನು ಫೆಬ್ರವರಿ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಇನ್ನೂ ಜಿಲ್ಲೆಯಲ್ಲಿ ಯಾವುದೇ ಕಾಮಗಾರಿಯಾದರೂ ಸರಿ, ಶಾರ್ಟ್ ಟರ್ಮ್ ಟೆಂಡರ್ ಕರೆಯುವ ಪದ್ಧತಿ ಬೆಳೆಸಿಕೊಳ್ಳಿ.. ಇಲ್ಲವಾದರೆ ಕಾಮಗಾರಿ ತಡವಾಗುತ್ತದೆ.  ರಾಜಕಾರಣಿಯನ್ನು ಓಲೈಕೆ ಮಾಡಲು ಯೋಜನೆಗಳ ಟೆಂಡರ್ ತಡ ಮಾಡುವುದು ಸರಿಯಲ್ಲ ಎಂದರು.   ಚಿಕ್ಕಬಳ್ಳಾಪುರದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದಲ್ಲಿ ಕನಿಷ್ಠ ಎರಡರಿಂದ ಮೂರು ತಾಣಗಳ ಪಟ್ಟಿ ನೀಡಿ. ಇದೇ ವರ್ಷದಲ್ಲಿ ಅನುದಾನ ತಂದು ಅಭಿವೃದ್ಧಿ ಮಾಡಿಸೋಣ. ಈ ಸಂಬಂಧ ಪ್ರವಾಸೋದ್ಯಮ ಸಚಿವರೊಂದಿಗೆ ಸಭೆ ಮಾಡುವುದಾಗಿ ಹೇಳಿದರು.

ಕೇಂದ್ರ ಸರಕಾರ ನರೇಗಾಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಇತರೆ ಯೋಜನೆಗಳಿಗಿಂತ ನರೇಗಯಿಂದ ಹೆಚ್ಚು ಅನುದಾನ ಹರಿದು ಬರುತ್ತಿದ್ದು, ಈ ಅನುದಾನವನ್ನು ಸಮಗ್ರವಾಗಿ ಬಳಕೆ ಮಾಡಿಕೊಳ್ಳಬೇಕು. ವರ್ಷಕ್ಕೆ ಕನಿಷ್ಠ ಸಾವಿರ ಕೋಟಿ ಅನುದಾನ ಬಳಕೆ ಮಾಡಿ ಕೊಳ್ಳಬೇಕು ಎಂದು ಸೂಚನೆ ನೀಡಿದರು. ಇದೇ ವೇಳೆ ಅಧಿಕಾರಿಗಳಲ್ಲಿ ಕಾರ್ಯಕ್ಷಮತೆಯನ್ನು ವೃದ್ಧಿಸಲು ಹಾಗೂ ಪ್ರೋತ್ಸಾಹಿಸಲು ಪ್ರತಿ ತಿಂಗಳು ಎಲ್ಲಾ ಇಲಾಖೆಯಿಂದ ಅತ್ಯತ್ತಮ ಅಧಿಕಾರಿಯನ್ನು ಆಯ್ಕೆ ಮಾಡಿ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳೋಣ. ಇದರಿಂದ ಇತರೆ ಅಧಿಕಾರಿಗಳಿಗೆ ಉತ್ಸಾಹ ತುಂಬಿದಂತಾಗಲಿದೆ ಎಂದರು.

Spread the love

Related Articles

Leave a Reply

Your email address will not be published.

Back to top button
Flash News