CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

00 ರೂ…500 ರೂ…800 ರೂ…1000 ರೂ…1200 ರೂ…1800 ರೂ… ಇದೆಲ್ಲಾ ಓ.ಸಿ ನಂಬರ್ ಅಲ್ಲ.. KSRTC/ BMTC/ NWKSRT/ NEKSRTC ನೌಕರರ ಸಂಬಳ..

ಬೆಂಗಳೂರು: ಈ ಸಂಖ್ಯೆಗಳನ್ನು ನೋಡಿದಾಗ…ಏನಪ್ಪಾ ಇದು ಎಂದು ನೀವ್ ಕೇಳ್ಬೋದು….ಖಂಡಿತಾ.. ಇದು ಕೇವಲ ಅಂಕಿ ಸಂಖ್ಯೆಗಳಲ್ಲ… ಲಾಕ್ ಡೌನ್ ಸಂದರ್ಭದಲ್ಲಿ ನೌಕರಿ ನೀಡದೆ ಮನೆಗಳಲ್ಲಿ ಕೂರಿಸಿದಸಾರಿಗೆ ನಿಗಮ‌ ತನ್ನ ನೌಕರರಿಗೆ ನೀಡಿರುವ ಸಂಬಳ… ಈ ಸಂಬಳದಲ್ಲಿ ..ತಿನ್ನೋದಾ…ಉಡೋದಾ..ದೈನಂದಿನ ಕೌಟುಂಬಿಕ‌ ಅವಶ್ಯಕತೆಗಳನ್ನು ತೀರಿಸಿಕೊಳ್ಳೋದಾ.. ಏನ್ಮಾಡ್ಬೇಕೆಂದು ಗೊತ್ತಾಗದೆ ಗೊಂದಲಕ್ಕೆ ಸಿಲುಕಿದ್ದಾರೆ ಸಾರಿಗೆ ನೌಕರರು. ಈ ಪ್ರಶ್ನೆಗೆ ಸಾರಿಗೆ ಸಚಿವರು…ನಿಗಮಗಳ ವ್ಯವಸ್ಥಾಪಕರು ಅಧಿಕಾರಿಗಳೇ ಉತ್ತರ ಕೊಡಬೇಕಾಗುತ್ತೆ.

ನಿಮಗೆ ಕೇಳೋಕೆ…ನೋಡಕ್ಕೆ ..ಆಶ್ಚರ್ಯ ಆಗಬಹುದು.ಆದ್ರೆ ಇದು ಸತ್ಯ. ಇಷ್ಟು ಕಡಿಮೆ ಸಂಬಳವನ್ನು ತನ್ನ ನೌಕರರಿಗೆ ನೀಡೋಕ್ಕೆ ಸರ್ಕಾರಕ್ಕೆ ಮನಸಾದ್ರೂ ಹೇಗೆ ಬಂತೋ… ಕನಿಷ್ಟ ಕೂಲಿ ಮಾಡೋನಿಗೂ 10 ಸಾವಿರಕ್ಕಿಂತ ಹೆಚ್ಚು ದುಡಿಮೆಯಾಗುತ್ತೆ.ಅಂತದ್ದರಲ್ಲಿ ಇಷ್ಟು ಕಡಿಮೆ ಹಣವನ್ನು ನೀಡಿದ್ರೆ ನೌಕರ ಸಿಬ್ಬಂದಿ ಹೇಗೆ ಜೀವನ ಮಾಡುತ್ತಾರೆನ್ನೋ ಕಾಮನ್ ಸೆನ್ಸೂ ಇಲಾಖೆಗೆ ಇಲ್ಲವಾಯ್ದೆ ಹೋಯ್ತಲ್ಲ..ಇದಕ್ಕಿಂತ ದುರಂತ ಮತ್ತೊಂದಿದೆಯಾ..?
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ,ಯಾವೊಬ್ಬ ಸಾರಿಗೆ ನೌಕರನಿಗೂ ಮನೆಯಲ್ಲಿ ಕುಳಿತುಕೊಳ್ಳುವುದು ಇಷ್ಟವಿರಲಿಲ್ಲ.ಆದರೆ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆ ಸ್ತಬ್ಧವಾದ ಹಿನ್ನಲೆಯಲ್ಲಿ ಅವರನ್ನು ಅನಿವಾರ್ಯವಾಗಿ ಮನೆಯಲ್ಲಿ ಕೂರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಇಲಾಖೆ ಅವರಿಗೆ ವೇತನ ಸಹಿತ ರಜೆ ನೀಡುವ ಮಾತನ್ನೇಳಿತ್ತು.

00 ರೂ ಸಂಬಳ
00 ರೂ ಸಂಬಳ
00 ರೂ ಸಂಬಳ
00 ರೂ ಸಂಬಳ
1340 ರೂ ಸಂಬಳ
1340 ರೂ ಸಂಬಳ
840 ರೂ ಸಂಬಳ
840 ರೂ ಸಂಬಳ
1450 ರೂ ಸಂಬಳ
1450 ರೂ ಸಂಬಳ

ಇಷ್ಟವಿಲ್ಲದಿದ್ದರೂ ಸರ್ಕಾರದ ಮಾತನ್ನು ಕೇಳಿ ಸಾವಿರಾರು ಸಾರಿಗೆ ನೌಕರರು ತಮ್ಮ ತಮ್ಮ ಮನೆಗಳಲ್ಲಿ ಉಳಿದು ಬಿಟ್ಟರು ಆದಾಗ್ಯೂ ಹಲವಾರು ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಡ್ಯೂಟಿ ನೀಡಬೇಕೆಂಬ ಮನವಿಯನ್ನೂ ಮಾಡಿದ್ದುಂಟು.ಇಲಾಖೆನೇ ಕೂರಿಸಿ ಸಂಬಳ ಕೊಡ್ತೇನೆ ಎನ್ನುವಾಗ ಬಂದ್ ಕೆಲಸ ಮಾಡ್ತೀವಂತೀರಲ್ಲಾ..ನಿಮಗೇನ್ ಹುಚ್ಚು ಹಿಡಿದಿದೆಯಾ ಎಂದು ಅದೆಷ್ಟೋ ಡಿಪೋ ಮ್ಯಾನೇಜರ್ಸ್ ಹೇಳಿರುವುದುಂಟು.
 ಅಧಿಕಾರಿಗಳು ಹೇಳಿದ್ದು ನಿಜ.. ಒಂದೆರಡು ತಿಂಗಳು ತಿಣುಕಾಡಿಯೋ.. ಹೆಣಗಾಡಿಯೋ ಸರ್ಕಾರ ನೌಕರರಿಗೆ ಸಂಬಳ ಕೊಟ್ಟಿದ್ದುಂಟು .ಅದರ ಬಗ್ಗೆ ಆಕ್ಷೇಪವಿಲ್ಲ.. ಆದರೆ ನಂತರದ ದಿನಗಳಲ್ಲಿ ಸಂಬಳದ ವಿಷಯ ಬಂದಾಗ ಸಚಿವ ಸವದಿಯಾದಿಯಾಗಿ ಅಧಿಕಾರಿಗಳು‌ ಪಲಾಯನವಾದ ಮಾಡೊಕ್ಕೆ ಶುರು ಮಾಡಿದ್ದು ಕೂಡ ಸುಳ್ಳಲ್ಲ. ಸಂಬಳದ ವಿಷಯ ಬಂದಾಗಲೆಲ್ಲ,ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಕೊರೋನಾ ಸಂದರ್ಭದಲ್ಲಿ ಬಸ್ಸುಗಳೇ ಓಡಿಲ್ಲ, ಇಂಥ ಸಂದರ್ಭದಲ್ಲಿ ಸಂಬಳ ಕೊಡುವುದು ಹೇಗೆ..?ಎನ್ನುವ ವಿಷಯದಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟು ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ ವಿನಃ, ಸಚಿವನಾಗಿ ನೌಕರರಿಗೆ ಹೇಗೆ ನ್ಯಾಯ ದೊರಕಿಸಿಕೊಡಬೇಕೆನ್ನುವುದನ್ನೇ ಮರೆತಂತೆ ವ್ಯವಹರಿಸಿದ್ದರ ಬಗ್ಗೆ ಸಾರ್ವಜನಿಕವಾಗಿಯೂ‌ ಆಕ್ರೋಶ ವ್ಯಕ್ತವಾಗಿತ್ತು.

ನೋಡಿ.. ಅದೆಲ್ಲಾ ಈಗ ಸತ್ಯವಾಗಿದೆ. ಕಳೆದ ತಿಂಗಳು ತಿಣುಕಾಡಿ..ತಿಣುಕಾಡಿ ಸಂಬಳ ಕೊಟ್ಟಿದ್ದ ಸರ್ಕಾರ ಮತ್ತು ಸಾರಿಗೆ ನಿಗಮ, ಈ ತಿಂಗಳು ನೀಡಿರುವ ಸ್ಯಾಲರಿ ಸ್ಲಿಪ್ ನೋಡಿ ನೌಕರರು ಬೆಚ್ಚಿ ಬಿದ್ದಿದ್ದಾರಡ.ಲಾಕ್ ಡೌನಗ ಕಾರಣಕ್ಕೆ ಮನೆಯಲ್ಲಿ ಕೂತಿದ್ದಕ್ಕೆ ಕೆಲವರಿಗೆ ಝೀರೋ.. ಇನ್ನೂ ಕೆಲವರಿಗೆ ಕನಿಷ್ಠಮಟ್ಟದ ಸಂಬಳ ನೀಡಲಾಗಿದೆ.ತಿಂಗಳ ಜೀವನ ಹೇಗೆ ನಡೆಸೋದಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ ನೌಕರರು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ, ಮನೆಯಲ್ಲಿ ಕೂತರೆ ಹೀಗೆಯೇ ಆಗಬಹುದು ಎನ್ನುವ ಅನುಮಾನ ಏನಿತ್ತೋ, ಆ ಅನುಮಾನ ಈಗ ಸತ್ಯವಾಗಿದೆ.ಈ ಕಾರಣಕ್ಕಾಗಿಯೇ ಸಾಕಷ್ಟು ನೌಕರರು ತಮ್ಮ ಅಧಿಕಾರಿಗಳಿಗೆ ಪದೇ ಪದೇ ಕರೆ ಮಾಡಿ ಡ್ಯೂಟಿ ಕೊಡಿ ಸರ್, ಬರುತ್ತೇವೆಂದು ಹೇಳಿದ್ದರೂ ಅಧಿಕಾರಿಗಳು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ.ಅದರ ಪರಿಣಾಮ ಇವತ್ತು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಅನಂತ ಸುಬ್ಬರಾವ್
ಅನಂತ ಸುಬ್ಬರಾವ್
KSRTC ಅಧ್ಯಕ್ಷ ಚಂದ್ರಪ್ಪ
KSRTC ಅಧ್ಯಕ್ಷ ಚಂದ್ರಪ್ಪ

ದಿನೇದಿನೇ ಜೀವನಮಟ್ಟ ದುಬಾರಿಯಾಗುತ್ತಿದೆ.ಅಗತ್ಯ ವಸ್ತುಗಳ ಬೆಲೆಗಳ ಏರಿಕೆ ಆಗುತ್ತಿದೆ.ಮಕ್ಕಳ ಎಜುಕೇಶನ್,ಸ್ಕೂಲ್ ಫಿ… ಪುಸ್ತಕದ ಖರ್ಚು..ಜತೆಗೆ ತಿಂಗಳ ರೇಷನ್..ಕರೆಂಟ್ ಬಿಲ್..ಕೇಬಲ್ ಬಿಲ್..ಆರೋಗ್ಯ ಕೈ ಕೊಟ್ಟರೆ ಆಸ್ಪತ್ರೆ ಖರ್ಚು…ಜತೆಗೆ ಸಣ್ಣಪುಟ್ಟ ಕಮಿಂಟ್ಮಟ್ಸ್ ಗಳಿಗೆ ಎಲ್ಲಿಂದ ದುಡ್ಡು ತರೋದು ಎಂದು ಸಾರಿಗೆ ನೌಕರರ ಕುಟುಂಬಗಳು ಪ್ರಶ್ನಿಸ್ತಿವೆ.ಇಷ್ಟು ಕಡಿಮೆ ಸಂಬಳದಲ್ಲಿ ಏನ್ ಮಾಡೋದೆಂದು ನೌಕರರು ಬಾಯ್‌ಬಾಯ್ ಬಡಿದುಕೊಳ್ತಿದಾರೆ. ಈ ಸಂಬಳದಲ್ಲಿ ಅನ್ನ ತಿನ್ನೋದಾ ಅಥವಾ ಮಣ್ಣು ತಿನ್ನೋದಾ..ಎಂದು ಪ್ರಶ್ನಿಸ್ತಾರೆ.

ಇಷ್ಟ್ ಕಡ್ಮೆ ಸಂಬಳ ಕೊಡೋಕ್ಕಿಂತ ಸ್ವಲ್ಪ ವಿಷ ಕೊಟ್ಟಿದ್ರೆ ಕುಡಿದು ಒಂದೇ ಸಲ ಸಾಯ್ತಿದ್ವಿ..ದಿನೇ ದಿನೇ ಸತ್ ಬದ್ಕೊಕ್ಕಿಂತ ಅದೇ ಉತ್ತಮವಾಗಿತ್ತೆಂದು ನೌಕರರು ಹಾಗೂ ಅವರ ಕುಟುಂಬ,  ಸರ್ಕಾರ ಹಾಗೂ ನಿಗಮದ ಅಧಿಕಾರಿಗಳಿಗೆ ಹಿಡಿ ಶಾಪ‌ ಹಾಕ್ತಿದಾರೆ.ಕೊರೋನಾ ಸಂದರ್ಭದಲ್ಲಿ ನೌಕರಿ ಮಾಡದೆ ಮನೆಯಲ್ಲಿ ಉಳಿದ ನೌಕರರಿಗೆ ಸಂಬಳ ಕೊಡುತ್ತೇವೆ ಎಂದು ಸರಕಾರ ಹಾಗೂ ಸಾರಿಗೆ ನಿಗಮ ಹೇಳಿತ್ತು. ಆ ಮಾತನ್ನೇ ನಂಬಿಕೊಂಡು ತಮ್ಮ ರಜೆಯೆಲ್ಲ, ಡ್ಯೂಟಿಯಾಗಿ ಪರಿವರ್ತನೆಯಾಗುತ್ತದೆ ಎಂದು ಭಾವಿಸಿದ್ದ ನೌಕರರಿಗೆ ಸಂಬಳದ ಸ್ಲಿಪ್ ನೋಡಿ ಮರ್ಮಾಘಾತವಾಗಿದೆ.

ಇನ್ನು ಈ ಬಗ್ಗೆ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಸಿದರೆ ,ಅವರಿಂದ ಬಂದ ಉತ್ತರ ವಿಚಿತ್ರ. ನಮಗೂ ಕೂಡ ಇದನ್ನು ನೋಡಿ ಅಚ್ಚರಿಯಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಮಾತುಕತೆ ನಡೆಸಲಿದ್ದೇವೆ. ನೌಕರರು ನಮ್ಮ ಕುಟುಂಬವಿದ್ದಂತೆ.. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಹಾಗೂ ಬಾಧ್ಯಸ್ಥಿಕೆ.ಸಮ್ ಟೆಕ್ನಿಕಲ್ ಎರರ್ ಇರಬಹುದು..ಸರಿಪಡಿಸಿಕೊಳ್ತೇವೆ ಎಂಬ ಉತ್ತರ ಕೊಟ್ಟು ಜಾರಿಕೊಳ್ತಾರೆ.
ಇದೆಲ್ಲಕ್ಕಿಂತ ಇನ್ನೊಂದು ದುರಂತವೆಂದರೆ, ಬೇಡದ ವಿಷಯಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವ ಸಾರಿಗೆ ಯೂನಿಯನ್ಗಳು,ತಮ್ಮ‌ ಸ್ಯಾಲರಿ ವಿಷಯದಲ್ಲಿ ಆಗಿರುವ ಬಹುದೊಡ್ಡ ಅನ್ಯಾಯದ ಬಗ್ಗೆ ಸೊಲ್ಲನ್ನೇ ಎತ್ತುತ್ತಿಲ್ಲ ಎಂಬ ಬೇಸರ ನೌಕರರದು. ಕೇವಲ ರಾಜಕೀಯ ದಲ್ಲೇ ಕಾಲಹರಣ ಮಾಡುತ್ತಿರುವ ಅವರಿಗೆ ನಮ್ಮ‌ ಬವಣೆಗಳು ಅರ್ಥವಾಗೊಕ್ಕೆ ಹೇಗೆ ಸಾಧ್ಯವೇಳಿ ಎಂದು ಪ್ರಶ್ನಿಸಿದ್ದಾರೆ.ಆದರೆ ಈಗಾಗಲೇ ಧ್ವನಿ ಎತ್ತಿರುವುದಾಗಿ ಹೇಳ್ತಾರೆ ಸಾರಿಗೆ ಯೂನಿಯನ್ ಮುಖಂಡ ಅನಂತ ಸುಬ್ಬರಾವ್.

ಅದೇನೇ ಆಗಲಿ..ಎಸಿ ಚೇಂಬರ್ ಗಳಲ್ಲಿ ಕುಳಿತುಕೊಂಡು ದರ್ಬಾರ್ ನಡೆಸುವ ನೌಕರರ ಮೇಲೆ ದೌರ್ಜನ್ಯ ಕ್ರೌರ್ಯ ನಡೆಸುವ ಐಎಎಸ್ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ದಿನವಿಡೀ ದುಡಿಯುವ ಸಾರಿಗೆ ನೌಕರರ ಬವಣೆ ಅರ್ಥವಾಗುವುದಕ್ಕೆ ಹೇಗೆ ಸಾಧ್ಯ ಹೇಳಿ..ಆದ್ರೆ ಕಷ್ಟಪಟ್ಟು ದುಡಿಯೋ ಶ್ರಮಿಕರ ಹೊಟ್ಟೆ ಮೇಲೆ ಹೊಡೆದು ಅನ್ಯಾಯ ಮಾಡುವ ದೊಡ್ಡವರಿಗೆ ನೊಂದವರ ಕಣ್ಣೀರಿನ‌ ಶಾಪ ತಟ್ದೆ ಇರೊಲ್ಲ…. 

Spread the love

Related Articles

Leave a Reply

Your email address will not be published.

Back to top button
Flash News