CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆರಾಜಕೀಯರಾಜ್ಯ-ರಾಜಧಾನಿ

ಸಿಎಂ ತವರು ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ದಾಹಕ್ಕೆ ಸರ್ಕಾರಿ ಭೂಮಿ ಸ್ವಾಹ..!! -ಕಮಿಷನ್ ಆಸೆಗೆ  ಅಕ್ರಮಕ್ಕೆ ಸಾಥ್ ಕೊಡ್ತಿದ್ದಾರಾ ಅಧಿಕಾರಿಗಳು- ಡಿಸಿ ದಿವ್ಯಮೌನವೇಕೆ..??  

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚೆತ್ತುಕೊಳ್ಳದಿದ್ದರೆ ಅವರ ಮಾನವನ್ನು  ಅವರ ತವರು  ಜಿಲ್ಲೆ ಶಿವಮೊಗ್ಗದಲ್ಲಿರುವ ಸರ್ಕಾರಿ ಅಧಿಕಾರಿಗಳೇ ಮೂರ್ ಕಾಸಿಗೆ ಹರಾಜಾಕುವುದರಲ್ಲಿ ಡೌಟೇ ಇಲ್ಲ.ಏಕೆಂದರೆ ಕೋತಿ ತಾನ್ ತಿಂದು ಮೇಕೆ ಮುಖಕ್ಕೆ ಒರೆಸಿತು ಎನ್ನುವ ಗಾಧೆಯಂತೆ ಅಕ್ರಮ ತಾವ್ ಮಾಡಿ ಸಿಎಂ  ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ಅಧಿಕಾರಿಗಳು ಮಾಡ್ತಿದ್ದಾರಾ..ಗೊತ್ತಾಗ್ತಿಲ್ಲ.

ಏಕೆಂದ್ರೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ತವರು ಕ್ಷೇತ್ರವಾದ ಶಿವಮೊಗ್ಗದಲ್ಲಿ ಸರ್ಕಾರಿ ಅಧಿಕಾರಿಗಳು ಭೂ ಮಾಫಿಯಾಕ್ಕೆ ಕೈ ಹಾಕಿದ್ದಾರೆನ್ನಲಾಗ್ತಿದೆ.ರಿಯಲ್ ಎಸ್ಟೇಟ್ ಕುಳಗಳ ಜೊತೆಗೆ ಪರ್ಸಂಟೇಜ್ ವ್ಯವಹಾರ ಮಾತಾಡ್ಕೊಂಡು ಅವರೊಂದಿಗೆ ಚಕ್ಕಳಮಕ್ಕಳ ಹಾಕಿ ತಿನ್ನೊಕ್ಕೆ ರೆಡಿಯಾಗಿದ್ದಾರೆ. ಸಿಎಂ ತವರಿನಲ್ಲಿ, ಕಣ್ಣೆದುರಿನಲ್ಲೇ ಅಪಾರ ಪ್ರಮಾಣದ ಸರ್ಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾ ಲೂಟ್ ಮಾಡ್ತಿದ್ದರೂ, ಸ್ಥಳೀಯ ಆಡಳಿತ ತಲೆ ಕೆಡಿಸಿಕೊಳ್ಳದೆ ಅಕ್ರಮವನ್ನು ನೋಡಿಕೊಂಡು ಸುಮ್ಮನಿದೆ.

ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನಲಾದ ಭೂ ಮಾಫಿಯಾಕ್ಕೆ ನಿದರ್ಶನವಾಗುವಂತ ಪ್ರಕರಣವೊಂದನ್ನು  ಕನ್ನಡ ಫ್ಲಾಶ್ ನ್ಯೂಸ್ ಬಯಲಿಗೆಳೆಯುತ್ತಿದೆ.

40  ಎಕರೆ 19  ಗುಂಟೆ ಸರ್ಕಾರಿ ಭೂಮಿಯನ್ನ ಅಕ್ರಮವಾಗಿ  ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಶ್ರೀಮಂತರಿಗೆ ಇನಾಂ ಹೆಸರಲ್ಲಿ ಖಾತೆ ಪಹಣಿ ಮಾಡಲಾಗಿದೆಯಂತೆ. ಅಷ್ಟೇ ಅಲ್ಲ,ಅಕ್ರಮ ತಡೆಯಬೇಕಾದ ಕಂದಾಯ ಹಾಗೂ ಭೂ ಮಾಪನ  ಅಧಿಕಾರಿಗಳು ಕಮಿಷನ್ ಅಥವಾ ಕಿಕ್ ಬ್ಯಾಕ್ ಆಸೆಗೋಸ್ಕರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿದ್ದಾರೆನ್ನಲಾಗ್ತಿದೆ.

ಘಟನೆ ವಿವರ:ಶಿವಮೊಗ್ಗ ತಾಲ್ಲೂಕು ನಿಧಿಗೆ  2 ತಟ್ಟಿಕೆರೆ ಗ್ರಾಮ ದ ಸ. ನಂ – 176 ರಪೈಕಿ  40.19  ಎಕರೆ ಇನಾಂ ಭೂಮಿ.. ಸುಮಾರು 31.25  ಎಕರೆ  2008 ರಲ್ಲಿ  ರಲ್ಲಿ ಸರ್ಕಾರಿ ಭೂಮಿಯಾಗಿದೆ. ಆದರೆ ಇದೇ ಜಮೀನಿಗೆ  2019 ರಲ್ಲಿ ಬಿ. ಆರ್. ಕೃಷ್ಣಮೂರ್ತಿ, 7.32 ಎಕರೆ, ಬಿ. ಕೆ. ಸೋಮಶೇಖರ್ 23.33  ಎಕರೆ  ಕಂದಾಯ ಹಾಗೂ ಭೂ ಮಾಪನ ಇಲಾಖೆಯ ಅಧಿಕಾರಿಗಳು ಅಕ್ರಮ ಖಾತೆ ಪಹಣಿ ಮಾಡಲಾಗಿದೆಯಂತೆ. ಇದೇ ಜಮೀನು 2019-20  ರಲ್ಲಿ  ಬಿ.ಕೆ. ಸೋಮಶೇಖರ, ಬಿ. ಆರ್.  ಕೃಷ್ಣಮೂರ್ತಿ  ಹೆಸರಲ್ಲಿ  ಖಾತೆ ಪಹಣಿ ಮಾಡಲಾಗಿದೆ ಎನ್ನೋದು  ದಾಖಲೆ ಸಮೇತ ದೊರೆತಿದೆ.ತಾಲೂಕಿನ ಕಂದಾಯ ಹಾಗೂ ಭೂ ಮಾಪನ ಇಲಾಖೆಯ ಅಧಿಕಾರಿಗಳು  ನಕಲಿ ದಾಖಲೆ ಸೃಷ್ಟಿಸಿ ಸಾಮೂಹಿಕವಾಗಿ  ಈ ದಂಧೆಯಲ್ಲಿ ತೊಡಗಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆನ್ನಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಅನ್ಯಾಯ  ಮಾಡಲಾಗುತ್ತಿದ್ದು,  ಈ ಜಮೀನು ದಂಡೆಯಲ್ಲಿ ರಾಜಕೀಯ ಪ್ರಭಾವ ಇದೆ ಎನ್ನಲಾಗಿದೆ.ಇದೆಲ್ಲಾ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಉಸ್ತುವಾರಿ ಸಚಿವ ಕೆ.ಎಸ್,ಈಶ್ವರಪ್ಪ ಅವರ ಗಮನಕ್ಕೆ ಬಂದಿಲ್ಲವಂತೆ.ಬಹುಷಃ ಅಧಿಕಾರಿಗಳು ಇದನ್ನು ಅವರ  ಗಮನಕ್ಕೆ ತರದೇ ರಹಸ್ಯವಾಗಿ ಅಕ್ರಮ ಎಸಗುತ್ತಿದ್ದಾರಾ ಗೊತ್ತಿಲ್ಲ.ಇನಾಂ ಭೂಮಿ  ಯಾರಿಗೆ ಮಂಜೂರಾತಿ ಆಗಬೇಕು,ನಿಯಾಮಗಳಿಗಳು ಏನನ್ನುತ್ತವೆ ಎನ್ನೋದು ಅಧಿಕಾರಿಗಳಿಗೆ ಗೊತ್ತಿದ್ದರೂ ಹಣದ ಆಸೆಗೆ ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಕೈ ಜೋಡಿಸಿದ್ದಾರೆ.ಈ ದೂರು  ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರೆಗೂ  ತಲುಪಿದೆ.

ಜಿಲ್ಲಾಧಿಕಾರಿಗಳಾದ ಶಿವಕುಮಾರ್ ಅವರಿಗೂ ಗೊತ್ತಿದೆ.ಆದ್ರೂ   ಉಪ ವಿಭಾಗಾಧಿಕಾರಿ ಟಿ. ವಿ.  ಪ್ರಕಾಶ್   26-06-2020 ರಂದು  ರಿ ಗ್ರಾಂಟ್ ಮಾಡಿರುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಉದ್ಭವವಾಗಿದೆ.ಅದೇನೇ ಆಗಲಿ ಸಿಎಂ ಜಿಲ್ಲೆಯಲ್ಲಿ ಹೀಗೆಲ್ಲಾ ಆಗ್ತಿರೋದು ಮಾತ್ರ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವುದಂತೂ ಸತ್ಯ.ಭೂ ಮಾಫಿಯಾ ಮಾಡೋರೇ ಯಾರು..ಅದರಿಂದ ಕೆಟ್ಟ ಹೆಸರು ಬರೋದೇ ಇನ್ನ್ಯಾರಿಗೋ..ಇದಕ್ಕೆ ಜಿಲ್ಲಾಧಿಕಾರಿ ಶಿವಕುಮಾರ್ ಅವಕಾಶ ಮಾಡಿಕೊಡಬಾರ್ದು ಅಷ್ಟೇ..

Spread the love

Related Articles

Leave a Reply

Your email address will not be published.

Back to top button
Flash News