ಯಾವ್ ಕ್ಷಣದಲ್ಲಿ ಬೇಕಾದ್ರೂ ಹೇಮಂತ್ ನಿಂಬಾಳ್ಕರ್-ಅಜಯ್ ಹಿಲೋರಿ ಅರೆಸ್ಟ್..?! ಹಿರಿಯ IPS ಗಳಿಗೆ ಮುಳುವಾದ IMA ಬಹುಕೋಟಿ ವಂಚನೆ-ವಿಚಾರಣೆಗೆ ಸಿಗ್ತು ಅನುಮತಿ.

0
ಹೇಮಂತ್ ನಿಬಾಂಳ್ಕರ್
ಹೇಮಂತ್ ನಿಬಾಂಳ್ಕರ್
ಅಜಯ್ ಹಿಲೋರಿ
ಅಜಯ್ ಹಿಲೋರಿ

ಬೆಂಗಳೂರು ;ಹಿರಿಯ ಪೊಲೀಸ್ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ.ಬಹುಕೋಟಿ ಐಎಂಎ ಹಗರಣದಲ್ಲಿ ಭಾಗಿಯಾಗಿರೋ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸೊಕ್ಕೆ ಬೇಕಾದ ಅನುಮತಿಯನ್ನು ಸಿಬಿಐ ನೀಡಿದೆ.ಇವರುಗಳ ವಿರುದ್ಧ ವಿಚಾರಣೆ ನಡೆಸೊಕ್ಕೆ  ರಾಜ್ಯಪಾಲರು ಹಾಗೂ ಗೃಹ ಇಲಾಖೆ ಅನುಮತಿ ನೀಡಬೇಕಿತ್ತು.ಇಂದಿಗೆ ಅದೆಲ್ಲಾ ಅಧೀಕೃತವಾಗಿ ಸಿಕ್ಕಿರುವುದರಿಂದ ಪೊಲೀಸ್ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ.  

ಐಎಂಎ ಬಹುಕೋಟಿ ವಂಚನೆ ಪ್ರಕರಣ ರಾಜ್ಯದಲ್ಲಿ ಸುದ್ದಿ ಮಾಡಿದ ಭಾರೀ ಹಗರಣ.ವಂಚನೆಯ ಮೊತ್ತವನ್ನೇ 4000 ಸಾವಿರ ಕೋಟಿ ಎಂದು ಅಂದಾಜಿಸಲಾಗಿತ್ತು. ಪ್ರಕರಣ ಮೊದಲು ಬೆಂಗಳೂರಿನ ಕಮರ್ಷಿ ಯಲ್ ಸ್ಟ್ರೀಟ್ ಠಾಣೆಯಲ್ಲಿ ದಾಖಲಾಗಿತ್ತು. ನಂತರ  ಎಸ್ ಐಟಿ ತನಿಖೆಗೆ ವರ್ಗಾಯಿಸಲಾಗಿತ್ತು. ಬಹಳ ಚರ್ಚೆ ನಂತರ ಪ್ರಕರಣವನ್ನು  ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಇಡಿಯಲ್ಲೂ ತನಿಖೆ ಶುರುವಾಗಿದೆ.

ಇನ್ನ ಭಾರೀ ಸದ್ದು ಮಾಡಿದ ಈ ಹಗರಣಕ್ಕೆ  ಸಂಬಂಧಿಸಿದಂತೆ  ಸಿಬಿಐ ತನಿಖೆ ಕೈಗೆತ್ತಿಕೊಂಡು ಪ್ರಕರಣದ ಆಳಕ್ಕೆ ಇಳಿಯುತ್ತಿದ್ದಂತೆ ಸಾಕಷ್ಟು ಸ್ಪೋಟಕ ಎನ್ನುವಂಥ ಮಾಹಿತಿ ಹೊರಬಿದ್ದಿತ್ತು.ಆ ಪೈಕಿ  ಪ್ರಕರಣದ  ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಬಂಧನ ವೇಳೆ ಅನುಕೂಲ ಮಾಡಿಕೊಡಲು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದರೆನ್ನುವ ಮಾಹಿತಿ ಹೊರಬಿದ್ದಿತ್ತು.ಇದನ್ನು ಮನ್ಸೂರ್ ಖಾನ್ ಅವ್ನೇ ಬಾಯ್ಬಿಟ್ಟಿದ್ದ ಆತ ಹೇಳಿದ್ದ ಹೆಸರುಗಳಲ್ಲಿ  ಹೇಮಂತ್ ನಿಬಾಂಳ್ಕರ್ ,ಅಜಯ್ ಹಿಲೋರಿ,ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್,ಪಿಎಸ್ ಐ ಗೌರಿ ಶಂಕರ್, ಐಡಿ ಡಿವೈಎಸ್ಪಿ ಶ್ರೀಧರ್ ಪ್ರಮುಖವಾಗಿದ್ವು. ಇವರೆಲ್ಲಾ ಹಣ ಪಡೆದಿದ್ದ ಸಂಗತಿ ಕೂಡ ಮೇಲ್ನೋಟಕ್ಕೆ ಸಾಬೀತಾಗಿತ್ತು.

ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಸಿಬಿಐಗೆ ಅನುಮತಿ ನೀಡಿದೆ. ಹಲವು ದಿನಗಳಿಂದ ಪ್ರಾಸಿಕ್ಯೂಷನ್ ಗೆ ಸಿಬಿಐ ಅಧಿಕಾರಿಗಳು ಅನುಮತಿ ಕೇಳುತ್ತಲೇ ಬಂದಿದ್ದರು.ಇಂದು ಕೊನೆಗೆ ರಾಜ್ಯಪಾಲರು ಹಾಗೂ ರಾಜ್ಯದ ಗೃಹ ಇಲಾಖೆಯಿಂದ ಆರೋಪಿತರ ಸ್ಥಾನದಲ್ಲಿರುವ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಸಿಬಿಐಗೆ ಅನುಮತಿ ನೀಡಿದೆ.

ಮನ್ಸೂರ್ ಅಲಿ ಖಾನ್ ಕೊಟ್ಟ ಹೇಳಿಕೆ ಹಿನ್ನಲೆಯಲ್ಲಿ ಸಿಬಿಐ ಮೇಲ್ಕಂಡ  ಅಧಿಕಾರಿಗಳ ಮನೆ ಮೇಲೂ ರೈಡ್ ಮಾಡಿತ್ತು. ವಿಚಾರಣೆ ಕೂಡ ನಡೆಸಿತ್ತು.ಇನ್ನು ಹೆಚ್ಚಿನ ವಿಚಾರಣೆ ನಡೆಸೊಕ್ಕೆ ಸರ್ಕಾರದ ಅನುಮತಿಯನ್ನು ನಿರೀಕ್ಷಿಸಿ ಸಿಬಿಐ ಪತ್ರ ಕೂಡ ಬರೆದಿತ್ತು.ಈಗ ನಿರೀಕ್ಷೆಯಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ದೊರೆತಿದೆ.ಇದರಿಂದಾಗಿ ಸಿಬಿಐ ತನ್ನ ಮುಂದಿನ ಹಂತದ ವಿಚಾರಣೆ ಕೈಗೆತ್ತಿಕೊಂಡ ಪ್ರಕರಣದ ಮೂಲಕ್ಕೆ ಇಳಿಯೊಕ್ಕೆ ಸಹಕಾರಿಯಾಗಲಿದೆ.

ಬಂಧನ ಸಾಧ್ಯತೆ: ತಪ್ಪಿತಸ್ಥ ಸ್ಥಾನದಲ್ಲಿರುವ  ಹೇಮಂತ್ ನಿಬಾಂಳ್ಕರ್ ,ಅಜಯ್ ಹಿಲೋರಿ, ರಮೇಶ್, ಗೌರಿ ಶಂಕರ್, ಶ್ರೀಧರ್  ಅವರನ್ನು ವಿಚಾರಣೆ ನೆವದಲ್ಲಿ ಸಿಬಿಐ ಬಂಧಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.  ಆರೋಪ  ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ  ನ್ಯಾಯಾಲಯಕ್ಕೆ  ಸಿಬಿಐ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಗಳಿವೆ.  ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ನಂತರ  ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ.. ಅದೇನೇ ಆಗಲಿ, ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕಿರುವುದು ದೊಡ್ಡಮಟ್ಟದ ಸಂಚಲನವನ್ನೇ ಮೂಡಿಸಿದ್ದು,ವಿಚಾರಣೆ ನೆವದಲ್ಲಿ ಯಾವ್ ಕ್ಷಣದಲ್ಲಿ ಬೇಕಾದ್ರೂ ಹೇಮಂತ ನಿಂಬಾಳ್ಕರ್,ಅಜಯ್ ಹಿಲೋರಿ ಅವರಂಥ ಹಿರಿಯ ಐಪಿಎಸ್ ಅಧಿಕಾರಿಗಳು ಅರೆಸ್ಟ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.    

ಯಾವ್ ಕ್ಷಣದಲ್ಲಿ ಬೇಕಾದ್ರೂ ಹೇಮಂತ್ ನಿಂಬಾಳ್ಕರ್-ಅಜಯ್ ಹಿಲೋರಿ ಅರೆಸ್ಟ್..?! ಹಿರಿಯ IPS ಗಳಿಗೆ ಮುಳುವಾದ IMA ಬಹುಕೋಟಿ ವಂಚನೆ-ವಿಚಾರಣೆಗೆ ಸಿಗ್ತು ಅನುಮತಿ.

Spread the love
Leave A Reply

Your email address will not be published.

Flash News