CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಮಾಹಿತಿ/ತಂತ್ರಜ್ಞಾನರಾಜ್ಯ-ರಾಜಧಾನಿ

ಲಾಂಚ್ ಗೆ ಮುನ್ನವೇ ಇದೆಂಥಾ ಅಪಸ್ವರ-ನಿರೀಕ್ಷೆ ಮೂಡಿಸಿರುವ”ನ್ಯೂಸ್ ಫಸ್ಟ್ “ಕನ್ನಡದಲ್ಲಿ “ಟಾರ್ಚರ್” ಅಂತೆ..??!!! ಹೌದಾ…!!??

ಬೆಂಗಳೂರು:ಕನ್ನಡ ನ್ಯೂಸ್ ಚಾನಲ್ ಗಳ ಪಟ್ಟಿಗೆ ಇದೇ ತಿಂಗಳ 20 ರಿಂದ “ನ್ಯೂಸ್ ಫಸ್ಟ್ ಕನ್ನಡ..” ಅನ್ನೋ ಹೊಸ ಸುದ್ದಿ ವಾಹಿನಿ ಸೇರಿಕೊಳ್ಳುತ್ತಿದೆ.ಇದರ ಬಗ್ಗೆ ಸಾಕಷ್ಟು ಪ್ರಚಾರ ಕೂಡ ಆಗ್ತಿದೆ.ಇದು ಈಗಿರುವ ಚಾನೆಲ್ ಗಳಲ್ಲಿ ಹತ್ತರಲ್ಲಿ ಹನ್ನೊಂದಾಗಲಿದೆಯೋ..? ಅಥವಾ ಟಿವಿ-9,ಪಬ್ಲಿಕ್,ಸುವರ್ಣ ಚಾನೆಲ್ ಗಳನ್ನು ಹಿಂದಿಕ್ಕುವ ಉದ್ದೇಶ ಈಡೇರಿಸಿಕೊಂಡು ದೃಶ್ಯ ಮಾದ್ಯಮದಲ್ಲಿ ಹೊಸ ಇತಿಹಾಸ ಬರೆಯಲಿದೆಯೋ ಎನ್ನುವ ಕುತೂಹಲ ಇದ್ದೇ ಇದೆ..ಇದೆಲ್ಲದರ ನಡುವೆಯೇ ಲಾಂಚ್ ಡೇಟ್ ಹತ್ತಿರವಾಗ್ತಿದ್ದಂತೆ ಚಾನೆಲ್ ಬಗ್ಗೆ ಒಂದಷ್ಟು ಅಪಸ್ವರ-ಆರೋಪ-ಆಕ್ಷೇಪ ಹೊಗೆಯಾಡುತ್ತಿದೆ.

ಮಾರುತಿ-ರವಿಕುಮಾರ್ ಎನ್ನುವ ಜೋಡಿಹಕ್ಕಿಗಳ ಕನಸು-ಪರಿಶ್ರಮದ ಕೂಸು ನ್ಯೂಸ್ ಫಸ್ಟ್ ಎನ್ನುವುದು ಪತ್ರಿಕೋದ್ಯಮ ದಲ್ಲಿರುವ ಬಹುತೇಕರಿಗೆ ತಿಳಿದಿರುವ ಸಂಗತಿ.ಏಳುಬೀಳುಗಳ ನಡುವೆಯೇ ಚಾನಲ್ ಲಾಂಚ್ ಮಾಡಲು ಈಗಾಗಲೇ ನ್ಯೂಸ್ ಫಸ್ಟ್ ಕನ್ನಡ ಟೀಂ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅನುಭವಿ ಪತ್ರಕರ್ತ ತಂಡವನ್ನಿಟ್ಟುಕೊಂಡು ಇದೇ 20 ರಂದು ಚಾನೆಲ್ ಲೋಕಾರ್ಪಣೆಗೆ ಸಿದ್ಧತೆ ನಡೆಸಿದೆ. ಸಾಕಷ್ಟು, ಭರವಸೆ,ನಿರೀಕ್ಷೆ ಈ ಸುದ್ದಿ ವಾಹಿನಿ ಮೇಲಿದೆ..ಆದರೆ ಚಾನಲ್ ಲಾಂಚ್ ಆಗುವ ಹೊತ್ತಿನಲ್ಲಿ ಇತರೆ ವಾಹಿನಿಗಳಿಗೆ ಪೈಪೋಟಿ ಒಡ್ಡಲು ವರದಿಗಾರರು ಹಾಗೂ ಇತರೆ ಸಿಬ್ಬಂದಿಯನ್ನು ಒತ್ತಡದಲ್ಲಿ ಸಿಲುಕಿಸಿ ಕೆಲಸ ಮಾಡಿಸಲಾಗ್ತಿದೆ ಎನ್ನುವ ವರ್ತಮಾನವಿದೆ.

ನ್ಯೂಸ್ ಫಸ್ಟ್ ಕನ್ನಡ ಸುದ್ದಿವಾಹಿನಿಯಲ್ಲಿ ವರದಿಗಾರರಿಗೆ ಒತ್ತಡ ಹೇರಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ದಿನಕ್ಕೆ ಇಷ್ಟು ಎಕ್ಸ್ ಕ್ಲ್ಯೂಸಿವ್ ಸುದ್ದಿ ಬೇಕೆ ಬೇಕು ಅಂತ ವರದಿಗಾರರಿಗೆ ಟಾರ್ಗೆಟ್ ನೀಡಲಾಗ್ತಿದೆಯಂತೆ.2 ವರ್ಷಗಳವರೆಗೆ ಕಾದು ಕಾದು ಸುಸ್ತಾದ ಚಾನೆಲ್ ಮ್ಯಾನೇಜ್ಮೆಂಟ್ ಗೆ ಆರಂಭದಲ್ಲೇ ಚಾನೆಲ್ ಟಿವಿ-9 ಬೀಟ್ ಮಾಡ್ಬೇಕು.ಪಬ್ಲಿಕ್ ಟಿವಿಯನ್ನು ಮಕಾಡೆ ಮಲಗಿಸ್ಬೇಕು.ಸುವರ್ಣ ಟಿವಿಯನ್ನು ಹಿಂದಿಕ್ಕಬೇಕೆನ್ನುವ ಉದ್ದೇಶವಿರಬಹುದು.ಅದು ಸಹಜ ಕೂಡ.ಆದ್ರೆ ಅದಕ್ಕಾಗಿ ವರದಿಗಾರರನ್ನು ಪ್ರೆಷರ್ ಗೆ ಸಿಲುಕಿಸುವುದು ಎಷ್ಟು ಸರಿ ಎನ್ನೋದು ಚಾನೆಲ್ ನಲ್ಲಿ ನೀಡಲಾಗ್ತಿದೆ ಎನ್ನಲಾಗಿರುವ ಪ್ರೆಷರ್ ಹಿನ್ನಲೆಯಲ್ಲಿ ಸೃಷ್ಟಿಯಾಗುವ ಪ್ರಶ್ನೆ.

ಪತ್ರಕರ್ತರು ಈಗಾಗ್ಲೇ ಪ್ರೆಷರ್ ನಲ್ಲಿ ಬೆಂದು ಬೆಂದು ಆರೋಗ್ಯ-ಆಯುಷ್ಯ-ನೆಮ್ಮದಿ-ವೈಯುಕ್ತಿಕ ಬದುಕನ್ನೆಲ್ಲಾ ಕಳ್ಕೊಂಡಿ ದ್ದಾರೆ.ಡಿಪ್ರೆಷನ್ ಗೂ ಒಳಗಾಗಿರುವ ಉದಾಹರಣೆಗಳಿವೆ.ಇದು ನ್ಯೂಸ್ ಫಸ್ಟ್ ಚಾನೆಲ್ ಮ್ಯಾನೇಜ್ಮೆಂಟ್ ಗೂ ಗೊತ್ತಿರದ ವಿಷಯವೇನಲ್ಲ.ಬೇರೆ ಕ್ಷೇತ್ರಗಳಲ್ಲಿ ನೌಕರ ಸಿಬ್ಬಂದಿಗೆ ಆಗುತ್ತಿರುವ ಪ್ರೆಷರ್ ಹಾಗೂ ಅದರ ಎಫೆಕ್ಟ್ ಬಗ್ಗೆ ಪುಂಖಾನು ಪುಂಕ ವಾಗಿ ವರದಿ ಮಾಡುವ ರಿಪೋರ್ಟರ್ಸೇ ಈಗ ಅಂತದ್ದೊಂದು ಸಂದಿಗ್ಧತೆಗೆ ಸಿಲುಕೋದೆಂದ್ರೆ ಅದಕ್ಕಿಂತ ವಿಪರ್ಯಾಸ ಮತ್ತೊಂದಿದೆಯಾ ಎನ್ನೋದು ಹೆಸರು ಹೇಳಲಿಚ್ಚಿಸದ ಮಾದ್ಯಮತಜ್ಞರೊಬ್ಬರ ಪ್ರಶ್ನೆ.

ವಿಶೇಷ ರೀತಿಯಲ್ಲಿ ಸುದ್ದಿಯನ್ನು ಬಿತ್ತರಿಸೊಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ನ್ಯೂಸ್ ಫಸ್ಟ್ ಕನ್ನಡ ಭರವಸೆ ಕೊಟ್ಟಿದೆ.ಸುದ್ದಿ ವಿಷಯದಲ್ಲಿ ಪ್ರತಿ ಕ್ಷಣವೂ ನಿಮ್ಮೊಂದಿಗೆ ಎಂಬ ಟ್ಯಾಗ್ ಲೈನ್ ಹಾಕ್ಕೊಂಡಿದ್ದೇವೆ ಎಂದು ಬೇರೆ ಹೇಳಿದ್ದಾರೆ.ಅದೆಲ್ಲಾ ಓ.ಕೆ.ಅದರ ಬಗ್ಗೆ ಆಕ್ಷೇಪವಿಲ್ಲ.ಆದ್ರೆ ಸುದ್ದಿ ವಿಚಾರವಾಗಿ ಇನ್ನಿತರೆ ಚಾನೆಲ್ ಗಳಿಗೆ ಪೈಪೋಟಿ ಕೊಡ್ಲಿಕ್ಕಾಗಿ ಸಿಕ್ಕಾಪಟ್ಟೆ ಪ್ರೆಷರ್ ನಲ್ಲಿ ವರದಿಗಾರರನ್ನು ಸಿಲುಕಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನೋದು ಹೆಸರು ಹೇಳಲಿಚ್ಚಿಸದ ಹಿರಿಯ ಪತ್ರಕರ್ತರೊಬ್ಬರ ಪ್ರಶ್ನೆ

ಎಲ್ಲಾ ಅಡೆತಡೆಗಳನ್ನು ದಾಟಿ ಇದೇ ತಿಂಗಳ 20 ರಿಂದ ಕಾರ್ಯರಂಭ ಮಾಡಲು ನ್ಯೂಸ್ ಫಸ್ಟ್ ಕನ್ನಡ ಸಿದ್ಧವಾಗಿದೆ.ದೊಡ್ಡ ಚಾನೆಲ್ ಆಗಿ ಬೆಳೆಯಲಿ..ಸುದ್ದಿಯನ್ನು ಢಿಪರೆಂಟ್ ಆಗಿ ನೀಡಿ ದೃಶ್ಯ ಮಾದ್ಯಮ ಕ್ಷೇತ್ರದಲ್ಲಿ ಹೊಸ ತಾರೆಯಾಗಿ ಪ್ರಜ್ವಲಿಸಲಿ ಒಳ್ಳೇದು.ಆದ್ರೆ ಅದಕ್ಕಾಗಿ ವರದಿಗಾರರ ಹಿತಾಸಕ್ತಿ-ಆರೋಗ್ಯ-ಮಾನಸಿಕತೆಯನ್ನು ಬಲಿಗೊಡುವುದು ಸರಿಯಲ್ಲ..ಎಷ್ಟೇ ಕಷ್ಟವಾದ್ರೂ ಸಿಬ್ಬಂದಿಯನ್ನು ಚೆನ್ನಾಗಿ ನೋಡಿಕೊಂಡು ಬಂದಿರುವ ಮ್ಯಾನೇಜ್ಮೆಂಟ್ ಗೆ ಕಿರುಕುಳ ಆರೋಪದ ಕಾರಣಕ್ಕೆ ಕೆಟ್ಟ ಹೆಸರು ಬರಬಾರದು.ಬೆಳೆಯುವ ಮುನ್ನವೇ ಇಂತದ್ದೊಂದು ಆರೋಪ ಕೇಳಿಬರೋದು ನಿಜಕ್ಕೂ ಒಳ್ಳೇದಲ್ಲ.ಈ ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿಯೇ ತಮ್ಮ ಅಳಲನ್ನು ಫೀಲ್ಡ್ ನಲ್ಲಿ ಪತ್ರಕರ್ತ ಮಿತ್ರರ ಮುಂದೆ ತೋಡಿಕೊಳ್ಳುತ್ತಿದ್ದಾರೆ ನ್ನುವ ಸುದ್ದಿ ಕೂಡ ಕೇಳಿಬಂದಿದೆ.

ನ್ಯೂಸ್ ಫಸ್ಟ್ ಸುದ್ದಿ ವಾಹಿನಿಯಲ್ಲಿ ವರದಿಗಾರರು ಹಾಗು ಸಿಬ್ಬಂದಿಗೆ ನೀಡಲಾಗ್ತಿದೆ ಎನ್ನುವ ಆರೋಪ ನಿಜವೇ..?ಎಂದು ಕನ್ನಡ ಫ್ಲಾಶ್ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ಕೆಲ ವರದಿಗಾರರನ್ನು ಸಂಪರ್ಕಿಸಿದಾಗ “ಪ್ರೆಷರ್ ಅಂತೇನೂ ಇಲ್ಲ.ಚಾನೆಲ್ ಹೊಸದಾಗಿರುವುದರಿಂದ ವಿನೂತನ-ವಿಭಿನ್ನ ಸುದ್ದಿ ಕೊಡಬೇಕೆನ್ನುವ ಒತ್ತಡ ಸಹಜವಾಗೇ ಇರುತ್ತೆ ಅಲ್ವೇ.,.ನಮ್ಮ ಮೇಲಿರುವವರು EXCLUSIVE ಸುದ್ದಿ ಕೇಳುತ್ತಾರೆ.ಹೆಚ್ಚೆಚ್ಚು ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತಾರೆ.ಅದು ಕೆಲವರಿಗೆ ಪ್ರೆಷರ್ ಎಂದೆನಿಸಿರಬಹುದು..ನಮಗೇನೂ ಅಂಥ ಅನುಭವವಾಗಿಲ್ಲ..ಆಗದ ಕೆಲವರು ಚಾನೆಲ್ ಗೆ ಕೆಟ್ಟ ಹೆಸರು ತರೊಕ್ಕೆ ಹೀಗ್ ಮಾಡ್ತಿರಬಹುದೇನೋ ಎಂದ್ರು

ಅದೇನೇ ಆದರೂ ಲಾಂಚ್ ಗಿಂತ ಮುನ್ನವೇ ಇಂಥಾ ಆರೋಪಗಳು ಕೇಳಿಬಂದಿರುವುದು ಸರಿಯಲ್ಲ.ಇದು ವರದಿಗಾರರು ಹಾಗೂ ಸಿಬ್ಬಂದಿಯ ಮಾನಸಿಕತೆಯ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.ಅತಿಯಾದ ಪ್ರೆಷರ್ ಗೆ ಕೆಲವರು ಚಾನೆಲ್ ಗೆ ಬೆನ್ನಾಕುವ ಆತಂಕವೂ ಇರುತ್ತೆ.ವೃತ್ತಿಪರರು ಹಾಗೂ ಅನುಭವಿಗಳಿಂದ ಕೂಡಿದ ಉತ್ಸಾಹಿಗಳ ತಂಡವೇ ಚಾನೆಲ್ ನಲ್ಲಿದೆ.ಇಂಥಾ ತಂಡದಿಂದ ಸಾಕಷ್ಟು ನಿರೀಕ್ಷಿಸುವುದರಲ್ಲಿಯೂ ತಪ್ಪಿಲ್ಲ..ಆದ್ರೆ ಇಂಥಾ ಪಾಸಿಟಿವ್ ಸಂಗತಿಗಳ ನಡುವೆ ಟಾರ್ಚರ್ ಆರೋಪದಂಥ ಅಸಂಗತಗಳು ಕೇಳಿಬರಬಾರದು.ತಪ್ಪುಗಳಾಗಿದ್ದರೆ ಅದನ್ನು ಮ್ಯಾನೇಜ್ಮೆಂಟ್ ಸರಿಪಡಿಸಿಕೊಳ್ಳಲಿ ಎನ್ನುವುದಷ್ಟೇ ನಮ್ಮ ಆಶಯ. 

Spread the love

Related Articles

Leave a Reply

Your email address will not be published.

Back to top button
Flash News