CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ನಿರ್ಲಕ್ಷ್ಯ ಮಾಡಿದ್ರೆ ಸಣ್ಣ ವಯಸ್ಸಿನವರೂ ಕೊರೊನಾಗೆ ಬಲಿ ಗ್ಯಾರಂಟಿ.. ರಾಜಧಾನಿಯಲ್ಲಿ ಕೊರೊನಾಗೆ ತುತ್ತಾಗ್ತಿರೋರಲ್ಲಿ ಯುವಕರೇ ಹೆಚ್ಚಂತೆ..

ಬೆಂಗಳೂರು: ಬೇಡ..ಆ ನಿರ್ಲಕ್ಷ್ಯವನ್ನು ಬಿಟ್ಟು ಬಿಡಿ..ಕೊರೊನಾ ಬರೋದು ಹಿರಿ ವಯಸ್ಸಿನವರಲ್ಲಿ ಹೆಚ್ಚು..ಸತ್ರೂ ಅವರೇ ಸಾಯೋದು ಹೆಚ್ಚೆನ್ನುವ ತಾತ್ಸಾರದ ಮನೋಭಾವನೆಯನ್ನು ಬಿಟ್ಟುಬಿಡೋದು ಒಳ್ಳೇದು..ಇಲ್ಲದಿದ್ದರೆ ಯಾವ್ ಕ್ಷಣದಲ್ಲಿ ಬೇಕಾದ್ರೂ ಕೊರೊನಾಗೆ ಬಲಿಯಾಗ್ಬೋದು.ಯಾಕಂದರೆ ಕೊರೊನಾಗೆ ಮೊನ್ನೆ 32-35ರ ಆಸುಪಾಸಿನಲ್ಲಿರುವ ಯುವಕನೋರ್ವ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಬಲಿಯಾಗಿದ್ದಾನೆ.

ಲಾಕ್ ಡೌನ್ ಸಡಿಲಿಕೆ ಆಗಿದ್ದೇ ಆಗಿದ್ದು ನಮ್ಮ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಜನಜೀವನ ಸಹಜವಾಗೋಗಿದೆ.ಮಾಸ್ಕ್ ಹಾಕ್ಕೊಂಡ್ರೆ ಮುಗೀತು ಸಮಸ್ಯೆಯಿಲ್ಲ ಎನ್ನುವ ರೇಂಜ್ನಲ್ಲಿ ಜನ ಅಡ್ಡಾಡುತ್ತಿದ್ದಾರೆ.ಪರಸ್ಪರ ಬೆರೆಯುತ್ತಿದ್ದಾರೆ.ಅವರಿಗೆ ಕೊರೊನಾ ಭಯವೇ ಇಲ್ಲದಂತೆ ವ್ಯವಹರಿಸಲಾರಂಭಿಸಿದ್ದಾರೆ.ಆದರೆ ಕೊರೊನಾ ಮಹಾಮಾರಿ ತನ್ನ ವಿದ್ವಂಸಕತೆಯನ್ನು ಇನ್ನೂ ಕಡ್ಮೆ ಮಾಡಿಕೊಂಡಿಲ್ಲ ಎನ್ನೋ ಸತ್ಯವನ್ನೇ ಅವರೆಲ್ಲಾ ಮರೆತಂತಿದೆ.

ಇದೆಲ್ಲದರ ನಡುವೆ ಮಹಾಮಾರಿ ಕೊರೋನಾ ಬಲಿತೆಗೆದುಕೊಳ್ಳುವುದು  ವಯಸ್ಸಾದವರನ್ನು ಮಾತ್ರ ಎನ್ನುವಂತ ಕಲ್ಪನೆಇದೆ. ಈ ಕಾರಣಕ್ಕೆಇಂದು ಕೊರೊನಾವನ್ನು ಸಾಕಷ್ಟುಜನ ನಿರ್ಲಕ್ಷ್ಯಮಾಡುವಂಥ ಸನ್ನಿವೇಶ ಇದೆ .ಆದ್ರೆ ಕರೋನ ಸಣ್ಣ ವಯಸ್ಸಿನವರಿಗೂ ಕೂಡ ಮಾರಣಾಂತಿಕವಾಗಬಹುದು. ಇದಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗಳು ಸಾಕ್ಷಿಯಾಗಿವೆ.ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ತನ್ನ ಅಟ್ಟಹಾಸವನ್ನು ಎಂದಿನಂತೆ ಮುಂದುವರೆಸಿದೆ. ಆದರೆ ಕೆಲವು ವಿದ್ಯಮಾನಗಳ ಕಾರಣಕ್ಕೋಸ್ಕರ, ಎಲ್ಲೂ ಕೂಡ ಸುದ್ದಿಯಾಗುತ್ತಿಲ್ಲ. ಮಾಧ್ಯಮಗಳು ಆರಂಭದಲ್ಲಿ ದೊಡ್ಡಸಮಸ್ಯೆ ಎನ್ನುವಂತೆ ಬಿಂಬಿಸಿ , ನಂತರದಲ್ಲಿ ಕೊರೊನಾವನ್ನೇ ಸಂಪೂರ್ಣವಾಗಿ ಮರೆತ ಕಾರಣಕ್ಕೆ ಕೊರೊನದಿಂದ ಆಗುತ್ತಿರುವ ಅನಾಹುತಗಳು ಹೊರಗೆ ಬರುತ್ತಲೇ ಇಲ್ಲ.

ಕರೋನದಿಂದಾಗಿ ಎಷ್ಟುದಿನ ಲಾಕ್ಡೌನ್ ಮಾಡಲಿಕ್ಕೆ ಸಾಧ್ಯ ಎನ್ನುವ ಕಾರಣಕ್ಕೆ ಸರ್ಕಾರ ಕೊರೋನಾ ಜೊತೆಗೆ ನಾವು ಬದುಕುವುದನ್ನು ಕಲಿಯಬೇಕೆ ಹೊರತು, ಅದಕ್ಕೆ ಲಾಕ್ಡೌನ್ ಪರಿಹಾರವಲ್ಲ ಎಂದ್ಹೇಳಿ ಸಡಿಲಗೊಳಿಸ್ತು. ಆದರೆ ಅದೇ ಇವತ್ತು ಜನ ಕೊರೊನಾದ ಬಗ್ಗೆನಿರ್ಲಕ್ಷ್ಯ ವಹಿಸುವಂತೆ ಮಾಡಿದೆ.ಜನರು ಕೊರೊನಾದ  ಆತಂಕವನ್ನೇ  ಮರೆತಿದ್ದಾರೆ. ಸಾಮಾಜಿಕ ಅಂತರ .ಮಾಸ್ಕ್ ಧಾರಣೆ, ಸ್ಯಾನಿಟೈಸರ್ಬಳಕೆಯಂಥ ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಇದರಿಂದ ಅಪಾಯ ಹೆಚ್ಚಾಯ್ತೇ  ಹೊರತು ಯಾವುದೇ ಕಾರಣಕ್ಕೂ ಕೂಡ ಕಡಿಮೆಯಾಗಲು  ಸಾಧ್ಯವೇ ಇಲ್ಲ..ಜನರಲ್ಲಿ ಒಂದು ತಪ್ಪು ತಿಳಿವಳಿಕೆಯಿದೆ. ಅದು ಏನೆಂದರೆ ಕೊರೋನಾ ಅಟಕಾಯಿಸಿಕೊಳ್ಳುವುದು ವಯಸ್ಸಾದವರಿಗೆ ಎನ್ನುವಂಥದು.ಸಣ್ಣವಯಸ್ಸಿನವರಿಗೆ ಕೊರೋನಾಬರುವುದಿಲ್ಲ. ಏಕೆಂದರೆ ದೇಹದಲ್ಲಿ ರೋಗನಿರೋಧಕಶಕ್ತಿ ವಯಸ್ಸಾದವರಲ್ಲಿ ಕಡಿಮೆ ಇರುತ್ತೆ. ಸಣ್ಣವಯಸ್ಸಿನವರಲ್ಲಿ ಹೆಚ್ಚಿರುತ್ತೆ ಎನ್ನುವ ಭಾವನೆ ಎಲ್ಲರಲ್ಲೂ ಇದೆ.

ಕರೋನಾಗೆ ಬಲಿಯಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಅತಿಹೆಚ್ಚಿನ ಪ್ರಮಾಣದ ವಯಸ್ಸಾದವರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ..ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಇರುತ್ತೆ ಎನ್ನುವಕಾರಣಕ್ಕೆ ಎನ್ನುವುದು ಕೂಡಸತ್ಯವೇ. ಆದರೆ ಸಣ್ಣವಯಸ್ಸಿನವರಲ್ಲೂ ಕೊರವ ಬಂದರೆ ಅವರು ಕೂಡ ಸಾವಿನ ಕದತಟ್ಟಬಹುದು ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಘಟನೆ ಸಾಕ್ಷಿ.ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು…ಮೊನ್ನೆ ಬೆಂಗಳೂರಿನಲ್ಲಿ ಮೂವತ್ತೆರಡು ವರ್ಷದ ಯುವಕನೋರ್ವ ಕೊರೋನಾಗೆ ಬಲಿಯಾಗಿದ್ದಾನೆ. ಆತನಿಗೆ ಕೊರೊನಾದ ಯಾವುದೇಲ ಕ್ಷಣಗಳೂಇರಲಿಲ್ಲ.. ಸಣ್ಣಪ್ರಮಾಣದ ಸುಸ್ತನ್ನು ಹೊರತುಪಡಿಸಿದರೆ ಆತ ಕಂಪ್ಲೀಟಾಗಿ ಆರೋಗ್ಯವಂತನಂತೆ ಕಡುಬರುತ್ತಿದ್ದ. ಆದರೆ ಅದೇ ನಿರ್ಲಕ್ಷ್ಯ ದಿಢೀರನೆ ಕಂಡುಬಂದ ಉಸಿರಾಟದ ಸಮಸ್ಯೆಗೆ ಕಾರಣವಾಗಿ ಆತನ ಉಸಿರಾಟ ನಿಲ್ಲಿಸಿದೆ.

ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಓಡಾಡುತ್ತಿದ್ದ ಯುವಕ ವಾರದ ನಂತರ  ಕೊನೆಯುಸಿರೆಳೆದಿದ್ದಾನೆ .ಆತನಿಗೆ ಬಿಪಿ ಇರಲಿಲ್ಲ..ಶುಗರ್ರೂ ಒಕ್ಕರಿಸಿರಲಿಲ್ಲ. ಆದರೆ ಎಲ್ಲೋ ಒಂದ್ಕಡೆ ವೈರಸ್ನ ಸಾಂಕ್ರಾಮಿಕತೆ ದೇಹದಲ್ಲಿ ಹೆಚ್ಚಾಗಿದ್ದನ್ನು ನಿರ್ಲಕ್ಷಿಸಿದ ಕಾರಣಕ್ಕೆ ಆತ ಉಸಿರು ಚೆಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಲ್ಲಿ ಇಂಥ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ.ಕೊರೊನಾ ವಕ್ಕರಿಸುವುದು ಕೇವಲ ಹಿರಿಯ ವಯಸ್ಸಿನವರಿಗೆ ಮಾತ್ರವಲ್ಲ.ಕೊರೋನಾ ಎಂಥ ವಯಸ್ಸಿನವರೆಗೂ ಕೂಡಬರಬಹುದು.ಆದರೆ ಅವರ ದೇಹದಲ್ಲಿ ಎಷ್ಟರ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಇದೆ ಎನ್ನುವುದರ ಮೇಲೆ ಅದರಿಂದ ಗುಣಮುಖವಾಗುವ ಅಥವಾ ಸಾವಿಗೆ ತುತ್ತಾಗುವಂತದ್ದು ಡಿಪೆಂಡ್ಆಗಿದೆ.

ಕೊರೊನಾವನ್ನು ಬೇರೆರೋಗಗಳಂತೆ ಒಂದುಸಾಮಾನ್ಯ ರೋಗ ಎನ್ನುವ ರೀತಿಯಆಲೋಚನೆಗೆ ಇವತ್ತು ಬೆಂಗಳೂರಿಗರು ಬಂದಿದ್ದಾರೆ. .ಆ ಕಾರಣಕ್ಕೋಸ್ಕರವೇ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ  ಮೊದಲಿದ್ದಂತೆ  ಬದುಕುವ ಜಾಯಮಾನಕ್ಕೆ ಒಗ್ಗೊಗಿದ್ದಾರೆ. ಅದನ್ನೇ ರೂಢಿಗೊಳಿಸಿಕೊಂಡಿದ್ದಾರೆ.ಆದ್ರೆ ನೆನಪಿರಲಿ..ಕೊರೋನಾ ಎಂಥ ವಯಸ್ಸಿನವರಿಗೂ ಕೂಡ  ಬರಬಹುದು.ಅದರ ಸಾಂಕ್ರಾಮಿಕತೆಯ ತಡೆಯದೇ ಹೋದಲ್ಲಿ,ಅದು ಗಂಭೀರವಾಗಿ ದೇಹವನ್ನು ವ್ಯಾಪಿಸಿ ಬದುಕನ್ನೇ ಬಲಿಪಡೆಯುವತ್ತ ಸಾಧ್ಯತೆಗಳಿದೆ. ಯುವಜನತೆಯಲ್ಲೂ ಕೂಡ ಕೊರೊನಾದ ಸಾಂಕ್ರಾಮಿಕತೆ  ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತಿದೆ ಎನ್ನುವ ಆತಂಕದ ಮಾತನ್ನು ಈಗಾಗಲೇ ವೈದ್ಯರು ಬಹಿರಂಗಪಡಿಸಿದ್ದಾರೆ. ಇನ್ನಾದ್ರೂ ನಿರ್ಲಕ್ಷ ವಹಿಸುವುದನ್ನು ಬಿಟ್ಟು ಎಚ್ಚೆತ್ತುಕೊಳ್ಳಬೇಕಿದೆ.

ಕೊರೊದಿಂದ ಸಾವನ್ನಪ್ಪುತ್ತಿರುವವರ ವಯೋಮಾನವನ್ನು ಗಮನಿಸಿದಾಗ  ನಲವತ್ತುರಿಂದ ಐವತ್ತುವರ್ಷದ ಒಳಗಿನ ವ್ಯಕ್ತಿಗಳು ಹೆಚ್ಚಿನ ರೀತಿಯಲ್ಲಿ ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿವೆ.ಎಲ್ಲೋ ನಿರ್ಲಕ್ಷ್ಯ ಮನೋಭಾವನೆ ಈ ಸಾವುಗಳಿಗೆ ಕಾರಣವಾಗುತ್ತಿದೆ.ಹಾಗಾಗಿ ನಿರ್ಲಕ್ಷ್ಯಬಿಟ್ಟು ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸೂಕ್ತ. ಇಲ್ಲವಾದಲ್ಲಿ ಕೊರೋನಾ ಮನು ಕುಲವನ್ನು ಮತ್ತಷ್ಟು ಮಾರಣಾಂತಿಕವಾಗಿ ಕಾಡೋದ್ರಲ್ಲಿ ಡೌಟೇ ಇಲ್ಲ.ಕೊರೊನಾಮುಕ್ತ ಪರಿಸ್ಥಿತಿ ಸೃಷ್ಟಿಯಾಗುವವರೆಗು ಸ್ವಲ್ಪ ಎಚ್ಚರಿಕೆಯಿಂದಿರೋದು ಸೂಕ್ತ.  

Spread the love

Related Articles

Leave a Reply

Your email address will not be published.

Back to top button
Flash News