ಶೂಟಿಂಗ್ ಸ್ಪಾಟ್ ನಲ್ಲಿ ಹಾಸ್ಯನಟ ರಾಕ್ ಲೈನ್ ಸುಧಾಕರ್ ಕೊನೆಯುಸಿರು

0

ಶೂಟಿಂಗ್ ಸ್ಪಾಟ್ ನಲ್ಲೇ ಕನ್ನಡದ ಖ್ಯಾತ ಪ್ರತಿಭಾನ್ವಿತ ಹಾಸ್ಯನಟ ರಾಕ್ ಲೈನ್ ಸುಧಾಕರ್ ಕೊನೆಯುಸಿರೆಳೆದಿದ್ದಾರೆ. ಶುಗರ್‌ಲೆಸ್’ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ವೇಳೆಯೇ ನಟ ರಾಕ್‌ಲೈನ್ ಸುಧಾಕರ್ ನಿಧನರಾಗಿದ್ದಾರೆ.

ಖ್ಯಾತ ಹಾಸ್ಯನಟ ರಾಕ್ ಲೈನ್ ಸುಧಾಕರ್  ಇಹಲೋಕ ತ್ಯಜಿಸಿದ್ದಾರೆ. ಸುಧಾಕರ್ ಅವರು ಯಾಕೆ ಇಷ್ಟು ಕಡಿಮೆ ತಿಂದಿರಿ ಎಂದು ಪ್ರಶ್ನೆ ಮಾಡಿದ್ದರು. ಇದಾದ ನಂತರದಲ್ಲಿ ನಾವು ಸುಮ್ಮನೆ ಹಾಗೆ ಮಾತನಾಡಿದೆವು. ಇವತ್ತು ಎಲ್ಲರನ್ನು ನೋಡಿ ಸುಧಾಕರ್ ನಗುತ್ತ ಮಾತನಾಡುತ್ತಿದ್ದರು’ ಎಂದು ಪ್ರಥ್ವಿ ಹೇಳಿದ್ದಾರೆ.

ಶೂಟಿಂಗ್ ನಲ್ಲಿ ಪಾಗ್ಲೊಂಡ ವೇಳೆ ಇದ್ದಕ್ಕಿದ್ದ ಹಾಗೆ ಸುಧಾಕರ್ ಅವರು ರೆಸ್ಟ್ ತಗೋಬೇಕು ಅಂದ್ರು. ಆಮೇಲೆ ಅವರಿಂದ ಯಾವುದೇ ಪ್ರತಿಕ್ರಿಯೆಯೇ ಬರಲಿಲ್ಲ. ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಲೇಟ್ ಆಗತ್ತೆ ಅಂತ ನಾವು ನಿರ್ದೇಶಕರ ಕಾರ್‌ನಲ್ಲಿಯೇ ಕರೆದುಕೊಂಡು ಹೋಗಬೇಕು ಎಂದು ಡಿಸೈಡ್ ಮಾಡಿದ್ದೆವು.

ದುರದೃಷ್ಟವಶಾತ್ ಹೃದಯಾಘಾತದಿಂದಾಗಿ ಅವರು ಆಗಲೇ ನಿಧನರಾಗಿದ್ದರು’ ಎಂದು ನಟ  ಪ್ರಥ್ವಿ ಹೇಳಿದ್ದಾರೆ.ಅಂದ್ಹಾಗೆ ಅಜಿತ್, ಉಡುಂಬಾ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಕ್​ಲೈನ್​ ಸುಧಾಕರ್ ನಟಿಸಿದ್ದರು. ಅವರು ಮಾಡುತ್ತಿದ್ದ ಕಾಮಿಡಿ ಪಾತ್ರಗಳು ಎಲ್ಲರ ಗಮನ ಸೆಳೆದಿದ್ದವು.  

Spread the love
Leave A Reply

Your email address will not be published.

Flash News