ಕೋಗಿಲೆ ಗಾನೈಕ್ಯ-ಗಾನ”ಸೂರ್ಯ” ಅಸ್ತಂಗತ –ಗುನುಗುತ್ತಲೇ ಅನಂತದತ್ತಪಯಣ ಕೊರೊನಾ ವಿರುದ್ಧ ಸೆಣೆಸಾಡಿ ಸೋತು ಸಾವಿನ ಮುಂದೆ ಮಂಡಿಯೂರಿಯೇ ಬಿಡ್ತಾ ಜೀವ

0

ದಶಕಗಳ ಕಾಲ ರಸಿಕರನ್ನು ರಂಜಿಸಿದ್ದ ಕೋಗಿಲೆ ಶಾಶ್ವತವಾಗಿ ಮೂಕಾಗಿದೆ.ಆ ಮೌನದ ಶೋಕವನ್ನು ಕಟ್ಟಿಡಲು ಪದಗಳೇ ಸಾಲುತ್ತಿಲ್ಲ..ಏನೇ ಅಂದ್ರೂ..ಎಷ್ಟೇ ಬಣ್ಣಿಸಿದರೂ ಅದು ಕ್ಲೀಷೆ..ಅದು ಸೃಷ್ಟಿಸಿರುವ ನಿರ್ವಾತವನ್ನು ಮತ್ತೆ ಬರಿಸ್ಲಿಕ್ಕೆ ಸಾಧ್ಯವೇ ಇಲ್ಲ.ಅದಕ್ಕೆ ಎಸ್ಪಿಯಂಥ ನಾ ಭೂತೋ ನ ಭವಿಷ್ಯತಿ ಎನ್ನುವಂತಿದ್ದ ವ್ಯಕ್ತಿತ್ವವೇ ಮತ್ತೆ ಹುಟ್ಟಿ ಬರಬೇಕು.

ಹೌದು..ಚಿತ್ರರಂಗವನ್ನು ದಶಕಗಳ ಕಾಲ ಏಕಮೇವಾದ್ವಿತೀಯರಾಗಿ ಆಳಿದ್ದ ಸೌಜನ್ಯದ-ಸಾತ್ವಿಕ ಧ್ವನಿಯೊಂದು ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದೆ.ಕೋಟ್ಯಾಂತರ ಕೇಳುಗರ ಗಾನಸಾಮ್ರಾಟ್ ನಾಗಿ ಮೆರೆದಿದ್ದ ಎಸ್ಪಿ ಬಾಲಸುಬ್ರಹ್ಮಣ್ಯಂ ಇನ್ನು ಕೇವಲ ನೆನಪು ಎಂದು ಹೇಳೊಕ್ಕೇನೆ ಮನಸು ಭಾರವಾಗುತ್ತೆ.ಗಂಟಲು ಉಬ್ಬಿ ಬರುತ್ತೆ.ಧ್ವನಿ ಗದ್ಗಿತವಾಗುತ್ತೆ..ಇಡೀ ಗಾಯನ ಲೋಕದಲ್ಲೊಂದು ಶೂನ್ಯವನ್ನುಳಿಸಿ ಬಾಲು ಸರ್ ಬಾರದ ಲೋಕದತ್ತ ಗುನುಗುತ್ತಲೇ ನಡೆದುಬಿಟ್ಟಿದ್ದಾರೆ.

ಮಹಾಮಾರಿ ಕೊರೋನಾದ ವಿರುದ್ಧ ಬರೋಬ್ಬರಿ ಮೂರುವಾರಗಳವರೆಗೆ ಸೆಣೆಸಾಡಿ ಸೋತ ಬಾಲು ಸರ್ ಜೀವ ಸಾವಿನ ಮುಂದೆ ಮಂಡಿಯೂರಿಯೇ ಬಿಟ್ಟಿದೆ.ಎಸ್ಪಿಬಿ ಅವರ ಕಂಠಸಿರಿಯಲ್ಲಿ ಮಿಂದೆದ್ದ ಕೋಟ್ಯಾಂತರ ಅಭಿಮಾನಿಗಳು ವಾರದಿಂದಲೂ ಮಾಡಿಕೊಂಡ ಹರಕೆ-ಪ್ರಾರ್ಥನೆ ಯಾವುದೂ ಫಲಿಸಲೇ ಇಲ್ಲ..ಸ್ಥಿತಪ್ರಜ್ಞರಾಗಿರುವವರೆಗೂ ತಮ್ಮ ಹಾಡುಗಳನ್ನೇ ಕೇಳುತ್ತಾ ನಿಧಾನವಾಗಿ ಕಣ್ಣುಗಳನ್ನು ಆಡಿಸುತ್ತಿದ್ದ ಬಾಲು ಸರ್ ಶಾಶ್ವತವಾಗಿ ಕಣ್ ಮುಚ್ಚೇ ಬಿಟ್ಟರು.

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಆಗಸ್ಟ್ 5 ರಂದು ದಾಖಲಾದ ಬಾಲು ಸರ್ ಅವರ ಆರೋಗ್ಯದಲ್ಲಿ ಏರುಪೇರಾಗ್ತಲೇ ಇತ್ತು.ಒಂದ್ ದಿನವೂ ಚೇತರಿಕೆ ಕಂಡಿದ್ದೆ ಇರಲಿಲ್ಲ..ವೈದ್ಯರು ಕೂಡ ಆಗಲೇ ಚಾನ್ಸಸ್ 50:50 ಅಂದಿದ್ರಂತೆ.ಆದ್ರೆ ಶತಾಯಗತಾಯ ಉಳಿಸಲೇಬೇಕೆಂದು ಪಣತೊಟ್ಟು ಎಲ್ಲಾ ರೀತಿಯ ಚಕಿತ್ಸೆಯನ್ನು ನುರಿತ ವೈದ್ಯರಿಂದ ಕುಟುಂಬ ಕೊಡಿಸುತ್ತಲೇ ಇತ್ತು.ಆದ್ರೆ ಶ್ವಾಸಕೋಶ ನಿರೀಕ್ಷಿಸಲಾಗದಷ್ಟು ದುರ್ಬಲವಾಗಿದ್ದಲ್ಲದೇ ದೇಹದ ಅಂಗಗಳು ವೈದ್ಯರ ಚಿಕಿತ್ಸೆಗೆ ಸ್ಪಂದಿಸದಿದ್ದುದು ಕ್ಷಣ ಕ್ಷಣಕ್ಕೂ ವಿಷಮಗೊಳಿಸುತ್ತಲೇ ಇತ್ತು.

ನಮ್ಮ ಪ್ರಯತ್ನವನ್ನೆಲ್ಲಾ ಮಾಡಿದ್ದೇವೆ..ಇನ್ನೇನಿದ್ದರೂ ದೇವರೇ ಕಾಪಾಡ್ಬೇಕು..ಪ್ರಾರ್ಥನೆ-ಹರಕೆ-ಆರೈಕೆಗಳೇ ಉಳಿಸಬೇಕೆಂದು ಹೇಳಿದ್ದರು.ಇಡೀ ವಿಶ್ವವೇ ಅವರ ಚೇತರಿಕೆಗೆ ಕನವರಿಸಿತ್ತು. ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗ್ತಿತ್ತು.ಆದ್ರೆ ಇಲ್ಲಿ ಹಾಡಿದ್ದು ಎಲ್ಲರನ್ನು ತನ್ಮಯಗೊಳಿಸಿದ್ದು ಸಾಕು..ನಿನ್ನಅಗತ್ಯಮೇಲಿರುವವರಿಗೂ ತುಂಬಾ ಇದೆ ಎನ್ನುವ ಬೇಡಿಕೆಯಲ್ಲಿ ದೇವರೆನ್ನುವ ಮಹಾನ್ ಶಕ್ತಿ ಅವರನ್ನು ಪರದ ಪಾಲು ಮಾಡಿಸ್ತೇನೋ ಗೊತ್ತಾಗ್ತಿಲ್ಲ..ಏನೇ ಆದ್ರೂ ಬಾಲು ಸರ್ ಅವರ ಹಾಡುಗಳಲ್ಲೇ ಅವರನ್ನು ನೆನಪು ಮಾಡಿಕೊಳ್ಳೋದೊಂದೇ ನಮ್ಮ ಪಾಲಿನ ಪುಣ್ಯ

Spread the love
Leave A Reply

Your email address will not be published.

Flash News