“ಆಡುಮುಟ್ಟದ ಸೊಪ್ಪಿಲ್ಲ” ಎನ್ನೋದೆಷ್ಟು ಸತ್ಯವೋ.. ಬಾಲು ಸರ್ ಅವರನ್ನು ಮೆಚ್ಚದ ಸಂಗೀತ ನಿರ್ದೇಶಕರಿರಲಿಲ್ಲ ಎನ್ನೋದು ಅಷ್ಟೇ ನಿಜ..

0

ಎಷ್ಟೇ ಖ್ಯಾತಿ-ಹೆಸರು-ಹಣ ಸಂಪಾದನೆಯಾದ್ರೂ ತಮ್ಮ ಬೆಳವಣಿಗೆಗೆ ಕಾರಣವಾದವ್ರನ್ನು ಮರೆತವರಲ್ಲ ಎಸ್ ಪಿಬಿ.

ಆ ಕಾರಣಕ್ಕಾಗೇ ಅವರು ಸವ್ಯಸಾಚಿಯಾಗಿ-ಅಜಾತಶತೃವಾಗಿ ಬೆಳೆದರು.ಕೈ ತುಂಬಾ ಅವಕಾಶಗಳಿದ್ದಾಗ್ಕೂ ತನ್ನನ್ನು ಬೆಳೆಸಿದ ತಮಿಳು ಚಿತ್ರರಂಗವನ್ನು ಮರೆತವರೇ ಅಲ್ಲ ಬಾಲು ಸರ್..ಹಾಗಾಗಿನೇ ಅವರೊಂದಿಗೆ ಕೆಲಸ ಮಾಡಲು ನಿರ್ದೇಶಕರು ಇಷ್ಟಪಡುತ್ತಿದ್ದರು..ಹಂಬಲಿಸುತ್ತಿದ್ದರು.

1990ರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಸಂಗೀತ ದಿಗ್ಗಜರ ನಿರ್ದೇಶನದಲ್ಲಿ ಬಂದ ಹಿಟ್ ಸಿನೆಮಾಗಳಲ್ಲಿ ಅತ್ಯುತ್ತಮವಾದ ಹಾಡುಗಳನ್ನು ಹಾಡಿದ್ದಾರೆ.ವಿದ್ಯಾಸಾಗರ್,ಎಂ.ಎಂ ಕೀರವಾಣಿ,ಎಸ್ .ಎ ರಾಜಕುಮಾರ್ ಹಾಗೂ ದೇವಾ ಈ ನಿರ್ದೇಶಕರಲ್ಲಿ ಪ್ರಮುಖರು..

ಇದೆಲ್ಲದರ ನಡುವೆ ಇಳಯರಾಜ ಅವರಂತೆ ಸಿಕ್ಕ ಮತ್ತೊಬ್ಬ ಹಿಟ್ ಸಂಗೀತ ನಿರ್ದೇಶಕ ಎಂದರೆ ಅದು ಎ.ಆರ್.ರೆಹಮಾನ್..ರೆಹಮಾನ್ ನಿರ್ದೇಶನದ ಬಹುತೇಕ ಚಿತ್ರಗಳಿಗೆ ಎಸ್ ಪಿಬಿ ಕಂಠ ಇರಲೇಬೇಕಿತ್ತು. ಅವರ ಜೋಡಿ ಸಾಕಷ್ಟು ಜಬರ್ ದಸ್ತ್ ಹಿಟ್ ಹಾಡುಗಳನ್ನೇ ನೀಡಿದೆ.ಅದರಲ್ಲಿ ರೋಜಾ ಪ್ರಮುಖವಾದದ್ದು.ಪುದಿಯಾ ಮುಗಮ್,ಡ್ಯೂಯೆಟ್,ಮಿನ್ಸಾರ ಕಣವು..ಹೀಗೆ ಹತ್ತಲವು ಚಿತ್ರಗಳು ಈ ಸಾಲಿನಲ್ಲಿವೆ.ಆ ಪೈಕಿ ಮಿನ್ಸಾರ್ ಕನವು ಚಿತ್ರದಲ್ಲಿನ ಹಾಡಿಗೆ ಅತ್ಯುತ್ತಮ ಹಿನ್ನಲೆ ಗಾಯಕ ರಾಷ್ಟ್ರೀಯ ಪುರಸ್ಕಾರ ಸಂದಾಯವಾಯ್ತು.ಇದು ಎಸ್ ಪಿಬಿ ಅವರಿಗೆ ಸಂದಾಯವಾದ ಆರನೇ ರಾಷ್ಟ್ರೀಯ ಪುರಸ್ಜಾರ ಎನ್ನುವುದು ವಿಶೇಷವಾಗಿತ್ತು.

ತೆಲುಗು ಚಿತ್ರರಂಗ ನನಗೆ ಜನ್ಮ ಕೊಡ್ತು.ಆದರೆ ನನಗೆ ಬದುಕು ಕೊಟ್ಟಿದ್ದು ಕನ್ನಡ ಚಿತ್ರರಂಗ ಎನ್ನೋದ್ರ ಮೂಲಕ ಕನ್ನಡ ಚಿತ್ರರಂಗದ ಜೊತೆಗಿನ ನಂಟನ್ನು ಬಿಡಿಸಿಟ್ಟಿದ್ದರು ಎಸ್ ಪಿ ಬಾಲು ಸರ್,ಕನ್ನಡದಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿರುವ ಹೆಗ್ಗಳಿಕೆ ಅವರದು.ಎಲ್ಲಾ ನಾಯಕರ ಹಾವಭಾವ-ಭಂಗಿ-ಶರೀರಕ್ಕೆ ತಕ್ಕಂತೆ ಶಾರೀರವನ್ನು ರೂಪಾಂತರಿಸಿ ಹಾಡುವುದರಲ್ಲಿ ಎಸ್ ಪಿಬಿ ಅವರಷ್ಟು ಸಿದ್ಧಹಸ್ತ ಗಾಯಕರನ್ನು ಕನ್ನಡ ಚಿತ್ರರಂಗ ನೋಡಲೇ ಇಲ್ಲ.

ಕನ್ನಡ ಚಿತ್ರಗಳ ಪೈಕಿ ಅತೀ ಹೆಚ್ಚು ಯಶಸ್ವಿ ಜೋಡಿ ಎನಿಸೋದು ಹಂಸಲೇಖ-ಎಸ್ ಪಿಬಿ ಅವರದು.ಹಂಸಲೇಖರ ಅತೀ ಹೆಚ್ಚು ಚಿತ್ರಗಳಿಗೆ ಹಾಡಿರುವ ಹೆಗ್ಗಳಿಕೆ ಬಾಲು ಸರ್ ಅವರದು.ಬಹುತೇಕ ರವಿಚಂದ್ರನ್ ಅವರ ಚಿತ್ರಗಳಿಗೆ ಎನ್ನುವುದು ಮತ್ತಷ್ಟು ವಿಶೇಷ.

ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ (1995)ಚಿತ್ರದ “ಉಮಂಡು.ಗುಮಂಡು” ಹಾಡಿನಲ್ಲಿನ ಅದ್ಭುತ ಗಾಯನಕ್ಕೆ ಅತ್ಯುತ್ತಮ ಗಾಯಕ ರಾಷ್ಟ್ರೀಯ ಪ್ರಶಸ್ತಿ ಕೂಡ ಎಸ್ ಪಿಬಿ ಅವರಿಗೆ ಸಲ್ಲುತ್ತೆ.

ಕೊವಿಡ್ ಸಂದರ್ಭದಲ್ಲೂ ತನ್ನ ಆತ್ಮೀಯ ಸ್ನೇಹಿತ-ಜೀವದ ಗೆಳೆಯ ಇಳಯರಾಜ ಕೊವಿಡ್ ಜಾಗೃತಿಗಾಗಿ ಭಾರತ್ ಭೂಮಿ ಎನ್ನುವ ಸಂದೇಶಾತ್ಮಕ ಜಾಗೃತಿಯ ವೀಡಿಯೋ ಆಲ್ಬಂನ್ನು ಸಿದ್ದಪಡಿಸಿದ್ದರು.

ಅದರಲ್ಲಿ  ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರೇ ಖುದ್ದು ಹಾಡುವ ಮೂಲಕ ಈ ಅಭಿಯಾನದಲ್ಲಿ ಕೈ ಜೋಡಿಸಿರುವ ಎಲ್ಲಾ ವರ್ಗದವರಿಗೂ ಅಭಿನಂದನೆ ಸಲ್ಲಿಸಿದ್ದರು.

ಹಿಂದಿ ಹಾಗು ತಮಿಳು ಭಾಷೆಯಲ್ಲಿ ಮೇ 30 ರಂದು ಯೂ ಟ್ಯೂಬ್ ನಲ್ಲಿ ಈ ವೀಡಿಯೋ ಲೋಕಾರ್ಪಣೆಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಆದ್ರೆ ಟ್ರ್ಯಾಜಿಡಿ ನೋಡಿ,ಅದೇ ಕೊರೊನಾದಿಂದ್ಲೇ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಾವನ್ನಪ್ಪಬೇಕಾಗಿ ಬಂತು. 

Spread the love
Leave A Reply

Your email address will not be published.

Flash News