BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedವಿಚಿತ್ರ-ವಿಶೇಷಸಿನೆಮಾ ಹಂಗಾಮ

ಗಾಯಕರಾಗಿಯಷ್ಟೇ ಅಲ್ಲ…ಡಬ್ಬಿಂಗ್ ಕಲಾವಿದರಾಗಿ ಮಾತ್ರವಲ್ಲ..ನಟನಾಗಿಯೂ ಮಿಂಚಿ ಮನಸೂರೆಗೊಂಡಿದ್ದ ಬಾಲು ಸರ್

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರದು ಬಹುಮುಖ ಪ್ರತಿಭೆ.ಗಾಯಕರಾಗಿ ಮಾಡಿದಷ್ಟೇ ಸಾಧನೆಯನ್ನು ನಟನಾಗಿಯು ಮಾಡಿದ್ದಾರೆ.

ಕನ್ನಡದಲ್ಲಿ ಬಾಳೊಂದು ಚದುರಂಗ(1982),ತಿರುಗುಬಾಣ(1983),ಮುದ್ದಿನ ಮಾವ(1993),ಸಂದರ್ಭ(1997),ಮಾಂಗಲ್ಯಂ ತಂತುನಾನೇನ(1998),ಮಹಾ ಯಡಬಿಡಂಗಿ(2003),ಕಲ್ಯಾಣೋತ್ಸವ,ಹೆತ್ತರೆ ಹೆಣ್ಣನ್ನೇ ಹೆರಬೇಕು(2007) ಚಿತ್ರಗಳಲ್ಲಿ ಅಭಿನಯಿಸಿದ್ದರು.

ಇದೆಲ್ಲದರ ಪೈಕಿ ಮುದ್ದಿನ ಮಾವ ಚಿತ್ರದಲ್ಲಿನ ಮುಗ್ಧ ತಂದೆಯ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಚಿತ್ರದಲ್ಲಿ ಬಾಲು ಅವರಿಗೆ ಡಾ.ರಾಜ್ ಕಂಠವಾಗಿದ್ದು ವಿಶೇಷ.ಹಾಗೆಯೇ ರವಿಚಂದ್ರನ್ ಅಭಿನಯದ ಮಾಂಗಲ್ಯ ತಂತು ನಾನೇನಾ ಚಿತ್ರದಲ್ಲಿಯೂ ತಂದೆಯ ಪಾತ್ರಧಾರಿಯಾಗಿ ಜನ ಮನ ಸೂರೆ ಗೊಂಡಿದ್ರು.

1969 ರಿಂದ ಚಿತ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದ ಬಾಲು ಅವರ ನಟನೆಗೆ ಸಾಣೆ ಹಿಡಿದ ಒಂದಷ್ಟು ಚಿತ್ರಗಳ ಬಗ್ಗೆ ಹೇಳೋದಾದ್ರೆ ಕೇಳಡಿ ಕಣ್ಮಣಿ,ಇಂದ್ರ,ಮಿನ್ಸಾರ ಕನವು,ಉಲ್ಲಾಸಂ,ಪವಿತ್ರ ಬಂದಂ,ಅವೈ ಷಣ್ಮುಖಿ,ಕಾದಲನ್,ತಿರುಡಾ ತಿರುಡಾ,ಗುಣ,ಕಾದಲ್ ದೇಸಂ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ.

50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರಿಂದ್ಲೂ ಸೈ ಎನಿಸಿಕೊಂಡಿದ್ದರು ಎಸ್ ಪಿಬಿ.

Spread the love

Related Articles

Leave a Reply

Your email address will not be published.

Back to top button
Flash News