MoreTop NewsUncategorizedಮಾಹಿತಿ/ತಂತ್ರಜ್ಞಾನವಿಚಿತ್ರ-ವಿಶೇಷಹಣ-ವಾಣಿಜ್ಯ

‘ಮೇಕ್ ಇನ್ ಇಂಡಿಯಾ’ ಎಫೆಕ್ಟ್…”ಹಾರ್ಲೆ ಡೇವಿಡ್ ಸನ್” ಔಟ್ …..ಭಾರತದಲ್ಲಿ ಉತ್ಪಾದನೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ ಹಾರ್ಲೆ ಕಂಪೆನಿ.

ಪ್ರತಿಯೋರ್ವ ಬೈಕ್ ಸವಾರನ ಜೀವನದ ಅತ್ಯನ್ನುತ  ಕನಸು ಹಾರ್ಲೆ ಡೇವಿಡ್ ಸನ್ ಬೈಕ್ ನ್ನು ಒಮ್ಮೆಯಾದ್ರೂ ರೈಡ್ ಮಾಡ್ಬೇಕು ಎನ್ನೋದು.ಆದರೆ ಇದೀಗ ಕೇವಲ ನನಸು..ಏಕೆಂದ್ರೆ ಹಾರ್ಲೆ ಡೇವಿಡ್ ಸನ್ ಕಂಪೆನಿ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸ್ಲಿಕ್ಕೆ ನಿರ್ಧರಿಸಿದೆ.

ಅಮೆರಿಕಾದ ಸೂಪರ್ ಬೈಕ್ ಕಂಪನಿ ಹಾರ್ಲೆ ಡೇವಿಡ್ ಸನ್, ಮೇಕ್ ಇನ್ ಇಂಡಿಯಾ ಯೋಜನೆಗೆ ಅಕ್ಷರಶಃ ತತ್ತರಿಸಿದೆ…ಭಾರತದಲ್ಲಿ ತನ್ನ ವ್ಯಾಪಾರ ವಹಿವಾಟು ಭದ್ರಗೊಳಿಸಿಲು ಕಳೆದ ಒಂದು ದಶಕದಿಂದ ಮಾಡಿದ ಯೋಜನೆ, ತಂತ್ರಗಾರಿಕೆ ಎಲ್ಲವೂ ವಿಫಲವಾಗಿದೆ. ಪರಿಣಾಮ ಹಾರ್ಲೆ ಡೇವಿಡ್ ಸನ್ ಸಂಸ್ಥೆ ಭಾರತದಿಂದ ಪಲಾಯನ ಮಾಡಿದೆ.. ತೀವ್ರ ನಷ್ಟದ ಕಾರಣ ಭಾರತದಲ್ಲಿ ಹಾರ್ಲೆ ಡೇವಿಡ್ ಸನ್ ಬೈಕ್ ಗಳ ಉತ್ಪಾದನೆ ಹಾಗೂ ಮಾರಾಟ ನಿಲ್ಲಿಸಿದ್ದು, ಹರಿಯಾಣದಲ್ಲಿದ್ದ ತನ್ನ ಉತ್ಪಾದನಾ ಕಾರ್ಖಾನೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಆದರೆ ಅದರ ಬೆಲೆ ತುಂಬಾನೆ ದುಬಾರಿ.. ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ ಸನ್‌ನ ವಿವಿಧ ಮಾಡೆಲ್ ಬೈಕ್ ಗಳು 11 ಲಕ್ಷದವರೆಗೂ ಇತ್ತು.. ಹೀಗಾಗಿ ಮಧ್ಯಮ ವರ್ಗದವರು, ಬಡವರು ಈ ಐಶಾರಾಮಿ ಬೈಕ್ ಗಳನ್ನ ಖರೀದಿ ಮಾಡೋದು ದೂರದ ಮಾತು.. ಈ ಬೈಕ್ ಗಳು ಏನಿದ್ರು ಸಿರಿವಂತರಿಗೆ ಮಾತ್ರ… ಅದರಲ್ಲೂ ಕಳೆದ ಕೆಲ ವರ್ಷಗಳಿಂದ ಶ್ರೀಮಂತರು ಕೂಡ ಭಾರತದಲ್ಲಿ ಹಾರ್ಲೆ ಡೇವಿಡ್ ಸನ್ ಖರೀದಿ ಬಗ್ಗೆ ಮೂಗು ಮುರಿಯುತ್ತಿದ್ರು. ಇದನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿ, ಅದಕ್ಕೆ ಹೆಚ್ಚಿನ ಟ್ಯಾಕ್ಸ್ ಕಟ್ಟೋರು ಯಾರು ಅನ್ನೋ ದೃಷ್ಟಿ ಕೋನದಿಂದ ಹಾರ್ಲೆ ಡೇವಿಡ್ ಸನ್ ಬೈಕ್ ಗಳನ್ನ ಕೊಂಡುಕೊಳ್ಳಲು ಹಿಂದೇಟು ಹಾಕಿದ್ರು. ಪರಿಣಾಮ ಕಳೆದ ಕೆಲ ವರ್ಷಗಳಿಂದ ಈ ಸೂಪರ್ ಬೈಕ್ ಗಳ ಮಾರಾಟ ವಿರಳಗೊಂಡು ಭಾರತದಲ್ಲಿ ಹಾರ್ಲೆ ಡೇವಿಡ್ ಸನ್ ಉದ್ಯಮ ಮಕಾಡೆ ಮಲಗಿತು.

ಭಾರತದಲ್ಲಿ ದ್ವಿಚಕ್ರವಾಹನಗಳ ಮಾರುಕಟ್ಟೆಗೆ ಬೇಡಿಕೆ ಮೊದಲಿನಿಂದಲೂ ಹೆಚ್ಚಿದೆ. ಇದೇ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ೧೦ ವರ್ಷಗಳ ಹಿಂದೆ ಹಾರ್ಲೆ ಡೇವಿಡ್ ಸನ್ ಭಾರತಕ್ಕೆ ಆಗಮಿಸಿತ್ತು. ಶ್ರೀಮಂತರನ್ನೇ ಟಾರ್ಗೇಟ್ ಮಾಡಿಕೊಂಡು ತನ್ನ ವ್ಯಾಪಾರ ವಹಿವಾಟು ದುಪ್ಪಟ್ಟು ಮಾಡಿಕೊಳ್ಳುವ ಯೋಜನೆ ರೂಪಿಸಿತ್ತು. ಹೀಗಾಗಿಯೇ ಹಲವು ಆಫರ್ ಗಳನ್ನ ಗ್ರಾಹಕರಿಗೆ ನೀಡಿತ್ತು. ಒಂದಷ್ಟು ಜನ ಈ ಆಫರ್ ಗೆ ಮರುಳಾಗಿ ಈ ಸಂಸ್ಥೆಯ ಬೇಕ್ ಗಳನ್ನ ಖರೀದಿಸಿದ್ರು.

ಆದ್ರೆ ಬರ್ತಾ ಬರ್ತಾ ಬೈಕ್ ಗಳ ಕೊಂಡುಕೊಳ್ಳುವವರೆ ಇಲ್ಲವಾದರು. ಸಾಕಷ್ಟು ಜನರು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತೀಯ ಮೂಲಕದ ಬೈಕ್ ಗಳ ಮೇಲೆ ಒಲವು ತೋರಿದ್ರು. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ ಅಮೆರಿಕಾ ಮೂಲದ ಪ್ರತಿ ಹಾರ್ಲೆ ಡೇವಿಡ್ ಸನ್ ಭಾರತದಿಂದ ಕಾಲ್ಕಿತ್ತಿದೆ.

ಕಳೆದ ವರ್ಷ ಟೊಯೋಟಾ ಮೋಟಾರ‍್ಸ್ ಕೂಡ ಭಾರತದಲ್ಲಿ ತನ್ನ ಬಿಸಿನೆಸ್ ವಿಸ್ತರಣೆ ಮಾಡುವುದಿಲ್ಲ ಎಂದು ತಿಳಿಸಿತ್ತು. ಇದೀಗ ಅಮೆರಿಕಾದ ಪ್ರತಿಷ್ಟಿತ ಬೈಕ್ ಸಂಸ್ಥೆ ನಷ್ಟದಲ್ಲಿ ಹಿಂತಿರುಗಿದೆ. ಇದೆಲ್ಲವನ್ನು ಗಮನಿಸ್ತಾ ಹೋದ್ರೆ ಭಾರತೀಯರು ಪ್ರಧಾನಿ ಮೋದಿ ಹೇಳಿದಂತೆ ಸ್ವದೇಶಿ ವಸ್ತುಗಳ ಕಡೆ, ವಾಹನಗಳ ಮೇಲೆ ಉತ್ಸಾಹ ತೋರುತ್ತಿದ್ದಾರೆ ಎಂಬ ಅಂಶ ಸ್ಪಷ್ಟವಾಗುತ್ತದೆ.

Spread the love

Related Articles

Leave a Reply

Your email address will not be published.

Back to top button
Flash News