ಕೊರೊನಾ ವೇಳೆ ಪ್ರೈವೇಟ್ ಆಸ್ಪತ್ರೆಗಳು ಲೂಟಿ ಮಾಡಿದ್ದೆನ್ನೋದು ಸುಳ್ಳಾ…?ಲಾಭಕ್ಕಿಂತ ಲಾಸ್ ಆದದ್ದೇ ಹೆಚ್ಚಾ..?!

0

ಬೆಂಗಳೂರು: ಕೊರೊನಾ, ಸೋಂಕಿತರಿಗೆ ಪ್ರಾಣ ಸಂಕಟವಾದ್ರೆ ಖಾಸಗಿ ಆಸ್ಪತ್ರೆಗಳಿಗೆ ಚೆಲ್ಲಾಟ..ಅದನ್ನೇ ಅಸ್ತ್ರವಾಗಿಸಿಕೊಂಡು ಅವು ನಡೆಸಿದ ಲೂಟಿ ಅಂತಿಂಥದಾ..ಅಬ್ಬಬ್ಬಾ..ಎಲ್ಲರೂ ಸಹಜವಾಗಿ ಖಾಸಗಿ ಆಸ್ಪತ್ರೆಗಳ ಬಗ್ಗೆ ಹೀಗೆ ಆಲೋಚಿಸುತ್ತಿದ್ದರೆ,ಇದಕ್ಕೆ ವ್ಯತಿರಿಕ್ತ ಎನ್ನುವಂಥ ಸುದ್ದಿಯೊಂದನ್ನು ಖಾಸಗಿ ಆಸ್ಪತ್ರೆಗಳೇ ಹೊರಗಾಕಿವೆ.ಅದೇ ಲಾಸ್..ಲಾಸ್..ಲಾಸ್..ಕೊರೊನಾ ಸಂದರ್ಭದಲ್ಲಿ ಅವಕ್ಕೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚೆನ್ನುವುದೇ ಈ ಶಾಕಿಂಗ್ ನ್ಯೂಸ್.

ಹೌದು..ಕೊರೋನಾ ಸಂದರ್ಭವನ್ನೇ ಕೆಲ ಖಾಸಗಿ ಆಸ್ಪತ್ರೆಗಳು ಹಣ ಲೂಟಿಗೆ ಬಳಸಿಕೊಂಡವು ಎನ್ನುವ ಆರೋಪವಿದೆ. ಕೊರೋನಾ ನೆವದಲ್ಲಿ ಲೂಟಿಯನ್ನೇ ಮಾಡಿದವು ಎಂದೇ ಬಹುತೇಕ ಜನ ಆಲೋಚಿಸುತ್ತಿದ್ದರು. ಆದರೆ ಬೃಹತ್ ಹಾಗೂ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಕೊರೋನಾ ಸಂದರ್ಭದಲ್ಲಿ ಲಾಭ ಗಳಿಸಿದ್ದಕ್ಕಿಂತ ನಷ್ಟ ಅನುಭವಿಸಿದ್ದೇ ಹೆಚ್ಚು ಎನ್ನುವ ವಿಷಯ ಸರ್ವೆಗಳಿಂದಲೇ ಹೊರಬಿದ್ದಿದೆ. ಅವು  ಕೋಟಿ ಕೋಟಿಗಳಲ್ಲಿ ಖಾಸಗಿ ಆಸ್ಪತ್ರೆಗಳು ನಷ್ಟ ಅನುಭವಿಸಿವೆ ಎಂದರೆ ನೀವು ನಂಬುತ್ತೀರಾ? ಅವರು ಹೇಳೋದನ್ನು..ಕೊಡೋ ಲೆಕ್ಕವನ್ನು ಗಮನಿಸಿದ್ರೆ ನಂಬಲೇಬೇಕೆನಿಸುತ್ತೆ.

ಕೊರೋನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಬಗ್ಗೆ ಎಲ್ಲರಲ್ಲೂ ಒಂದು ಸಹಜವಾದ ಆಲೋಚನೆಯಿತ್ತು. ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಚಿಕಿತ್ಸೆ ನೀಡದೆ ಲೂಟಿ ಮಾಡುತ್ತಿವೆ. ಉಳಿದ ಸಂದರ್ಭಕ್ಕಿಂತ ಸಂದರ್ಭವನ್ನೇ ಹಣ ಮಾಡಲು ಚೆನ್ನಾಗಿ ಬಳಸಿಕೊಳ್ಳುತ್ತಿವೆ. ಮುಂದೆಯೂ ನಿರೀಕ್ಷಿಸಲು ಸಾಧ್ಯವಾಗದಷ್ಟು ಲಾಭವನ್ನು ಕೊರೋನಾ ಸಂದರ್ಭದಲ್ಲೇ ಮಾಡಿಕೊಂಡು ಜೋಳಿಗೆ ತುಂಬಿಸಿಕೊಳ್ಳುತ್ತಿವೆ.

ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಮಾತ್ರ ಏನೂ ಆಗಿಯೇ ಇಲ್ಲ ಎನ್ನುವಂತೆ ಸುಮ್ಮನೆ ಕೂತಿದೆ ಎಂದು ಆಲೋಚಿಸಿದ್ದೇ ಹೆಚ್ಚು. ಆದರೆ ವಾಸ್ತವ ಹಾಗಿಲ್ಲ…! ಲಾಭಕ್ಕಿಂತ ಅತಿ ಹೆಚ್ಚು ನಷ್ಟವನ್ನೇ ಖಾಸಗಿ ಆಸ್ಪತ್ರೆಗಳು ಅನುಭವಿಸಿಯಂತೆ. ಕೆಲವು ಉದಾಹರಣೆಗಳೇ ಇದನ್ನು ಪುಷ್ಟೀಕರಿಸುತ್ತವೆ.

ಉದಾಹರಣೆಗೆ: ಫೋರ್ಟಿಸ್ ಆಸ್ಪತ್ರೆಯನ್ನೇ ತೆಗೆದುಕೊಳ್ಳಿ. 2019 ನೇ ಏಪ್ರಿಲ್‌ನಿಂದ ಮೂರು ತಿಂಗಳು ಅಂದರೆ ಜೂನ್‌ವರೆಗೆ ಆಸ್ಪತ್ರೆ ಗಳಿಕೆಯಲ್ಲಿ ಅರ್ಧದಷ್ಟು ಕುಸಿತವಾಗಿದೆಯಂತೆ. 2019 ರ ಅವಧಿಯಲ್ಲಿ 1,138 ಕೋಟಿಯಷ್ಟಿದ್ದ ಲಾಭ.2020 ಮೂರು ತಿಂಗಳ ಅವಧಿಯಲ್ಲಿ 606 ಕೋಟಿಗೆ ಇಳಿಕೆಯಾಗಿದೆಯಂತೆ. ಅಂದರೆ ಆಸ್ಪತ್ರೆ ಕೇವಲ 3 ತಿಂಗಳ ಅವಧಿಯಲ್ಲಿ ಅನುಭವಿಸಿದ ನಷ್ಟ.523 ಕೋಟಿಯಂತೆ.

ಇನ್ನು ನಾರಾಯಣ ಹೃದಯಾಲಯದ ವಿಷಯಕ್ಕೆ ಬರೋಣ. ಕಳೆದ ವರ್ಷದ ಲಾಭಕ್ಕೂ ವರ್ಷದ ಗಳಿಕೆಗೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಕೋವಿಡ್-19 ರ ಅವಧಿಯಲ್ಲಿ ಇದರ ಆದಾಯ 120   ಕೋಟಿಗೆ ಕುಸಿದಿದೆ ಎಂದು ಆಸ್ಪತ್ರೆಯೇ ಘೋಷಿಸಿಕೊಂಡಿದೆಯಂತೆ.

ದೊಡ್ಡ ದೊಡ್ಡ ಆಸ್ಪತ್ರೆಗಳ ಪರಿಸ್ಥಿತಿಯೇ ಹೀಗಾದರೆ ಕೋವಿಡ್ ಚಿಕಿತ್ಸೆಗೆಂದು ನಿಗಧಿಯಾದ ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳ ಪರಿಸ್ಥಿತಿ ಏನಾಗಿರಬೇಡ? ಅಲ್ಲೂ ಕೂಡ ನಷ್ಟ. ಒಂದಷ್ಟು ಕೋಟಿಗಳಲ್ಲಿ ಆಗಿದ್ದರೂ ಆಶ್ಚರ್ಯಪಡಬೇಕಾಗಿಲ್ಲ. ಹಾಗೆಂದು ಎಲ್ಲಾ ಆಸ್ಪತ್ರೆಗಳ ಪರಿಸ್ಥಿತಿ ಹೀಗೆಯೇ ಎನ್ನಲಿಕ್ಕೆ ಬರೋಲ್ಲ. ಒಂದಷ್ಟು ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡಿ ಕೋಟಿ ಕೋಟಿಗಳಲ್ಲಿ ಹಣವನ್ನು ಲೂಟಿ ಮಾಡಿರುವ ವಿಷಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಇನ್ನು ಆಸ್ಪತ್ರೆಗಳು ಕೋವಿಡ್ ಸಂದರ್ಭಗಳಲ್ಲಿ ನಷ್ಟ ಅನುಭವಿಸಲು ಕಾರಣವೇನು? ಎನ್ನುವುದರ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಗಳೇ ತಮ್ಮದೇ ಆದ ವಿವರಣೆಯನ್ನು ನೀಡುತ್ತವೆ. ಆಸ್ಪತ್ರೆಗಳಲ್ಲಿ ಸಹಜವಾಗಿ ನಡೆಯುತ್ತಿದ್ದ ದುಬಾರಿ ಟೆಸ್ಟ್, ಆಪರೇಷನ್ಸ್ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಸಾಕಷ್ಟು ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಯಿತು. ಆಸ್ಪತ್ರೆಗೆ ದಿನನಿತ್ಯ ಬರುತ್ತಿದ್ದವರ ಸಂಖ್ಯೆ ಇಳಿಮುಖವಾಯಿತು.

ಎಲ್ಲಾ ಕಾರಣಗಳಿಂದ ಆಸ್ಪತ್ರೆಗಳು ನಷ್ಟವನ್ನು ಎದುರಿಸಬೇಕಾಗಿ ಬಂತು ಎನ್ನುತ್ತಾರೆ ಪ್ರತಿಷ್ಠಿತ ಆಸ್ಪತ್ರೆಯೊಂದರ ಮಾಲೀಕರು. ಅಷ್ಟೇ ಅಲ್ಲ ನಷ್ಟ ಇನ್ನೂ ಒಂದಷ್ಟು ತಿಂಗಳು ಮುಂದುವರೆಯುವ ಆತಂಕವಿದೆ. ಇದು ಉದ್ಯೋಗಿಗಳ ನೌಕರಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆಯಂತೆ.ಖಾಸಗಿ ಆಸ್ಪತ್ರೆಗಳು ಹೇಳ್ತಿರುವುದನ್ನು ನಂಬಬೇಕೋ..ಬಿಡಬೇಕೋ ಗೊತ್ತಾಗ್ತಿಲ್ಲ..  

Spread the love
Leave A Reply

Your email address will not be published.

Flash News