ಯುವಕರಿಗೆ ಮನ್ನಣೆ ಕೊಡೋದ್ ಬಿಟ್ಟು ವೃದ್ದ ಟಿ.ಬಿ.ಜಯಚಂದ್ರಗೆ ಟಿಕೆಟ್ ಯಾಕ್ ಕೊಟ್ರಿ…? ಕೈ ಮುಖಂಡರಿಗೆ ಸುರ್ಜೆವಾಲಾ ಲೆಫ್ಟ್ ರೈಟ್:ಸಿದ್ದು-ಡಿಕೆಶಿಗೆ ಪರಂ ಮೇಲೆಯೇ ಗುಮಾನಿ  

0

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ಉಪಚುನಾವಣೆ ಅಖಾಡ ದಿನೇ ದಿನೇ ಹೊಸ ಹೊಸ ಅಷ್ಟೇ ಅಲ್ಲ ವಿಚಿತ್ರವಾದ ವಿದ್ಯಾಮಾನಗಳಿಗೆ ಸಾಕ್ಷಿಯಾಗುತ್ತಲೇ ಇದೆ.ಇದಕ್ಕೆ ಮತ್ತೊಂದು ಸೇರ್ಪಡೆ.ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಬಗ್ಗೆ ಗರಂ ಆಗಿರೋದು,ಯುವಕರಿಗೆ ಅವಕಾಶ ನೀಡ್ಬೇಕೆನ್ನೋ ಹೊಸಮಂತ್ರ ಜಪಿಸೋದನ್ನು ಬಿಟ್ಟು ಪಕ್ಷಕ್ಕೆ ನಯಾಪೈಸೆ ಪ್ರಯೋಜನಕ್ಕಿಲ್ಲದ ವೃದ್ಧ ಟಿ.ಬಿ ಜಯಚಂದ್ರಂಗೆ ಟಿಕೆಟ್ ನೀಡಿರುವುದಕ್ಕೆ ರಾಜ್ಯ ಉಸ್ತುವಾರಿ ಸುರ್ಜೇವಾಲಾ ರಾಜ್ಯ ನಾಯಕರನ್ನು ಲೆಫ್ಟ್-ರೈಟ್ ತಗೊಂಡಿದ್ದಾರೆ.

ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ-ಜೆಡಿಎಸ್‌ಗೂ ಮುಂಚೆ ಕಾಂಗ್ರೆಸ್ ಶಿರಾದಿಂದ ಡಿ.ಬಿ.ಜಯಚಂದ್ರ ಹಾಗೂ ಆರ್.ಆರ್.ನಗರದಿಂದ ಕುಸುಮಾರನ್ನು ಆಯ್ಕೆ ಮಾಡಿದ್ದೀವೆಂದು ಬೆನ್ನು ತಟ್ಟಿಕೊಂಡಿದ್ದಷ್ಟೆ. ಆದರೆ, ಬಿಜೆಪಿ-ಜೆಡಿಎಸ್ ಸೂಕ್ತ ಅಭ್ಯರ್ಥಿ ತಲಾಷೆಯಲ್ಲಿವೆ. ಆದರೆ ಡಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಸುವ ಬೆನ್ನಲ್ಲೇ ಉಸ್ತುವಾರಿ ಸುರ್ಜೇವಾಲಾ ಡಿ.ಕೆ. ಮತ್ತು ಸಿದ್ದುಗೆ ಖಡಕ್ ವಾರ್ನಿಂಗ್ ನೀಡಿ ಬೆವರಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಲಿಂಗಾಯಿತ, ಒಕ್ಕಲಿಗ ಹಾಗೂ ದಲಿತ ಮತದಾರರ ಸಮೀಕರಣವಿದೆ. 1979 ರಿಂದ ಇಲ್ಲಿಯವರೆಗೆ 9 ಚುನಾವಣೆಯಲ್ಲಿ ಸ್ಪರ್ಧಿಸಿರುವ ಡಿ.ಬಿ.ಜಯಚಂದ್ರ ಅವರ ಕೊಡುಗೆ ಅವರದೇ  ತುಮಕೂರು ಜಿಲ್ಲೆಯ ಪಾಲಿಗೆ ಶೂನ್ಯ. ತುಮಕೂರು ಜಿಲ್ಲೆಯ ಅಸ್ತಿತ್ವಕ್ಕಾಗಿ ಪರಮೇಶ್ವರ್ ಹಾಗೂ ಜಯಚಂದ್ರ ನಡುವೆ ದಶಕಗಳ ಶೀತಲ ಸಮರ. ಅಚ್ಚರಿಯೆಂದರೆ 2013 ರಲ್ಲಿ ಸಿದ್ದು ಬೆಂಬಲಿಸಿ ಕೊರಟಗೆರೆ ಚುನಾವಣೆಯಲ್ಲಿ ಪರಮೇಶ್ವರ್ ಸೋಲಿನಲ್ಲಿ ಜಯಚಂದ್ರರದೇ ಸಿಂಹಪಾಲು! ಹಾಗೆಯೇ 2018 ರಲ್ಲಿ ಪರಮ್ ಗೆದ್ದು ಜಿಲ್ಲಾ ಉಸ್ತುವಾರಿ ಕಮ್ ಉಪ ಮುಖ್ಯಮಂತ್ರಿಯಾಗಿದ್ದಲ್ಲದೆ ಜಯಚಂದ್ರ ತಣ್ಣಗೆ ಸೋತು ಮನೆ ಸೇರುವಲ್ಲಿ ಪರಮ್ ಪಾತ್ರ ಕೂಡ ದೊಡ್ಡದು ಎನ್ನೋದು ಎಲ್ಲರಿಗೂ ಗೊತ್ತಿರೋದೇ.

ರಾಜಕೀಯ ಸನ್ಯಾಸ ಸ್ವೀಕರಿಸುವ ಹಂತದಲ್ಲಿರುವ  ಜಯಚಂದ್ರರಿಗೆ ಉಪ ಚುನಾವಣೆ ಗೆಲುವು ದೊಡ್ಡ ಮಟ್ಟದ ಭವಿಷ್ಯದ ಹಾದಿಯನ್ನು ಸುಗಮಗೊಳಿಸಬಲ್ಲದು. ಹಾಗಾಗಿ ಹೈಕಮಾಂಡ್ ಮತ್ತು ಸುರ್ಜೇವಾಲಾಗೆ ನಾಲ್ಕು ದಶಕಗಳ ನಿರಂಕುಶ ಸರ್ವಾಧಿಕಾರಿ ರಾಜಕಾರಣವನ್ನು ಸೈಡಿಗಿಟ್ಟು ಯುವ ಉತ್ಸಾಹಿ ನಾಯಕರಿಗೆ ಅವಕಾಶ ಮಾಡಿಕೊಡುವುದು ಬಿಟ್ಟು, ಅಸ್ತಿತ್ವ, ಪ್ರಭಾವ ಕಳೆದುಕೊಂಡ ಸೋತ ಜಯಚಂದ್ರರಿಗೆ ಮಣೆ ಹಾಕಿದ್ದು ಯಾಕೆ? ಎಂದು ಖುದ್ದು ಸುರ್ಜೇವಾಲಾ ಡಿ.ಕೆ.ಗೆ ಗದರಿ ಸಿದ್ದುಗೆ ಎಚ್ಚರಿಸಿದ್ದಾರೆ.

ಇದರ ಜೊತೆಗೆ ಸಿದ್ದು ಪುತ್ರನ ಆಪ್ತ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಮೂಡಲಗಿರಿಯಪ್ಪನ ಪುತ್ರ ರಾಜೇಶ್ ಗೌಡನ ಬೆನ್ನಿಗೆ ನಿಂತು ಜಯಚಂದ್ರರಿಗೆ ಹಳ್ಳ ತೋಡುವ ನೀಲನಕ್ಷೆ ರೆಡಿಯಾಗಿದೆಯಾ? ಎಂಬ ಕಮಟು ವಾಸನೆ ಘಾಟು ಜೋರಾಗಿದೆ.

ಹೀಗೆ ಕಾಂಗ್ರೆಸ್ ಆಂತರಿಕ ಭಿನ್ನಮತ, ಬಿಜೆಪಿಯ ಒಡಕು ಹಾಗೂ ಜೆಡಿಎಸ್‌ನ ಅನುಕಂಪ ಯಾರಿಗೆ ವರವಾಗುತ್ತದೋ, ಯಾರಿಗೆ ಶಾಪವಾಗುತ್ತದೋ? ಗೊತ್ತಿಲ್ಲ.  ಎಸ್.ಎಂ.ಕೃಷ್ಣ ಕಾಲದಲ್ಲೇ ಪರಮ್ ಉನ್ನತ ಶಿಕ್ಷಣ ಸಚಿವರಾದಾಗ, ಜಯಚಂದ್ರ ರೊಚ್ಚಿಗೆದ್ದು ತುಮಕೂರು ಜಿಲ್ಲೆಯಲ್ಲಿ ಭಿನ್ನಮತ ಹುಟ್ಟಿಹಾಕಿದ್ದು ಇದನ್ನು ಮಟ್ಟ ಹಾಕಲು ಎಸ್.ಎಂ.ಕೃಷ್ಣ ಜಯಚಂದ್ರರನ್ನು ಪಶುಸಂಗೋಪನಾ ಸಚಿವರನ್ನಾಗಿ ಮಾಡಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದು 8 ಕ್ಕೆ 8ರಲ್ಲಿ ಕಾಂಗ್ರೆಸ್ ಅಸ್ತಿತ್ವವಿದ್ದ ಮಂಡ್ಯ ಜಿಲ್ಲೆ ಇಂದಿಗೂ ಅಸ್ತಿತ್ವ ಕಳೆದುಕೊಂಡು ಪರಿಪೂರ್ಣ ಜೆಡಿಎಸ್ ಭದ್ರಕೋಟೆಯಾಗಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುವಲ್ಲಿ `ಜಯಚಂದ್ರರ ಕೊಡುಗೆ’ ಬಹಳ ದೊಡ್ಡದು. ಅದು ಇಂದಿಗೂ ಇತಿಹಾಸವಾಗೇ ಉಳಿದಿದೆ.ಸುರ್ಜೆವಾಲಾ ಅವರ ಈ ಖಡಕ್ ವಾರ್ನಿಂಗ್ ಶಿರಾ ಉಪಚುನಾವಣಾ ಅಖಾಡದಲ್ಲಿ ಯಾವ್ ರೀತಿಯ ಬೆಳವಣಿಗೆಗೆ ಕಾರಣವಾಗುತ್ತೆನ್ನೋದು ಕುತೂಹಲ ಮೂಡಿಸಿದೆ. 

Spread the love
Leave A Reply

Your email address will not be published.

Flash News