ಸನಾದಿ ಅಪ್ಪಣ್ಣ, ಮಯೂರ, ಶ್ರೀನಿವಾಸ ಕಲ್ಯಾಣ, ಗಂಧದ ಗುಡಿ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು, ನಾ ನಿನ್ನ ಮರೆಯಲಾರೆ, ದೇವ, ಆಟೋರಾಜ..ಅದ್ಭುತ ದೃಶ್ಯಕಾವ್ಯಗಳ ಸೃಷ್ಟಿಕರ್ತ ಸ್ಟಾರ್ ಡೈರೆಕ್ಟರ್ ವಿಜಯ್ ಇನ್ನಿಲ್ಲ..

0

ಬೆಂಗಳೂರು: ಸನಾದಿ ಅಪ್ಪಣ್ಣ, ಮಯೂರ, ಶ್ರೀನಿವಾಸ ಕಲ್ಯಾಣ, ಗಂಧದ ಗುಡಿ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು, ನಾ ನಿನ್ನ ಮರೆಯಲಾರೆ, ದೇವ, ಮೋಜುಗಾರ ಸೊಗಸುಗಾರ, ಆಟೋರಾಜ..ಈ ಚಿತ್ರಗಳನ್ನು ಕನ್ನಡದ ಯಾವುದೇ ಪ್ರೇಕ್ಷಕ ಮರೆಯೊಕ್ಕಾಗುತ್ತಾ.ಹೇಳಿ..ಈ ಚಿತ್ರಗಳು ಹೀರೋಗಳಿಂದ ಗೆದ್ದವು ಎನ್ನೋದೆಷ್ಟು ಸತ್ಯವೋ..ಅದರ ಹಿಂದಿನ ಮಾಸ್ಟರ್ ಮೈಂಡ್..ಥಿಂಕ್ ಟ್ಯಾಂಕ್ ಎನಿಸಿಕೊಳ್ಳುವ ನಿರ್ದೇಶಕರಿಂದ ಗಲ್ಲಾಪೆಟ್ಟಿಗೆ ದೋಚಿದ್ವು ಎನ್ನೋದು ಕೂಡ ಅಷ್ಟೇ ನಿಜ…ಅಂದ್ಹಾಗೆ ನಟರಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಈ ಎಲ್ಲಾ ಚಿತ್ರಗಳ ನಿರ್ದೇಶರೇ ವಿಜಯ್..ಅಲಿಯಾಸ್ ವಿಜಯ್ ರೆಡ್ಡಿ..ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಸ್ಟಾರ್ ಡೈರೆಕ್ಟರ್ ವಿಜಯ್ ಇನ್ನು ಕೇವಲ ನೆನಪು ಮಾತ್ರ..

ಕನ್ನಡ ಚಿತ್ರರಂಗಕ್ಕೆ ತಮ್ಮ ಚಿತ್ರಗಳ ಮೂಲಕ  ಅಸಾಮಾನ್ಯ ಕೊಡುಗೆ ನೀಡಿ,ಚಿತ್ರರಂಗದ ಗ್ರಾಮರನ್ನೇ ಬದಲಿಸಿ  “ಸ್ಟಾರ್ ಡೈರೆಕ್ಟರ್”ಎಂಬ ಹೆಗ್ಗಳಿಕೆ ಪಡೆದ  ವಿಜಯ್ ಎಂದೇ ಪ್ರಖ್ಯಾತರಾದ ವಿಜಯ್ ರೆಡ್ಡಿ ಇನ್ನಿಲ್ಲ. 70 ರ ದಶಕದಲ್ಲಿ ಕನ್ನಡ ಚಲನಚಿತ್ರರಂಗದ ಮೇರು ನಿರ್ದೇಶಕನಾಗಿ ಹೆಸರು ಮಾಡಿದ್ದ ವಿಜಯ್ ಮುಟ್ಟಿದ್ದೆಲ್ಲ ಬಂಗಾರ. ಅವರು ನಿರ್ಮಿಸಿ, ನಿದೇರ್ಶಿಸಿದ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಚಿಂದಿ ಉಡಾಯಿಸಿದ್ದವು.

ಕನ್ನಡದ ವರನಟ ಡಾ|| ರಾಜ್ ಅಭಿನಯದ  ಅವರ ಚಿತ್ರಜೀವನದ ಕೆಲವು ಅತ್ಯದ್ಭುತ ಚಿತ್ರಗಳೆನ್ನಬಹುದಾದ  ಸನಾದಿ ಅಪ್ಪಣ್ಣ, ಮಯೂರ, ಶ್ರೀನಿವಾಸ ಕಲ್ಯಾಣ, ಗಂಧದ ಗುಡಿ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು, ನಾ ನಿನ್ನ ಮರೆಯಲಾರೆ ಯಂಥ ಚಿತ್ರಗಳನ್ನು ನಿರ್ದೇಶಿಸಿದವ್ರು ಇದೇ ವಿಜಯ್. ಹಾಗೆಯೇ ವಿಷ್ಣುವರ್ಧನ್ ಅಭಿನಯದ ದೇವ, ಮೋಜುಗಾರ ಸೊಗಸುಗಾರ ಕೂಡ ವಿಜಯ್ ಅವರ ಕೊಡುಗೆ.ಇನ್ನು ಶಂಕರ್ ನಾಗ್ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿದ ಚಿತ್ರ ಆಟೋರಾಜ ದಂತ ಅತ್ಯದ್ಭುತ ದೃಶ್ಯಕಾವ್ಯದ ಕಾರಣಕರ್ತರೂ ಇವರೇ..ವಿವಿಧ ಕಥಾ ಹಂದರದ ಪೌರಾಣಿಕ, ಸಾಮಾಜಿಕ ನೆಲೆಗಟ್ಟಿನಲ್ಲಿ  ದಾಖಲೆ ನಿರ್ಮಿಸಿದವು.

ದುರಂತವೆಂದರೆ ಡಾ|| ರಾಜ್ ಕೊನೆಯ ಚಿತ್ರ ಭಕ್ತ ಅಂಬರೀಶ ಸಿನಿಮಾವನ್ನು ವಿಜಯ್ ಅವರೇ ನಿರ್ದೇಶಿಸಬೇಕಿತ್ತು. ಅದ ಕ್ಕಾಗಿ ಹಾಡುಗಳ ಧ್ವನಿಮುದ್ರಣವು ಪೂರ್ಣಗೊಂಡಿತ್ತು. ಆದರೆ ಡಾ.ರಾಜ್ ಅವರ ನಿಧನದಿಂದ ಅದು ಕನಸಾಗೇ ಉಳಿಯಿತು. ಈ ಕನಸು ಅವರ ಸಾವಿನ ಮೂಲಕ ಶಾಶ್ವತವಾಗಿ ಉಳಿದೋಯ್ತು. ಕೆಲವೊಮ್ಮೆ ಹಾಗೆ ಅತಿಯಾದ ಒತ್ತಡವು ಹಾಗೂ ನಿರೀಕ್ಷೆಗಳು ನಮ್ಮ ಕೈ ಮೀರಿ ಹೋಗುತ್ತದೆ. ಹಾಗೆಯೇ ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕ್ರಿಯೇಟಿವ್ ನಿರ್ದೇಶಕನನ್ನು ಕಳೆದುಕೊಂಡು ತಬ್ಬಲಿಯಾಗಿದೆ.   

Spread the love
Leave A Reply

Your email address will not be published.

Flash News