ಶಿರಾ ಉಪಚುನಾವಣೆ ಕದನ ಕಣದಲ್ಲಿ  ಹುರಿಯಾಳುಗಳ ಮಕ್ಕಳದ್ದೇ ಕಾರುಬಾರು…ಪೋಷಕರ ಗೆಲುವಿಗೆ ಮಕ್ಕಳ ಸಂಕಲ್ಪ..

0
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ-ಪುತ್ರ ಸಂತೋಷ್
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ-ಪುತ್ರ ಸಂತೋಷ್

ತುಮಕೂರು: ಶಿರಾ ಉಪಚುನಾವಣೆ ಅಂತಿಮ ಹಂತ ತಲುಪಿದೆ. ಆದರೆ ಕದನ ಕಣದಲ್ಲಿ ಹಿರಿಯ ರಾಜಕಾರಣಿಗಳ ಪುತ್ರರತ್ನರದ್ದೇ ಕಾರುಬಾರು. ಅಪ್ಪಂದಿರ ಹಾಗೂ ಕುಟುಂಬದ ಪ್ರತಿಷ್ಠೆ ಉಳಿಸಲೇಬೇಕೆಂದು ಮಕ್ಕಳು ಪ್ರಚಾರದ ನೊಗವನ್ನು ಹೊತ್ತಿದ್ದಾರೆ.

ಶಿರಾ ಉಪಚುನಾವಣೆಯು ತಂದೆಯ ಪ್ರತಿಷ್ಠೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಮಕ್ಕಳಿಗೆ ವಹಿಸಿದೆ. ಇನ್ನೊಂದೆಡೆ ಮಕ್ಕಳಿಗೆ ರಾಜ್ಯ ಹಾಗೂ ಕ್ಷೇತ್ರದಲ್ಲಿ ಉತ್ತರದಾಯಿತ್ವ ತೋರುವ ತಾಣವೂ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರರ ಪುತ್ರರಾದ ಸಂತೋಷ್ ಹಾಗೂ ಸಂದೀಪ್ ತಂದೆಯ ಪರವಾಗಿ ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಅವರ ಪುತ್ರ ಸತ್ಯಪ್ರಕಾಶ್ ಪ್ರಚಾರದ ಮುಂಚೂಣಿಯಲ್ಲಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಜೆಡಿಎಸ್ ವರಿಷ್ಠ ದೇವೇಗೌಡ ಅವರ ಕುಟುಂಬದ ಮೂರನೇ ತಲೆಮಾರಿನ ರಾಜಕಾರಣಿಗಳಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ -ತಂದೆ ಮಾಜಿ ಸಂಸದ ಮೂಡಲಗಿರಿಯಪ್ಪ
ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ -ತಂದೆ ಮೂಡಲಗಿರಿಯಪ್ಪ

ಇನ್ನು ಡಿಸಿಸಿ ಬ್ಯಾಂಕ್ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರ ಪುತ್ರ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ಹಿರಿಯರ ನಡುವೆ ಇದ್ದ ಮನಸ್ಥಾಪವನ್ನು ಹೊಗಲಾಡಿಸಲು ಶ್ರಮಿಸಿದ್ದಾರೆ. ಜೊತೆಗೆ ಜಯಚಂದ್ರ ಅವರ ಗೆಲುವಿಗಾಗಿಯೇ ಶಿರಾದಲ್ಲಿ ಬೀಡು ಬಿಟ್ಟಿದ್ದಾರೆ. ಈ ಮುಖಂಡರ ಜೊತೆ ಅವರದೇ ಆದ ಯುವಪಡೆಯೂ ಇದೆ.
ಆಯಾ ಪಕ್ಷಗಳ ಜಿಲ್ಲಾ ಮಟ್ಟದ ಮುಖಂಡರ ಮಕ್ಕಳೂ ಕೂಡ ಶಿರಾ ಉಪ ಚುನಾವಣೆಯ ಪ್ರಚಾರದಲ್ಲಿ ಮುಳುಗಿದ್ದಾರೆ. ಇವರೆಲ್ಲರಿಗೂ ಸಹ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಉಪಚುನಾವಣೆ ವೇದಿಕೆಯಾಗಿದೆ.

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ -ಪುತ್ರ ಸತ್ಯಪ್ರಕಾಶ್
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ -ಪುತ್ರ ಸತ್ಯಪ್ರಕಾಶ್

ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿವಾರಿಸಲು ಹಾಗೂ ತಮ್ಮ ತಂದೆಯ ಸಿಎಂ ಗಾದಿಯನ್ನು ಉಳಿಸುವ ನಿಟ್ಟಿನಲ್ಲಿ ಶಿರಾ ಉಪಚುನಾವಣೆ ಮಹತ್ವ ಪಡೆದಿದೆ. ಚುನಾವಣೆ ಆರಂಭವಾದಾಗಿನಿಂದಲೂ ವಿಜಯೇಂದ್ರ ಶಿರಾದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಕೆ.ಆರ್.ಪೇಟೆ ನಂತರ ಶಿರಾ ಉಪಚುನಾವಣೆ ಅವರ ರಾಜಕೀಯ ತಂತ್ರಗಾರಿಕೆಗೆ ಪರೀಕ್ಷೆಯಾಗಿ ಒದಗಿ ಬಂದಿದೆ. ಶಿರಾದಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿಯೇ ನಡೆಯುತ್ತಿದೆ ಎಂದು ಸ್ವತಹ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಘೋಷಿಸಿದ್ದಾರೆ.

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹುಲಿಕುಂಟೆ ಹೋಬಳಿಯ ಜವಾಬ್ದಾರಿಯನ್ನು ನೀಡಲಾಗಿದೆ. ಅದಕ್ಕಾಗಿ ಅವರು ಶಿರಾದಲ್ಲಿಯೇ ಹಬ್ಬವನ್ನೂ ಆಚರಿಸಿದ್ದಾರೆ. ಅಪ್ಪನ ಪ್ರಚಾರ; ಒಂದೆಡೆ ಪುತ್ರರು ಅಪ್ಪಂದಿರ ಪರವಾಗಿ ಭಜ್ರರಿಯಾಗಿ ಪ್ರಚಾರದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬಿಜೆಪಿ ಅಭ್ಯಥ್ರಿ ಸಿ.ಎಂ.ರಾಜೇಶ್ ಗೌಡ ಪರ ಅವರ ತಂದೆ ಮಾಜಿ ಸಂಸದ ಮೂಡಲಗಿರಿಯಪ್ಪ ತಮ್ಮ ಇಳಿ ವಯಸ್ಸಿನಲ್ಲೂ ಮತಯಾಚನೆ ಮಾಡುತ್ತಿದ್ದಾರೆ.

Spread the love
Leave A Reply

Your email address will not be published.

Flash News