ಇವರಿಗೆಲ್ಲಾ ಜವಾಬ್ದಾರಿ ಇದೆಯೇನ್ರಿ..ಆಸ್ತಿ ವಿವರ ಸಲ್ಲಿಸದ ಕಳ್ಳಾಟದ BBMP ಕಾರ್ಪೊರೇಟರ್ಸ್ ಬಂಡವಾಳ RTI ನಲ್ಲಿ   ಬಯಲು..

0

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಯಲ್ಲಿ ಐದು ವರ್ಷಗಳವರೆಗೆ ಸರ್ವಾಧಿಕಾರಿಗಳಂತೆ ಆಳಿದ ಪುರಪಿತೃಗಳು ಜನರನ್ನು ಉದ್ದಾರ ಮಾಡಿದ್ರೀ ಇಲ್ಲವೋ ಗೊತ್ತಿಲ್ಲ,ತಮ್ ತಮ್ಮ ವಾರ್ಡ್ ಗಳನ್ನು ಅಭಿವೃದ್ಧಿ ಪಡಿಸಿದ್ರೋ ಇಲ್ಲವೋ ತಿಳಿದಿಲ್ಲ..ಆದ್ರೆ ತಮ್ ತಮ್ ಆಸ್ತಿಯನ್ನು ದುಪ್ಪಟ್ಟು-ತ್ರಿಪ್ಪಟ್ಟುಗೊಳಿಸಿಕೊಳ್ಳೋದನ್ನು ಮಾತ್ರ ಮರೆತಿಲ್ಲ.ಇದಕ್ಕೆ ಅವರು ಮುಚ್ಚಿಟ್ಟಿರುವ ಆಸ್ತಿವಿವರದ ಕಳ್ಳಾಟವೇ ಸಾಕ್ಷಿ.

ಆಸ್ತಿ ವಿವರ ಸಲ್ಲಿಸಬೇಕೆನ್ನುವ ರೂಲ್ಸೇ ಇದ್ದರೂ ಬಹುತೇಕ ಕಾರ್ಪೊರೇಟರ್ಸ್ ಆಸ್ತಿ ವಿವರವನ್ನೇ ಸಲ್ಲಿಸದೆ ಕಳ್ಳಾಟ ನಡೆಸಿದ್ದಾರೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರಿಗೆ ಮಾಹಿತಿ ಹಕ್ಕು ಅರ್ಜಿಯಲ್ಲಿ ನೀಡಿರುವ ಮಾಹಿತಿಗಳೇ ಸಾಕ್ಷಿ.

2019-2020ರ ಸಾಲಿನಲ್ಲಿ 124 ಕಾರ್ಪೊರೇಟರ್ಸ್ ಆಸ್ತಿ ವಿವರ ಸಲ್ಲಿಸಿಲ್ಲ.ಹಾಗೆಯೇ 2020 ಕ್ಕೆ ಅನ್ವಯವಾಗುವಂತೆಯೂ 160 ಕಾರ್ಪೊರೇಟರ್ಸ್ ಆಸ್ತಿ ವಿವರ ಸಲ್ಲಿಸಿಲ್ಲ ಎನ್ನುವುದು ದಾಖಲೆಗಳಲ್ಲಿ ಗೊತ್ತಾಗಿದೆ.

ಹಾಗಾದ್ರೆ ನಿಯಮಗಳಿರುವುದು ಯಾಕೆ..?ಪಾಲಿಸಲು ಸಾಧ್ಯವಿಲ್ಲದ ಮೇಲೆ ಅಂಥಾ ರೂಲ್ಸ್ ಗಳನ್ನೇಕೆ ಮಾಡಿಕೊಳ್ಳಬೇಕು..

ದುರಂತ ಏನ್ ಗೊತ್ತಾ..? ಆಸ್ತಿ ವಿವರವನ್ನೇಕೆ ಸಲ್ಲಿಸಬೇಕು..ಆ ರೂಲ್ಸ್ ತೆಗೆದಾಕಬೇಕು ಎಂದು ಕಾರ್ಪೊರೇಟರ್ಸ್ ಗಳು ವಿಶೇಷ ಕೌನ್ಸಿಲ್ ಮೀಟಿಂಗ್ ಮಾಡಿ ನಿರ್ದಾರವೊಂದನ್ನು ತೆಗೆದುಕೊಂಡು ಸರ್ಕಾರಕ್ಕೆ ರವಾನಿಸುತ್ತಾರೆಂದ್ರೆ ಅವರ ಹೊಣೆಗೇಡಿತನ-ನಿರ್ಲಜ್ಜತೆ-ಕಳ್ಳಾಟಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕಾ..ತಮ್ಮ ಆಸ್ತಿ ವಿವರ ಜಗಜ್ಜಾಹೀರಾದ್ರೆ ಬಂಡವಾಳ ಬಯಲಾಗುತ್ತೆನ್ನುವುದು ಕಾರ್ಪೊರೇಟರ್ಸ್ ಗಳ ಕಳ್ಳಾಟಕ್ಕೆ ಕಾರಣವಾ..? 

Spread the love
Leave A Reply

Your email address will not be published.

Flash News