ಕೊನೆಗೂ “ಮೀರ್ ಸಾಧಕ್” ಗಳಿಂದ ಎಚ್ಚೆತ್ತುಕೊಂಡ್ರಾ ಬಿಡಿಎ ಕಮಿಷನರ್ ಮಹಾದೇವ್..!  ತನ್ನ ಅತ್ಯಾಪ್ತ ಅಧಿಕಾರಿಗಿದ್ದ“ಬಲ್ಕ್ ಅಲಾಟ್ಮೆಂಟ್” ಅಧಿಕಾರಕ್ಕೆ ಕೊಕ್..?!-ಆಯುಕ್ತರ ನಿರ್ದಾರಕ್ಕೆ ನಿಗಿನಿಗಿ ಕೆಂಡವಾಗಿ ರಜೆ ಮೇಲೆ ತೆರಳಿದ ಚಿದಾನಂದ್..!!

0

ಬೆಂಗಳೂರು: ಕೊನೆಗೂ ಬಿಡಿಎ ಕಮಿಷನರ್ ಮಹಾದೇವ್ ಅವರಿಗೆ ಬುದ್ಧಿಬಂತಲ್ಲ.. ಎಚ್ಚೆತ್ತುಕೊಂಡರಲ್ಲ  ಎನ್ನುವುದಷ್ಟೇ ಸಮಾಧಾನ..ಯಾರು ಒಳ್ಳೆಯ ವರು..ಯಾರು ಕೆಟ್ಟವರು…ಯಾರು ನಂಬಿಕೆಗೆ ಅರ್ಹರು, ಇನ್ನ್ಯಾರು ಅನರ್ಹರು..ಯಾರ ಸುಪರ್ದಿಗೆ ಜವಾಬ್ದಾರಿ ಒಪ್ಪಿಸಿದ್ರೆ ನನ್ ಬುಡಕ್ಕೆ ಬರೊಲ್ಲ..ಯಾರು ತನ್ನನ್ನು ನಂಬಿಸಿ ಕುತ್ತಿಗೆ ಕೊಯ್ಯೋ ಪ್ರಳಯಾಂತಕ ರು ಎನ್ನುವ ಸತ್ಯಗಳ ದರ್ಶನವಾಗಿದೆಯೆಲ್ಲಾ ಅಷ್ಟೇ ಸಾಕು… ಎಂದು ಇಡೀ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಕ್ಯಾಂಪಸ್ ಮಾತನಾಡಿಕೊಳ್ಳುತ್ತಿದೆಯೆಂತೆ..

ಹೌದು..ಕನ್ನಡ ಫ್ಲಾಶ್ ನ್ಯೂಸ್ ಆರಂಭದಿಂದಲೂ ಆಯುಕ್ತ  ಮಹಾದೇವ್ ಅವರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಲೇ ಬಂತು..ಆದ್ರೆ ಕೆಲವು ಕುಯುಕ್ತಿ ಪಟಾಲಂ  ಚಾಡಿ ಮಾತಿಗೆ ಅವರು ಕಿವಿಯಾದ್ರೆ ಹೊರತು,ಸತ್ಯಾಸತ್ಯತೆ ಅರಿಯುವ ಕೆಲಸವನ್ನೇ ಮಾಡಲಿಲ್ಲ.ಸತ್ಯದರ್ಶನ ಮಾಡಿಸಲು ಮುಂದಾಗುವ ಮಾದ್ಯಮಗಳ ಪ್ರವೇಶಕ್ಕೂ ನಿರ್ಬಂಧವನ್ನೇ ಹೇರಿಬಿಟ್ರು. (ಕನ್ನಡ ಫ್ಲಾಶ್ ನ್ಯೂಸ್ ನ ಆಶಯ ಹಾಗೂ ಉದ್ದೇಶ ಇದ್ದುದ್ದು ಕಮಿಷನರ್ ಅವರ ದಿಕ್ಕುತಪ್ಪಿಸುವ ಸಾಕಷ್ಟು ಕೆಲಸಗಳು ಅಲ್ಲಿರುವವರಿಂದ್ಲೇ ಆಗುತ್ತಿದೆ ..

ಹಳ್ಳಕ್ಕೆ ತಳ್ಳಿ ಗುಂಡಿಯ ಆಳ ನೋಡುವ ಮೀರ್ ಸಾಧಕ್ ಗಳೇ ಹೆಚ್ಚಾಗಿದ್ದಾರೆ. ಅವರಿಂದ  ದೂರ ಕಾಯ್ದುಕೊಳ್ಳಿ..ಎಚ್ಚರದಿಂದಿರಿ ಎಂದು   ಹೇಳುವುದಷ್ಟಾಗಿತ್ತಷ್ಟೇ.. ಹೊರತು ಬೇರೆ ಉದ್ದೇಶಗಳೂ ಇರಲಿಲ್ಲ.ಆದ್ರೆ ಅದನ್ನು ಅರಿಯುವ ವ್ಯವಧಾನವಿಲ್ಲದೆ ನಾವು ಬರೆದ ಸುದ್ದಿಗಳಿಂದ ತೇಜೋವಧೆಯಾಗ್ತಿದೆ..ಕೆಲಸ ಮಾಡ್ಲಿಕ್ಕೆ ತೊಂದರೆಯಾಗ್ತಿದೆ ಎಂದು  ಭಾವಿಸಿ  ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು ಸರೀನಾ..?ಅದರಿಂದ ವಿಚಲಿತವಾದ್ವಿ ಎಂದುಕೊಂಡಿದ್ರೆ ಅದು ತಪ್ಪು ಭಾವನೆ..ಅದರಿಂದ ಮತ್ತಷ್ಟು ಗಟ್ಟಿಗರಾಗಿದ್ದೇವೆ)

ಆದ್ರೆ ಕಮಿಷನರ್ ಅವರಿಗೆ ಈಗ ವಾಸ್ತವದ ಅರಿವಾಗಿದೆ ಎನಿಸುತ್ತೆ.ಏಕೆಂದ್ರೆ ಅಂತದೊಂದಿಷ್ಟು ಸುಧಾರಣೆ ಹಾಗೂ ಬದಲಾವಣೆಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅವರು ತರಲು ಹೊರಟಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.ತಮ್ಮ ಸುತ್ತಮುತ್ತ ಲಾಭಕ್ಕಾಗಿ-ಸ್ವ ಹಿತಾಸಕ್ತಿಗಾಗಿ ದುಂಬಿಗಳಂತೆ ಅಲೆಯುತ್ತಿದ್ದವರ  ಉದ್ದೇಶ ಗೊತ್ತಾಗಿದೆಯಂತೆ.ಹಾಗಾಗಿಯೇ  ಯಾರನ್ನು ನಂಬಿ,ಜವಾಬ್ದಾರಿ ಒಪ್ಪಿಸಿದ್ರೆ ಸೂಕ್ತ ಹಾಗೂ ಸುರಕ್ಷಿತ ಎನ್ನುವುದನ್ನು ಅರಿತ ಮೇಲೆ ಮುಟ್ಟಿನೋಡಿಕೊಳ್ಳುವಂತ ಏಟನ್ನೇ ಕೊಟ್ಟಿದ್ದಾರೆ.

ಈ ಪೈಕಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ನನ್ನ ಜೇಬಿನಲ್ಲಿದ್ದಾರೆ (ಈ ಮಾತನ್ನೇನಾದ್ರೂ ವಿಜಯೇಂದ್ರ ಕೇಳಿದ್ರೆ ಇವರಿಗೆ ಏನ್ ಗತಿ ಆಗುತ್ತೋ ಗೊತ್ತಿಲ್ಲ..!) ಎನ್ನುವ ರೇಂಜ್ನಲ್ಲಿ ಮಾತನಾಡಿಕೊಂಡು ದರ್ಬಾರ್ ಮಾಡುತ್ತಿದ್ದರೆನ್ನಲಾದ   ಉಪ ಕಾರ್ಯದರ್ಶಿ-1 ಚಿದಾನಂದ್ ಅವರಿಂದ ಅಧಿಕಾರ ಕಸಿದುಕೊಂಡು ಅದನ್ನು ಬೇರೆಯವರಿಗೆ ಒಪ್ಪಿಸಿದ್ದಾರೆನ್ನುವ ಮಾತು ಕೂಡ ಕೇಳಿಬಂದಿದೆ.

ಉಪ ಕಾರ್ಯದರ್ಶಿ-1 ಆಗಿರುವ  ಚಿದಾನಂದ ಅವರಿಂದ ಬಹುತೇಕ ಅಧಿಕಾರವನ್ನು ಮಹಾದೇವ್ ಕಸಿದುಕೊಂಡಿದ್ದಾರೆನ್ನುವ ಮಾತು ಕ್ಯಾಂಪಸ್ ನಲ್ಲಿ ಬಹುಚರ್ಚೆಯ ವಿಷಯವಾಗಿದೆ.ಮಹಾದೇವ್ ಅವರ ಬಲಗೈ ಭಂಟನಂತಿದ್ದವರು ಮಹಾದೇವ್.ಈ ಮಹಾನುಭಾವ ಹೇಳಿದ ಮಾತನ್ನು ಚಾಚೂತಪ್ಪದೇ ಪಾಲಿಸುತ್ತಿದ್ದರಂತೆ ಮಹಾದೇವ್.ಇದನ್ನು ಇಡೀ ಬಿಡಿಎ ಕ್ಯಾಂಪಸ್ಸೇ  ಹೇಳುತ್ತದೆ.ಅದನ್ನು ಕಣ್ಣಾರೆ ನೋಡಿದವರೂ ಇದ್ದಾರಂತೆ.ಕಮಿಷನರ್ ಹತ್ರ ಏನಾದ್ರೂ ಕೆಲಸಗಳಾಗಬೇಕಾದ್ರೆ ಮೊದ್ಲು ಕಾಂಟ್ಯಾಕ್ಟ್ ಮಾಡುತ್ತಿದ್ದುದೇ  ಮಹಾದೇವ್ ಅವರನ್ನೇ  ಎನ್ನುತ್ವೆ ಬಲ್ಲಮೂಲಗಳು.

ಹೀಗೆ ಗಳಸ್ಯ ಕಂಠಸ್ಯ ಎನ್ನುವಂತಿದ್ದ ಇವರ ಸಂಬಂಧ ಇತ್ತೀಚೆಗೇಕೋ ಹಳಸಿದೆ ಎನ್ನುವ ಮಾತುಗಳಿವೆ.ಇದಕ್ಕೆ ಕಾರಣ ಗೊತ್ತಿಲ್ಲ.ಆದ್ರೆ ಚಿದಾನಂದ್ ಗೆ ಮರ್ಮಾಘಾತ ವಾಗುವಂಥ ನಿರ್ಧಾರವೊಂದನ್ನು ಮಹಾದೇವ್ ಕೈಗೊಂಡು ಅದನ್ನು ಕಾರ್ಯರೂಪ ಕ್ಕೂ  ತಂದಿದ್ದಾರಂತೆ.

ಅದೇ ಬಲ್ಕ್ ಅಲಾಟ್ಮೆಂಟ್ ಅಥವಾ ಸಗಟು ಹಂಚಿಕೆ ಅಧಿಕಾರವನ್ನು ಚಿದಾನಂದ್ ಕೈಯಿಂದ ಕಸಿದುಕೊಂಡು ಉಪಕಾರ್ಯದರ್ಶಿ-3 ಆಗಿರುವ ಶಿವೇಗೌಡ ಅವರಿಗೆ ಒಪ್ಪಿಸಿದ್ದಾರೆನ್ನುವುದು.ಡಿಎಸ್-1ಅವರ ಹುದ್ದೆಯ ಘನತೆ ಹಾಗೂ ಪ್ರತಿಷ್ಟೆ ಅಡಗಿರುವುದೇ ಈ ಬಲ್ಕ್ ಅಲಾಟ್ಮೆಂಟ್ ನಲ್ಲಿ.ಆ ಅಧಿಕಾರವನ್ನೇ  ಕಮಿಷನರ್ ಕಸಿದುಕೊಂಡಿದ್ದಾರೆನ್ನುವುದರ ಹಿಂದಿನ ಅರ್ಥವೇ “ನಿನ್ನ ಸಹವಾಸ ಸಾಕು..  ನನ್ ದಾರಿ ನನಗೆ..ನಿನ್ ದಾರಿ ನಿನಗೆ..” ಎನ್ನುವ ಖಡಕ್ ವಾರ್ನಿಂಗಾ ಗೊತ್ತಾಗ್ತಿಲ್ಲ.

ಆದ್ರೆ ಕಮಿಷನರ್ ಮಹಾದೇವ್ ಅವರ ಈ ದಿಢೀರ್ ನಿರ್ದಾರದಿಂದ ಚಿದಾನಂದ್ ಸಾಹೇಬ್ರು ಕನಲಿ ಹೋಗಿದ್ದಾರಂತೆ..ಏನ್ ಮಾಡ್ಬೇಕೆಂದು ತೋಚದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರಂತೆ.ಪ್ಲ್ಯಾನ್ ಎಲ್ಲಿ ವರ್ಕೌಟ್ ಆಗ್ಲಿಲ್ವೋ ಎಂದು ತಲೆಗೆ ಹುಳು ಬಿಟ್ಟುಕೊಂಡಿದ್ದಾರಂತೆ ಪಾಪ.ಕಮಿಷನರ್ ಚೇಂಬರ್ ನ್ನೇ ತನ್ನ ಕಚೇರಿಯನ್ನಾಗಿಸಿಕೊಂಡು ಅಲ್ಲಿಯೇ ದಿನದ ಬಹು ಸಮಯವನ್ನು ಕಳೆಯುತ್ತಿದ್ದ ಚಿದಾನಂದ ಸಾಹೇಬರಿಗೆ, ತನ್ನ ಚೇಂಬರ್ ಗೆ  ಹೆಚ್ಚು ಬಾರದಿರುವಂತೆ ಮಹಾದೇವ್ ತಮ್ಮ ಸಿಬ್ಬಂದಿ ಮೂಲಕ ವಾರ್ನ್ ಮಾಡಿಸಿದ್ದಾರೆನ್ನುವ ಮಾತುಗಳಿವೆ.

ಬಲ್ಕ್ ಅಲಾಟ್ಮೆಂಟ್ ಅಧಿಕಾರವನ್ನು ಕಸಿದುಕೊಂಡು ತನ್ನನ್ನು “ಆತ್ಮೀಯ” ಬಳಗ ದಿಂದ ದೂರ ಮಾಡಿರುವುದರಿಂದ ಕನಲಿ ಹೋಗಿದ್ದಾರೆನ್ನಲಾಗುತ್ತಿರುವ ಪಾಪ,ಚಿದಾನಂದ್ ಸಾಹೇಬ್ರು..ಮಹಾದೇವ್ ಮೇಲೆ ಮುನಿಸಿಕೊಂಡು ವಾರದ ಧೀರ್ಘ ರಜೆ ಪಡೆದು ಹೋಗಿದ್ದಾರಂತೆ.ಮಹಾದೇವ್ ಅವರ ಜೊತೆ ಸಂಬಂಧ ಚೆನ್ನಾಗಿದ್ದಾಗ ಒಂದ್ ದಿನವೂ ರಜೆ ಪಡೆಯದೆ ಕೆಲಸ ಮಾಡುತ್ತಿದ್ದ ಚಿದಾನಂದ್ ಅವರಿಗೆ ಮಹಾದೇವ್ ಸಾಹೇಬ್ರು ಹೀಗಾ ಶಾಕ್ ಕೊಡೋದು..ಪಾಪ ನಮ್ ಸಾಹೇಬ್ರಿಗೆ ಇಂಥಾ ಪರಿಸ್ಥಿತಿ ಬರಬಾರದಿತ್ತು ಬಿಡಿ  ಎಂದು  ಬಿಡಿಎನ ಅಧಿಕಾರಿ ಸಿಬ್ಬಂದಿ ಗೇಲಿ ಮಾಡುತ್ತಿದ್ದಾರಂತೆ.   

ಚಿದಾನಂದ್ ಬಗ್ಗೆ ಬಿಡಿಎನಲ್ಲಿ ಏನೆಲ್ಲಾ ಮಾತುಗಳಿವೆ..ಅವರನ್ನು ಯಾವ್ ರೀತಿಯಲ್ಲಿ ನೋಡಲಾಗ್ತಿದೆ..ಎನ್ನುವುದನ್ನು ತಿಳಿಸಬೇಕಿಲ್ಲ..ಆದ್ರೆ ಅದೆಲ್ಲಾ ತಿಳಿದೋ..ತಿಳಿಯದೆಯೋ ಚಿದಾನಂದ್ ಅವರನ್ನು ಅತಿಯಾಗಿ ನಂಬಿದ್ದರಿಂದ ಮಹಾದೇವ್ ಅವರಿಗೆ ಲಾಭಕ್ಕಿಂತ ನಷ್ಟ-ಸಂಕಷ್ಟಗಳಾಗಿದ್ದೇ ಹೆಚ್ಚೆನಿಸುತ್ತದೆ.ಹಾಗಾಗಿಯೇ ಈಗ ಲೇಟ್ ಆಗಿಯಾದ್ರೂ ಪರ್ವಾಗಿಲ್ಲ,ಲೇಟೆಸ್ಟ್ ಆಗಿ ಎಚ್ಚೆತ್ತುಕೊಂಡಿದ್ದಾರೆನಿಸುತ್ತದೆ ಕಮಿಷನರ್ ಮಹಾದೇವ್..

ಚಿದಾನಂದ್ ಅವರಿಗೆ ತಕ್ಕಪಾಠ ಕಲಿಸ್ಲಿಕ್ಕೆ ಮೊದಲ ಅಧ್ಯಾಯವಾಗಿ ಬಲ್ಕ್ ಅಲಾಟ್ಮೆಂಟ್ ಅಧಿಕಾರವನ್ನು ಕಸಿದುಕೊಂಡಿದ್ದಾರೆನ್ನುವ ಮಾತುಗಳಿವೆ. ಕಾಲಾಂತರದಲ್ಲಿ ಇನ್ನೂ ಏನೇನ್ ಬದಲಾವಣೆಗಳಾಗಲಿವೆಯೋ..ಯಾರ್ಯಾರ ಸ್ಥಾನ ಬದಲಾವಣೆಯಾಗಲಿ ದೆಯೋ..ಯಾರ್ಯಾರ ಅಧಿಕಾರ ಯಾರ್ಯಾರಿಗೆ ಸಿಗುತ್ತೋ ಗೊತ್ತಾಗ್ತಿಲ್ಲ.ಆದರೇನೇ ಆಗಲಿ.ಬಿಡಿಎ ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಒಳ್ಳೆಯದಂತೂ ಅಲ್ಲ.. 

Spread the love
Leave A Reply

Your email address will not be published.

Flash News