“ಹಂದಿ” “ಆನೆ”ಯಾಗಲು ಸಾಧ್ಯವೇ…? ತಪ್ಪಿನ ಬಗ್ಗೆ ಪಾಪಪ್ರಜ್ಞೆಯೂ ಇಲ್ಲ…ಪಾಶ್ವಾತ್ತಾಪವೋ ಮೊದಲಿಲ್ಲ…!!

0

ಬೆಂಗಳೂರು: ಇದು,ಮಾಡಿದ್ ತಪ್ಪಿನ ಬಗ್ಗೆ ಕಿಂಚಿತ್ತೂ  ಪಾಪಪ್ರಜ್ಞೆ ಇಲ್ಲದ,ಅದಕ್ಕೆ  ಪಶ್ಚಾತ್ತಾಪ ಪಡಬೇಕೆನ್ನುವ ಕಾಮನ್ ಸೆನ್ಸೂ ಇಲ್ಲದ ಹೀನಾತಿಹೀನ, ನಾಚಿಗೆಬಿಟ್ಟವರ, ಭಂಡತನದ ಪರಮಾವಧಿ ಎನಿಸದೆ ಇರೊಲ್ಲ. ಭೂಮಿ, ಮಣ್ಣು, ರೈತರ ರಕ್ತ, ಬೆವರು ನೆಕ್ಕುತ್ತಿರುವ ಬಿಡಿಎನಲ್ಲಿದ್ದ ಭ್ರಷ್ಟ  ಅಧಿಕಾರಿಯ ಬಂಡವಾಳ  ಎಸಿಬಿ ರೇಡ್ ನಿಂದ ಸಾರ್ವಜನಿಕವಾಗಿ ಬಯಲಾದ್ರೂ,  ಮಾಧ್ಯಮ ಹಾಗೂ ವ್ಯವಸ್ಥೆಯ ವಿರುದ್ಧ ಮಾಡಿರುವ ಒಂದು ಟ್ವೀಟ್ ಎಂಥವರನ್ನೂ ಕೆಂಡಾಮಂಡಲಗೊಳಿಸುತ್ತೆ.

ಕೋಟಿ ಕೋಟಿ ಲಂಚ ನುಂಗಿ ನೊಣೆದರೂ ಆಕೆ ಮಾತ್ರ `ಆನೆ’ಯಂತೆ. ಮುಂದೆ ತೊಲಗಿಹೋಗಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುತ್ತಾಳೆ. ಈಕೆ ನಾಯಿಗಳು ಬೊಗಳುತ್ತವೆ ಎಂದು ಸಂಬೋಧಿಸಿ ರುವುದು ಈಕೆಗೆ ಹಡಬೆ ಹಣ ತಂದು ಕೊಡುವ, ತಲೆಹಿಡುಕ ಬ್ರೋಕರ್‌ಗಳಿಗೋ? ಅಥವಾ ಅನ್ನ ತಿಂದ ಸರ್ಕಾರಕ್ಕೆ ಉಂಡೆ ನಾಮ ತಿಕ್ಕಿ ದ್ರೋಹ ಬಗೆದ ತನಗೋ? ಗೊತ್ತಾಗ್ತಿಲ್ಲ.ತನ್ನ ಒಂದು  ಸಹಿಗಿಷ್ಟು ಎಂದು ಕಮಿಷನ್ ಅಥವಾ ಕಿಕ್ ಬ್ಯಾಕ್ ಪಿಕ್ಸ್ ಮಾಡಿ  ಲಕ್ಷ ಲಕ್ಷ   ಪೀಕುವ ಲಂಚಬಾಕಿಯ ವಕ್ರದೃಷ್ಟಿಯ ಕೆಂಗಣ್ಣಿನ ನೋಟಕ್ಕೆ,ನೆಲಕ್ಕೆ ತಲೆ ಬಗ್ಗಿಸಿ ಹೆದರುವ ಹಕೀಕತ್ತು ಯಾರಿಗೂ ಇಲ್ಲ.ಇದನ್ನು ಟ್ವೀಟ್ ಮಾಡಿರುವ ಆಕೆನೇ ಅರ್ಥ ಮಾಡಿಕೊಳ್ಳಬೇಕಷ್ಟೆ.

ನೋಡಿ, ಈಕೆಗೆ ಎಂಥ ಭಂಡ ಧೈರ್ಯವೆಂದರೆ ಎಸಿಬಿಯಲ್ಲಿ ರೇಡುಗಳಾಗುತ್ತವೆ. ಅಕ್ರಮ ಆಸ್ತಿಗಳಿಗೆ ಲೆಕ್ಕ ಕೊಟ್ರಾಯ್ತು. ಪ್ರಕರಣಗಳು ಮರೆಯುತ್ತವೆ ಎಂದುಕೊಂಡಿದ್ದಾಳೆ. ಸುಲಿಗೆ, ವಸೂಲಿ ಅಬಾಧಿತ. ಎರಡೂ ಕೈಯಲ್ಲಿ ಉಣ್ಣದಿದ್ರೆ ತಿಂದ ಅನ್ನ ಜೀರ್ಣವಾಗಲ್ಲ ಅನ್ಸುತ್ತೆ.ಇಷ್ಟೆಲ್ಲಾ ಆದ್ರೂ ರಾಗಿಣಿ-ಸಂಜನಾರಂತೆ ಜೈಲಿಗಟ್ಟಲ್ಲ… ಕಂಬಿ ಎಣಿಸಲು ಬಿಟ್ಟು ಗಂಜಿ ಊಟ ಹಾಕಲ್ಲ… ಅನ್ನುವ ಉಡಾಫೆ. ಹುಟ್ಟುತ್ತಲೇ ಚಿನ್ನದ ಚಮಚ ಇಟ್ಟುಕೊಂಡು ಬಂದಂತೆ ಅರ್ಧ ತುಂಬಿದ ಹರಿವೆಯಂತೆ, ಅರೆಬೆಂದ ಮಡಿಕೆಯಂತೆ ಆಡುತ್ತಾಳೆ.

ಈಕೆಯ ಪೋಷಾಕೋ, ಮೂರು ಬಂಡಿ ಮೇಕಪ್ ಬಳಿದು ವಕ್ರದೃಷ್ಟಿಯಿಂದ ವಾಕರಿಕೆ ಬರುವಂತೆ ವೇಷಭೂಷಣವೋ, ನಡೆದರೆ ನಟರಾಜನಂತೆ, ಉಲಿದರೆ ಬೃಹನ್ನಳೆಯಂತೆ. ಬಡವರ ರಕ್ತ ಹಿಂಡುತ್ತ, ಸ್ಥಾನಮಾನ ಕೊಟ್ಟ ಸರ್ಕಾರ ಮತ್ತು ಇಲಾಖೆ ಗಳಿಗೆ ದ್ರೋಹ ಮಾಡುತ್ತ, ಬಗೆದಷ್ಟೂ ಗುಡ್ಡೆ ಬೀಳುತ್ತಿರುವ ಲೆಕ್ಕಕ್ಕೇ ಸಿಗದ ಹಡಬೆ ಆಸ್ತಿಗೆ ಲೆಕ್ಕ ಕೇಳಬಾರದೇ?ಯಾರಪ್ಪನ ಮನೆಯ ದುಡ್ಡಿನಲ್ಲಿ ಐಷಾರಾಮಿ ಬದುಕು, ನುಂಗುವ ತುತ್ತು ಅನ್ನದಲ್ಲಿ ರೈತರ ರಕ್ತ ಮತ್ತು ಬೆವರಿನ ಕಮಟು ಬಡಿಯುತ್ತಿಲ್ಲವೇ? ಹಂದಿಯೇನೋ ಕೆಸರಿನಲ್ಲಿ ಮಿಂದೆದ್ದು ಮೈ ಪರಚಿಕೊಳ್ಳುತ್ತಾ ಊಳಿಡುತ್ತದೆ. ಅದಕ್ಕೂ ಭೂಮಿ ಬಗೆಯಲು ಹಾರೆಗಳಂಥ ಎರಡು ಕೋರೆಗಳಿವೆ. ಅಲ್ಲಿಗೆ ಅದೇ ಬಣ್ಣದಿಂದ ವಿರಾಜಮಾನವಾಗಿ ಮೆರೆಯುವ  ಪಟ್ಟದ ಆನೆಗೆ ಹೋಲಿಸಲಾಗುತ್ತದಾ?

ಆನೆಯ ದಂತವೇ ಬೇರೆ… ಹಂದಿಯ ಕೋರೆಯೇ ಬೇರೆ…! ಎಸಿಬಿ ಬುಡ ಕಡಿದು ಲೆಕ್ಕ ಕೇಳಿದರೆ ಇದನ್ನು ವಿಸ್ತಾರವಾಗಿ ಪ್ರಕಟಿಸುವವರು ಈಕೆಗೆ `ನಾಯಿ’ಗಳಂತೆ. ಮಲ, ಮೂತ್ರ ಅಮೇಧ್ಯವನ್ನೇ ಅನ್ನದಂತೆ ಬಡಿದು ಮುಕ್ಕುವ ಈಕೆ ಐರಾವತಾನಾ…? ಇಂಥ ದುರಂಹಕಾರಿಗಳಿಗೆ ಅಮಾನತ್ತು, ಎತ್ತಂಗಡಿಯಂತಹ ಬಾಲಿಶ ಶಿಕ್ಷೆಯನ್ನು ಬಿಟ್ಟು ಸೇವೆಯಿಂದಲೇ ವಜಾಗೊಳಿಸಿ, ಲೆಕ್ಕಕ್ಕೆ ಲೆಕ್ಕ ಹಿಡಿದು ಸಾಯೋತನಕ ಜೈಲಿಗಟ್ಟಬೇಕು.ಆಗ  ಮಾತ್ರ ಈಕೆಯಂತೆ ಹಡಬೆ ದುಡ್ಡನ್ನು ತಿಂದು ಕೊಬ್ಬಿರುವ ಮಿಕ್ಕ ಭ್ರಷ್ಟರಿಗೂ ಅದು ಎಚ್ಚರಿಕೆ ಕರೆಗಂಟೆಯಾಗಬಹುದೇನೋ.. 

Spread the love
Leave A Reply

Your email address will not be published.

Flash News