ಆಡಳಿತಯಂತ್ರದ್ದೇ ಒಂದು ದಾರಿ..ಕಾನೂನುಕೋಶದ್ದೇ ಇನ್ನೊಂದು ಹಾದಿ..ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಾನೂನುಕೋಶದ ನಿರ್ಲಕ್ಷ್ಯಕ್ಕೆ- ಆಡಳಿತ ವ್ಯವಸ್ಥೆಗೆ ಮುಖಭಂಗ..

0

ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕೇವಲ ಆಡಳಿತಯಂತ್ರ ಕುಸಿದಿದೆ ಎಂದುಕೊಂಡಿದ್ವಿ..ಅದು ಸುಳ್ಳು..ಅಲ್ಲಿ ಹಾಳೆದ್ದು ಹೋಗಿರುವುದು ಆಡಳಿತಯಂತ್ರವಲ್ಲ, ಮಂಡಳಿಯನ್ನು ಕಾನೂನಾತ್ಮಕವಾಗಿ ಮುನ್ನಡೆಸಬಲ್ಲ,ತಪ್ಪು ಒಪ್ಪುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕಾನೂನಾತ್ಮಕ ರಕ್ಷಣೆ ನೀಡೋ ಕೆಲಸ ಮಾಡಬೇಕಾದ ಕಾನೂನುಕೋಶ( ಲೀಗಲ್ ಸೆಲ್)ವೇ ಎಕ್ಕ ಎದ್ದು ಹೋಗಿದೆ.

ಮಂಡಳಿಯ ಮಾನ ಕಾಪಾಡ್ಬೇಕಾದ ಲೀಗಲ್ ಸೆಲ್ ನ ಮಹಾನುಭಾವರೇ ಕೋರ್ಟ್ ನ ಛೀಮಾರಿಗೆ ಒಳಗಾಗಿ ಮುಜುಗರಕ್ಕೊಳಗಾಗುವಂತೆ ಮಾಡಿದ್ದಾರೆಂದ್ರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿ ಮತ್ತೊಂದುಂಟೆ.

ಯಾವುದೇ ಸರ್ಕಾರಿ ಇಲಾಖೆಯಿರಲಿ,ಅದಕ್ಕೆ ಕಾನೂನು ಕೋಶ  ಬೆನ್ನೆಲುಬಿದ್ದಂತೆ.ಕಾನೂನಾತ್ಮಕವಾಗಿ ಎದುರಾಗುವ ಎಲ್ಲಾ ತೊಡಕುಗಳನ್ನು ಕಾನೂನು ಚೌಕಟ್ಟಿನಲ್ಲಿ ನಿಭಾಯಿಸಿ ರಕ್ಷಣಾತ್ಮಕ ಪಾತ್ರ ವಹಿಸಬೇಕಿರುವುದು ಲೀಗಲ್ ಸೆಲ್ ನ ಕರ್ತವ್ಯ ಹಾಗೂ ಬಾಧ್ಯಸ್ಥಿಕೆ ಕೂಡ.ಆದ್ರೆ ಬಹುತೇಕ ಇಲಾಖೆಗಳಲ್ಲಿರುವ ಕಾನೂನುಕೋಶಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದೆ ಇಲಾಖೆಗಳನ್ನೇ ಕಟಕಟೆಯಲ್ಲಿ ನಿಲ್ಲಿಸಿ ಮುಜುಗರಕ್ಕೀಡಾಗುವಂತೆ ಮಾಡ್ತಿವೆ ಎನ್ನುವ ಆರೋಪವಿದೆ.

ಹುರುಳಿಲ್ಲದ ವಾದಗಳಿಂದ ಪ್ರಕರಣಗಳಲ್ಲಿ ಸೋಲು ಅನುಭವಿಸುತ್ತಿದ್ದರೆ, ಕಾನೂನುಕೋಶಗಳು ಪ್ರಜ್ಞಾಪೂರ್ವಕವಾಗಿ ಸೋಲನ್ನು ಒಪ್ಪಿಕೊಳ್ಳುತ್ತಿರುವುದರಿಂದ ಇಲಾಖೆಗಳಿಗೆ ಮುಖಭಂಗ ವಾಗುತ್ತಿದೆ.(ಇದಕ್ಕೆ ಇರುವ ಕಾರಣಗಳು ಅನೇಕ).ಈಗ ನಾವು ಹೇಳುತ್ತಿರುವ ಕಥೆಯಲ್ಲಿ ಆಗ್ತಿರೋದು ಅದೇ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕಾನೂನುಕೋಶದ ವಕೀಲರು ಕಾನೂನಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದ ಕಾರಣಕ್ಕೆ ಆಡಳಿತ ಮಂಡಳಿಗೆ ಕೋರ್ಟ್ ಛೀಮಾರಿ ಹಾಕಿದೆ.ಆದ್ರೆ ಕಾನೂನಾತ್ಮಕವಾದ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆಡಳಿತ ಮಂಡಳಿಗೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕೋರ್ಟ್ ನಿಂದ ತರಾಟೆ ಹಾಗೂ ದಂಡಕ್ಕೆ  ಈಡಾಗುವಂತಾಗಿದೆ.

ದಂಡ ಪಾವತಿಸುವಂತೆ ಕೋರ್ಟ್ ಹೊರಡಿಸಿದ್ದ ಆದೇಶ
ದಂಡ ಪಾವತಿಸುವಂತೆ ಕೋರ್ಟ್ ಹೊರಡಿಸಿದ್ದ ಆದೇಶ

ನೇಮಕಾತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನ  ನಿರ್ದೇಶನ ಪಾಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು.  ಆಡಳಿ ತಾಧಿಕಾರಿಯವರಿಗೆ ಸಂಬಂಧಿಸಿದ ಈ ವಿಷಯವನ್ನು ಮಂಡಳಿಯಲ್ಲಿರುವ ಕಾನೂನುಕೋಶದ ಮುಖ್ಯಸ್ಥ ಜೋಷಿ ಸೇರಿದಂತೆ ಹತ್ತಾರು ವಕೀಲರು ಆಡಳಿತಾಧಿಕಾರಿಯವರ ಗಮನಕ್ಕೆ ತರಬೇಕಿತ್ತು.

ಕಾನೂನು ಮುಖ್ಯಸ್ಥರೇ ಪಾವತಿಸಿರುವ 5 ಸಾವಿರ ರೂ ದಂಡದ ಪ್ರತಿ
ಕಾನೂನು ಮುಖ್ಯಸ್ಥರೇ ಪಾವತಿಸಿರುವ 5 ಸಾವಿರ ರೂ ದಂಡದ ಪ್ರತಿ

ಗಮನಕ್ಕೆ ತರೊಕ್ಕೆ ಮರೆತರೂ ಕೋರ್ಟ್ ನ ವಿಚಾರ ವನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಂಡು ಕಾನೂನಾತ್ಮಕ ಪ್ರಕ್ರಿಯೆ ನಡೆಸಬೇಕಿತ್ತು.ಅದ್ಯಾವುದನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಆಡಳಿತಾಧಿಕಾರಿಗೆ ದಂಡ ವಿಧಿಸಿ ನೈತಿಕತೆಯನ್ನು ಪ್ರಶ್ನಿಸಿದೆ.,

ಈ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ನಲ್ಲಿ  ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತಾಧಿಕಾರಿಗಳು,  ಕಾನೂನುಕೋಶದ ಮುಖ್ಯಸ್ಥ ಜೋಷಿ ಅವರನ್ನು ತರಾಟೆಗೆ ತೆಗೆದುಕೊಂಡಿ ದ್ದಾರೆ.ತಪ್ಪು ಒಪ್ಪಿಕೊಂಡಿರುವ ಜೋಷಿ ಅವರೇ ತಮ್ಮ ಕೈಯಿಂದ್ಲೇ 5 ಸಾವಿರ ದಂಡ ಪಾವತಿಸಿ ತನ್ನಿಂದಾದ  ಅಚಾತುರ್ಯಕ್ಕೆ ಕ್ಷಮೆ ಕೋರಿದ್ದಾರಂತೆ.ಆದ್ರೆ ಇದೇ  ಸಮಸ್ಯೆಗೆ ನಿಜವಾದ ಪರಿಹಾರನಾ.? ದಂಡ ಕಟ್ಟಿದಾಕ್ಷಣ ಕೋರ್ಟ್ ನಲ್ಲಿ ಆದ ಅವಮಾನ ಸರಿಯಾಗುತ್ತಾ…ಖಂಡಿತಾ ಇಲ್ಲ ಎನ್ನುವ ಆಡಳಿತಾಧಿಕಾರಿಗಳು,

ಮಂಡಳಿಯನ್ನು ಕೋರ್ಟ್ ನ ಕಟಕಟೆಯಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಮಟ್ಟಕ್ಕೆ ತಂದ ಜೋಷಿ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೇ ಹೊರ ಹಾಕಬೇಕೆನ್ನುವ ಸಲಹೆಯ ನ್ನು ಕೂಡ ಆಡಳಿತ ಮಂಡಳಿಗೆ ನೀಡಿದ್ದಾರೆನ್ನಲಾಗಿದೆ.ಆದರೆ ಅದೇನೇ ಆಗಲಿ,ಊರೇ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಎನ್ನುವಂತಾಗಿದೆ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಿತಿ ಅಲ್ವೇ..

Spread the love
Leave A Reply

Your email address will not be published.

Flash News