ಕ್ರೈಸ್ತ ಬಡಮಕ್ಕಳ ಉದ್ಧಾರಕ್ಕೆ ದೇಣಿಗೆ ಕೊಟ್ಟ  ಹಣ ದುರುಪಯೋಗ-“ಅರ್ಚ್ ಬಿಷಪ್” ಡಾ.ಪೀಟರ್ ಮಚಾದೋ ಗೆ ಮುಳುವಾಗುತ್ತಾ ಆಶಾ ಟ್ರಸ್ಟ್ ಹಗರಣ..!?

0
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಮೂರ್ತಿ ಮೈಕೆಲ್ ಸಲ್ಡಾನಾ
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಮೂರ್ತಿ ಮೈಕೆಲ್ ಸಲ್ಡಾನಾ
ಕ್ರೈಸ್ತ ಮಹಾ ಧರ್ಮಾಧ್ಯಕ್ಷ ಪೀಟರ್ ಮಚಾಡೋ
ಕ್ರೈಸ್ತ ಮಹಾ ಧರ್ಮಾಧ್ಯಕ್ಷ ಪೀಟರ್ ಮಚಾಡೋ

ಬೆಂಗಳೂರು:ಒಂದಲ್ಲಾ,..ಎರಡಲ್ಲ..ಬರೋಬ್ಬರಿ 300 ಕೋಟಿ..ಹಣಕ್ಕೆ ಲೆಕ್ಕವೇ ಇಲ್ಲ..ಪೂರಕ ದಾಖಲೆಗಳೇ ಇಲ್ಲ ಎಂದ್ರೆ ಇದನ್ನು ಹಗರಣ ಎನ್ನಬೇಕೋ..ಸದ್ಭಳಕೆ ಎನ್ನಬೇಕೋ..ಕ್ರೈಸ್ತ ಮಹಾಧರ್ಮಾಧ್ಯಕ್ಷ ಎನಿಸಿಕೊಂಡ,ಕ್ರೈಸ್ತ ಭಕ್ತಾಧಿಗಳಿಗೆ ನಾಟ್ ರೀಚಬಲ್ ಅರ್ಚ್ ಬಿಷಪ್ ಎಂಬ ಅಪಖ್ಯಾತಿಗೆ ತುತ್ತಾದ ಡಾ.ಪೀಟರ್ ಮಚಾದೋ ಅವರೇ ಇದಕ್ಕೆ ಉತ್ತರಿಸ್ಬೇಕು..ನಾನು ತಪ್ಪು ಮಾಡಿದ್ರೆ ದೇವರು ನೋಡಿಕೊಳ್ಳುತ್ತಾನೆ ಬಿಡಿ..ಎನ್ನುತ್ತಲೇ ಉಡಾಫೆ ಪ್ರದರ್ಶಿಸ್ತಾ ಬಂದಿದ್ದ ಪೀಟರ್ ಮಚಾಡೋ ಅವರನ್ನು ಇವತ್ತು ಆ ಏಸುಕ್ರಿಸ್ತ ಕಾಪಾಡ್ಲಿಕ್ಕೆ ಬರುತ್ತಾರೋ ಇಲ್ಲವೋ ಗೊತ್ತಾಗ್ತಿಲ್ಲ..

ಏಕಂದ್ರೆ ಅಕ್ರಮದ ವಿಚಾರದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸೋದಕ್ಕಿಂತ ಅವರನ್ನು ರಕ್ಷಿಸಲು ಯತ್ನಿಸಿದ ಆರೋಪ ಅವರ ಮೇಲಿದೆ.ಅದೇ ಇವತ್ತು ಅವರನ್ನೇ ಆಪೋಷನ ತೆಗೆದುಕೊಳ್ಳುವ ಸ್ಥಿತಿಗೆ ತಂದುನಿಲ್ಲಿಸಿದೆ ಎಂದ್ರೆ ಇದಕ್ಕಿಂತ ದುರಂತ ಇನ್ನೊಂದಿದೆಯೇ..?

ಕ್ರೈಸ್ತ ಬಡ ಮಕ್ಕಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಬಳಕೆಯಾಗಬೇಕಿದ್ದ ಕೋಟ್ಯಾಂತರ ಹಣ ದುರುಪಯೋಗವಾಗಿರುವ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ಈ ಹಿಂದೆಯೇ ಸುದ್ದಿ ಮಾಡಿತ್ತು.

ಈ ವರದಿ ಬೆನ್ನಲ್ಲೇ ಸಾಕಷ್ಟು ವಿದ್ಯಾಮಾನಗಳು ನಡೆದಿದ್ವು.ಅದರ ಮುಂದುವರೆದ ಭಾಗವಾಗೇ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು,ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಮೂರ್ತಿ ಮೈಕೆಲ್ ಸಲ್ಡಾನಾ ಆಶಾ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ಅವ್ಯವಹಾರ ಹಾಗೂ ಅದರ ಮುಖ್ಯಸ್ಥರಾಗಿ ಕ್ರೈಸ್ತ ಮಹಾ ಧರ್ಮಾಧ್ಯಕ್ಷ ಪೀಟರ್ ಮಚಾಡೋ ಅವರ ಪಾತ್ರವನ್ನು ಉಲ್ಲೇಖಿಸಿ ಜಾರಿ ದಳಕ್ಕೆ ಹಗರಣದ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ.

ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಸಂಘ ಆಶಾ ಟ್ರಸ್ಟ್‌ನಲ್ಲಿ 300  ಕೋಟಿ ಹಗರಣ ನಡೆದಿದೆ ಎನ್ನುವ ಗಂಭೀರ ಆರೋಪ ಮಾಡಿತ್ತು. ಇದಕ್ಕೆ ಪೂರಕವಾಗಿ ಸಾಕ್ಷ್ಯವನ್ನೂ ಕಲೆ ಹಾಕಿತ್ತು. ಕನ್ನಡ ಫ್ಲಾಶ್ ನ್ಯೂಸ್ ಮಾಧ್ಯಮ ಕ್ಷೇತ್ರದಲ್ಲಿ ಫಾರ್ ದಿ ಫಸ್ಟ್ ಟೈಮ್ ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು.

ಆಶಾ ಟ್ರಸ್ಟ್‌ನ ಮಹಾಪೋಷಕರು ಹಾಗೂ ಮುಖ್ಯಸ್ಥರಾಗಿ ತಮ್ಮ ಗುರುತರ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಪೀಟರ್ ಮಚಾಡೋ ಸಂಪೂರ್ಣ ವಿಫಲವಾಗಿದ್ದಾರೆ. ಟ್ರಸ್ಟ್‌ನಲ್ಲಿರುವ ಒಂದಷ್ಟು ಅಪ್ರಮಾಣಿಕ ಪದಾಧಿಕಾರಿಗಳು ಬಡ ಮಕ್ಕಳ ಉದ್ದಾರಕ್ಕೆಂದು ದೇಶ ವಿದೇಶಗಳಿಂದ ದಾನಿಗಳು ಕಳುಹಿಸಿಕೊಡುವ ಕೋಟ್ಯಾಂತರ ದೇಣಿಗೆಯನ್ನು ಲೂಟಿ ಮಾಡುತ್ತಿದ್ದಾರೆ. ಈ ಅಕ್ರಮದ ಸಮಗ್ರ ಮಾಹಿತಿ ಪೀಟರ್ ಮಚಾಡೋ ಅವರಿಗೆ ಇದ್ದರೂ ಗುರುಗಳನ್ನು ಬಚಾವು ಮಾಡಲು ಸತ್ಯವನ್ನು ಸಮಾಧಿ ಮಾಡುತ್ತಿದ್ದಾರೆ ಎನ್ನೋದು ಕಥೋಲಿಕ ಕ್ರೈಸ್ತರ ಸಂಘದ ಮುಖಂಡ ರಫಾಯಲ್ ರಾಜ್ ಆಪಾದನೆ.

ಕಥೋಲಿಕ ಕ್ರೈಸ್ತರ ಸಂಘದ ಮುಖಂಡ ರಫಾಯಲ್ ರಾಜ್
ಕಥೋಲಿಕ ಕ್ರೈಸ್ತರ ಸಂಘದ ಮುಖಂಡ ರಫಾಯಲ್ ರಾಜ್
ಕಥೋಲಿಕ ಕ್ರೈಸ್ತರ ಸಂಘದ ದೂರು
ಕನ್ನಡ ಕಥೋಲಿಕ ಕ್ರೈಸ್ತರ ಸಂಘದ ದೂರು

ಕನ್ನಡ ಫ್ಲಾಶ್ ನ್ಯೂಸ್ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ 300  ಕೋಟಿ ಹಗರಣದ ಬಗ್ಗೆ ತುಟಿ ಬಿಚ್ಚದ ಪೀಟರ್ ಮಚಾಡೋ ಅವರ ನಿರ್ಲಕ್ಷ್ಯವನ್ನು ಪ್ರಶ್ನಿಸಿತ್ತು.ಕೋಟ್ಯಾಂತರ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ನಿರ್ಲಕ್ಷ್ಯದ ಹಿಂದೆ ಅಕ್ರಮದ ಘಾಟು ಮೂಗಿಗೆ ಬಡಿಯುತ್ತಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿತ್ತು.

ಸಹಕಾರ ಸಂಘಗಳ ನಿಬಂಧಕರಿಗೆ ಈ ಬಗ್ಗೆ ಸಮಗ್ರ ದಾಖಲೆಗಳನ್ನೊಳಗೊಂಡ ದೂರನ್ನು ಸಲ್ಲಿಸಲು ಅನೇಕ ಎನ್‌ಜಿಓಗಳು ಮುಂದೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.ಇದೀಗ ನಿವೃತ್ತ ನ್ಯಾಯಮೂರ್ತಿ ಮೈಕಲ್ ಸಲ್ಡಾನಾ ಜಾರಿ ದಳಕ್ಕೆ ದೂರೊಂದನ್ನು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಟ್ರಸ್ಟ್ ನ ಹಣ ದುರ್ಬಳಕೆ ಅಕ್ರಮದಲ್ಲಿ ಮಹಾ ಧರ್ಮಾಧ್ಯಕ್ಷರು ಮೌನ ವಹಿಸಿದ್ದಾರೆ. ಕ್ರೈಸ್ತ ಬಡಮಕ್ಕಳ ಉದ್ಧಾರಕ್ಕೆ ದಾನಿಗಳು ನೀಡುವ ದೇಣಿಗೆ ಹಣವನ್ನು ಟ್ರಸ್ಟ್‌ನಲ್ಲಿರುವ ಕೆಲ ಭ್ರಷ್ಟ ಧರ್ಮಗುರುಗಳು ಲೂಟಿ ಮಾಡುತ್ತಿರುವ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿರುವ ಸಲ್ಡಾನಾ ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಉರಿದುಹೋಗಿದ್ದಾರೆ ಎನ್ನಲಾಗುತ್ತಿರುವ ಪೀಟರ್ ಮಚಾಡೋ ಟ್ರಸ್ಟ್‌ನಲ್ಲಿ ನಡೆದಿದೆಯೆನ್ನಲಾಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೂ ಪರವಾಗಿಲ್ಲ. ಇದ್ಯಾವುದಕ್ಕೂ ಅಂಜದೆ ಎಂತಹುದೇ ತನಿಖೆ ನಡೆಯಲಿ ಅದನ್ನು ಎದುರಿಸಲು ಸಿದ್ಧ ಎನ್ನುವ ಮಾತುಗಳನ್ನಾಡಿದ್ದಾರಂತೆ.

ಕನ್ನಡ ಕ್ರೈಸ್ತ ಧರ್ಮಕ್ಷೇತ್ರದ ಇತಿಹಾಸದಲ್ಲೇ ಅತಿ ದೊಡ್ಡ ಹಣ ದುರ್ಬಳಕೆಯ ಹಗರಣ ಎಂದೇ ಬಿಂಬಿಸಿಕೊಂಡಿರುವ ಆಶಾ ಟ್ರಸ್ಟ್‌ನ ಹಣ ಅವ್ಯವಹಾರದ ಪ್ರಕರಣವನ್ನು ಧರ್ಮಾಧ್ಯಕ್ಷರು ಗಂಭೀರವಾಗಿ ತೆಗೆದುಕೊಂಡಿದ್ದೇ ಆಗಿದ್ದಲ್ಲಿ ಕನ್ನಡ ಫ್ಲಾಶ್ ನ್ಯೂಸ್  ವರದಿ ಪ್ರಕಟಿಸಿದ ಸಂದರ್ಭದಲ್ಲೇ ಅಕ್ರಮಕ್ಕೆ ಕಾರಣವಾದವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಕೆಲಸ ಮಾಡಬೇಕಿತ್ತು. ಆದರೆ ಅವರ ನಿರ್ಲಕ್ಷ್ಯವೇ ಇಂದು ಅವರನ್ನು ಇ.ಡಿ.ಯ ಮುಂದೆ ನಿಲ್ಲುವಂತಹ ಸನ್ನಿವೇಶವನ್ನು ತಂದೊಡ್ಡಿರುವುದು ವಿಪರ್ಯಾಸ ಅಲ್ಲದೆ ಇನ್ನೇನು? ಈ ಪ್ರಕರಣದಲ್ಲಿ ಅರ್ಚ್ ಬಿಷಪ್ ಅವರು ಎಲ್ಲೆಲ್ಲಿ ತಲೆ ತಗ್ಗಿಸಿ ನಿಲ್ಲುವಂತಾಗುತ್ತೋ..ಜೀಸಸ್ಸೇ ಕಾಪಾಡ್ಬೇಕು.. 

Spread the love
Leave A Reply

Your email address will not be published.

Flash News