ಗುರುವಿನ ಪಾದ ಸೇರ್ಕೊಂಡ ನಟೋರಿಯಸ್ ರೌಡಿ ಮಚ್ಚೆ ಮಂಜ-ನೆಮ್ಮದಿಯ ನಿಟ್ಟುಸಿರುಬಿಟ್ಟ “ಕಲ್ಪತರು”ನಗರಿ

0

ತುಮಕೂರು:ಕಲ್ಪತರು ನಗರಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ.ಜೀವಭಯದಲ್ಲೇ ದಿನದೂಡುತ್ತಿದ್ದ ಜನ ನಿರಾಳವಾಗಿದ್ದಾರೆ.ಇದಕ್ಕೆ ಕಾರಣ ಜನರ ನೆಮ್ಮದಿಗೆ ಭಂಗ ತರುವ ರೀರಿಯಲ್ಲಿ ನಟೊರಿಯಸ್ ಆಗಿ ಬೆಳೆದಿದ್ದ ರೌಡಿ ಮಚ್ಚ ಮಂಜನ ಮರ್ಡರ್.ಮಚ್ಚು ಹಿಡಿದವನು ಮಚ್ಚಿನಿಂದ್ಲೇ ಸಾಯೋದು ಎನ್ನುವುದು ಮಚ್ಚ ಮಂಜನ ವಿಷಯದಲ್ಲಿ ಪ್ರೂವ್ ಆಗಿದೆ.ರೌಡಿಯಿಸಂನಲ್ಲಿ ಹೆಸರು ಮಾಡ್ಬೇಕೆಂದು ಪಾತಕಕೃತ್ಯವನ್ನು ಶುರುವಿಟ್ಟುಕೊಂಡು ನಟೋರಿಯಸ್ ಆಗಿ ಬೆಳೆದ ಮಚ್ಚ ಮಂಜನನ್ನು ಅದೇ ರೌಡಿಯಿಸಂನಲ್ಲಿ ದುಷ್ಮನ್ ಆಗಿದ್ದವರೇ ಮೂಟೆ ಕಟ್ಟಿದ್ದಾರೆ.

ತುಮಕೂರು ನಗರದ ಬಟವಾಡಿಯಲ್ಲಿ ನಡೆದಿರುವ ಈ ಕೃತ್ಯದಲ್ಲಿ   ಕ್ಯಾತ್ಸಂದ್ರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ ಮಂಜುನಾಥ್ ಅಲಿಯಾಸ್ ಮಚ್ಚೆ ಮಂಜ ಬರ್ಭರವಾಗಿ ಹತ್ಯೆಯಾಗಿದ್ದಾನೆ.ಈ ಮಚ್ಚ ಮಂಜ  ತುಮಕೂರಿನ ಮಾಜಿ ಮೇಯರ್ ಗಡ್ಡ ರವಿಯ ಶಿಷ್ಯ ಎನ್ನಲಾಗುತ್ತಿದೆ. ಕಳೆದ ಕೆಲವು ವಷ್ರಗಳ ಹಿಂದೆ ಗಡ್ಡ ರವಿಯನ್ನೂ ಕೂಡ ಬರ್ಭರವಾಗಿ ಹತ್ಯೆ ಮಾಡಲಾಗಿತ್ತು.

ತನ್ನ ಗುರು ಗಡ್ಡ ರವಿ ಮರ್ಡರ್ ಆದ ಮೇಲೆ ರಕ್ಷಣೆಗೆಂದು ಪೊಲೀಸ್ ಜತೆ ಆತ್ಮೀಯವಾಗಿದ್ದ ಮಚ್ಚ ಮಂಜ,ಪೊಲೀಸ್ ನೌಕರರೋರ್ವರ ಹುಟ್ಟುಹಬ್ಬದಲ್ಲಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದು ಹೀಗೆ..
ತನ್ನ ಗುರು ಗಡ್ಡ ರವಿ ಮರ್ಡರ್ ಆದ ಮೇಲೆ ರಕ್ಷಣೆಗೆಂದು ಪೊಲೀಸ್ ಜತೆ ಆತ್ಮೀಯವಾಗಿದ್ದ ಮಚ್ಚ ಮಂಜ,ಪೊಲೀಸ್ ನೌಕರರೋರ್ವರ ಹುಟ್ಟುಹಬ್ಬದಲ್ಲಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದು ಹೀಗೆ..

ಹಣ ವಸೂಲಿ, ಕೊಲೆ ಬೆದರಿಕೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಚ್ಚೆ ಮಂಜನನ್ನು ಕಿಡಿಗೇಡಿಗಳು ಬಟವಾಡಿಯ ಟೀ ಅಂಗಡಿ ಮುಂಭಾಗದಲ್ಲಿ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾರೆನ್ನಲಾಗಿದೆ. ಈತನ ವಿರುದ್ದ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗುತ್ತಿದೆ.

ಹತ್ಯೆಯಾಗಿರುವ ಮಚ್ಚೆ ಮಂಜ ಪೊಲೀಸರ ಜೊತೆ ನಿಕಟ ಸಂಬಂಧ ಹೊಂದಿದ್ದ. ಇದೇ ಆತನ ಜೀವಕ್ಕೆ ಮುಳುವಾಯಿತು ಎನ್ನಲಾಗುತ್ತಿದೆ.  ಪೊಲೀಸರ ಜೊತೆ ಉತ್ತಮ ಸಂಪಕ್ರ ಸಾಧಿಸಿ ವಿರೋಧಿ ಬಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. ಇದು ವಿರೋಧಿ ಬಣದ ಅಸಮಾಧಾನಕ್ಕೆ ಕಾರಣವಾಗಿತ್ತು. ಹೇಗಾದರೂ ಮಾಡಿ ಈತನಿಗೆ ತಕ್ಕ ಪಾಠ ಕಲಿಸಲೇ ಬೇಕೆಂದು ಕಾದಿದ್ದ ವಿರೋಧಿ ಗುಂಪು ಹತ್ಯೆ ಮಾಡಿದೆ ಎನ್ನಲಾಗುತ್ತಿದೆ.

ತನ್ನ ಗುರು ಹಾಗೂ ಮಾಜಿ ಮೇಯರ್ ಗಡ್ಡ ರವಿ ಹತ್ಯೆಯಾದ ಬಳಿಕ ಮಂಜ ಪೊಲೀಸರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ. ಅದರಲ್ಲೂ ತುಮಕೂರು ನಗರದ ಇನ್ಸ್ಸ್ಪೆಕ್ಟರ್ ಒಬ್ಬರ ಜೊತೆಯಲ್ಲಿ ಮಚ್ಚೆ ಮಂಜ ಉತ್ತಮ ಒಡನಾಟ ಹೊಂದಿದ್ದ ಎನ್ನಲಾಗುತ್ತಿದೆ.  ಇನ್ಸ್ಸ್ಪೆಕ್ಟರ್ ಗೆ ವಿರೋಧಿ ಬಣದ ಬಗ್ಗೆ ನಿರಂತರವಾಗಿ ಮಾಹಿತಿಯನ್ನೂ ನೀಡುತ್ತಿದ್ದ ಎನ್ನಲಾಗುತ್ತಿದೆ.

ಇದೇ ಆತನ ವಿರೋಧಿಗಳನ್ನು ಕೆಂಡಾಮಂಡಲಗೊಳಿಸಿದೆ.ಈತ ಬದುಕಿದ್ದರೆ ನಮಗೆ ಉಳಿಗಾಲವಿಲ್ಲ ಎಂದುಕೊಂಡೇ ಆತನನ್ನು ಎತ್ತಿಬಿಟ್ಟಿದ್ದಾರೆ.ಕೊಲೆ ಮಾಡಿದವರು ಯಾರು ಎನ್ನುವುದು ತಿಳಿದುಬಂದಿಲ್ಲವಾದ್ರೂ ಮಚ್ಚೆ ಮಂಜನ ವಿರೋಧಿಗಳೇ ಈ ಕೃತ್ಯ ನಡೆಸಿರುವ ಸಾಧ್ಯತೆಗಳಿವೆ.  

Spread the love
Leave A Reply

Your email address will not be published.

Flash News