advertise here

ಮಾರ್ಚ್ 4ಕ್ಕೆ ಮುನ್ನವೇ ಪ್ರತಿಭಟನೆ: ಸಾರಿಗೆ ಕೂಟದ ಚಂದ್ರುಗೆ, ಜಂಟಿ ಕ್ರಿಯಾಸಮಿತಿ ಅನಂತಸುಬ್ಬರಾವ್ ತಿರುಗೇಟು


ಬೆಂಗಳೂರು: ಮಾರ್ಚ್ 4ಕ್ಕೆ ಸಾರಿಗೆ ಪ್ರತಿಭಟನೆ ಬಗ್ಗೆ ಈಗಾಗಲೇ ಸಾರಿಗೆ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿಕೆ ಕೊಟ್ಟಾಗಿದೆ.ಪ್ರೆಸ್ ಮೀಟೂ ಮಾಡಾಗಿದೆ. ಸಾರಿಗೆ ಸಂಘಟನೆಗಳನ್ನು ಕರೆಯಿಸಿ ಮಾತನಾಡುತ್ತಿರುವ ಮ್ಯಾನೇಜ್ನೆಂಟ್ ನಮ್ಮನ್ನು ಮಾತುಕತೆಗೆ ಆಹ್ವಾನಿಸಿಲ್ಲ ಎನ್ನುವ ಬೇಸರವೂ ಮಾರ್ಚ್ 4 ಪ್ರತಿಭಟನೆ ನಿರ್ದಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಸಾರಿಗೆ ಕೂಟ  ಹಾಗೂ ಬೆಂಬಲಿತ ಸಂಘಟನೆಗಳು ಇದನ್ನು ಬೆಂಬಲಿಸಿವೆ ಕೂಡ.ಆದರೆ ಸಾರಿಗೆ ಹೋರಾಟಗಳಲ್ಲಿ ದಶಕಗಳಷ್ಟು ಅನುಭವ ಇರುವ ಅನಂತಸುಬ್ಬರಾವ್ ಅವರಂಥ ಹಿರಿಯರಿಗೆ ಸಾರಿಗೆ ಕೂಟದ ನಿಲುವು-ಧೋರಣೆ ಬೇಸರ ಮೂಡಿಸಿರಬಹುದೆನಿಸುತ್ತಿದೆ. ಹಾಗಾಗಿನೇ ಮಾರ್ಚ್ 4 ಪ್ರತಿಭಟನೆಗೆ ಠಕ್ಕರ್ ಕೊಡ್ಲಿಕ್ಕೆ ತಮ್ಮನ್ನು ಬೆಂಬಲಿಸುವ ಹಲವು ಸಾರಿಗೆ ಸಂಘಟನೆಗಳ ಬೆಂಬಲ ಪಡೆದು ನಾಳೆ( ಪೆಬ್ರವರಿ 21) ರಂದೇ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಮುಂದಾಗಿವೆ.

ಮಾರ್ಚ್ 4ರ ಮುಷ್ಕರಕ್ಕೆ ಠಕ್ಕರ್ ಕೊಡ್ಲಿಕ್ಕೇನೆ ಅನಂತ ಸುಬ್ಬರಾವ್ ಹಾಗೂ ಬೆಂಬಲಿತ ಸಂಘಟನೆಗಳು ನಾಳೆ ಪ್ರತಿಭಟನೆ ಹಮ್ಮಿಕೊಂಡಿವೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ.ಪರಿಸ್ಥಿತಿ ಕೂಡ ಹಾಗೇನೇ ಇದೆ.ಚಂದ್ರಶೇಖರ್ ಪ್ರತಿಭಟನೆಗೆ ಕರೆ ಕೊಡಲಿಕ್ಕೆ ಕಾರಣವೂ ಅವರು ಹಾಗೂ ಅವರ ಬೆಂಬಲಿಗರನ್ನು ಮೀಟಿಂಗ್ ಗೆ ಕರೆದು ಮ್ಯಾನೇಜ್ಮೆಂಟ್ ಮಾತನಾಡಲಿಲ್ಲ ಎನ್ನುವ ಬೇಸರ.ಅನಂತ ಸುಬ್ಬರಾವ್ ಅವರನ್ನು ಕರೆಯಿಸಿ ಮಾತನಾಡಿಲಾಯಿತೆನ್ನುವುದು ಚಂದ್ರಶೇಖರ್ ಅವರನ್ನು ನಖಶಿಖಾಂತ ಉರಿಸಿದೆ.ಹಾಗಾಗಿನೇ ಮಾರ್ಚ್ 4ಕ್ಕೆ ಪ್ರತಿಭಟನೆಯನ್ನು ಸಾರಿಗೆ ಸಿಬ್ಬಂದಿ ಕುಟುಂಬದ ಸಮೇತ ಮಾಡಲಿಕ್ಕೆ ನಿರ್ದರಿಸಿ ಅದನ್ನು ಅಧೀಕೃತವಾಗಿ ಘೋಷಿಸಿದರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ

ಹಾಗೆ ನೋಡಿದ್ರೆ ಅನಂತ ಸುಬ್ಬರಾವ್ ಅವರು ಪ್ರತಿನಿಧಿಸುವ ಕೂಟಕ್ಕೆ   ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿನೇ ಪ್ರತಿಭಟನೆಗೆ ಕರೆ ನೀಡಬೇಕಿತ್ತು.ಇದಕ್ಕಾಗಿ ಎಲ್ಲಾ ಸಿದ್ದತೆ ಕೂಡ ಮಾಡಿಕೊಳ್ಳಲಾಗಿತ್ತು.ಏಕೆಂದರೆ ಮ್ಯಾನೇಜ್ಮೆಂಟ್ ಜತೆ ನಡೆಯಿತೆನ್ನಲಾದ ಮಾತುಕತೆ ವೇಳೆ ಇವರ ಸಂಘಟನೆ ಸೇರಿದಂತೆ ಬಹುತೆಕ ಸಂಘಟನೆಗಳ ಮುಂದೆ ಆಡಳಿತ ಸಂಬಳ ಕೊಡಲಿಕ್ಕೂ ಸಾಧ್ಯವಾಗದ ಸ್ಥಿತಿ ಸಾರಿಗೆ ನಿಗಮಗಳಲ್ಲಿದೆ.ಹಾಗಾಗಿ ಯಾವುದೇ ಬೇಡಿಕೆ ಈಡೇರಿಸ್ಲಿಕ್ಕೂ ಸದ್ಯದ ಸ್ಥಿತಿಯಲ್ಲಿ ಆಗೊಲ್ಲ ಎಂಬ ಅಸಹಾಯಕತೆ ತೋಡಿಕೊಂಡಿತ್ತಂತೆ.ಇದರಿಂದ ಕೆಂಡಾಮಂಡಲಗೊಂಡು ಮ್ಯಾನೇಜ್ಮೆಂಟ್ ವಿರುದ್ದ ಹರಿಹಾಯ್ದು ಸಂಘಟನೆಗಳು ಹೊರಬಂದಿದ್ವಂತೆ.

ಮೊನ್ನೆ ನಡೆದ ಬಿಎಂಟಿಸಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬರೋಬ್ಬರಿ 7 ಸ್ಥಾನ ಗೆದ್ದು ಬೀಗಿರುವ ಹೊರತಾಗ್ಯೂ ತಮ್ಮನ್ನು ಮಾತುಕತೆಗೆ ಕರೆಯದಿರುವುದರಿಂದ ಕೂಟದ ಚಂದ್ರಶೇಖರ್ ಕೊತ ಕೊತ ಕುದಿಯುತ್ತಿದ್ದರೆನ್ನಲಾಗಿದೆ.ನಮ್ಮ ಕೆಪಾಸಿಟಿಯನ್ನು ಪ್ರೂವ್ ಮಾಡಿದ ಹೊರತಾಗ್ಯೂ ತಮ್ಮನ್ನು ದೂರ ಇಟ್ಟಿರುವುದು ಎಷ್ಟರ ಮಟ್ಟಿಗೆ ಸರಿ…? ನಮ್ಮ ಸಾಮರ್ಥ್ಯ ಹಾಗೂ ಸಿಬ್ಬಂದಿಯ ಶಕ್ತಿ-ತಾಕತ್ತು ಏನೆಂದು ಪ್ರದರ್ಶಿಸೊಕ್ಕೆ ಮಾರ್ಚ್ 4 ರ ಪ್ರತಿಭಟನೆ ಅಸ್ತ್ರ ಪ್ರಯೋಗಿಸಲಾಗ್ತಿದೆ ಎನ್ನುವುದು ಚಂದ್ರು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು.

ಸಾರಿಗೆ ಕೂಟ ಪ್ರತಿಭಟನೆಗೆ ಕರೆ ಕೊಡುತ್ತಿದ್ದಂತೆ ಸಾರಿಗೆ ಸಿಬ್ಬಂದಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ರವಾನಿಸಿರುವುದು ಅತ್ಯಾಶ್ಚರ್ಯ. ಯಾಕಂದ್ರೆ ಮುಷ್ಕರ-ಪ್ರತಿಭಟನೆ ಎನ್ನುವುದು ಇನ್ಮುಂದೆ ಸಾರಿಗೆ ನಿಗಮದಲ್ಲಿ ನಿಷಿದ್ದವಾದ ಪದಗಳು.ಅದನ್ನು ಮೀರಿದ್ರೆ ಏನ್ ಬೇಕಾದ್ರೂ ಆಗಬಹುದೆನ್ನುವುದನ್ನು ಮ್ಯಾನೇಜ್ಮೆಂಟ್ ವಿತ್ ಪ್ರೂಫ್ ತೋರಿಸಿದೆ.ಅದರ ಹೊರತಾಗ್ಯೂ ಪ್ರತಿಭಟನೆ ನಡೆಸಲು ಕೆಲವರು ನಿರ್ದರಿಸಿದ್ದಾರೆ ಎಂದರೆ ಚಂದ್ರಶೇಖರ್ ಬಗ್ಗೆ ಯಾವ್ ರೀತಿಯ ನಂಬಿಕೆ ಇಟ್ಟಿದ್ದಾರೆ.ಹಾಗೆಯೇ ಸಾರಿಗೆ ಆಡಳಿತದ ಬಗ್ಗೆ ಎಷ್ಟರ ಮಟ್ಟಿಗೆ ನೊಂದಿದ್ದಾರೆನ್ನುವುದು ಗೊತ್ತಾಗುತ್ತೆ.

ಚಂದ್ರಶೇಖರ್ ನೇತೃತ್ವದಲ್ಲಿ ಮಾರ್ಚ್  4ಕ್ಕೆ ಪ್ರತಿಭಟನೆ ನಡೆದ ಬಳಿಕ ಹೊರಾಟ ನಡೆಸಿದ್ರೆ ಬೆಂಬಲ ಕಡಿಮೆ ಸಿಗಬಹದೆನ್ನುವ ಕಾರಣಕ್ಕೆ ಎಚ್ಚೆತ್ತು ಕೊಂಡ ಅನಂತ ಸುಬ್ಬರಾವ್ ಬಣ ನಾಳೆಯೇ ಹೋರಾಟಕ್ಕೆ ಕರೆ ನೀಡಿದೆ.ಚಂದ್ರು ಮಾಡಿದ ಮೇಲೆ ತಮಗೆ ಮಾಡಲು ಇನ್ನೇನು ಉಳಿಯುತ್ತದೆ ಎನ್ನುವ ಕಾರಣಕ್ಕೆ ದಿಢೀರ್ ಪ್ರತಿಭಟನೆ ಕರೆ ನೀಡಿದ್ದಾರೆನ್ನುವ ಮಾತು ಕೇಳಿಬಂದಿದೆ.ಆದರೆ ಇದನ್ನು ಅನಂತ ಸುಬ್ಬರಾವ್ ಒಪ್ಪುವುದಿಲ್ಲ. ಚಂದ್ರಶೇಖರ್ ಅಥವಾ ಇನ್ನ್ಯಾರಾದ್ರೂ ಯಾವಾಗಲೇ ಪ್ರತಿಭಟನೆ ನಡೆಸಿದ್ರೂ ನಾವು ನಾಳೆ ನಡೆಸಬೇಕೆಂದು ಮೊದಲೆ ನಿರ್ದರಿಸಿಕೊಂಡಿದ್ದೆವು.ಇದು ಪೂರ್ವನಿರ್ದರಿತ ಕಾರ್ಯಕ್ರಮ ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ.ಚಂದ್ರಶೇಖರ್ ಜತೆ ನಮ್ಮ ಸಂಘಟನೆಯನ್ನು ತುಲನೆ ಮಾಡುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ.

ಅದೇನೇ ಆಗಲಿ ಫೆಬ್ರವರಿ 22 ರಂದು ನಡೆಯಲಿದೆ ಎನ್ನಲಾಗುತ್ತಿರುವ ಸಾರಿಗೆ ಸಿಬ್ಬಂದಿ ಪ್ರತಿಭಟನೆ ಪ್ರತೀಕಾರದ ವಿಷಯಗಳನ್ನು ಪಕ್ಕಕ್ಕಿಟ್ಟು ಸಾರಿಗೆ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆ-ಸವಾಲುಗಳಿಗೆ  ಪರಿಹಾರ ನೀಡುವಂತಾದ್ರೆ ಸಾಕು.


Political News

EDUCATION EXCLUSIVE….PU ಶಿಕ್ಷಣ ಇಲಾಖೆಯಲ್ಲಿ, ನಿರ್ದೇಶಕರನ್ನೇ “ದಾರಿ” ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ “ಹಿತಾಸಕ್ತಿ”ಗಳಿವೆಯಾ..?!

BTV MAKEUP MAN CHETHAN NOMORE..”ಬಣ್ಣ”ಗಳಲ್ಲಿ ಲೀನವಾದ BTV ಮೇಕಪ್ ಮ್ಯಾನ್ ಚೇತನ್..

EXCLUSIVE….INDISCIPLINE IN PU BOARD..?! ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ..?! ಏನ್ ಮಾಡುತ್ತಿದ್ದಿರಾ ಶಿಕ್ಷಣ ಸಚಿವರೇ..?!

BMTC STAFF THEMSELVES CLEANS THE BUSES..!?…ಬಿಎಂಟಿಸಿ ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್..ಸ್ವಚ್ಚತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು..?

SAHYADRI SCIENCE COLLEGE ALUMNI MEET: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ “ಮಹಾಸಮಾಗಮ”ಕ್ಕೆ ಮುಹೂರ್ತ ಫಿಕ್ಸ್

PUNEETH RAJKUMAR AWARD FOR KANNADA NEWS CHANNEL CAMERAMANS… ನ್ಯೂಸ್ ಚಾನೆಲ್ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕ್ಯಾಮೆರಾಮನ್ ಮಿತ್ರರಿಗೆ “ಪುನೀತ್ ರಾಜ್ ಕುಮಾರ್” ಪ್ರಶಸ್ತಿ.

DEEPAWALI BUMPER TO KSRTC: ದೀಪಾವಳಿ ಬಂಪರ್- KSRTC ಗೆ 18.62 ಕೋಟಿ ಗಳಿಕೆ-ಒಂದೇ ದಿನ ಸಾರ್ವಕಾಲಿಕ ದಾಖಲೆಯ 85,462 ಟಿಕೆಟ್ ಬುಕ್ಕಿಂಗ್

EVEN DEEPAVALI CRACKERS MENACE POLLUTION DECREASE…! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ವಾಯುಮಾಲಿನ್ಯ ವಾಗಿಲ್ವಂತೆ..?!

Scroll to Top