“ನನ್ನ ವಿರುದ್ದ ಎಂತದ್ದೇ ಷಡ್ಯಂತ್ರ ಮಾಡಿದ್ರೂ ನೋ ಯೂಸ್..ಏಕಂದ್ರೆ ನನ್ನಲ್ಲಿ ನ್ಯಾಯ-ನಿಷ್ಠೆ- ಪ್ರಾಮಾಣಿಕತೆ ಸತ್ತೋಗಿಲ್ಲ” ಪೊಲೀಸ್ ಗೆ ವಕೀಲ ಜಗದೀಶ್ ಖಡಕ್ ಪ್ರತಿಕ್ರಿಯೆ

0

ಬೆಂಗಳೂರು:ಸಿಡಿ ಯುವತಿ ಪ್ರಕರಣದಲ್ಲಿ ಸಂತ್ರಸ್ಥೆ ಎನ್ನಲಾದ ಯುವತಿ ಪರ ವಕಾಲತ್ತು ವಹಿಸಿರುವ ವಕೀಲ ಜಗದೀಶ್ ಅವರ ಪೂರ್ವಾಪರವನ್ನು ಕೆದಕುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.ಅವರನ್ನು ಕಾನೂನಿನ ಚೌಕಟ್ಟಿನಲ್ಲಿ ಸಿಕ್ಕಾಕಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.ಜಗದೀಶ್ ವಾಸವಾಗಿರುವ  ಕೊಡಿಗೆಹಳ್ಳಿ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗ್ಲೇ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಫರ್ಮಾನ್ ಹೊರಡಿಸಿದ್ದಾರೆನ್ನುವ ಚರ್ಚೆ ಗಂಭೀರವಾಗಿ ನಡೆಯುತ್ತಿದೆ.

ಯುವತಿ ಪರ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ವಕೀಲ ಜಗದೀಶ್ ಅವರನ್ನು ಕಾನೂನಿನ ಅಡಿಯಲ್ಲಿ ಸಿಕ್ಕಿಸಿ ಕೈ-ಬಾಯಿ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.ಜಗದೀಶ್ ಹಿನ್ನಲೆ ಏನು..? ಅವರ ಪೂರ್ವಾಪರ ಏನು.? ಅವರ ಗಳಿಕೆಯ ಮೂಲ.? ಅವರ ಬೆನ್ನಿಂದೆ ಇರುವವರು ಯಾರು,..? ಯಾವ ಪಕ್ಷ ಹಾಗು ಮುಖಂಡರ ಬೆಂಬಲ ಅವರಿಗಿದೆ ಎನ್ನುವ ಪ್ರಶ್ನೆಗಳಿಂದಿಡಿದು ಯುವತಿ ಪರ ವಕಾಲತ್ತು ವಹಿಸೊಕ್ಕೆ ಕಾರಣವಾದವರು ಯಾರೆನ್ನುವವರೆಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ..

ಅಷ್ಟೇ ಅಲ್ಲ, ಜಗದೀಶ್ ಮೇಲೆ ಯಾವುದಾದರೂ ದೂರು-ಕ್ರಿಮಿನಲ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಿವೆಯೇ..? ಅವರ ವಿರುದ್ಧ ಯಾರಾದರೂ ದೂರು ನೀಡಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆನ್ನಲಾಗಿದೆ.ಜಗದೀಶ್ ಅವರು ಇಟ್ಟಿರುವ ದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯುವಂತೆ ಮಾಡಲು ಪೊಲೀಸರು ಈ ರೀತಿಯ ಸಾಹಸಗಳಿಗೆ ಮುಂದಾಗಿದ್ದಾರೆನ್ನುವುದು ಸಧ್ಯದ ವರ್ತಮಾನ.ಆದ್ರೆ ಪೊಲೀಸ್ ಇಲಾಖೆಯ ಈ ಧೋರಣೆಗೆ ವಕೀಲರ ಸಮೂಹ ವ್ಯಾಪಕ ಖಂಡನೆಯನ್ನು ವ್ಯಕ್ತಪಡಿಸಿದೆ.

ಅದರಲ್ಲೂ ಜಗದೀಶ್ ಅವರು ಪ್ರಕರಣ ಕೈಗೆತ್ತಿಕೊಂಡ ನಂತರ ತಮಗೆ ಬರುತ್ತಿರುವ ಬೆದರಿಕೆ ಕರೆ..ಹಾಕಲಾಗುತ್ತಿರುವ ಒತ್ತಡ..ನೀಡಲಾಗುತ್ತಿರುವ ಆಮಿಷಗಳ ಸಂಪೂರ್ಣ ಮಾಹಿತಿ ನನ್ನ ಬಳಿಯಿದೆ.ಅದನ್ನು ಕಾಲಘಟ್ಟದಲ್ಲಿ ಬಯಲು ಮಾಡುತ್ತೇನೆ..ನನ್ನ ಮೇಲೆ ಒತ್ತಡ ತಂತ್ರ-ಬೆದರಿಕೆ ಹಾಕೋವಂತದ್ದನ್ನು ಮಾಡಿ ಪ್ರಕರಣದಿಂದ ಹಿಂದಕ್ಕೆ ಸರಿಯುವಂತೆ ಮಾಡುತ್ತೇನ್ನುವ ಭ್ರಮೆಯಲ್ಲಿ ಯಾರಾದ್ರೂ ಇದ್ದರೆ ಅದು ಅವರ ಮೂರ್ಖತನ,..ನನಗೆ ನನ್ನ ಪೂರ್ವಜರು ಮಾಡಿಟ್ಟಿರುವ ಆಸ್ತಿನೇ ಸಾಕಷ್ಟಿದೆ.ಹಡಬೆ ಹಣಕ್ಕೆ ಕೈ ಚಾಚುವ ಪರಿಸ್ತಿತಿಯಲ್ಲಿ ನಾನಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನನ್ನ ವಿರುದ್ಧ ಎಂತದ್ದೇ ಗೌಪ್ಯ ಅಥವಾ ರಹಸ್ಯ ಕಾರ್ಯಾಚರಣೆ ಮಾಡಿದ್ರೂ ಏನೂ ಸಿಗೊಲ್ಲ..ಯಾಕಂದ್ರೆ ನಾನು ವ್ಯಕ್ತಿತ್ವ ಹಾಗೂ ವೃತ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ಪಾರರ್ಶಕತೆ ಉಳಿಸಿಕೊಂಡಿದ್ದೇನೆ..ನನ್ನಲ್ಲಿನ ನೈತಿಕತೆ ಜಾಗೃತವಾಗಿರುವವರೆಗೂ ಯಾರೂ ನನ್ನನ್ನು ಏನೂ ಮಾಡ್ಲಿಕ್ಕಾಗದು ಎಂದು ಸ್ನೇಹಿತರು ಹಾಗೂ ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆನ್ನಲಾಗಿದೆ.

Spread the love
Leave A Reply

Your email address will not be published.

Flash News