ಜಿಲ್ಲಾ ಸರ್ಜನ್ ಕುಡ್ತರಕರ್ ವಿರುದ್ಧದ ಶಾಸಕರ ಕೋಪಾತಾಪಕ್ಕೆ ಕಾರಣವೇನು.? ಸಿಎಂ ಮುಂದೆ MLA ರೂಪಾಲಿ ಕಂಬನಿ..ಕಣ್ಣೀರಿನ ಅಸಲಿಯತ್ತೇನು..?

0
ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್, ಶಿವಾನಂದ್ ಕುಡ್ತರಕರ್
ಜಿಲ್ಲಾ  ಸರ್ಜನ್, ಶಿವಾನಂದ್ ಕುಡ್ತರಕರ್
ಕಾರವಾರ BJP ಶಾಸಕಿ ರೂಪಾಲಿ ನಾಯಕ್
ಕಾರವಾರ BJP ಶಾಸಕಿ ರೂಪಾಲಿ ನಾಯಕ್

ಬೆಂಗಳೂರು:ಮಾನ್ಯ ಮುಖ್ಯಮಂತ್ರಿಗಳ ಮುಂದಿನ ಮಹಿಳಾ ಶಾಸಕಿಯೋರ್ವರ ಕಣ್ಣಿನ ಕಥೆ ತೀವ್ರ ಚರ್ಚೆಯಾಗುತ್ತಿದೆ.ನಿಜಕ್ಕೂ ಆ ಕಣ್ಣೀರಿಗೆ ಅವರು ಕೊಡುತ್ತಿರುವುದು ಸಕಾರಣವಾ..? ಅದರಿಂದ ಬೇರೆಯದೇ ಆದ ಹಿತಾಸಕ್ತಿ ಇದೆಯೇ ಎನ್ನುವ ಪ್ರಶ್ನೆ ಸೃಷ್ಟಿಯಾಗ್ತಿದೆ. ಈ ಕಥೆಯಲ್ಲಿ ಯಾರು ಸತ್ಯ ಹರಿಶ್ಚಂದ್ರರು..ಯಾರು ಸುಳ್ಳುಬುರುಕರು ಎನ್ನುವ ಸತ್ಯಾನ್ವೇಷಣೆ ನಡೆಸಿದೆ ಕನ್ನಡ ಫ್ಲಾಶ್ ನ್ಯೂಸ್..

ಇಂದು ಬೆಂಗಳೂರಿನಲ್ಲಿ ಸಿಎಂ ಮಧ್ಯಸ್ಥಿಕೆಯಲ್ಲಿ ನಡೆದ ಸಭೆ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯ್ತು.ಅದರಲ್ಲಿ ಪ್ರಮುಖವಾಗಿ ಕಾರವಾರ ಬಿಜೆಪಿ ಮಹಿಳಾ ಶಾಸಕಿ ರೂಪಾಲಿ ನಾಯಕ್ ಅವರ ಕಣ್ಣೀರ ಕಥೆಯೂ ಒಂದು..ಅದರ ಒಂದು ಝಲಕ್ ಇಲ್ಲಿದೆ ನೋಡಿ..

ಶಾಸಕರಾಗಿದ್ರೂ ಇವತ್ತು ಅಧಿಕಾರಿಗಳ ಮುಂದೆ ತಲೆ ತಗ್ಗಿಸುವಂತಾಗಿದೆ.ಇಂಥಾ ಸೌಭಾಗ್ಯಕ್ಕೆ ನಾವೇಕೆ ಶಾಸಕರಾಗಿರಬೇಕು…ನಾನ್ ಟ್ರಾನ್ಸ್ ಫರ್ ಮಾಡಿಸಿದ್ರೆ,ನಮ್ಮ ಪಕ್ಷದವರೇ ಶಿಫಾರಸ್ಸು ಮಾಡಿ ವರ್ಗಾವಣೆ ರದ್ದು ಮಾಡಿಸಿ ದ್ದಾರೆ ಸಾರ್..ಅಧಿಕಾರಿ ಮುಂದೆ ತಲೆ ಎತ್ತಿಕೊಂಡು ಓಡಾಡಲು ಆಗ್ತಿಲ್ಲ..ಸಾರ್..ಎಂದು ರೂಪಾಲಿ ನಾಯಕ್  ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಮುಂದೇ ಕಣ್ಣೀರು ಹಾಕ್ಕೊಂಡ್ರು.

ತಮ್ಮ ಹಾಗು ತಮ್ಮ ಕ್ಷೇತ್ರಗಳ ಸಮಸ್ಯೆಯನ್ನು ಕೇಳೋರೇ ಇಲ್ಲ.ಕ್ಷೇತ್ರದಲ್ಲಿ ಅಡ್ಡಾಡಲು ಆಗ್ತಿಲ್ಲ ಎಂದು ಬಿಜೆಪಿ ಶಾಸಕರು ಅಳಲು ತೋಡಿಕೊಂಡಿದ್ದ ಹಿನ್ನಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಸಭೆ ಕರೆದು ಪ್ರತಿಯೊಬ್ಬರ ಅಳಲು-ಅಹವಾಲು ಕೇಳಿದ್ರು.ವೇಳೆ ಅನೇಕ ಶಾಸಕರು ವಿಭಿನ್ನ ರೀತಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.ನಡುವೆ ಕಾರವಾರ ಶಾಸಕಿ ರೂಪಾಲಿ ನಾಯಕ್ ಅವರನ್ನು ಕರೆದಾಗ ಸಮಸ್ಯೆ ಹೇಳಿಕೊಳ್ಳುತ್ತಲೇ ಗದ್ಗಿತರಾಗಿ ಕಣ್ಣೀರಿಡಲಾರಂಭಿಸಿದರು.

 ಜಿಲ್ಲಾ ಪಂಚಾಯತ್ ಸಿಇಓ ಮಹಮದ್ ರೋಶನ್
ಕಾರವಾರ ಜಿಲ್ಲಾ ಪಂಚಾಯತ್ ಸಿಇಓ ಮಹಮದ್ ರೋಶನ್

ಏನ್ ತಾಯಿ..ನಿನ್ನ ಸಮಸ್ಯೆ ಎಂದು ಕೇಳುತ್ತಿದ್ದಂತೆ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಳ್ಳಲಾಗದೆ ರೂಪಾಲಿ ನಾಯಕ್ ” ಏನ್ ಸಾರ್ ಹೇಳೋದು..ನಮ್ ಕ್ಷೇತ್ರದಲ್ಲಿ ನಮಗೆ ಬೆಲೆನೇ ಇಲ್ಲವಾಗಿದೆ.ಒಬ್ಬ ಅಧಿಕಾರಿ ನನ್ ಮಾತ್ ಕೇಳದಂತಾಗಿದೆ.ಸರಿಯಾಗಿ ಕೆಲಸ ಮಾಡದ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿದ್ರೆ,ಆತ ಯಾರದೋ ಶಿಫಾರಸ್ಸಿನಿಂದ ವಾಪಸ್ ಬಂದು ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾನೆ.ನನ್ನ ಮುಂದೆ ಕಾಲ್ ಮೇಲೆ ಕಾಲ್ ಹಾಕಿ ಕುಳಿತು ಜಬರ್ ದಸ್ತ್ ಮಾಡ್ತಿದ್ದಾನೆ.ಇದರಿಂದಾಗಿ ಎಲ್ಲರ ಮುಂದೆ ನನ್ನ ಮರ್ಯಾದೆ ಹೋಗಿದೆ.ಆತನಿಂದಾಗಿ ಇತರರೂ ಬೆಲೆ ಕೊಡದಂಗಾಗಿದೆ ಸಾರ್ ಎಂದ್ಹೇಳುತ್ತಾ ಕಣ್ಣೀರಾಗಿದ್ದಾರೆ.

ಶಾಸಕಿ ರೂಪಾಲಿ ನಾಯಕ್ ಅವರ ಕಣ್ಣೀರನ್ನು ನೋಡಲಾಗದೆ ಸಮಾಧಾನ ಮಾಡಿಕೊಳ್ಳಮ್ಮ.. ಅದೇನಾಗಿದೆ ಎಂದು ನಾನ್ ನೋಡ್ತೇನೆ..ಹೆಣ್ಮಕ್ಳು ಹೀಗೆ ಕಣ್ಣೀರು ಹಾಕಬಾರದು..ನಾನು ಸರಿ ಮಾಡ್ತೇನೆ ಎಂದರಲ್ಲದೇ ಅಧಿಕಾರಿಗಳನ್ನು ಕರೆದು ಸಮಸ್ಯೆಬಗೆಹರುಸ್ರಿ ಎಂದು ಸೂಚನೆ ಕೊಟ್ಟಿದ್ದಾರೆ.

ಆದ್ರೂ ಸಮಾಧಾನಗೊಳ್ಳದೆ ಶಾಸಕಿ ರೂಪಾಲಿ ನಾಯಕ್ ಕಣ್ಣೀರು ಹಾಕುತ್ತಲೇ ತಮ್ಮ ಸೀಟ್ ನಲ್ಲಿ ಕುಳಿತುಕೊಂಡ್ರು. ಅವರನ್ನು ಇತರೆ ಶಾಸಕರು ಸಮಾಧಾನಿಸಿದ್ರು.ಅಲ್ಲದೇ ಅವರ ಪರವಾಗಿ  ಸಿಎಂ ಅವರಲ್ಲಿ ಮನವಿ ಮಾಡಿಕೊಂಡ್ರು.ಆ ಅಧಿಕಾರಿ ವಿರುದ್ದ ಕ್ರಮ ಕೈಗೊಂಡು ಶಾಸಕರಿಗೆ ನ್ಯಾಯ ದೊರಕಿಸಿಕೊಡಿ ಎಂದು ವಿನಂತಿಸಿಕೊಂಡ್ರು.

ಆದ್ರೆ ಕನ್ನಡ ಫ್ಲಾಶ್ ನ್ಯೂಸ್, ಶಾಸಕರ ಕಣ್ಣೀರ ಹಿಂದಿನ ಕಹಾನಿಯ ವಾಸ್ತವವನ್ನು ಅರಿಯೋ ಪ್ರಯತ್ನ ಮಾಡಿತು.ಆ ವೇಳೆ ದೊರೆತ ಮಾಹಿತಿಗಳು ಶಾಸಕರೇ ಸುಳ್ಳೇಳುತ್ತಿದ್ದಾರಾ ಎನ್ನುವ ಶಂಕೆ ಮೂಡಿಸಿತು.ಶಾಸಕರು ಹೇಳುತ್ತಿರುವ  ಆ ಅಧಿಕಾರಿ ಹೆಸರು  ಶಿವಾನಂದ್ ಕುಡ್ತರಕರ್ .ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್.ಹೇಳಿಕೊಳ್ಳುವಷ್ಟೇನು ಪ್ರಾಮಾಣಿಕರಲ್ಲದಿದ್ದರೂ ಮಹಾನ್ ಭ್ರಷ್ಟನೇನಲ್ಲ..ಹಾಗೆಯೇ ಮೈಗಳ್ಳ ಅಧಿಕಾರಿಯೇನಲ್ಲ.

ಕಳೆದ 2020ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರವಾರದ ಕೋಡಿಭಾಗ ವ್ಯಾಪ್ತಿಯ ಗೀತಾ ಶಿವನಾಥ ಬಾನಾವಳಿ ಎನ್ನುವ 27 ವರ್ಷದ ಮಹಿಳೆ  ನಡೆದ ಮಹಿಳೆಯೋರ್ವರ ಸಂತಾನಹರಣ ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದರು.( ಇದಕ್ಕು ಮುನ್ನ ಹೆರಿಗೆ ಇದೇ ಅಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿತ್ತೆನ್ನುವುದು ವಿಶೇಷ). ವೈಯುಕ್ತಿಕವಾಗಿ ತೆಗೆದುಕೊಂಡು ಆತನನ್ನು ಬೇರೆಡೆ ರೂಪಾಲಿ ವರ್ಗಾಯಿಸಿದ್ದರಂತೆ.ಆದ್ರೆ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿರದ ತುಂಡಾಲ್ಕರ್ ತನಿಖೆಗೆ ಮನವಿ ಮಾಡಿದ್ರು.ಜಿಲ್ಲಾ ಪಂಚಾಯತ್ ಸಿಇಓ ರೋಶನ್ ಅವರು ಸಮಿತಿ ರಚಿಸಿ ತನಿಖೆ ಮಾಡಿದಾಗ ಸರ್ಜನ್ ಕುಡ್ತರಕರ್ . ನಿರಪರಾಧಿ ಎನ್ನುವುದು ಪ್ರೂವ್ ಆಗಿತ್ತು.

ಅಷ್ಟಕ್ಕು ಸಹಿಸಿಕೊಳ್ಳದ ರೂಪಾಲಿ ನಾಯಕ್  ಒತ್ತಡ ಹೇರಿ  ಮಾಡಿಸಿದ್ದ ವರ್ಗಾವಣೆಯನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದರು.ಕಾನೂನು ಸಮರಕ್ಕೆ ಮುಂದಾದ ತುಂಡಾಲ್ಕರ್ ಕೆಎಟಿಗೆ ಅರ್ಜಿ ಹಾಕ್ಕೊಂಡಿದ್ದರು.ಕೆಎಟಿಯಲ್ಲಿ ಕೇಸ್ ಕುಡ್ತರಕರ್ .ಪರವಾಗಿಯೇ ಆಗಿದ್ದರಿಂದ ತಮ್ಮ ಸ್ಥಾನದಲ್ಲಿ ಮುಂದುವರೆದಿದ್ದಾರೆ.ಇದನ್ನು ಸಹಿಸಿಕೊಳ್ಳದೆ ರೂಪಾಲಿ ನಾಯಕ್ ತನಗೆ ಅವಮಾನವಾಗಿದೆ ಎಂದು ಸಿಎಂ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಅದೇನೇ ಆಗಲಿ,ಕಾನೂನಾತ್ಮಕವಾಗಿ ವ್ಯಕ್ತಿ ಸರಿ ಎಂದು ತೀರ್ಪು ಹೊರಬಿದ್ದ ಮೇಲೂ ತನಗೆ ಅನ್ಯಾಯವಾಗಿದೆ ಎಂದು ಶಾಸಕರೊಬ್ಬರು ಸಿಎಂ ಮುಂದೆ ಕಣ್ಣೀರಿಟ್ಟಿದ್ದು ಮಾತ್ರ ವಿಪರ್ಯಾಸ.ಆದ್ರೆ ಸಿಎಂ ಯಡಿಯೂರಪ್ಪ ಶಾಸಕಿ ರೂಪಾಲಿ ನಾಯಕ್ ಅವರ  ಭಾವಾವೇಶದ ಆರೋಪಕ್ಕೆ  ಸೊಪ್ಪಾಕದೆ ವಾಸ್ತವದ ನೆಲೆಗಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಸೂಕ್ತ..ಯಾಕಂದ್ರೆ ಯಾರದೋ ಹಿತಾಸಕ್ತಿಗೆ ಇನ್ನ್ಯಾರೋ ಬಲಿಯಾಗಬಾರದು ಅಲ್ಲವಾ..

Spread the love
Leave A Reply

Your email address will not be published.

Flash News