ಸಿ.ಎಂ ಭರವಸೆಯ ಬಳಿಕ “ಪ್ರತಿಭಟನೆ” ಕೈಬಿಟ್ಟ ಜೆಡಿಎಸ್ ಶಾಸಕರು..!

0

ಬೆಂಗಳೂರು : ತಮ್ಮ‌ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾದ ಅನುದಾನ ಕಡಿತ ವಿರೋಧಿಸಿ ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಕಲಾಪ ಮುಗಿದ ಬಳಿಕವೂ ಸ್ಪೀಕರ್ ಪೀಠದ ಮುಂಭಾಗ ಧರಣಿ ನಡೆಸುತ್ತಿದ್ದರು. ನಂತರ ಸಿಎಂ ಭರವಸೆ ಬಳಿಕ ಜೆಡಿಎಸ್ ಶಾಸಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಸ್ಪೀಕರ್ ಮನವೊಲಿಕೆ ನಂತರವೂ ಧರಣಿ ಮುಂದುವರೆಸಿದ ಜೆಡಿಎಸ್ ಸದಸ್ಯರು ಬಳಿಕ ಸಿಎಂ ಮನವೊಲಿಕೆಯ ನಂತರ ಧರಣಿ ವಾಪಸ್ ಪಡೆದಿದ್ದಾರೆ. ಸಿಎಂ ಯಡಿಯೂರಪ್ಪನವರು ಬಂದು ನಿಮ್ಮ ಕ್ಷೇತ್ರದ ಅನುದಾನ ನೀಡುತ್ತೇವೆ, ಕುಮಾರಸ್ವಾಮಿ ಸರ್ಕಾರದಲ್ಲಿ ಮಂಜೂರಾಗಿದ್ದ ಯೋಜನೆಯ ಅನುದಾನ ಬಿಡುಗಡೆ ಮಾಡುವ ಭರವಸೆ ಬಳಿಕ ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ಧರಣಿ ಬಳಿಕ ಈ ಬಗ್ಗೆ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ಮೈತ್ರಿ ಸರ್ಕಾರದಲ್ಲಿ ಶುರುವಾದ ಕೆಲಸ ಮುಗಿಯಬೇಕು, ಹಾಗಾಗಿ ಈ ಧರಣಿ ನಡೆಸಿದ್ದವು.
ಅದಕ್ಕೆ ಅನುದಾನ ಬೇಕು, ಬೇರೆ ಉದ್ದೇಶವಿಲ್ಲ, ಸಿಎಂ ಯಡಿಯೂರಪ್ಪನವರು ಎಲ್ಲಾ ಕ್ಷೇತ್ರಗಳಿಗೂ ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದರು.

Spread the love
Leave A Reply

Your email address will not be published.

Flash News