ಮತ್ತೆ ರಾಜೇಂದ್ರ ಪೊನ್ನಪ್ಪನ ಪಾತ್ರದಲ್ಲಿ ಕ್ರೇಜಿಸ್ಟಾರ್

0

ಯಾವಾಗ ಮಲಯಾಳಂನಲ್ಲಿ ‘ದೃಶ್ಯಂ 2’ ಚಿತ್ರ ಹಿಟ್ ಆಯಿತೋ, ಆ ಚಿತ್ರವೂ ಕನ್ನಡದಲ್ಲಿ ರಿಮೇಕ್ ಆಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಎಲ್ಲರಿಗೂ ಇತ್ತು. ಏಕೆಂದರೆ, ದೃಶ್ಯಂ ಚಿತ್ರವು ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ ರಿಮೇಕ್ ಆಗಿತ್ತು. ಪಿ.ವಾಸು ನಿರ್ದೇಶನದ ಈ ಚಿತ್ರ ವಿ. ರವಿಚಂದ್ರನ್​ ಅವರಿಗೆ ಮತ್ತೊಂದು ಬ್ರೇಕ್​ ತಂದುಕೊಟ್ಟಿತ್ತು. ನಿರೀಕ್ಷೆಯಂತೆಯೇ ಕನ್ನಡದಲ್ಲೂ ‘ದೃಶ್ಯ 2’ ಬರಲಿದೆ. ಈಗಾಗಲೇ ಮಲಯಾಳಂನಲ್ಲಿ ‘ದೃಶ್ಯಂ 2’ ಓಟಿಟಿಯಲ್ಲಿ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈಗ ಇದೇ ಚಿತ್ರವನ್ನು ಕನ್ನಡದಲ್ಲೂ ರೀಮೇಕ್‌ ಮಾಡಲಿದ್ದು, ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತೆ ರಾಜೇಂದ್ರ ಪೊನ್ನಪ್ಪನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಬಾರಿಯೂ ಪಿ ವಾಸು ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಈ4 ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.
ಯುಗಾದಿ ಹಬ್ಬದ ಅಂಗವಾಗಿ ‘ದೃಶ್ಯ 2’ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಸಿನಿಮಾ ಸೆಟ್ಟೇರುವ ಸಂಗತಿಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

Spread the love
Leave A Reply

Your email address will not be published.

Flash News