ಎಲ್‌ಐಸಿ: ಇನ್ಮುಂದೆ ವಾರದಲ್ಲಿ ಐದು ದಿನ ಕೆಲಸ?

0

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ ನೌಕರರಿಗೆ ಇನ್ಮುಂದೆ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಹೀಗೇನಾದ್ರೂ ಆದ್ರೆ ಗ್ರಾಹಕರು ವಾರದಲ್ಲಿ ಐದು ದಿನ ಮಾತ್ರ ಎಲ್ ಐಸಿ ಕಚೇರಿಗಳಿಗೆ ತೆರಳಿ ಕೆಲಸದ ವ್ಯವಸ್ಥೆಗಳನ್ನು ಪಡೆಯುವ ಅವಕಾಶ ಇರುತ್ತದೆ. ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ಜಾರಿಗೆ ತರಲು ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಅನ್ವಯ, ಇದರ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿದ ನಂತರವಷ್ಟೇ ಹೊಸ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ. ಸದ್ಯಕ್ಕೆ ಈಗಿರುವ ವ್ಯವಸ್ಥೆ ಮುಂದುವರಿಯಲಿದೆ ಎಂದು ಎಲ್ ಐಸಿ ಮೂಲಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಎಲ್‌ಐಸಿ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಮುಕ್ತಗೊಳಿಸುವ ಗುರಿ ಹೊಂದಿದೆ. ಸಾರ್ವಜನಿಕರಿಗೆ ಮಾರಾಟ ಮಾಡುವ ಷೇರುಗಳ ಪೈಕಿ ಶೇಕಡಾ ಹತ್ತರಷ್ಟನ್ನು ವಿಮೆ ಹೊಂದಿರುವವರಿಗೆ ಮೀಸಲಿರಿಸಲಾಗುವುದು ಎಂದು ಸಹ ಕೇಂದ್ರ ಈಗಾಗಲೇ ಹೇಳಿದೆ. ಎಲ್‌ಐಸಿಯಲ್ಲಿ ಇರುವ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ನೌಕರರಿಗೆ ವಾರದಲ್ಲಿ ಐದು ದಿನ ಕೆಲಸ ವ್ಯವಸ್ಥೆಯ ಪ್ರಯೋಜನ ಸಿಗಲಿದೆ. ಕೆಲಸದ ದಿನಗಳ ವಿಚಾರದಲ್ಲಿ ಬದಲಾವಣೆ ಅಲ್ಲದೇ ನೌಕರರ ವೇತನದಲ್ಲಿ ಸರಿಸುಮಾರು ಶೇಕಡಾ ಹದಿನಾರರಷ್ಟು ಹೆಚ್ಚಳಕ್ಕೂ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

Spread the love
Leave A Reply

Your email address will not be published.

Flash News