ಮಾಡಿದ್ದುಣ್ಣೋ ಮಹಾರಾಯ… ಕೊವಿಡ್ ವೈಫಲ್ಯಕ್ಕೆ  ಗೌರವ್ ಗುಪ್ತಾಗೆ ಸರ್ಕಾರದಿಂದ  ಮಾಸ್ಟರ್ ಸ್ಟ್ರೋಕ್ .?! .ಸಮನ್ವಯಕಾರರಾಗಿ ಮಂಜುನಾಥ ಪ್ರಸಾದ್ ನಿಯೋಜಿಸಿ ಚೆಕ್ ಮೇಟ್.. ?!

0

ಬೆಂಗಳೂರು:ಕನ್ನಡ ಫ್ಲಾಶ್ ನ್ಯೂಸ್ ನುಡಿದ ಭವಿಷ್ಯ ಸತ್ಯವಾಗಿದೆ.”ಕೊರೊನಾ ನಿರ್ವಹಣೆಯಲ್ಲಿ ಗೌರವ್ ಗುಪ್ತಾ ವೈಫಲ್ಯ..! ಎಸಿ ಚೇಂಬರ್ ನಲ್ಲೇ ಹೆಚ್ಚು ವಾಸ್ತವ್ಯ..ಫೀಲ್ಡ್ ಗಿಳಿದಿದ್ದೆ ಕಡ್ಮೆ..ಮಂಜುನಾಥ್ ಪ್ರಸಾದ್,ಅನಿಲ್ ಕುಮಾರ್ ಅನುಪಸ್ತಿತಿ ಕಾಡ್ತಿರೋದಂತೂ ಸತ್ಯ..?ಶೀರ್ಷಿಕೆಯಲ್ಲಿ ಏಪ್ರಿಲ್ 22 ರಂದು ಕನ್ನಡ ಫ್ಲಾಶ್ ನ್ಯೂಸ್ ಮಾಡಿದ್ದ ವರದಿಗೂ ಸರ್ಕಾರ ತೆಗೆದುಕೊಂಡಿರುವ ನಿರ್ದಾರಕ್ಕೂ ಸಿಕ್ಕಾಪಟ್ಡೆ ಸಾಮ್ಯತೆ ಇದೆ ಎನಿಸ್ತದೆ.ಕನ್ನಡ ಫ್ಲಾಶ್ ನ್ಯೂಸ್ ಯಾವ ಹಿನ್ನಲೆಯಲ್ಲಿ ಸುದ್ದಿ ಬಿತ್ತರಿಸಿತ್ತೋ ಅದೆಲ್ಲವೂ ಸತ್ಯ ಎನ್ನುವುದು ಸರ್ಕಾರಕ್ಕೂ ಮನವರಿಕೆಯಾಗಿರ್ಬೇಕು..ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ಮಾರಣಾಂತಿಕ ಹಂತಕ್ಕೆ ತಲುಪೋದ್ರಲ್ಲಿ ಗೌರವ್ ಗುಪ್ತಾ ಅವರ ನಿರ್ಲಕ್ಷ್ಯ-ವೈಫಲ್ಯ ಬಹುಮುಖ್ಯ ಕಾರಣ ಎಂದೆನಿಸಿಯೇ ಮತ್ತಷ್ಟು ಸಂಕಷ್ಟ ತಂದುಕೊಳ್ಳೊಕ್ಕೆ ಸಿದ್ಧವಿರದ ಸರ್ಕಾರ ಮಹತ್ವದ ನಿರ್ದಾರವೊಂದನ್ನು ತೆಗೆದುಕೊಂಡಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರ ಸ್ಥಾನಕ್ಕೆ ಚ್ಯುತಿ ತಾರದೆಯೇ ಅವರ ಖುರ್ಚಿ ಹಾಗೂ ಅಧಿಕಾರಕ್ಕೆ ಕುತ್ತು ತರುವಂಥ ಚೆಕ್ ಮೇಟ್ ಇಟ್ಟುಬಿಟ್ಟಿದೆ ಸರ್ಕಾರ.ಕೊವಿಡ್ ನಿರ್ವಹಣೆಯ ವಿಚಾರದಲ್ಲಿ ಸಮನ್ವಯ ಸಾಧಿಸಿ ಕೆಲಸ ಮಾಡೊಕ್ಕೆ ಮಂಜುನಾಥ ಪ್ರಸಾದ್ ಅವರನ್ನು ಕೆಲ ನಿಮಿಷಗಳ ಮುನ್ನ ನಿಯೋಜಿಸಿ ಆದೇಶ ಹೊರಡಿಸಿದೆ.ಗೌರವ್ ಗುಪ್ತಾ ಹುದ್ದೆ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಸಾರಿ ಹೇಳೊಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿದೆಯೇ..? ಖಂಡಿತಾ ಇಲ್ಲ.

ಗೌರವ್ ಗುಪ್ತಾ ಮುಖ್ಯ ಆಯುಕ್ತರಾಗಿ ನಿಯೋಜನೆಗೊಳ್ಳೊಕ್ಕೆ ಸಾಕಷ್ಟು ಹರಸಾಹಸ-ಸರ್ಕಸನ್ನೇ ಮಾಡಿದ್ರು.ಆದ್ರೆ ಮಂಜುನಾಥ್ ಪ್ರಸಾದ್ ಅವರಿಗೆ ಇರುವ ಒಳ್ಳೆಯ ಹೆಸರಿನ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ.ಆದ್ರೆ ಸಾಮ್ರಾಟ್ ಅಶೋಕ್ ಅವರನ್ನು ಕಾಡಿ ಬೇಡಿ ಹೇಗೋ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರೆನ್ನುವ ಮಾತು ಇಂದಿಗೂ ಇದೆ.

ಮಂಜುನಾಥ್ ಪ್ರಸಾದ್ ನಿಯೋಜನೆ ಬಗ್ಗೆ ಸರ್ಕಾರದಿಂದ ಹೊರಡಿಸಲ್ಪಟ್ಟಿರುವ ಸುತ್ತೋಲೆ
ಮಂಜುನಾಥ್ ಪ್ರಸಾದ್ ನಿಯೋಜನೆ ಬಗ್ಗೆ ಸರ್ಕಾರದಿಂದ ಹೊರಡಿಸಲ್ಪಟ್ಟಿರುವ ಸುತ್ತೋಲೆ

ತನ್ನ ಅತ್ಯಾಪ್ತ ವಲಯದ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಕಾರಣಕ್ಕೆ ಹೇಗೋ ಮುಲಾಜಿಗೆ ಕಟ್ಟುಬಿದ್ದು ಅಶೋಕ್ ಸಾಹೇಬ್ರು  ಗೌರವ್ ಗುಪ್ತಾ ರನ್ನು ಬಿಬಿಎಂಪಿಗೆ ತಂದುಕೂರಿಸಿದ್ರೆನ್ನುವುದು ಕೂಡ ಗುಟ್ಟಿನ ವಿಷಯವೇನಲ್ಲ..ಆದ್ರೆ ಬಿಬಿಎಂಪಿಗೆ ಹೋಗುವಾಗ ಸಾಕಷ್ಟು ಸಲಹೆ-ಸೂಚನೆ-ಎಚ್ಚರಿಕೆಯನ್ನೂ ಕೊಟ್ಟಿದ್ದರಂತೆ.ಅದಕ್ಕೆ ತಲೆಯಲ್ಲಾಡಿಸಿ ಖುರ್ಚಿಯಲ್ಲಿ ಕುತ್ತಿದ್ದೇ ಕುತ್ತಿದ್ದು,ಗೌರವ್ ಗುಪ್ತಾಗೆ ಯಾಕಾದ್ರೂ ಈ ಹುದ್ದೆಗೆ ಬಂದ್ನೋ ಎನಿಸಲಿಕ್ಕೆ ಶುರುವಾಯ್ತೆನ್ನುವ ಮಾತನ್ನು ಬಿಬಿಎಂಪಿಯಲ್ಲಿ ಅನೇಕರು ಹೇಳ್ತಾರೆ.

ಕೊವಿಡ್ ಸನ್ನಿವೇಶವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿರುವಾಗ್ಲೇ ಮಂಜುನಾಥ್ ಪ್ರಸಾದ್ ಅವರನ್ನು ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ-ಆಕ್ರೋಶಕ್ಕೂ ಗುರಿಯಾಗಿತ್ತು.ಮಾದ್ಯಮಗಳೂ ಈ ಬಗ್ಗೆ ವರದಿ ಮಾಡಿದ್ದವು.ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸರ್ಕಾರಕ್ಕೆ ಗೌರವ್ ಗುಪ್ತಾರ ಸ್ಥಾನ ಪಲ್ಲಟ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ಒಂದು ಅವಕಾಶ ಬೇಕಿತ್ತು..ಅದಕ್ಕಾಗಿ ಕಾಯುತ್ತಿದ್ದ ಸರ್ಕಾರಕ್ಕೆ ಸಿಕ್ಕ ಕೊನೇ ಅಸ್ತ್ರವೇ “ಕೊವಿಡ್ ಸನ್ನಿವೇಶ ನಿಭಾಯಿಸುವಲ್ಲಿನ ವೈಫಲ್ಯ: ಇದನ್ನು ಗಂಭೀರವಾಗಿ ಬಳಸಿಕೊಂಡ ಸರ್ಕಾರ ತಡಮಾಡದೆ ಮಂಜುನಾಥ ಪ್ರಸಾದ್ ಅವರನ್ನು ಬಿಬಿಎಂಪಿಗೆ ಮರು ಪ್ರತಿಷ್ಟಾಪಿಸಿದೆ.

ಕೊರೊನಾ ನಿರ್ವಹಣೆಯಲ್ಲಿ ಗೌರವ್ ಗುಪ್ತಾ ವೈಫಲ್ಯ..! ಎಸಿ ಚೇಂಬರ್ ನಲ್ಲೇ ಹೆಚ್ಚು ವಾಸ್ತವ್ಯ..ಫೀಲ್ಡ್ ಗಿಳಿದಿದ್ದೇ ಕಡ್ಮೆ…! :ಮಂಜುನಾಥ ಪ್ರಸಾದ್-ಅನಿಲ್ ಕುಮಾರ್ ಅನುಪಸ್ಥಿತಿ ಕಾಡ್ತಿರೋದಂತೂ ಸತ್ಯ..!? http://kannadaflashnews.com/kannadaflashnews-corona-covid19-bbmp-chiefcommissinor-gauravgupta-responsibilities-negligence-excommissinors-anilkumar-manjujanthprasad-covidsituation/

ಗೌರವ್ ಗುಪ್ತಾರನ್ನು ಮುಖ್ಯ ಆಯುಕ್ತರ ಹುದ್ದೆಯಲ್ಲೇ ಇರಿಸಿ ಅವರಿಗೆ ಸರಿಸಮನಾಗಿ ಕೆಲಸ ಮಾಡೊಕ್ಕೆ ಮಂಜುನಾಥ ಪ್ರಸಾದ್ ಅವರನ್ನು ತಂದುಕೂರಿಸಿದೆ. ಅಂದ್ರೆ ಗೌರವ್ ಗುಪ್ತಾ ಇನ್ಮುಂದೆ ಏಕಪಕ್ಷೀಯ ಹಾಗೂ ನೇರವಾಗಿ ನಿರ್ದಾರ ತೆಗೆದುಕೊಳ್ಳುವಂತಿಲ್ಲ..ಪ್ರತಿಯೊಂದನ್ನು ಮಂಜುನಾಥ ಪ್ರಸಾದ್ ಅವರೊಂದಿಗೆ ಸಮಾಲೋಚಿಸಿಯೇ ತೀರ್ಮಾನಿಸಬೇಕಾಗುತ್ತದೆ. ಗೌರವ್ ಗುಪ್ತಾ ರಂಥ ಹಿರಿಯ ಐಎಎಸ್ ಅಧಿಕಾರಿಗೆ ಇದಕ್ಕಿಂತ ದೊಡ್ಡ ಮುಜುಗರ ಹಾಗೂ ಅವಮಾನ ಮತ್ತೊಂದು ಬೇಕಾ..ಖಂಡಿತಾ ಇಲ್ಲ.

.”ಕೊರೊನಾ ನಿರ್ವಹಣೆಯಲ್ಲಿ ಗೌರವ್ ಗುಪ್ತಾ ವೈಫಲ್ಯ..! ಎಸಿ ಚೇಂಬರ್ ನಲ್ಲೇ ಹೆಚ್ಚು ವಾಸ್ತವ್ಯ..ಫೀಲ್ಡ್ ಗಿಳಿದಿದ್ದೆ ಕಡ್ಮೆ..ಮಂಜುನಾಥ್ ಪ್ರಸಾದ್,ಅನಿಲ್ ಕುಮಾರ್ ಅನುಪಸ್ತಿತಿ ಕಾಡ್ತಿರೋದಂತೂ ಸತ್ಯ..?”ಶೀರ್ಷಿಕೆಯಲ್ಲಿ ಏಪ್ರಿಲ್ 22 ರಂದು ಕನ್ನಡ ಫ್ಲಾಶ್ ನ್ಯೂಸ್ ಬಿತ್ತರಿಸಿದ ವರದಿ ಪ್ರತಿ
.”ಕೊರೊನಾ ನಿರ್ವಹಣೆಯಲ್ಲಿ ಗೌರವ್ ಗುಪ್ತಾ ವೈಫಲ್ಯ..! ಎಸಿ ಚೇಂಬರ್ ನಲ್ಲೇ ಹೆಚ್ಚು ವಾಸ್ತವ್ಯ..ಫೀಲ್ಡ್ ಗಿಳಿದಿದ್ದೆ ಕಡ್ಮೆ..ಮಂಜುನಾಥ್ ಪ್ರಸಾದ್, ಅನಿಲ್ ಕುಮಾರ್ ಅನುಪಸ್ತಿತಿ ಕಾಡ್ತಿರೋದಂತೂ ಸತ್ಯ..?”ಶೀರ್ಷಿಕೆಯಲ್ಲಿ ಏಪ್ರಿಲ್ 22 ರಂದು ಕನ್ನಡ ಫ್ಲಾಶ್ ನ್ಯೂಸ್ ಬಿತ್ತರಿಸಿದ ವರದಿ ಪ್ರತಿ

ಗೌರವ್ ಗುಪ್ತಾ ಕೊವಿಡ್ ವಿಚಾರದಲ್ಲಿ ಮಂಜುನಾಥ ಪ್ರಸಾದ್ ಅವರೊಂದಿಗೆ ಕೂತು ಮಾತನಾಡಿ ನಿರ್ದಾರ ತೆಗೆದುಕೊಳ್ಳಬೇಕಾಗುತ್ತದೆ.ಗೌರವ್ ಗುಪ್ತಾ ಅವರ ಕಾರ್ಯವೈಖರಿ ಸರಿಯಾಗಿಲ್ಲ ಎಂದ್ರೆ ಅದನ್ನು ಪ್ರಶ್ನಿಸುವ ಅಧಿಕಾರವೂ ಮಂಜುನಾಥ ಪ್ರಸಾದ್ ಅವರಿಗಿದೆ.ಇದು ಗೌರವ್ ಗುಪ್ತಾ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.ತನ್ನದೇ ವಯಸ್ಸಿನ ತನ್ನದೇ ಕೆಡರ್ ನ ಅಧಿಕಾರಿಯೊಂದಿಗೆ ಹುದ್ದೆಯನ್ನು ಹಂಚಿಕೊಂಡು ಕೆಲಸ ಮಾಡುವುದಿದೆಯೆಲ್ಲಾ ಅದು ಅತ್ಯಂತ ಜಿಗುಪ್ಸೆಯ ವಿಚಾರ..ಗೌರವ್ ಗುಪ್ತಾ ಅವರ ವಿಷಯದಲ್ಲಿ ಅಗಿರುವುದು ಅದೇ..

ಕೊವಿಡ್ ನಂಥ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ತನಗೆ ಕೊಟ್ಟ ಅಧಿಕಾರ ಹಾಗೂ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇ ಅಗಿದ್ದರೆ ಗೌರವ್ ಗುಪ್ತಾರಿಗೆ ಇಂಥಾ ದುಸ್ಥಿತಿ ಬರುತ್ತಿರಲಿಲ್ಲವೇನೋ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.ಹಿಂದಿನ ಕಮಿಷನರ್ ಗಳು ಕೊವಿಡ್ ಸನ್ನಿವೇಶವನ್ನು ನಿಭಾಯಿಸಿದ ಅನುಭವವನ್ನೇ ಬಳಸಿಕೊಂಡು ಜನರ ಮಧ್ಯೆ ಹೋಗಬೇಕಿತ್ತು.ಅದನ್ನು ಬಿಟ್ಟು ಎಸಿ ಕಚೇರಿಯಲ್ಲಿ ಕುತ್ಕೊಂಡು..ವಾರ್ ರೂಂ-ಝೋನಲ್ ಆಫೀಸ್ ಗಳಿಗಷ್ಟೇ ಭೇಟಿ ಕೊಟ್ಕಂಡು ಕೊವಿಡ್ ಗೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಎಲ್ಲರಿಂದ್ಲೂ ಅಂತರ ಕಾಯ್ದುಕೊಂಡಂತದ್ದೇ ಇವತ್ತು ಅವರಿಗೆ ಮುಳುವಾಗಿದೆ.

ಸರ್ಕಾರ ಗೌರವ್ ಗುಪ್ತಾ ಅವರಿಗೆ   ಅತ್ತ ಸ್ಥಾನಪಲ್ಲಟವನ್ನೂ ಮಾಡದೆ.,ಇತ್ತ ಅಧಿಕಾರವನ್ನೂ ಸಂಪೂರ್ಣವಾಗಿ ಅನುಭವಿಸದಂತೆ ಮಾಡುವ ಮೂಲಕ  ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.ಬಹುಷಃ ಯಾವೊಬ್ಬ ಅಧಿಕಾರಿಗೂ ಗೌರವ್ ಗುಪ್ತಾರಿಗೆ ಆದಂಥ ಸೆಟ್ ಬ್ಯಾಕ್ ಆಗಿರಲಿಕ್ಕಿಲ್ಲವೇನೋ…ಹಾಗೆಯೇ ಯಾರಿಗು ಇಂಥಾ ಕೆಟ್ಟ ಸ್ಥಿತಿ ಬರಬಾರದೆಂದೂ ಜನ ಮಾತ್ನಾಡಿಕೊಳ್ಳುವಂತಾಗಿದೆ.

Spread the love
Leave A Reply

Your email address will not be published.

Flash News