CORONA LOCKDOWN HEROESCORONA VIRUSlock downMoreScrollTop NewsUncategorized

ನಿವೃತ್ತ ವಾಯುಸೇನಾಧಿಕಾರಿ ಅತ್ರಿ ಅವರಿಂದ ಜಿರಾಫೆ ದತ್ತು ಸ್ವೀಕಾರ..

ಕೊರೊನಾ ಮಹಾಮಾರಿಯಿಂದ ಮಾನವ ಸಂಕುಲವಷ್ಟೇ ಅಲ್ಲ, ಪ್ರಾಣಿಗಳೂ ಸಹ ಸಂಕಷ್ಟಕ್ಕೀಡಾಗಿವೆ. ಕೋವಿಡ್‌ನಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಪ್ರವಾಸಿ ಸ್ಥಳಗಳು, ಝೂಗಳು ಮುಚ್ಚಿವೆ. ಕಾರಣ ಮೃಗಾಲಯಗಳಿಗೆ ಯಾವುದೇ ಆದಾಯ ಬರ‍್ತಿಲ್ಲ. ಇದ್ರಿಂದ ಅಲ್ಲಿನ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ.

ಇದನ್ನು ಮನಗಂಡ ಪ್ರಾಣಿ ಪ್ರಿಯರು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವಲ್ಲಿ ನಿರತರಾಗಿದ್ದಾರೆ. ಅಂತೆಯೇ ಪ್ರಾಣಿ ಪ್ರಿಯ, ನಿವೃತ್ತ ವಾಯುಸೇನಾಧಿಕಾರಿ ಜಿಬಿ ಅತ್ರಿ ಅವರು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಯದುನಂದನ್ ಎಂಬ ಜಿರಾಫೆಯೊಂದನ್ನು ಒಂದು ಲಕ್ಷ ದೇಣಿಗೆ ನೀಡಿ ದತ್ತು ಪಡೆದಿದ್ದಾರೆ. ಅತ್ರಿ ಈ ಹಿಂದೆಯೂ ಸಹ ಪ್ರಾಣಿಯೊಂದನ್ನು ದತ್ತು ಪಡೆದಿದ್ದರು.

ಒಂದೂವರೆ ವರ್ಷದ ಯದುನಂದನ್ ಜಿರಾಫೆಯು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಕೃಷ್ಣರಾಜ ಮತ್ತು ಬಾಬ್ಲಿ ಎಂಬ ಜಿರಾಫೆಗೆ ಜನಿಸಿತ್ತು. ಕಳೆದ ಏಪ್ರಿಲ್ 24 ರಂದು ಮೈಸೂರು ಮೃಗಾಲಯವು ಯದುನಂದನ್ ಜಿರಾಫೆಯನ್ನು ಬೆಂಗಳೂರು ಮೃಗಾಲಯಕ್ಕೆ ಕೊಡುಗೆಯನ್ನಾಗಿ ನೀಡಿತ್ತು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇತಿಹಾಸದಲ್ಲೇ ಮೊದಲ ಬಾರಿಗೆ ಜಿರಾಫೆಯನ್ನು ದತ್ತು ಪಡೆದಿರುವ ಅತ್ರಿಯವರನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ, ನಿರ್ದೇಶಕರಾದ ವಾಣಿಶ್ರೀ ವಿಪಿನ್ ಸಿಂಗ್ ಅವರು ಅಭಿನಂದಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಾನು ಪ್ರಾಣಿಗಳನ್ನು ದತ್ತು ಪಡೆಯಬೇಕೆಂದು ಯೋಚಿಸುತ್ತಿದ್ದೆ, ಮಲೆನಾಡಿನ ನನ್ನ ಹುಟ್ಟೂರಿನಲ್ಲಿ ನಾನು ಪ್ರಾಣಿಗಳ ಜೊತೆಯೇ ಬೆಳೆದೆ. ಪ್ರಾಣಿಯನ್ನು ದತ್ತು ಪಡೆಯುವಲ್ಲಿ ನನ್ನ ಬಳಿ ಮೂರು ಆಯ್ಕೆಗಳಿದ್ದವು ಸಿಂಹ, ಹುಲಿ, ಮತ್ತು ಜಿರಾಫೆ. ಹಾಗಾಗಿ ನಾನು ನನ್ನ ಕುಟುಂಬ ಸದಸ್ಯರ ಬಳಿ ಸಲಹೆ ಕೇಳಿದೆ. ಎಲ್ಲರೂ ಆಯ್ಕೆ ಮಾಡಿದ್ದು, ಹುಲಿ ಮತ್ತು ಸಿಂಹವನ್ನೇ. ಆದರೆ ನನ್ನ ಮೊಮ್ಮೊಗ ಜಿರಾಫೆಯನ್ನು ಆಯ್ಕೆ ಮಾಡಿದ.

ಜಿರಾಫೆಗಳು ಇಂದಿಗೆ ಅತ್ಯಂತ ದುರ್ಬಲ ಜಾತಿಗಳಲ್ಲಿ ಒಂದಾಗಿದೆ. ಸುಮಾರು ಐದಾರು ವರ್ಷಗಳ ಹಿಂದೆ, ಜಗತ್ತಿನಲ್ಲಿ 1,50,000 ಜಿರಾಫೆಗಳಿದ್ದವು, ಆದರೆ ಈಗ ಜಿರಾಫೆಗಳ ಸಂಖ್ಯೆ 97,000 ಕ್ಕೆ ಇಳಿದಿದೆ. ಅವುಗಳನ್ನು ದುರ್ಬಲ ಪ್ರಭೇದಗಳೆಂದು ಘೋಷಿಸಲಾಗಿದೆ.

ಯದುನಂದನ್‌ಗೆ ಕೇವಲ ಹದಿನೆಂಟು ತಿಂಗಳು. ಯದುನಂದನ್ ಜಿರಾಫೆ ತನ್ನ ತಾಯಿಯನ್ನು ಕಳೆದುಕೊಂಡ. ಆದ್ದರಿಂದ ಅವನನ್ನು ಬನ್ನೇರುಘಟ್ಟದ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಹಾಗಾಗಿ ಇದು ಪ್ರಕೃತಿಗೆ ಮರಳಲು ಒಂದೊಳ್ಳೆಯ ಅವಕಾಶ ಎಂದು ನಾನು ಭಾವಿಸಿದೆ ಎಂದು ನಿವೃತ್ತ ವಾಯುಸೇನಾಧಿಕಾರಿ ಅತ್ರಿಯವರು ತಿಳಿಸಿದ್ದಾರೆ. ಒಟ್ಟಾರೆ ಅತ್ರಿಯವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

Spread the love

Related Articles

Leave a Reply

Your email address will not be published.

Back to top button
Flash News