ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ದರ್ಶನ್ ಏನೇ ಕೇಳಿಕೊಂಡರೂ ಅವರ ಫ್ಯಾನ್ಸ್ ಚಾಚೂ ತಪ್ಪದೇ ಪಾಲಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಇತ್ತೀಚೆಗಷ್ಟೇ ಕೊರೊನಾ ಲಾಕ್ಡೌನ್ ನಿಂದ ಸಂಕಷ್ಟದಲ್ಲಿರುವ ಮೃಗಲಾಯಗಳಲ್ಲಿ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯುವಂತೆ ದಚ್ಚು ಮನವಿ ಮಾಡಿದ್ದರು.
ಇದರಿಂದ ಸಾಕಷ್ಟು ಮಂದಿ ಮೃಗಾಲಯಗಳಲ್ಲಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದು ದರ್ಶನ್ ಮನವಿಗೆ ಸ್ಪಂದಿಸಿದ್ದಾರೆ. ಇದಕ್ಕೆ ಕಾರಣ ನಟ ದರ್ಶನ್ ಮೇಲಿನ ಅಭಿಮಾನ ಎನ್ನುವುದರಲ್ಲಿ ತಪ್ಪಿಲ್ಲ. ಇದೀಗ ಡಿ ಬಾಸ್ ಅಭಿಮಾನಿ, ಅವರ ಮೇಲಿನ ಪ್ರೀತಿಯನ್ನು ಮತ್ತೊಂದು ವಿಭಿನ್ನ ರೀತಿಯಲ್ಲಿ ಹೊರಹಾಕಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯನ್ನು ರೈತರ ಹಬ್ಬ ಎಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಅಲ್ಲಿನ ಜನ ಎತ್ತುಗಳನ್ನು ವಿಧವಿಧವಾಗಿ ಅಲಂಕರಿಸುತ್ತಾರೆ ಇಲ್ಲೊಬ್ಬ ದರ್ಶನ್ ಅಭಿಮಾನಿ, ಎತ್ತಿನ ಮೇಲೆ ದರ್ಶನ್ ಚಿತ್ರ ಬಿಡಿಸಿ ಡಿ ಬಾಸ್ ಎಂದು ಎತ್ತುಗಳ ಮೇಲೆ ಬರೆದುಕೊಳ್ಳುವುದರ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಚಿತ್ರ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.