BreakingScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

EXPLOSIVE AUDIO VIRAL OF POLICE CONVERSATION- ಬಿಟ್ ಕಾಯಿನ್ ಅಕ್ರಮಕ್ಕೆ ಸ್ಪೋಟಕ ತಿರುವು..!! :”ಅಕ್ರಮ”ದಲ್ಲಿ “ಪೊಲೀಸ್” ಅಧಿಕಾರಿಗಳ “ಶಾಮೀಲು”.!? ಸ್ಪೋಟಕ “ಆಡಿಯೋ” ವೈರಲ್..!!

ಬೆಂಗಳೂರು: ಬಿಟ್ ಕಾಯಿನ್ ಹಗರಣ ದಿನಕ್ಕೊಂದು ಸ್ಪೋಟಕವಾದ ತಿರುವು ಪಡೆದುಕೊಳ್ಳುತ್ತಿದೆ.ಸಮಾಜದಲ್ಲಿ ಗಣ್ಯರೆನಿ ಸಿ ಕೊಂಡ ಅದೆಷ್ಟೋ ಪ್ರತಿಷ್ಟಿತರು ಈ ಅಕ್ರಮದಲ್ಲಿ ನೇರ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಪೊಲೀಸ್ ಹಾಗೂ ರಾಜಕೀಯ ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆನ್ನುವ ಅನುಮಾನವನ್ನು ಪುಷ್ಟೀಕರಿಸುವ ಸ್ಪೋಟಕ ಆಡಿಯೋವೊಂದು ಲೀಕ್ ಆಗಿದ್ದು ಇದು ಓರ್ವ ಐಪಿಎಸ್ ಹಾಗೂ ಪೇದೆ ನಡುವೆ ನಡೆದಿದೆ ಎನ್ನುವುದಾಗಿ ದಿ ಫೈಲ್ ವೆಬ್ ಸೈಟ್ ವರದಿ ಮಾಡಿದೆ.

ಬಿಟ್ ಕಾಯಿನ್ ಹಗರಣ ಪೊಲೀಸ್ ಹಾಗೂ ರಾಜಕೀಯ ವ್ಯಕ್ತಿಗಳ ಶಾಮೀಲಾತಿಯನ್ನು ಬಹಿರಂಗಪಡಿಸಿದೆ.ಇಂಟರ್ ನ್ಯಾಷನಲ್ ಹ್ಯಾಕರ್  ಶ್ರೀಕಿ ತನಿಖೆ ವೇಳೆ ಅನೇಕರ ಹೆಸರುಗಳನ್ನು ಬಾಯಿಬಿಟ್ಟಿದ್ದಾನೆನ್ನುವುದು ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾಗಿದೆ.ಇದರಲ್ಲಿ ನಾವಿದ್ದೇವಾ..ಎಂದು ಬಹುತೇಕರು ಕ್ರಾಸ್ ಎನ್ ಕ್ವೈಯರಿ ಮಾಡಿಕೊಳ್ಳಲಾರಂಭಿಸಿದ್ದಾರೆ.ಇಲಾಖೆಯೊಳಗೆ ಇದರ ಬಗ್ಗೆ ಸಿಕ್ಕಾಪಟ್ಟೆ ಟಾಕ್ಸ್ ಕೂಡ ಶುರುವಾಗಿದೆ.ಇದೆಲ್ಲದರ ಬೆನ್ನಲ್ಲೇ ಲೀಕ್ ಆಗಿದೆ ಎನ್ನಲಾಗುತ್ತಿರುವ ಆಡಿಯೋ ರೆಕಾರ್ಡ್ ಬಿಟ್ ಕಾಯಿನ್ ನ ಗಾಬರಿ ಹುಟ್ಟಿಸುವ ಮೌಲ್ಯ..ಅದು ಪಡೆದಿರುವ ದಂಧೆಯ ಸ್ವರೂಪ..ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿರುವ ಅದರ ಮೌಲ್ಯ.. ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾಗುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗು ರಾಜಕಾರಣಿಗಳ ಜಾತಕವೆಲ್ಲಾ ಬಯಲಾಗುತ್ತಿದೆ.

ಓರ್ವ ಪೊಲೀಸ್ ಅಧಿಕಾರಿ ಹಾಗೂ ಪೊಲೇಸ್ ಪೇದೆ ನಡುವೆ ನಡೆದಿದೆ ಎನ್ನಲಾಗುತ್ತಿರುವ ಸಂಭಾಷಣೆಯ ಆಡಿಯೋ ರೆಕಾರ್ಡ್ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.ಆ ಆಡಿಯೋದಲ್ಲಿರುವ ಸಂಭಾಷಣೆಯ ಕಂಪ್ಲೀಟ್ ಡೀಟೈಲ್ ಇಲ್ಲಿದೆ.  

ಪೇದೆ; ಸರ್‌ ಅದುಪ್ಲೆಕ್ಸಿಯೇಟ್‌ ಆಗ್ತಾ ಇರುತ್ತೆ ಸರ್‌

ಐಪಿಎಸ್‌ ; ಹ್ಞಾಂ

ಪೇದೆ; ಫ್ಲೆಕ್ಸಿಯಟ್‌ ಆಗ್ತಾ ಇರುತ್ತೆ

ಐಪಿಎಸ್‌; ಅಲ್ಲಾಅಂದಾಜು ಇವತ್‌ ಬಿಟ್ರೆ ಎಷ್ಟು..?

ಪೇದೆ; ಈಗ ಒಂದ್‌ ಬಿಟ್‌ ಕಾಯಿನ್‌ಗೆ 56 ಲಕ್ಷ ಇದೆ. ಅದರಲ್ಲೂ ವೆರಿಟೀಸ್‌ ಇದೆ ಸಾರ್‌. 30 ಲಕ್ಷ ಇದೆ. ಇಟ್‌ ಡಿಪೆಂಡ್ಸ್‌ ಸರ್‌

ಐಪಿಎಸ್‌; ಹಂಗಾದ್ರೆ….ಅವ್ನ ಅಕೌಂಟ್‌ನಿಂದ ಬೇರೆ ಯಾರಿಗಾದ್ರೂ ಹೋಗಿದ್ಯಾಹಣ ಎಲ್ಲಾಬಿಟ್‌ ಕಾಯಿನ್ನು ?

ಪೇದೆ; ಹೋಗಿದೆ ಸರ್‌….ದೊಡ್ಡವರಿಗೆ ಸುಮಾರ್‌ ಜನ್ರಿಗೆ ಟ್ರಾನ್ಸಾಕ್ಷನ್‌ ಅದ್ರಲ್ಲೇ ಮಾಡಿರೋದು
ಐಪಿಎಸ್‌; ಯಾರಂತ ಗೊತ್ತಿಲ್ಲ ನಿನಗೆ

ಪೇದೆ; ಅರ್ಧಂಬರ್ದ ಗೊತ್ತಿದೆ..ಪೂರ್ತಿ ಗೊತ್ತಿಲ್ಲ ಎಲ್ಲಾ ದೊಡ್ಡೋರೇ ಇರೋದು

ಐಪಿಎಸ್‌; ಯಾರ್ಯಾರು ಇದಾರೆ ಅಂದಾಜು

ಪೇದೆ; ಮಿನಿಸ್ಟರ್‌ ಲೆವೆಲ್‌ನಲ್ಲಿದಾರೆಮಿನಿಸ್ಟರ್‌ ಲೆವೆಲ್‌

ಐಪಿಎಸ್‌; ಹೋಂ ಮಿನಿಸ್ಟರ್‌ ಇದಾರಾ ..

ಪೇದೆ; ಅಲ್ಲಲ್ಲ ಬೇರೆ ಮಿನಿಸ್ಟರ್‌ಗಳು ಇದಾರೆಐಪಿಎಸ್‌ ಇದಾರೆ..

ಐಪಿಎಸ್‌; ಐಪಿಎಸ್‌ ಗಳು ಅಂದ್ರೆ ಯಾರ್ಯಾರು ಅಂದಾಜು

ಪೇದೆ; ಹೆಸರು ಗೊತ್ತಿಲ್ಲ ಸರ್‌

ಐಪಿಎಸ್‌; ಆಯ್ತು ಬಿಡಪ್ಪ (ನಗುತ್ತ….) ಒಟ್ನಲ್ಲಿ ಅಂತೂ ಆಗಿದೆ

ಪೇದೆ; ಆಗಿದೆ ಆಗಿದೆ ಸರ್‌..ಆಗಿರೋದಕ್ಕೆ…..ಏಯ್ಟೀನ್‌ನಲ್ಲೇ ಆಗಿರೋದು..

ಐಪಿಎಸ್‌; ನೆನ್ನೆ ಮೊನ್ನೆ ಶರತ್‌ ಅವರನ್ನು ಕರೆದಿದ್ರಾ….ಇವ್ರ ಬಗ್ಗೆ

ಪೇದೆ; ಇವ್ರು ಇಂಟಲಿಜೆನ್ಸ್‌ ಹೋಗಿದ್ರು….ಇಂಟ್‌ಗೆಇಂಟ್‌ಗೆ….

ಐಪಿಎಸ್‌; ಯಾರು?

ಪೇದೆ; ಶರತ್‌ ಅವರು, ಈಗ ಟೂ ಟು ತ್ರೀ ಡೇಸ್‌ ಬ್ಯಾಕ್‌, ದಯಾನಂದ್‌ ಸಾಹೇಬ್ರು ಫುಲ್‌ ಅವುಂದು ಮಾಹಿತಿ ತಗೊಂಡು

ಐಪಿಎಸ್‌; ಎನ್‌ಕ್ವೈಯರಿ ಅದೇಅದ್ರ ಬಗ್ಗೆ ಕೇಳೋಕ್ಕೆ….ಅಷ್ಟೇನಾ

ಪೇದೆ; ನಂದ್‌ ಎಲ್ಲಾ ಸರಿ ಇದೆಕಟ್‌ ಅಂಡ್‌ ಕ್ಲಿಯರ್‌ ಇದೆ

ಐಪಿಎಸ್‌; ನೀವು ಈ ಕೇಸ್‌ನಲ್ಲಿ ಐಎ… ? ಏನ್‌ ಸೆಕ್ಷನ್‌ ಹಾಕಿದೀರಿ

ಪೇದೆ; 66 ಸಿ ಅದು ಮಾಮೂಲಿ ಬೇರೇನೂ ಇಲ್ಲ

ಐಪಿಎಸ್‌; ಅದೇನ್‌ ಬೇಲೇಬಲ್‌ ಅಲ್ವಾ

ಪೇದೆ; ಹೌದು ಸಾರ್‌ ಬೇಲ್‌ ಆಯ್ತಲ್ಲ…2-3 ತಿಂಗ್ಳು ಇದ್ದ ಒಳಗೇ

ಐಪಿಎಸ್‌; ಬರೀ 66 ಸಿ ಗೆ ಮೂರ್‌ ತಿಂಗ್ಳು ಇಟ್ಕೋಳ್ತಾರಾ

ಪೇದೆ; ಆ ಮೇಲೆ 72 ಎ ಅದೇ ಹ್ಯಾಕಿಂಗ್‌ಅಂದ್‌ ಬಿಟ್ಟು….. ಸಿಸಿಬಿ ಅವರು ಡ್ರಗ್ಸ್‌ ಕೇಸ್‌ನಲ್ಲಿ ಹಾಕ್ಕೊಂಡಿದ್ರು

ಐಪಿಎಸ್‌; ಡ್ರಗ್ಸ್‌ ಕೇಸ್‌ ಮೋಸ್ಟಲಿ ಬೇಲ್‌ ಇದಾಗಿರಬೇಕು. ಅದೇನ್‌ ಐ ಟಿ ಆಕ್ಟ್‌ ಅದೇನ್‌ ವೇಸ್ಟ್‌ಬೇಲೇಬಲ್‌

ಪೇದೆ; ಬಟ್‌ ಈ ಕೇಸ್‌ನಲ್ಲಿ ಕೊಟ್ಟಿರಲಿಲ್ಲ..3 ತಿಂಗ್ಳಿದ್ದ

ಐಪಿಎಸ್‌; ಈಗೇನ್‌ ಚಾರ್ಜ್‌ಶೀಟ್‌ ಆಯ್ತಾ……ಐ ಓ ಯಾರು?

ಪೇದೆ; ಶರತ್‌ ಸಾರ್‌ಈಗ ಸದ್ಯಕ್ಕೆ ಕೃಷ್ಣಕುಮಾರ್‌

ಐಪಿಎಸ್‌; ಡಿಐಜಿ ನಾ

ಪೇದೆ; ಇಲ್ಲಾ ಸಾರ್‌ ಇನ್ಸ್‌ಪೆಕ್ಟರ್‌

ಐಪಿಎಸ್‌; ಆಯ್ತ್‌….ಏನಾದ್ರೂ ಇದ್ರೆ ಕೇಳ್ತೀನಿಅದೇನೋ ಕೇಳ್ಪಟ್ಟೆ

ಪೇದೆ; ಏನಾದ್ರೂ ಇದ್ರೆ ಹೇಳ್ತೀನಿಸಾರ್‌..ತಮ್ಮದೇನೂ ಹೆಸ್ರಿಲ್ಲ

ಐಪಿಎಸ್‌; ಥ್ಯಾಂಕ್ಯೂ…..

ಈ ಆಡಿಯೋ ಸಂಭಾಷಣೆ ಸಧ್ಯಕ್ಕೆ ಪೊಲೀಸ್ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.ಇನ್ನ್ಯಾರರ ಹೆಸರುಗಳು ಈ ಬಿಟ್ ಕಾಯಿನ್ ಅಕ್ರಮದಲ್ಲಿ ಥಳಕು ಹಾಕ್ಕೊಂಡಿರಬಹುದೋ ಎನ್ನುವ ಅನುಮಾನ ಕಾಡುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News