DONT ALLOW TO USE MAHARSHI..AVADHOOTHA…VEDABRAHMA.. REWARDS…!? ಹುಷಾರ್…!! ಇನ್ಮುಂದೆ ಬೇಕಾಬಿಟ್ಟಿಯಾಗಿ “ಮಹರ್ಷಿ..ಅವಧೂತ….ವೇದಬ್ರಹ್ಮ.ಪರಮಹಂಸ..”ನಾಮಾಂಕಿತ ಬಳಸೀರಿ ಜೋಕೆ…ಧಾರ್ಮಿಕ ದತ್ತಿ ಇಲಾಖೆ ಖಡಕ್ ಆದೇಶ.!

ಜನರನ್ನು ಯಾಮಾರಿಸಲು ಸರಕಿನಂತೆ ಮಹರ್ಷಿ..ಅವಧೂತ ನಾಮಾಂಕಿತ ಬಳಸಿಕೊಳ್ಳುತ್ತಿರುವ ಕೆಲವು ಸ್ವಘೋಷಿತ ಢೋಂಗಿಗಳಿಗೆ ಶಾಕ್..-ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಪತ್ರಕ್ಕೆ ಸ್ಪಂದಿಸಿದ ಇಲಾಖೆ.

0
ಏಪ್ರಿಲ್ 9,2022 ರಂದೇ PLEASE BAN "MAHARSHI..AVADHOOTHA.. .VEDABRAHMA" REWARDS..?! ....“ಮಹರ್ಷಿ..ಅವಧೂತ….ವೇದಬ್ರಹ್ಮ"..ನಾಮಾಂಕಿತ ಇಟ್ಟುಕೊಂಡ ಕೆಲವರಿಂದ "ಮಹಾಪಚಾರ"..?!- ಲೂಟಿ..!? ಶೀರ್ಷಿಕೆಯಲ್ಲಿ ಮಾಡಿದ್ದ ವರದಿ
ಏಪ್ರಿಲ್ 9,2022 ರಂದೇ PLEASE BAN “MAHARSHI..AVADHOOTHA.. .VEDABRAHMA” REWARDS..?! ….“ಮಹರ್ಷಿ. .ಅವಧೂತ…. ವೇದಬ್ರಹ್ಮ”.. ನಾಮಾಂಕಿ ತ ಇಟ್ಟುಕೊಂಡ ಕೆಲವರಿಂದ “ಮಹಾಪಚಾರ”..?!- ಲೂಟಿ..!? ಶೀರ್ಷಿಕೆಯಲ್ಲಿ ಮಾಡಿದ್ದ ವರದಿ

ಬೆಂಗಳೂರು: ಧರ್ಮವನ್ನು ಮಿಸ್ಯೂಸ್ ಮಾಡಿಕೊಂಡು,ಅದನ್ನು ತಮ್ಮ ಸ್ವಾರ್ಥಕ್ಕಾಗಿ ಭಕ್ತರ ಮುಗ್ಧತೆ ಹಾಗೂ ಅಸಹಾಯಕತೆ ಯನ್ನು ಹೇಗೆ ಬೇಕೋ ಹಾಗೆ ದುರ್ಬಳಕೆ ಮಾಡಿಕೊಂಡು  ಯಾಮಾರಿಸುತ್ತಿರುವ ಸೋ ಕಾಲ್ಡ್ ಮಹರ್ಷಿ-ವೇದಾಂತಿ-ಪರಮಹಂಸ-ಅವಧೂತ( ಇನ್ನು ಸಾಕಷ್ಟು ಬಿರುದುಬಾವಲಿಗಳನ್ನು ಇಟ್ಟುಕೊಂಡಿರುವವರಿಗೂ) ರಿಗೆಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಖತ್ತಾಗೇ ಶಾಕ್ ಕೊಡುವ ಸಾಧ್ಯತೆ ದಟ್ಟವಾಗಿದೆ.

ಸುಧೀರ್ಘವಾಗಿ ತಪಸ್ಸು-ಸೇವಾ ಕೈಂಕರ್ಯ ಗಳನ್ನು ಕೈಗೊಂಡು ಸಮಾಜಮುಖಿ ಹಾಗೂ ಮಾನವಮುಖಿ ಕಾರ್ಯಗಳ ಮೂಲಕ ವ್ಯಕ್ತಿ ಹಾಗೂ ಸಮಾಜಕ್ಕೆ ಸದಾ ಒಳಿತನ್ನೇ ಮಾಡುತ್ತಾ ಬಂದವರಿಗೆ ಸಿಕ್ಕ ಬಿರುದುಬಾವಲಿಗಳನ್ನು ತಮ್ಮ ಹೊಟ್ಟೆಪಾಡಿಗೆ ಬಳಸಿಕೊಂಡರೆ ಹುಷಾರ್ ಎನ್ನುವ ಎಚ್ಚರಿಕೆ ಸಂದೇಶವನ್ನು ರವಾನಿಸಿದಂತಿದೆ. ಈ ನಾಮಾಂಕಿತಗಳನ್ನು ಬಳಸಿಕೊಳ್ಳೊಕ್ಕೆ ಇರುವ ಮಾನದಂಡಗಳು,ಆ ಸಂಬಂಧ ರೂಪಿಸಬಹುದಾದ,ರೂಪಿಸಬೇಕಿರುವ ನಿಯಾಮಗಳಿಗಳ ಬಗ್ಗೆ ವರದಿಯನ್ನು ಆಗಮಶಾಸ್ತ್ರ ಪಂಡಿತರಿಂದಲೂ ಮುಜರಾಯಿ ಆಯುಕ್ತ ಕೆ.ದಯಾನಂದ್ ಕೇಳಿದ್ದಾರೆ.ಅಂದ್ಹಾಗೆ ಇಂತದ್ದೊಂದು  ಅಭಿನಂದನೀಯ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಕನ್ನಡ ಫ್ಲ್ಯಾಶ್ ನ್ಯೂಸ್ ಏಪ್ರಿಲ್ 9,2022 ರಂದೇ PLEASE BAN “MAHARSHI..AVADHOOTHA.. .VEDABRAHMA” REWARDS..?! ….“ಮಹರ್ಷಿ..ಅವಧೂತ….ವೇದಬ್ರಹ್ಮ”..ನಾಮಾಂಕಿತ ಇಟ್ಟುಕೊಂಡ ಕೆಲವರಿಂದ “ಮಹಾಪಚಾರ”..?!- ಲೂಟಿ..!? ಶೀರ್ಷಿಕೆಯಲ್ಲಿ ವರದಿಯೊಂದನ್ನು ಬಿತ್ತರಿಸಿತ್ತು. ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ..ಹೀಗೆ ಜಾಹಿರಾತು ಹಾಕ್ಕೊಂಡಂಥವರು ಇಂದು ಹಾದಿಗೊಬ್ಬ ಬೀದಿಗೊಬ್ಬರಂತೆ ಸಿಗ್ತಾರೆ..ಮನುಷ್ಯನ ಅಸಹಾಯ ಕತೆ-ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ಇಂಥಾ ಸಾಕಷ್ಟು ಡೋಂಗಿಗಳ ವಿರುದ್ಧ ಕಠಿಣ ಕ್ರಮ ಕೈ್ಗೊಂಡು,ಅವರಿಂದ ಈ ಸ್ವಘೋಷಿತ-ಬಿರುದು-ನಾಮಾಂಕಿತಗಳನ್ನು ವಾಪಸ್ ಪಡೆಯಬೇಕೆನ್ನುವುದು ಸಾಯಿದತ್ತಾ ಒತ್ತಾಯ. ಮೇಲ್ಕಂಡ ನಾಮಾಂಕಿತಗಳನ್ನು ಬಳಸಿಕೊಂಡು ಹಿಂದೂ ಧರ್ಮ ಪರಂಪರೆಗೆ ಧಕ್ಕೆ ತರುತ್ತಿರುವ ಕೆಲವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಯಿದತ್ತಾ ಮನವಿ ಮಾಡಿದ್ದನ್ನು ಸವಿಸ್ತಾರವಾಗಿ ಪ್ರಕಟಿಸಿತ್ತು.

ಸಾಯಿದತ್ತಾ ಅವರ ಮನವಿಗೆ ಸ್ಪಂದಿಸಿರುವ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಪರಮಹಂಸ, ಮಹರ್ಷಿ,ಅವಧೂತ,ಜಗದ್ಗುರು, ವೇದಬ್ರಹ್ಮ,..ಹೀಗೆ  ತಪಸ್ಸಿನಿಂದ ಸಿದ್ದಿಸಿಕೊಂಡವರ ನಾಮಾಂಕಿತಗಳನ್ನು ಬೇಕಾಬಿಟ್ಟಿ ತಮ್ಮ ಹೆಸರುಗಳ ಮುಂದೆ ಹಾಕ್ಕೊಂಡು ಜನ ಹಾಗೂ ಸಮಾಜವನ್ನು ಯಾಮಾರಿಸುತ್ತಿರುವಂಥವರ ವಿರುದ್ಧ ನಿಗಾ ಇಡುವಂತೆ ಆಗಮಶಾಸ್ತ್ರದ ಪ್ರಮುಖರಿಗೆ ಆದೇಶಿಸಿದೆ ಎನ್ನಲಾಗಿದೆ.

ಹಿಂದು ಧರ್ಮದಲ್ಲಿ ಗುರುಪರಪರೆಗೆ ತನ್ನದೇ ಆದ ಪಾವಿತ್ರ್ಯತೆ ಇದೆ.ವಿಶ್ವಾಮಿತ್ರ, ವಶಿಷ್ಟ,ವಾಲ್ಮೀಕಿ, ಜ ಮದಗ್ನಿ,ಗೌತಮ ಮೊದಲಾದ ಮಹರ್ಷಿಗಳು ಇತ್ತೀಚಿನ ಶತಮಾನದವರಾದ ಜಗದ್ಗುರು ಶಂಕರಾಚಾರ್ಯ,ರಾಮಾನುಜಚಾರ್ಯ, ಮಧ್ವಾಚಾರ್ಯ,ಕನಕದಾಸರ,ಬಸವಣ್ಣ,ರಾಘವೇಂದ್ರ ಸ್ವಾಮಿ,ಶಿರಡಿ ಸಾಯಿಬಾಬ..ಹೀಗೆ ಅನೇಕ ಮಂದಿ ಮಹನೀಯರಿದ್ದಾರೆ.ಅವರ್ಯಾರು ತಮ್ಮ ಹೆಸರುಗಳ ಮುಂದೆ ಸ್ವಘೋಷಿತವಾಗಿ ನಾಮಾಂಕಿತಗಳನ್ನು ಬಳಸಿಕೊಂಡಿರಲಿಲ್ಲ.ಅವೆಲ್ಲಾ ಅವರ ಸಾಧನೆ-ತಪಸ್ಸು ಹಾಗೂ ಸಮಾಜಮುಖಿ-ಮಾನವಮುಖಿ ಕೆಲಸಗಳಿಂದ ದಕ್ಕಿದ್ದು.ಸಮಾಜ ನೀಡಿದ್ದು, ಗುರುಪರಂಪರೆಯಿಂದ ದೊರೆತಿದ್ದು..

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.
ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಅಂತದ್ದರಲ್ಲಿ ಇಂಥಾ ನಾಮಾಂಕಿತಗಳನ್ನು ಜನರನ್ನು ಮೋಸ ಮಾಡಲು, ಹಣ ಮಾಡಲು  ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಈ ಮಹನೀಯರ ಗೌರವಕ್ಕೆ ಧಕ್ಕೆ ತರುವುದಷ್ಟೇ ಅಲ್ಲ,ಗುರುಪರಂಪರೆಗೂ ಅಪಚಾರ ಮಾಡಿದಂತಾಗಲಿದೆ.ಹಾಗಾಗಿ ಸುಖಾಸುಮ್ಮನೆ, ದಿನಕ್ಕೊಬ್ಬ ನಾಯಿಕೊಡೆಗಳಂತೆ ದಿಢೀರ್ ಸೃಷ್ಟಿಯಾಗುವ ಕೆಲವು ವಂಚಕರು ಪರಮಹಂಸ,ಮಹರ್ಷಿ,ಅವಧೂತ,ಜಗದ್ಗುರು,ವೇದಬ್ರಹ್ಮ,..ನಾಮಾಂಕಿತಗಳನ್ನು ಬಳಸಿಕೊಳ್ಳದಂತೆ ತಾಕೀತು ಮಾಡಬೇಕೆನ್ನುವ ಮನವಿಯನ್ನು ದತ್ತಾ ಮಾಡಿಕೊಂಡಿದ್ದರು.

ಹಾಗೆಯೇ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆಗಮಶಾಸ್ತ್ರ ಪಂಡಿತರು ಹಾಗೂ ವೇದ ಪಾರಂಗತರು ಮೇಲ್ಕಂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆಚಾರ್ಯ.. ಮಹರ್ಷಿ..ವೇದಬ್ರಹ್ಮ.. ಶ್ರೀ….ಶ್ರೀ..ನಾಮಾಂಕಿತಗಳನ್ನು ಯಾರ್ಯಾರು ಬಳಸಬೇಕು.ಯಾರ್ಯಾರು ಈ ನಾಮಾಂಕಿತಗಳ ಬಳಕೆಗೆ ನಿಜವಾಗ್ಯೂ ಯೋಗ್ಯರು ಎನ್ನುವ ಸಲಹೆಯನ್ನು ಮುಜರಾಯಿ ಇಲಾಖೆಗೆ ನೀಡಬೇಕೆನ್ನುವ ಮನವಿಯನ್ನೂ ಮಾಡಿಕೊಂಡಿದ್ದರು.

ಮೇಲ್ಕಂಡ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಿ,ಸಲಹೆ-ಸಮಾಲೋಚನೆ ನಡೆಸಿ ಧಾರ್ಮಿಕ ದತ್ತಿ ಇಲಾಖೆ ದಿಢೀರ್ ಸೃಷ್ಟಿಯಾಗುತ್ತಿರುವ ಢೋಂಗಿಗಳು ಗುರುಪರಂಪರೆಯ ನಾಮಾಂಕಿತಗಳನ್ನು ಬಳಸಿಕೊಳ್ಳುವಂತಿಲ್ಲ.ಹಾಗೇನಾದ್ರೂ ಬಳಸಿಕೊಂಡ್ರೆ ಅಂಥವರ ವಿರುದ್ದ ಕಠಿಣಾತೀ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಸಾಯಿದತ್ತಾ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಆಗಮ ಪಂಡಿತರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಮುಜರಾಯಿ ಆಯುಕ್ತರು ನಿರ್ದೇಶಿಸಿರುವ ಪತ್ರದ ಪ್ರತಿ
ಆಗಮ ಪಂಡಿತರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಮುಜರಾಯಿ ಆಯುಕ್ತರು ನಿರ್ದೇಶಿಸಿರುವ ಪತ್ರದ ಪ್ರತಿ

ಸಾಯಿದತ್ತಾ ಅವರ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.ಇಂದು ಸಮಾಜದಲ್ಲಿ ಒಂದಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿರುವ ಜನರ ದೌರ್ಬಲ್ಯ ಹಾಗೂ ಅಸಹಾಯಕತೆಯನ್ನೇ ಮಿಸ್ಯೂಸ್ ಮಾಡಿಕೊಳ್ಳಲು ಕೆಲವು ಡೋಂಗಿಗಳು ಗುರುಪರಂಪರೆಯ  ನಾಮಾಂಕಿತವನ್ನು ತಮ್ಮ ಹೆಸರುಗಳ ಮುಂದೆ ಹಾಕ್ಕೊಂಡು ಜನರಿಗೆ ಸಮಸ್ಯೆಗೆ ಪರಿಹಾರ,ಕಷ್ಟಗಳ ನಿವಾರಣೆ,ಬದುಕಿನಲ್ಲಿ ಪ್ರಗತಿ-ಉನ್ನತಿ ಹಾದಿ ತೋರಿಸುತ್ತೇವೆಂದು ಯಾಮಾರಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ.ಅಂಥವರಿಗೆ ಕೆಲವು ರಾಜಕೀಯ ಮುಖಂಡರೇ ಭಕ್ತರಾಗಿಬಿಟ್ಟಿದ್ದಾರೆ.ಹಾಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳುವ ಧೈರ್ಯ ಹಾಗೂ ಸಾಹಸ ಮಾಡುತ್ತಿರಲಿಲ್ಲ.

ಇಂತದ್ದರ ನಡುವೆ ಧಾರ್ಮಿಕ ದತ್ತಿ ಇಲಾಖೆ ಕೈಗೊಂಡಿರುವ ಖಡಕ್ ನಿರ್ದಾರವನ್ನು ಸ್ವಾಗತಿಸುತ್ತೇವೆ.ಯಾರು ಮಾಡಲಿಕ್ಕೆ ಆಗದಂಥ ಕೆಲಸವನ್ನು ಸಾಯಿದತ್ತಾ ಮಾಡಿರುವುದು ಕೂಡ ಪ್ರಶಂಸನೀಯ ಎಂದಿದ್ದಾರೆ.ಇನ್ನು ಮುಂದಾದರೂ ಇಂಥಾ ಢೋಂಗಿಗಳಿಂದ ಈ ಸಮಾಜ ಹಾಗೂ ವ್ಯಕ್ತಿಗಳಿಗೆ ಮುಕ್ತಿ ಸಿಗುತ್ತಲ್ಲ.ಅದೇ ಸಮಾಧಾನ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ತಾವಾಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಂತೆ ಸ್ವಘೋಷಿತ-ಅಘೋಷಿತವಾಗಿ ನಾಮಾಂಕಿತಗಳನ್ನು ಬಳಸಿಕೊಂಡು ಗುರುಪರಂಪರೆಗೆ ಅಪಚಾರ ಎಸಗುತ್ತಿದ್ದವರ ಆಟಾಟೋಪಕ್ಕೆ ಇನ್ನಾದ್ರೂ ಬ್ರೇಕ್ ಬಿತ್ತಲ್ಲ ಎನ್ನುವುದೇ ಸಮಾಧಾನದ ವಿಚಾರ

Spread the love
Leave A Reply

Your email address will not be published.

Flash News