ಎಲ್ಲಿಯ ಬಿಡಿಎ…ಎಲ್ಲಿಯ 12 ಸಾವಿರ ಕಾರ್ನರ್ ಸೈಟ್ಸ್- ಸಿಎಂ ಯಡಿಯೂರಪ್ಪ ಕಿವಿಗೆ “ಲಾಲ್ ಭಾಗ”ನ್ನೇ ಇಟ್ರಾ ಕಮಿಷನರ್ ಪ್ರಕಾಶ್ !

0

ಬೆಂಗಳೂರು: ಬಿಡಿಎ ಕಮಿಷನರ್ ಡಾ,ಪ್ರಕಾಶ್ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕಿವಿಗೆ ಸಖತ್ತಾಗೇ ಲಾಲ್ ಭಾಗ್ ಮುಡಿಸಿದ್ದಾರೆ ಅನ್ಸುತ್ತೆ.ಬಹುಷಃ ಕಮಿಷನರ್ ಪ್ರಕಾಶ್ ಅವರಿಗೇನೆ ಗೊತ್ತಿರ್ಲಿಕ್ಕಿಲ್ಲ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ದಲ್ಲಿ ಎಷ್ಟು ಮೂಲೆನಿವೇಶನಗಳಿವೆ ಎನ್ನೋದು.ಅಂತದ್ದರಲ್ಲಿ ಅದ್ಹೇಗೆ ಯಡಿಯೂರಪ್ಪ ಅವರ ಬಾಯಲ್ಲಿ 12 ಸಾವಿರ ಕಾರ್ನರ್ ಸೈಟ್ಸ್ ಬಿಡಿಎ ಒಂದ್ರಲ್ಲೇ ಇದೆ.ಅವುಗಳನ್ನು ಹರಾಜು ಮಾಡಿ ಲಾಕ್ ಡೌನ್ ಸಂಕಷ್ಟವನ್ನು ದೂರ ಮಾಡ್ತೇವೆನ್ನೋ ಮಾತನ್ನು ಹೇಳಿಸಿದ್ರೋ ಗೊತ್ತಿಲ್ಲ.ಆದ್ರೆ ಕಮಿಷನರ್ ಪ್ರಕಾಶ್ ಮಾಡಿದ ಯಡವಟ್ಟಿನಿಂದಾಗಿ ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆ ಮುಂದೆ ಮುಜುಗರಕ್ಕೆ ಈಡಾಗುವಂತಾಗಿದೆ.

ನಿಮಗೆ ಗೊತ್ತಿರ್ಲಿ ಅಂಥಾ ಹೇಳ್ತೇವೆ ಕೇಳಿ..ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ದುರ್ಬೀನ್ ಹಾಕ್ಕಂಡ್ ಹುಡುಕಿದ್ರೂ1ವರೆಯಿಂದ 2 ಸಾವಿರ ಕಾರ್ನರ್ ಸೈಟ್ಸ್ ಸಿಗೊಲ್ಲ.ಅಂತದ್ದರಲ್ಲಿ ಬಿಡಿಎ ಕಮಿಷನರ್ ಗೆ 12 ಸಾವಿರ ಸೈಟ್ಸ್ ಇವೆ ಎಂಬ ಕನಸು ಹೇಗೆ ಬಿತ್ತೋ ಗೊತ್ತಾಗ್ತಿಲ್ಲ.ಅಥವಾ ತಮ್ಮ ಕೆಳಹಂತದಲ್ಲಿರುವ ಅಧಿಕಾರಿಗಳು ಕೊಟ್ಟ ಅಪರಾತಪರ ಲೆಕ್ಕದಿಂದ ಸಿಎಂ ಕಿವಿಯನ್ನು ಸುಳ್ ಗಳಿಂದ ಚುಚ್ಚಿದ್ರೋ ಗೊತ್ತಾಗ್ತಿಲ್ಲ.ಸೈಟ್ಸ್ ಗಳ ಲೆಕ್ಕ ಕೊಡೋ ವಿಚಾರದಲ್ಲಿ ಕಮಿಷನರ್ ಪ್ರಕಾಶ್ ಅವ್ರು ಹಳ್ಳಕ್ಕೆ ಬಿದ್ರೋ,ಅಥವಾ ಸಿಎಂ ಯಡಿಯೂರಪ್ಪ ಅವ್ರನ್ನು ಹಳ್ಳಕ್ಕೆ ಬೀಳಿಸಿದ್ರೋ ಗೊತ್ತಾಗ್ತಿಲ್ಲ.

ಲಾಕ್ ಡೌನ್ ನಿಂದ ರಾಜ್ಯದ ಆರ್ಥಿಕ ಪರಿಸ್ತಿತಿ ದಿವಾಳಿಯಾಗಿರುವುದರಿಂದ ಅದನ್ನು ಸರಿದೂಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹರಸಾಹಸ ಮಾಡುತ್ತಿದ್ದಾರೆ.ಅವರ ಕಷ್ಟ-ತಿಕ್ಕಾಟ ಎರಡೂ ಅರ್ಥವಾಗುತ್ತೆ.ಪರಿಸ್ಥಿತಿಯನ್ನು ಹತೋಟಿಗೆ ತರೊಕ್ಕೆ ಸಾಧ್ಯವಿರುವ ಮಾರ್ಗೋಪಾಯಗಳನ್ನೆಲ್ಲಾ ಅನುಸರಿಸುತ್ತಿರುವ ಯಡಿಯೂರಪ್ಪ ಅವರಿಗೆ ಸೆಲ್ಯೋಷನ್  ಪ್ಲ್ಯಾನ್ ಕೊಟ್ಟವರಲ್ಲಿ  ಬಿಡಿಎ ಕಮಿಷನರ್ ಪ್ರಕಾಶ್ ಮೊದಲಿಗರು.ಯಡಿಯೂರಪ್ಪ ಅವರ ದೃಷ್ಟಿಯಲ್ಲಿ ಆಪದ್ಭಾಂಧವರಾಗುವ  ಉದ್ದೇಶದಲ್ಲಿ ಮಾಡಿದ ಅವಸರ ದೊಡ್ಡ ಸಂಕಟ ಸೃಷ್ಟಿಸಿದೆ.

ಯಡಿಯೂರಪ್ಪ ಬಳಿ ಹೋಗಿ ಮಾಹಿತಿ ಕೊಡುವ ಮೊದಲು ಎಲ್ಲವನ್ನೂ ಪಕ್ಕಾ ಮಾಡಿಕೊಂಡು ಹೋಗ್ಬೇಕಾಗಿದ್ದು ಕಮಿಷನರ್ ಆಗಿ ಪ್ರಕಾಶ್ ಅವರ ಕರ್ತವ್ಯ.ಆದ್ರೆ ಯಾರೋ ತಲೆಮಾಸಿದ ಅಧಿಕಾರಿಗಳು ಕೊಟ್ಟ ಮಾಹಿತಿಯನ್ನು ಮೂರ್ನಾಲ್ಕು ಬಾರಿ ಕ್ರಾಸ್ ಚೆಕ್ ಮಾಡಿಕೊಳ್ಳದೆ ಆತುರಾತುರುವಾಗಿ ಕೊಟ್ಟ ಮಾಹಿತಿಯನ್ನು ಯಡಿಯೂರಪ್ಪ ಎದೆಯುಬ್ಬಿಸಿಕೊಂಡು ಅನೌನ್ಸ್ ಮಾಡಿಯೇ ಬಿಟ್ಟರು.10 ಸಾವಿರ ಕೋಟಿ ಆರ್ಥಿಕ ಹೊರೆಯನ್ನು ನೀಗಿಸಲು ಬಿಡಿಎನಲ್ಲಿರುವ 12 ಸಾವಿರ ಕಾರ್ನರ್ ಸೈಟ್ ಗಳನ್ನು ಹರಾಜಾಕುವುದಾಗಿ ಘೋಷಿಸಿಯೇ ಬಿಟ್ಟರು. ಅಧಿಕಾರಿ ಮೇಲಿನ ನಂಬಿಕೆಯಿಂದ ಕೊಟ್ಟ ಹೇಳಿಕೆ ಇವತ್ತು ಅಭಾಸವನ್ನೇ ಸೃಷ್ಟಿಸಿದೆ.

ತಪ್ಪು ಮಾಹಿತಿ ಕೊಟ್ಟು ಸಿೆಂ ಯಡಿಯೂರಪ್ಪ ಅವರನ್ನು ಮುಜುಗರಕ್ಕೊಳಪಡಿಸಿದ್ರಾ ಬಿಡಿಎ ಕಮಿಷನರ್ ಡಾ,ಪ್ರಕಾಶ್
ತಪ್ಪು ಮಾಹಿತಿ ಕೊಟ್ಟು ಸಿೆಂ ಯಡಿಯೂರಪ್ಪ ಅವರನ್ನು ಮುಜುಗರಕ್ಕೊಳಪಡಿಸಿದ್ರಾ ಬಿಡಿಎ ಕಮಿಷನರ್ ಡಾ,ಪ್ರಕಾಶ್

12 ಸಾವಿರ ಅಲ್ಲ,2 ಸಾವಿರ ಇದ್ರೂ ಹೆಚ್ಚೇ.. ಅಲ್ಲದೇ ನಿಖರ ಮಾಹಿತಿ ಕೊಡೊಕ್ಕೆ  ಲ್ಯಾಂಡ್ ಸರ್ವೆ ರಿಪೋರ್ಟೇ ಕೈ ಸೇರಿಲ್ಲ: ಸೈಟ್ ಗಳ ವಿಷಯದಲ್ಲಿ ಕಮಿಷನರ್ ಪ್ರಕಾಶ್ ಪಕ್ಕಾ ತಪ್ಪು ಮಾಹಿತಿ ಕೊಟ್ಟಿದ್ದಾರೆನ್ನೋದ್ರಲ್ಲಿ ಅನುಮಾನವೇ ಇಲ್ಲ.ಇಂತಿಷ್ಟೇ ಕಾರ್ನರ್ ಸೈಟ್ಸ್ ಇವೆ ಎನ್ನುವ ತೀರ್ಮಾನಕ್ಕೆ ಬರೊಕ್ಕೆ ಅವರಿಗೆ ಸಾಧ್ಯವೇ ಆಗೊಲ್ಲ.ಏಕೆಂದ್ರೆ ಬಿಡಿಎ ವ್ಯಾಪ್ತಿಯಲ್ಲಿನ ಆಸ್ತಿ ಎಷ್ಟಿದೆ ಎನ್ನುವುದರ ಲ್ಯಾಂಡ್ ಸರ್ವೇ ರಿಪೋರ್ಟೇ ಇನ್ನೂ ಸಲ್ಲಿಕೆಯಾಗಿಲ್ಲ.ಸರ್ವೆ ರಿಪೋರ್ಟ್ ಗೆ ಆರ್ಡರ್ ಮಾಡಿದವನೇ ನಾನು ಎನ್ನುವ ಸಾಮಾನ್ಯ ಜ್ಞಾನವೂ ಅವರಿಗಿಲ್ಲದೆ ಹೋಯ್ತಾ.ಲ್ಯಾಂಡ್ ಸರ್ವೆ ರಿಪೋರ್ಟ್ ಕಂಪ್ಲೀಟ್ ಆಗೋವರೆಗೂ ಅದ್ಹೇಗೆ ಕಮಿಷನರ್ ಅವರಿಗೆ ಇಂತಿಷ್ಟೇ ಕಾರ್ನರ್ ಸೈಟ್ಸ್ ಇವೆ ಎನ್ನೋದು ಕನ್ಫರ್ಮ್ ಆಯ್ತೋ ಆ ದೇವರಿಗೆ ಗೊತ್ತು.ಒಂದ್ ಅಂದಾಜಿನ ಪ್ರಕಾರ ದುರ್ಬೀನ್ ಹಾಕಿ ಹುಡುಕಿದ್ರೂ ಸಿಗಬಹುದಾಗಿರೋದು 2 ಸಾವಿರ ಕಾರ್ನರ್ ಸೈಟ್ಸ್ ಎನ್ನೋದು ಕೂಡ ಪ್ರಕಾಶ್ ಅವರಿಗೆ ಗೊತ್ತು.ಇಷ್ಟೆಲ್ಲಾ ಗೊತ್ತಾದ ಹೊರತಾಗ್ಯೂ ಏಕೆ 12 ಸಾವಿರ ಎಂದು ಕಿವಿಕಚ್ಚಿದರೋ ತಿಳೀತಾ ಇಲ್ಲ.

ಸಿಎಂ ಅಂದುಕೊಂಡಷ್ಟು ಸಲೀಸಲ್ಲ ಹರಾಜು ಪ್ರಕ್ರಿಯೆ:ಈ ಸತ್ಯವನ್ನು ಕಮಿಷನರ್ ಪ್ರಕಾಶ್, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತರಬೇಕಿತ್ತು.ಏಕೆಂದ್ರೆ ಕಮಿಷನರ್ ಗೇನೆ ಗೊತ್ತು ಬಿಡಿಎನ ವಸ್ತುಸ್ಥಿತಿ.ಸಧ್ಯದ ಮಟ್ಟಿಗೆ ಹರಾಜು ನಡುದ್ರೂ ಕೈಯಲ್ಲಿ ಹಣವಿಲ್ಲದವರು ಹರಾಜಿನಲ್ಲಿ ಪಾಲ್ಗೊಳ್ಳುತ್ತಾರಾ..ಖಂಡಿತಾ ಇಲ್ಲ,ಹಾಗೇನಾದ್ರೂ ತಿಳ್ಕೊಂಡಿದ್ರೆ ಅದು ತಪ್ಪು ಹಾಗೂ ಮೂರ್ಖತನ.ಜೀವನ ನಡೆಸೋದೇ ಕಷ್ಟವಾಗಿರುವಾಗ ಬಿಡಿಎ ಹರಾಜಿನಲ್ಲಿ ಪಾಲ್ಗೊಳ್ಳುವ ಆಸಕ್ತಿಯಾಗ್ಲಿ,ವ್ಯವಧಾನವಾಗ್ಲಿ ಯಾರಿಗಿದೆ ಹೇಳಿ.ಅಲ್ಲದೇ ಈ ಹಿಂದೆ ಅಂದ್ರೆ 2019ರಲ್ಲಿ ಕಾರ್ನರ್ ಸೈಟ್ಸ್ ಗಳ ಹರಾಜು ನಡೆದಾಗ್ಲೇ ಜನ ಆಸಕ್ತಿಯಿಂದ ಪಾಲ್ಗೊಂಡಿದ್ದೇ ಕಡ್ಮೆ.50 ಸೈಟ್ಸ್ ಹರಾಜಿಗಿಟ್ಟರೆ 5-10 ಸೈಟ್ಸ್ ಹರಾಜಾಗುತ್ತಿರಲಿಲ್ಲ.ಅದು ಕೂಡ ಎಲ್ಲಾ ಸರಿಯಿದ್ದ ಪರಿಸ್ತಿತಿಯಲ್ಲಿ.ಅಂಥದ್ರಲ್ಲಿ ಸಿಕ್ಕಾಪಟ್ಟೆ ಪರಿಸ್ತಿತಿ ಖರಾಬ್ ಆಗಿರುವಾಗ ಜನ ಪಾಲ್ಗೊಳ್ತಾರೆಯಾ..ಹಾಗಾಗಿ ಹರಾಜು ಪ್ರಕ್ರಿಯೆಯನ್ನು ನಾವ್ ಅಂದುಕೊಂಡಂಗೆ ಮಾಡಿ ಬಿಡ್ತೇವೆ ಎಂದೇನಾದ್ರೂ ಸರ್ಕಾರ ಅಂದುಕೊಂಡಿದ್ರೆ ಅದು ಶುದ್ಧ ಮೂರ್ಖತನದ ಪರಮಾವಧಿ.

 ಬಿಡಿಎ ಮೇಲೆ ನಂಬಿಕೆ ಕಳೆದುಹೋಗುವಂತೆ ವ್ಯವಸ್ಥೆ ಹಾಳು ಮಾಡಿದ್ದಾರೆ ಪರಮ ಭ್ರಷ್ಟ ಅಧಿಕಾರಿಗಳು: ಬಿಡಿಎ ನಿವೇಶನಗಳೆಂದ್ರೆ ಜನ ಮುಗಿಬಿದ್ದು ವರ್ಷಗಟ್ಟಲೇ ಕಾದು ಪಡೆಯೋ ಸ್ತಿತಿ ಹಿಂದಿತ್ತು.ಆಗ ಬಿಡಿಎನಲ್ಲಿ ಆಡಳಿತ ವ್ಯವಸ್ಥೆ ದಕ್ಷ ಹಾಗೂ ಪ್ರಾಮಾಣಿಕವಾಗಿತ್ತು.ಆದ್ರೆ ಈಗ ಪರಿಸ್ತಿತಿ ಸ್ವಲ್ಪವೂ ಸರಿಯಿಲ್ಲ.ಕಾರ್ನರ್ ಸೈಟ್ ಗಳನ್ನು ಅಲ್ಲಿರುವ ಅಧಿಕಾರಿಗಳೇ ದಲ್ಲಾಳಿಗಳ ಜತೆ ಸೇರಿಕೊಂಡು ತಮಗೆ ಬೇಕಾದವರಿಗೆ ಮಾರಿಕೊಂಡು ಪರ್ಸಂಟೇಜ್ ಪಡೆಯುವ ಹೀನ ಮಟ್ಟಕ್ಕೆ ಇಳಿದಿದ್ದಾರೆ. ಹಾಗಾಗಿ ಜನ ಸೈಟ್ ಗೆ ಅಪ್ಲೈ ಮಾಡೋದೇ ಶುದ್ಧ ದಂಡ ಎಂದ್ಕೊಂಡು ಬಿಡಿಎ ಕಾಂಪೌಂಡ್ ಗೆ ಬರೋದನ್ನೇ ಬಿಟ್ಟಿದ್ದಾರೆ.ಇದು ಕಮಿಷನರ್ ಗೂ ಗೊತ್ತಿದೆ.ಆದ್ರೆ ಡಾ.ಪ್ರಕಾಶ್ ಅದ್ಯಾವುದಕ್ಕೂ ಕಡಿವಾಣ ಹಾಕೋ ಕೆಲಸ ಮಾತ್ರ ಮಾಡ್ಲೇ ಇಲ್ಲ. ಹಾಗಾಗಿ ಎಷ್ಟೇ ಬಾರಿ ಹರಾಜು ನಡುದ್ರೂ ಜನ ಮಾತ್ರ ಆಸಕ್ತಿಯನ್ನೇ ತೋರಿಲ್ಲ.ಅಂತದ್ದರಲ್ಲಿ ಈಗ ಹರಾಜಾಕ್ತೇವೆ ಬನ್ನಿ ಎಂದ್ರೆ ಬಂದಾರಾ ಎಂದು ಪ್ರಶ್ನಿಸ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.

ಪರಿಸ್ಥಿತಿ ಹೀಗೆಲ್ಲಾ ಇರುವಾಗ 12 ಸಾವಿರ ಕಾರ್ನರ್ ಸೈಟ್ಸ್ ಇವೆ,ಅವನ್ನು ಹರಾಜಾಕಿದ್ರೆ ಆರ್ಥಿಕ ಬವಣೆ ನೀಗ್ಬೋದು ಎಂದೆಲ್ಲಾ ಶುದ್ಧ ಉಢಾಳತನದ ಸಲಹೆ ಕೊಟ್ಟು  ತಾವ್ ದಾರಿ ತಪ್ಪಿದ್ದಲ್ಲದೇ  ರಾಜ್ಯದ ಮುಖ್ಯಮಂತ್ರಿಯನ್ನೂ ದಾರಿ ತಪ್ಪುವಂತೆ ಮಾಡಿರುವ ಕಮಿಷನರ್ ಪ್ರಕಾಶ್ ವಿರುದ್ದವೇ ಸುಳ್ಳು ಮಾಹಿತಿ ನೀಡಿದ್ದಕ್ಕೆ ಕ್ರಮ ಕೈಗೊಳ್ಳಬೇಕಿದೆ.ಹ್ಞಾಂ ಒಂದ್ವೇಳೆ ಸಿಎಂ ಯಡಿಯೂರಪ್ಪ ಬಿಡಿಎ ಮಾತ್ರವಲ್ಲ ರಾಜ್ಯದೆಲ್ಲೆಡೆ ಇರುವ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಗಣನೆಗೆ ತೆಗೆದುಕೊಂಡು ಕಾರ್ನರ್ ಸೈಟ್ ಗಳ ಹರಾಜಿನ ಬಗ್ಗೆ ಮಾತನಾಡಿದ್ದರೆ ಅವರು ಕೊಟ್ಟ ಮಾಹಿತಿ ಸುಳ್ಳಾಗಿರೊಲ್ಲ.ಏಕೆಂದ್ರೆ ಎಲ್ಲಾ ಪ್ರಾಧಿಕಾರಗಳನ್ನು ಲೆಕ್ಕ ಹಾಕಿದ್ರೆ 12 ಸಾವಿರ ನಿವೇಶನಗಳು ಸಿಕ್ರೂ ಸಿಗ್ಬೋದು. ಆದ್ರೆ ಹಾಗಾಗಿರುವ ಚಾನ್ಸಸ್ ಕಡ್ಮೆ.ಏಕೆಂದ್ರೆ ಯಡಿಯೂರಪ್ಪ ಅವ್ರೇ ಒತ್ತಿ..ಒತ್ತಿ ಹೇಳಿದ್ದಾರೆ ಬಿಡಿಎನ 12 ಸಾವಿರ ಕಾರ್ನರ್ ಸೈಟ್ಸ್ ಎಂದು..ಹಾಗಾಗಿ ಯಡಿಯೂರಪ್ಪ ಹೇಳಿದ್ದು ಪರಮ ಸುಳ್ಳು ಎನ್ನೋದು ಕನ್ಫರ್ಮ್ ಆದಂಗಲ್ವೇ..

Spread the love
Leave A Reply

Your email address will not be published.

Flash News