ಲಾಕ್ ಡೌನ್ ಸಂತ್ರಸ್ಥರ ನೆರವಿಗೆ ನಿಂತ ಸರ್ ಎಂವಿ ಲೇ ಔಟ್ ನಿವಾಸಿಗಳು

0

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಶ್ರಮಿಕರು ಹಾಗೂ ಕೂಲಿ ಕಾರ್ಮಿಕರ ಜೀವನ ನಿರ್ವಹಣೆಯೇ ಕಷ್ಟವಾಗಿದೆ.ಆಹಾರಕ್ಕಾಗಿ ಪರಿತಪಿಸುವ ಸ್ಥಿತಿಯಿದೆ.

ಇಂಥಾ ಸಂದರ್ಭದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸವೂ ನಡೆಯುತ್ತಿದೆ.ಇಂಥವ್ರ ಸಾಲಿಗೆ ಸೇರುವಂಥ ಕೆಲಸವನ್ನು ಉಲ್ಲಾಳು ವಾರ್ಡ್ ನ ಸರ್ ಎಂ.ವಿಶ್ವೇಶ್ವರಯ್ಯ ಲೇ ಔಟ್ ನ 5ನೇ ಬಡಾವಣೆ ನಿವಾಸಿಗಳು ಮಾಡಿದ್ದಾರೆ.

 ಬಡಾವಣೆಯ ವ್ಯಾಪ್ತಿಯಲ್ಲಿ ಲಾಕ್ ಡೌನ್ ನಿಂದಾಗಿ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕರು ಹಾಗೂ ಕಾರ್ಮಿಕರಿಗೆ ದವಸ ಧಾನ್ಯ ವಿತರಿಸುವ ಕೆಲಸವನ್ನು ಬಡಾವಣೆಯ ನಿವಾಸಿಗಳು ಮಾಡಿದ್ರು.ತಮ್ಮ ಉಳಿತಾಯದ ಹಣದಲ್ಲೇ ದವಸ ಧಾನ್ಯಗಳನ್ನು ಖರೀದಿಸಿ ವಿತರಿಸಿದ ಕ್ರಮಕ್ಕೆ ಕಟ್ಟಡ ಕಾರ್ಮಿಕರು ಅಭಿನಂದನೆ ಸಲ್ಲಿಸಿದ್ರು.
ಕೊರೋನಾ ಲಾಕ್ ಡೌನ್ ನಿಂದ ಎದುರಾಗಿರುವ ಸಂಕಷ್ಟದ ಸ್ಥಿತಿ ಮಾತ್ರವಲ್ಲ,ಪ್ರಾಕೃತಿಕ ವಿಪತ್ತು ಎದುರಾದಾಗಲೆಲ್ಲಾ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ವಿಶ್ವೇಶ್ವರಯ್ಯ ಲೇ ಔಟ್ 5ನೇ ಬಡಾವಣೆ ನಿವಾಸಿಗಳ ಸಂಘದ ಸದಸ್ಯರು ಮಾಡುತ್ತಲೇ ಬಂದಿದ್ದಾರೆ.ಇವರ ಕೆಲಸ ಇತರರಿಗೂ ಮಾದರಿಯಾಗಬೇಕಿದೆ.

Spread the love
Leave A Reply

Your email address will not be published.

Flash News