“”ನನ್ನನ್ನೇಕೆ ಕೊಂದೆ ಅಮ್ಮಾ…ಕೊಲ್ಲುವಂಥ ತಪ್ಪನ್ನೇನು ಮಾಡಿದ್ದೆ…”””

0

ಬೆಂಗಳೂರು:ಜಗತ್ತಿನಲ್ಲಿ ಕೆಟ್ಟ ಅಪ್ಪ ಇರಬಹುದು..ಆದ್ರೆ ಕೆಟ್ಟ ತಾಯಿ ಇರಲಿಕ್ಕೆ ಸಾಧ್ಯವೇ ಇಲ್ಲ..ಇಷ್ಟು ಗ್ಯಾರಂಟಿಯಾಗಿ,ಭರವಸೆಯಿಂದ ಹೇಳೊಕ್ಕೆ ನಮ್ಮ ಸಂಸ್ಕ್ರತಿ-ಸಂಸ್ಕಾರಗಳು ತಾಯಿ ಸ್ಥಾನಕ್ಕೆ ಕೊಟ್ಟಿರುವ ಗೌರವಾದರಗಳ ಮನ್ನಣೆಯೇ ಸಾಕ್ಷಿ.ಇಂತದ್ದರ ನಡುವೆ ನಡೆಯೋ ಕೆಲವೊಂದು ಕರುಳು ಹಿಂಡುವ-ಹೃದಯಸ್ಥಂಬನಗೊಳಿಸುವಂತ ಕೆಲವು ಘಟನೆಗಳು ಮಾತೃತ್ವಕ್ಕೆ ಕಳಂಕ ಎನಿಸಿಬಿಡ್ತದೆ..ಅಂತದ್ದೇ ಒಂದು ಅಮಾನವೀಯ ಕೃತ್ಯಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ.

ಬೆಂಗಳೂರಿನ ಚರಂಡಿಯೊಂದರಲ್ಲಿ ( ಸ್ಥಳ ಯಾವುದೆಂದು ಗೊತ್ತಾಗಿಲ್ಲ) ಮಗುವೊಂದನ್ನು ತಾಯಿನೋ ಅಥವಾ ಇನ್ನ್ಯಾರೋ ಕಟುಕರು ಬಿಸಾಕಿ ಹೋಗಿದ್ದಾರೆ.ಪುಟ್ಟ ಹೆಜ್ಜೆಗಳನ್ನಿಡೊಕ್ಕೇನೇ ತಡಕಾಡುವ  ಹೆಣ್ಣು ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ.ಶವ ನೀರಿನಲ್ಲಿ ತೇಲುತ್ತಿದೆ.ಅದನ್ನು ಕಂಡು ಜನ ಕಣ್ಣೀರಾಗಿದ್ದಾರೆ.ಕ್ರೌರ್ಯ ಮೆರೆದಿರುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಕ್ಕಳು ಬೇಕೆಂದು ಹಪಾಹಪಿಸುವವರಿಗೆ ಈ ಮಗುವನ್ನು ಕೊಟ್ಟಿದ್ದರೆ ಬಂಗಾರದಂತೆ ಸಾಕುತ್ತಿದ್ದರಲ್ಲ ಎಂದು ಮಾತ್ನಾಡಿಕೊಳ್ಳುತ್ತಿದ್ದಾರೆ.ಅಲ್ರಿ….ಮಕ್ಕಳು ಬೇಕು ಅಂತಾರೆ ಮಕ್ಕಳು ಇಲ್ಲದವರು…ಮಕ್ಕಳು ಬೇಕು ಅಂತ ಅದಷ್ಟೋ ಜನರು ವಿವಿಧ ದೇವರ ದರ್ಶನ ದೇಗುಲಕ್ಕೆ ತೆರಳಿ ವಿವಿಧ ಬಗೆಯ ಪೂಜೆ ಪುನಸ್ಕಾರಗಳನ್ನ, ಹರಕೆಗಳನ್ನ ಕಟ್ಟಿಕೊಳ್ಳುತ್ತಾರೆ. ಮತ್ತಷ್ಟು ಮಂದಿ  ಸಂತಾನ ಪ್ರಾಪ್ತಿಗಾಗಿ  ಕಂಡ ಕಂಡ ವೈದ್ಯರ ಬಳಿ ಸಂತಾನ ಪ್ರಾಪ್ತಿಗಾಗಿ ವಿವಿಧ  ಬಗೆಯ ಚಿಕಿತ್ಸೆಗೆ ಪಡೆಯುತ್ತಾರೆ.

ಆದರೆ ಈ ಪ್ರಕರಣದಲ್ಲಿ ಗರ್ಭದಲ್ಲಿ ಒಂಬತ್ತು ತಿಂಗಳ  ಕಾಲ ಇರಿಸಿಕೊಂಡಿದ್ದ ಮಗುವನ್ನೇ  ನಿರ್ದಾಕ್ಷಿಣ್ಯವಾಗಿ ನೀರು ಪಾಲು ಮಾಡಿದ್ದಾಳೆ. ಅದು ಹೆಣ್ಣು ಮಗುವನ್ನ….ಅದು ಕೂಡ ಭೂಮಿಗೆ ಬಂದು ಕೆಲವೇ ದಿನಗಳಲ್ಲೇ..ಈ  ತಾಯಿಯ ಅಮಾನವೀಯ ಕೃತ್ಯದಿಂದ ಪ್ರಪಂಚವನ್ನು ನೋಡುವ ಮೊದಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದೆ.ಯಾವ ಸಂಕಷ್ಟಕ್ಕೆ ಸಿಲುಕಿ ಆ ತಾಯಿ ತಾನು ಜನ್ಮ ಕೊಟ್ಟ ಮಗುವನ್ನೆ ಬಿಸಾಡುವ ಕಾರ್ಯಕ್ಕೆ ಮುಂದಾದ್ಲೋ ಗೊತ್ತಿಲ್ಲ.. ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೊ ಮಾತಿದೆ. ಆದ್ರೆ ಈ ಮಗುವಿನ ತಾಯಿ, ಜಗತ್ತಿನಲ್ಲಿ  ಕೆಟ್ಟ ತಾಯಿಯೂ ಇರ್ತಾರೆ ಎಂಬುದನ್ನ ಈ ಪಾತಕದ ಮೂಲಕ ಮಾಡಿತೋರಿಸಿದ್ದಾಳೆ.

ನೀರಿನಲ್ಲಿ ತೇಲುತ್ತಿರುವ ಮಗುವಿನ ಶವವನ್ನ ನೋಡಿದ್ರೆ ಎಂಥವರಿಗೂ ನೋವು ತರಿಸುತ್ತದೆ. ತನಗೆ ಜನ್ಮ ಕೊಟ್ಟ ತಾಯಿಗೆ ನನ್ನ ಅಂತ್ಯಕ್ಕೂ ಕಾರಣವಾಗ್ತಾಳೆ ಅನ್ನೋದು ಪಾಪಾ ಆ ಮಗುವಿಗೆ ತಿಳಿದಿರಲಿಲ್ಲವೆನೋ…. ಜಗತ್ತನ್ನ ಸಂಪೂರ್ಣವಾಗಿ ನೋಡುವ ಮೊದಲೇ ತಾಯಿಯೇ ನನ್ನ ಮೃತ್ಯುವಿಗೆ ಕಾರಣ ಆಗ್ತಾಳೆ ಅನ್ನೋದು ಕೂಡ ಆ ಕಂದನಿಗೆ ಗೊತ್ತಿರಲಿಲ್ಲವೆನೋ….ಒಟ್ಟಾರೆ ಆ ಮಗುವನ್ನ ನೀರಿನಲ್ಲಿ ಬಿಸಾಡುವ ಮುನ್ನ ಅನಾಥಾಶ್ರಮಕ್ಕೋ ಅಥವಾ ಎನ್ ಜಿಓ ಗಳಿಗೆ ಕೊಟ್ಟು ಬಿಟ್ಟಿದ್ರೆ ಆ ಪುಟ್ಟ ಕಂದ ಎಲ್ಲೋ ಒಂದು ಕಡೆ ಬದುಕಿ ಜೀವನ ಸಾಗಿಸುತ್ತಿತ್ತು.  ಯಾರದು ಈ ಮಗು ಯಾವ ಕಾರಣಕ್ಕೆ ನೀರಿಗೆ ಎಸೆಯಲಾಯ್ತು ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

Spread the love
Leave A Reply

Your email address will not be published.

Flash News