ಬಿಎಂಟಿಸಿ ನೌಕರರಿಗೆ ಮೇಡಮ್”ಶಿಖಾ” ಹಾರಿಸಿದ್ರಾ ಕಲರ್ ಕಲರ್ “ಕಾಗೆ”..!! 3397 ನೌಕರರಿಗೆ ಘೋಷಿಸಿದ್ದ 95 ಲಕ್ಷ  ಪ್ರೋತ್ಸಾಹಧನದ ಕಥೆ ಏನಾಯ್ತು ಮೇಡಮ್..??

0

ಬೆಂಗಳೂರು:ಮೇಡಮ್ ಶಿಖಾ ಮಾಡಿದ್ದು ಸರಿನಾ..ತಪ್ಪಾ..ಈ ಸ್ಟೋರಿ ಓದಿದ್ ಮೇಲೆ ಅವ್ರೇ ಡಿಸೈಡ್ ಮಾಡ್ಬೇಕು.. ನೌಕರರು ಕೇಳ್ದೇ ಇದ್ರೂ ಅವರಲ್ಲಿ ಆಸೆ ಹುಟ್ಟಿಸೊಕ್ಕೆ ಕೊಟ್ಟ ಭರವಸೆ ಈಡೇರಿಸದೆ ಇರೋದಕ್ಕೆ ಕಲರ್ ಕಲರ್ ಕಾಗೆ ಹಾರಿಸಿದ್ರು ಎನ್ನಬೇಕೋ.. ಇಲ್ವೋ ಗೊತ್ತಾಗ್ತಿಲ್ಲ.ಆದ್ರೆ ನೌಕರರು ಮಾತ್ರ ಮೇಡಮ್ ಮಾತ್ ನಂಬ್ಕೊಂಡು ಮೋಸ ಹೋದ್ವಿ ಎಂದು ಮಾತ್ನಾಡಿಕೊಳ್ತಿರೋದ್ ಮಾತ್ರ ನಿಜ.

ಆಯಾ ತಿಂಗಳ ಸಂಬಳ ಬಂದ್ರೆ ಸಾಕಪ್ಪ ಎಂದು  ತಮ್ ಪಾಡಿಗೆ ಕೆಲಸ ಮಾಡ್ಕೊಂಡು ಇದ್ದೋರು ನಮ್ ಬಿಎಂಟಿಸಿ ನೌಕರ ರು.ಅಂಥಾ  ನೌಕರರ ಮನಸಿನಲ್ಲಿ ಬೋನಸ್ ಆಸೆ ತುಂಬಿದ್ರು ವ್ಯವಸ್ಥಾಪಕ ನಿರ್ದೇಶಕಿ ಶಿಖಾ..ಅದರ ಬಗ್ಗೆ ಒಂದೆರೆಡು ಮರು  ಸುತ್ತೋಲೆ ಹೊರಡಿಸಿದ್ದವರು ಕೂಡ ಅವ್ರೇ.. ಆದ್ರೆ ಈವರೆಗೂ ನಯಾಪೈಸೆ ಪ್ರೋತ್ಸಾಹ ಧನ ದೊರೆಯದಿರುವುದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ.ಅಂದ್ಹಾಗೆ ಬಿಎಂಟಿಸಿಯ 3397 ನೌಕರರಿಗೆ 20 ದಿನಗಳ ಪ್ರೋತ್ಸಾಹಧನವಾಗಿ ನೀಡಬೇಕಿದ್ದ ಹಣ ಎಷ್ಟು ಗೊತ್ತಾ. 95 ಲಕ್ಷದ 92 ಸಾವಿರ ಅಂದ್ರೆ ಹತ್ತಿರತ್ತಿರ 1 ಕೋಟಿ.

ಎಲ್ಲರಿಗೂ ಗೊತ್ತಿರುವಂತೆ ಕೊರೊನಾ ಸಂದರ್ಭದಲ್ಲಿ ಜೀವಗಳನ್ನು ಪಣಕ್ಕಿಟ್ಟು ಯೋಧರಂತೆ ಕೆಲಸ ಮಾಡಿದ್ರು ಬಿಎಂಟಿಸಿ ನೌಕರರು.ತಮ್ಮ ಪರಿಶ್ರಮಕ್ಕೆ ಸರಿಯಾಗಿ ಸಂಬಳ ಕೊಡ್ರಿ ಸಾಕು ಎಂದು ವಿನಂತಿಸಿದ್ದನ್ನು ಬಿಟ್ರೆ ಬೇರ್ಯಾವುದೇ  ಬೇಡಿಕೆ ಗಳನ್ನೇನೂ ನೌಕರರು ಆಡಳಿತ ಮಂಡಳಿ ಮುಂದಿಟ್ಟರಲಿಲ್ಲ..ಹೀಗಿರುವಾಗ ಅತಿಯಾದ ಉತ್ಸಾಹದಿಂದ ಎಂ.ಡಿ ಶಿಖಾ, 14-07-2020 ರಂದು ಹೊಸ ಘೋಷಣೆಯೊಂದನ್ನು  ಅವರ ಪರಿಶ್ರಮಕ್ಕೆ ತಕ್ಕನಾದ ಬೆಲೆ ನೀಡಲು ವಿಶೇಷ ಭತ್ಯೆ ನೀಡುವುದಾಗಿ  ಬಿಎಂಟಿಸಿ ಎಂಡಿ ಶಿಖಾ ಅವರೇ ಸುತ್ತೋಲೆ ಹೊರಡಿಸಿದ್ರು.

ಮಹಾಮಾರಿ ಕೊರೊನಾ ಅತ್ಯಂತ ಪೀಕ್ ನಲ್ಲಿದ್ದ ಮಾರ್ಚ್ ತಿಂಗಳಲ್ಲಿ ಅಂದ್ರೆ 26-03-2020 ರಿಂದ 20-04-2020ರ ಅವಧಿವರೆಗೆ ಕೆಲಸ ಮಾಡಿದ 3397 ನೌಕರರಿಗೆ 250 ರೂ ನಂತೆ 38,370 ಮಾನವ ದಿನಗಳನ್ನು  ಕೌಂಟ್ ಮಾಡಿ 95 ಲಕ್ಷದ 92 ಸಾವಿರದ 500 ರೂಗಳನ್ನು ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿಬಿಟ್ರು ಶಿಖಾ ಮೇಡಮ್.ಹಾಗೆ ನೋಡಿದ್ರೆ ಅವರೇ ಹೇಳಿದಂತೆ  ಹತ್ತಿರತ್ತಿರ ಒಂದು ತಿಂಗಳ ಅವಧಿಯಲ್ಲಿ ಕೆಲಸ ಮಾಡಿದ್ರೂ ಪರಿಗಣಿಸಲ್ಪಟ್ಟಿದ್ದು ಕೇವಲ 20 ದಿನ.

ಪ್ರೋತ್ಸಾಹಧನ ನೀಡುವುದಾಗಿ 14-07-2020 ರಂದು ಮೇಡಮ್ ಶಿಖಾ ಅವರೇ ಹೊರಡಿಸಿದ್ದ ಸುತ್ತೋಲೆ..
ಪ್ರೋತ್ಸಾಹಧನ ನೀಡುವುದಾಗಿ 14-07-2020 ರಂದು ಮೇಡಮ್ ಶಿಖಾ ಅವರೇ ಹೊರಡಿಸಿದ್ದ ಸುತ್ತೋಲೆ..

ಸರ್ಕಾರದ ಯೋಗ್ಯತೆ ಏನನ್ನೋದು ಬಿಎಂಟಿಸಿ ನೌಕರರಿಗೆ ಸಂಬಳ ಕೊಡುವ ವಿಷಯದಲ್ಲೇ ಪ್ರೂವ್ ಆಗಿದೆ.ಸಾರಿಗೆ ನಿಗಮಗಳು ಅದರಲ್ಲೂ ಬಿಎಂಟಿಸಿ ಅಟ್ಟರ್ ಲಾಸ್ ನಲ್ಲಿರೋದ್ರಿಂದ ಸಂಬಳ ಕೊಡೊಕ್ಕಾಗೊಲ್ಲ ಎಂದು ಹೋದಲ್ಲಿ ಬಂದಲ್ಲೆಲ್ಲಾ ಸೂಕ್ಷ್ಮವಾಗಿ ಹೇಳಲಾರಂಭಿಸಿದ್ದರು ಸಚಿವ ಲಕ್ಷ್ಮಣ ಸವದಿ.ಸಂಬಳವನ್ನೇ ಕೊಡ್ಲಿಕ್ಕಾಗದ ಸ್ಥಿತಿಯಲ್ಲಿ  ಇನ್ನು,ಮೇಡಂ ಘೋಷಿಸಿದ್ದ ಪ್ರೋತ್ಸಾಹ ಧನ ಸಿಗುತ್ತಾ ಎಂದು ನೌಕರರು ಅಂದೇ ಮಾತ್ನಾಡಿಕೊಂಡು ನಕ್ಕಿದ್ರು…ಲೇವಡಿ ಮಾಡಿದ್ರು..

ನೌಕರರು ಅಂದುಕೊಂಡಂತೆಯೇ ಆಗೋಗಿದೆ ನೋಡಿ,ಮೇಡಮ್ ಹೇಳಿದ ಲೆಕ್ಕದಂತೆಯೇ,ಮಾಡಿದ ಘೋಷಣೆಯನ್ನು ಕಾರ್ಯರೂಪಕ್ಕೆ ತರೊಕ್ಕೆ ಆಗಿಲ್ಲ..ಸಂಬಳ ಕೊಡೊಕ್ಕೆ ಹೆಣಗಾಡುತ್ತಿರುವಾಗ ಇಂತದ್ದೊಂದು ಘೋಷಣೆ ಮಾಡುವ ಅಗತ್ಯವಿತ್ತಾ ಎಂದು ಅವರೇ ಪ್ರಶ್ನಿಸಿಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿದೆ.

95 ಲಕ್ಷದಷ್ಟು ಪ್ರೋತ್ಸಾಹ ಧನ ಸಿಕ್ಕರೆ ತಮ್ಮ ಎಷ್ಟೋ ಸಣ್ಣಪುಟ್ಟ ಕಷ್ಟಗಳು ತೀರುತ್ತವೆ.ಆರ್ಥಿಕ ಮುಗ್ಗಟ್ಟಿನಲ್ಲಿರುವ ನಮ್ಮ ಪರಿಸ್ಥಿತಿಯಲ್ಲಿ ಅದೆಷ್ಟೋ ಸುಧಾರಣೆಯಾಗುತ್ತೆ ಎನ್ನೋದಷ್ಟೇ ನೌಕರರ ಆಸೆ.ಇದಕ್ಕಾಗಿ ನೌಕರರು ದಿನನಿತ್ಯ ಸಂಬಂಧಪಟ್ಟವರನ್ನು ವಿಚಾರಿಸುತ್ತಲೇ ಇದ್ದಾರೆ.ಆದ್ರೆ ಫೈನಾನ್ಸ್ ಸೆಕ್ಷನ್ ನಿಂದ ಫೈಲ್ ಮೂವ್ ಆಗಿರುವ ಬಗ್ಗೆ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ.ಮೇಡಮ್ ಅವರನ್ನು ಕೇಳಲು ನೌಕರರು ಹೋದ್ರೆ ಕೊರೊನಾ ಕಾರಣವೊಡ್ಡಿ ಚೇಂಬರ್ ಒಳಗೆ ಬಿಡುತ್ತಿಲ್ಲ.ನೌಕರರು ಏನ್ ಮಾಡ್ಬೇಕೆಂದು ಗೊತ್ತಾಗದೆ ಒದ್ದಾಡುತ್ತಿದ್ದಾರೆ.ಮೇಡಮ್ ಕೂಡ ಘೋಷಣೆ ಮಾಡಿದ್ದನ್ನು ಬಿಟ್ಟರೆ ಮಾತನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.

ಇದೆಲ್ಲವನ್ನು ಮನಗಂಡಿಯೇ ಇದೀಗ ನೌಕರರು, ಪ್ರೋತ್ಸಾಹಧನ ಕೊಡ್ತೀರೋ..ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಿ,.ಕೊಡುತ್ತೇವೆ ಎಂದ್ರೆ ಯಾವಾಗ ಎನ್ನುವುದನ್ನು ಸ್ಪಷ್ಟಪಡಿಸಿ..ಅಲ್ಲಿವರೆಗೆ ನಿಮ್ಮನ್ನು ಕೇಳೋಕ್ಕೇನೆ ಬರೊಲ್ಲ. ಅಥವಾ ಕೊಡಲ್ಲ ಅಂದ್ರೆ  ನಮ್ಮ ಯೋಗ್ಯತೆನೇ ಇಷ್ಟೆಂದುಕೊಂಡು ಸುಮ್ಮನಾಗ್ತೇವೆ ಅಷ್ಟೇ ಎನ್ನುವ ಮಟ್ಟಕ್ಕೆ ನೌಕರರು ಬಂದ್ ನಿಂತಿದ್ದಾರೆ.

ಅದ್ಹೇನೇ ಆಗಲಿ,ಪ್ರೋತ್ಸಾಹಧನದ ನಿರೀಕ್ಷೆಯಲ್ಲಿ ಚಾತಕ ಪಕ್ಷಿಗಳಂತಾಗಿರುವ ಬಿಎಂಟಿಸಿ  ನೌಕರರಿಗೆ ಶಿಖಾ ಮೇಡಮ್  ಸುಳ್ಳೆನ್ನುವ ಕಲರ್..ಕಲರ್..ಕಾಗೆ ಹಾರಿಸಿದ್ರಾ..ಅದನ್ನು ಅವರೇ ಹೇಳ್ಬೇಕು.,.ಈಡೇರಿಸೋ ಸಾಮರ್ಥ್ಯ ಇದ್ದಲ್ಲಿ ಮಾತ್ರ ಮಾತ್ರ ಕೊಡ್ಬೇಕು..ಇಲ್ಲದಿದ್ದರೆ ಸುಮ್ನಿರಬೇಕಿತ್ತು ಎಂದು ಬಿಎಂಟಿಸಿ ನೌಕರರು ಎಂಡಿ ಶಿಖಾ ಅವರನ್ನು ಬೈಯ್ಕೊಂಡು ಕೆಲಸ ಮಾಡುವಂತಾಗಿದೆ.ಇದೆಲ್ಲಾ ಬೇಕಿತ್ತಾ ಶಿಖಾ  ಅವರಿಗೆ.

Spread the love
Leave A Reply

Your email address will not be published.

Flash News