BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ಬಹುಕೋಟಿ ಬಿಲ್ ಹಗರಣದ ಭ್ರಷ್ಟರ “ರೀ ಎಂಟ್ರಿ”ಗೆ ಅವಕಾಶ ಕೊಡ್ತಿದರಾ ಬಿಬಿಎಂಪಿ ಕಮಿಷನರ್..? ಮಂಜುನಾಥ್ ಪ್ರಸಾದ್ ವಿರುದ್ಧ ನಗರಾಭಿವೃದ್ದಿ ಇಲಾಖೆಗೆ  ದೂರು.!?

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಮಿಟಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತಾರದೆ ಅವರ ಸಲಹೆಗಳಿಗೆ ವ್ಯತಿರಿಕ್ತವಾಗಿ,  ಭ್ರಷ್ಟ ಎಂಜಿನಿಯರರ್ಸ್ ಗಳನ್ನು ಬಿಬಿಎಂಪಿಯಲ್ಲಿ ಮರುನಿಯೋಜನೆ ಮಾಡಿಕೊಳ್ಳುತ್ತಿರುವ ಬಗ್ಗೆ  ಬಿಬಿಎಂಪಿ ಕಮಿಷನರ್  ಮಂಜುನಾಥ ಪ್ರಸಾದ್ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳ  ವಿರುದ್ಧವೇ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡೊಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮುಂದಾಗಿದ್ದಾರೆ.

ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಎನ್ನುವ ಸಂಸ್ಥೆ ಇಂದು ನಗರಾಭಿವೃದ್ಧಿ ಇಲಾಖೆಗೆ ಈ ಬಗ್ಗೆ ದೂರು ಸಲ್ಲಿಕೆ ಮಾಡುತ್ತಿದ್ದು,ಅಕ್ರಮ ಎಸಗಿದ ಅಧಿಕಾರಿಗಳನ್ನು ಪೋಷಿಸುವುದು-ಪ್ರೋತ್ಸಾಹಿಸುವುದೇ ಆಗಿದ್ದರೆ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಕಮಿಟಿಯನ್ನೇಕೆ ಮಾಡಬೇಕಿತ್ತು.ಅವರಿಂದ ಕೂಲಂಕುಷವಾದ ತನಿಖೆಯನ್ನೇಕೆ ಮಾಡಿಸಬೇಕಿತ್ತು.600 ಪುಟಗಳ ವರದಿಯನ್ನೇಕೆ ಸಿದ್ಧಪಡಿಸಬೇಕಿತ್ತು.ವರದಿಯ ಶಿಫಾರಸ್ಸುಗಳನ್ನು ಪಾಲಿಸಲಿಕ್ಕೆ ಆಗೊಲ್ಲ ಎಂದ್ರೆ  1,500 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿಗಳು ಸಿದ್ಧಪಡಿಸಿ ಸಲ್ಲಿಸಿ ನೀಡಿದ ವರದಿಗೆ ಬಂದ ಬೆಲೆಯಾದ್ರೂ ಏನು? ಇದು ಕೇವಲ ಅಕ್ರಮ ಮಾತ್ರ ಅಲ್ಲ,ನಿವೃತ್ತ ನ್ಯಾಯಮೂರ್ತಿಗಳಿಗೆ ಮಾಡಿದ ಅವಮಾನವಲ್ಲವೇ? ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ಕಮಿಷನರ್ ಮಂಜುನಾಥ್ ಪ್ರಸಾದ್ ಅವರಿಗೆ ಈ ಎಲ್ಲಾ ವಿಷಯಗಳೆಲ್ಲಾ ಗೊತ್ತಿಲ್ಲವೇ? ಗೊತ್ತಿದ್ದರೂ ಏಕೆ ಇಂಥದ್ದೊಂದು ಪ್ರಮಾದ ಎಸಗುತ್ತಿದ್ದಾರೆ ಎಂದು ದೂರಿನಲ್ಲಿ ಪ್ರಶ್ನಿಸಲಾಗುತ್ತಿದೆ.

ನಾಗಮೋಹನ್ ದಾಸ್ ಸಮಿತಿ ವರದಿಯಲ್ಲಿ ಬೇರೆ ಇಲಾಖೆಗಳಿಂದ ಡೆಪ್ಯುಟೇಷನ್ ಮೇಲೆ ಬಂದ  ಎಂಜಿನಿಯರಿಂಗ್ ವಿಭಾಗದ ಸಾಕಷ್ಟು ಅಭಿಯಂತರುಗಳ ವಿರುದ್ಧ ಕ್ರಮಕ್ಕೆ ಸೂಚಿಸಿತ್ತು.ಅಷ್ಟೇ ಅಲ್ಲ,ಅವರನ್ನು ಮಾತೃ ಇಲಾಖೆಗೆ ಕಳುಹಿಸ್ಬೇಕು,ಬಿಬಿಎಂಪಿಗೆ ಮರುನಿಯೋಜನೆ ಮಾಡಿಕೊಳ್ಳಲೇಬಾರದೆಂದು ಕೂಡ ತಿಳಿಸಿತ್ತು.ಆದ್ರೆ ಆಶ್ಚರ್ಯದ ವಿಷಯ ಏನೆಂದ್ರೆ ಒಂದಷ್ಟು ಭ್ರಷ್ಟ ಅಧಿಕಾರಿಗಳು ಮಾತೃ ಇಲಾಖೆಗೆ ಸೇರ್ಪಡೆಗೊಂಡ್ರೆ ಇನ್ನುಳಿದವರು ಇವತ್ತಿಗೂ ಕೆಲಸಕ್ಕೆ ಹೋಗದೆ ಬಿಬಿಎಂಪಿಗೇನೆ ಮತ್ತೆ ವಾಪಸ್ ಬರೊಕ್ಕೆ ಪ್ರಯತ್ನಿಸ್ತಲೇ ಇದ್ದಾರೆ.ವಿಚಿತ್ರ ಹಾಗೂ ವಿಪರ್ಯಾಸ ಎಂದ್ರೆ ನಗರಾಭಿವೃದ್ಧಿ ಇಲಾಖೆಯೇ ಇವರಿಗೆ ಮರುನಿಯೋಜನೆಯ ಆದೇಶ ಪ್ರತಿಗಳನ್ನು ನೀಡಿ ಕಳುಹಿಸುತ್ತಿದೆ.ಹಿಂದಿದ್ದ ಕಮಿಷನರ್ ಅನಿಲ್ ಕುಮಾರ್ ಆ ಆದೇಶವನ್ನು ಮೂಲೆಗೆ ಬಿಸಾಕಿದ್ದರು.ಈಗಿನ  ಕಮಿಷನರ್ ಮಂಜುನಾಥ್ ಪ್ರಸಾದ್ ಸರ್ಕಾರವೇ ಆದೇಶ ಮಾಡಿ ಕಳುಹಿಸಿದ ಮೇಲೆ ನಾವೇನ್ ಮಾಡ್ಲಿಕ್ಕಾಗುತ್ತೆ..ಅದೇ ಸುಪ್ರಿಂ ಅಲ್ವಾ ಎಂದ್ಗೇಳಿ ಅವರಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳೊಕ್ಕೆ ಅವಕಾಶ ಕೊಡ್ತಿದ್ದಾರೆನ್ನೋದು ದೂರುದಾರ ರೊಲ್ಯಾಂಡ್ ಸೋನ್ಸ್ ಆರೋಪ. 

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಪ್ರಕಾರ ಅಕ್ರಮ ಎಸಗಿರುವ ಅಭಿಯಂತರುಗಳ ವಿರುದ್ಧ ಕ್ರಮ ಜರುಗಿಸುವುದನ್ನು ಬಿಟ್ಟು ಮಂಜುನಾಥ್ ಪ್ರಸಾದ್ ಮರುನಿಯೋಜನೆಗೆ ಅವಕಾಶ ಮಾಡಿಕೊಡುತ್ತಿರುವುದೇ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.ಅವರಿಗೆ ಸರ್ಕಾರದ ಆದೇಶ ಪರಿಪಾಲನೆ ಎಷ್ಟು ಮಹತ್ವವೋ ಹಾಗೇ ನಾಗಮೋಹನ್ ದಾಸ್ ಕಮಿಟಿ ವರದಿಯ ಶಿಫಾರಸ್ಸು ಕೂಡ ಅಷ್ಟೇ ಮುಖ್ಯವಾಗಬೇಕಲ್ಲವೇ..ಕೇವಲ ಸರ್ಕಾರದ ಆದೇಶ ಪರಿಪಾಲಿಸುತ್ತಾ ಕೂರುತ್ತೇನೆಂದ್ರೆ ನಾಗಮೋಹನ್ ದಾಸ್ ಕಮಿಟಿಯನ್ನು ಏಕೆ ರಚನೆ ಮಾಡ್ಬೇಕಿತ್ತು..ಹಾಗಾದ್ರೆ ಕಮಿಟಿ ಶಿಫಾರಸ್ಸುಗಳಿಗೆ ಬಂದ ಬೆಲೆಯಾದ್ರು ಏನು?ಇದರ ಬಗ್ಗೆಯೂ ಕೂಡ ಮಂಜುನಾಥ್ ಪ್ರಸಾದ್ ಆತ್ಮಾವಲೋಕನ ಮಾಡಿಕೊಳ್ಳಬೇಕಲ್ವೇ ಎಂದು ದೂರುದಾರರು ಪ್ರಶ್ನಿಸುತ್ತಾರೆ.  

ಕೆಲವು ಮೂಲಗಳ ಪ್ರಕಾರ ಡೆಪ್ಯುಟೇಷನ್ ಮೇಲೆ ಮತ್ತೆ ಬಿಬಿಎಂಪಿಗೆ ಆರ್ಡರ್ ಹಾಕಿಸಿಕೊಂಡ್ ಬಂದಿರುವ ಬರೊಕ್ಕೆ ಪ್ರಯತ್ನಿಸುತ್ತಿರುವ ಇನ್ನಷ್ಟು ಭ್ರಷ್ಟರು ನಾಗಮೋಹನ್ ದಾಸ್ ಕಮಿಟಿಯಲ್ಲಿ ತಮ್ಮ ಬಗ್ಗೆ ಇರುವ ಉಲ್ಲೇಖಗಳನ್ನೇ ಮರೆ ಮಾಚುತ್ತಿದ್ದಾರೆ.ಯುಡಿಯಲ್ಲಿರುವ ಅಧಿಕಾರಿಗಳು ಕೂಡ ಇದ್ಯಾವುದನ್ನು ಪರಿಶೀಲಿಸುತ್ತಿಲ್ಲ.ಅಲ್ಲಿ ಏನೇನ್ ನಡೆಯುತ್ತಿದೆಯೋ ಗೊತ್ತಿಲ್ಲ,ಹೋದವರಿಗೆಲ್ಲಾ ಡೆಪ್ಯುಟೇಷನ್ ಆರ್ಡರ್ ನೀಡಲಾಗ್ತಿದೆಯಂತೆ.ಅಧಿಕಾರಿಗಳ ಪೂರ್ವಾಪರವನ್ನು ಅವಲೋಕಿಸದೆ ಆರ್ಡರ್ ನೀಡುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಕೂಡ ದೂರಿನಲ್ಲಿ ಮನವಿ ಮಾಡಲಾಗಿದೆ.

ಈಗಾಗಲೇ ಮರುನಿಯೋಜನೆಗೆ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಆರ್ಡರ್ ಮಾಡಿಸಿಕೊಂಡು ಬಂದಿರುವ  ಕೇಶವಮೂರ್ತಿ AEE,ಕದ್ರಪತಿ, AEE,ಹರೀಶ್ ಕುಮಾರ್ AE,ಮೋಹನ್ AEE, ರೇವಣ್ಣ AEE,ಕುಮಾರ್ AEE ರವರಿಗೆ ಹುದ್ದೆ ನೀಡೊಕ್ಕೆ ಕಮಿಷನರ್ ಮಂಜುನಾಥ ಪ್ರಸಾದ್ ಫೈಲ್ ಕೂಡ ಮೂವ್ ಮಾಡಿದ್ದು ಅದು ಅಂತಿಮ ಸಹಿಗಾಗಿ ಉಪಆಯುಕ್ತ ಲಿಂಗಮೂರ್ತಿ ಟೇಬಲ್ ಗೆ ಬಂದಿದೆ.ಆದ್ರೆ ಫೈನಲೈಸ್ ಮಾಡಿ ಮತ್ತೆ ಕಮಿಷನರ್ ಗೆ ಕಳುಹಿಸಿ ಕೊಡ್ಲಿಕ್ಕೆ ಲಿಂಗಮೂರ್ತಿ ಹಿಂದೆಮುಂದೆ ನೋಡುತ್ತಿದ್ದಾರೆ.ನಾಗಮೋಹನ್ ದಾಸ್ ಕಮಿಟಿ ರಿಪೋರ್ಟನ್ನೇ ಬದಿಗಿಟ್ಟು ಭ್ರಷ್ಟ ಅಧಿಕಾರಿಗಳಿಗೆ ಬಿಬಿಎಂಪಿಯೊಳಗೆ ಅವಕಾಶ ಕೊಡುವುದರಿಂದ ತಮಗೆಲ್ಲಿಯಾದ್ರೂ ಸಮಸ್ಯೆಯಾಗ್ತದೆ ಎನ್ನುವ ಅಳುಕು ಅವರನ್ನು ಕಾಡುತ್ತಿದೆಯಂತೆ.ಈ ಭಯವಿದ್ದ ಹೊರತಾಗ್ಯೂ ಅವರೇನಾದ್ರೂ ಫೈಲ್ ಮೂವ್ ಮಾಡಿದ್ರೆ ಅವರಿಗೂ ಸಂಕಷ್ಟ ತಪ್ಪಿದ್ದಲ್ಲ ಎನ್ನೋದು ಕೂಡ ಅಷ್ಟೇ ಸತ್ಯ.

ಭ್ರಷ್ಟರನ್ನು ಶಿಕ್ಷಿಸಿ ಮತ್ತೆ ಬಿಬಿಎಂಪಿ ಕಡೆ ಮುಖ ಅಲ್ಲ,ತಲೆ ಹಾಕಿಯೂ ಮಲಗದಂತೆ ಮಾಡಬೇಕಿರುವ ಬಿಬಿಎಂಪಿ ಆಡಳಿತ ವ್ಯವಸ್ಥೆ ಭ್ರಷ್ಟರನ್ನು ರಕ್ಷಿಸುವ,ಅವರ ಬೆನ್ನಿಗೆ ನಿಲ್ಲುವ ಕೆಲಸ ಮಾಡ್ತಿರುವುದು ಸರಿಯಲ್ಲ.ಇದನ್ನೇ ಪ್ರಮುಖವಾಗಿಟ್ಟುಕೊಂಡು ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಕಮಿಷನರ್ ಮಂಜುನಾಥ ಪ್ರಸಾದ್,ಆಡಳಿತ ವಿಭಾಗದ ಅಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡೊಕ್ಕೆ ಮುಂದಾಗಿದೆ.ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರಿಗೂ ದೂರು ನೀಡೊಕ್ಕೆ ನಿರ್ಧರಿಸಿದೆ.ಬಿಬಿಎಂಪಿ ಆಡಳಿತದಲ್ಲಿ ಬದಲಾವಣೆ ತರೊಕ್ಕೆ ನಿರ್ಧರಿಸಿದಂತಿರುವ ಗೌರವ್ ಗುಪ್ತಾ ಅವರಾದ್ರೂ ಇಂತದ್ದಕ್ಕೆ ಅವಕಾಶ ಕೊಡಬಾರದೆನ್ನುವುದು ದೂರುದಾರರ ಕಳಕಳಿ ಹಾಗೂ ಮನವಿ ಕೂಡ.   

Spread the love

Related Articles

Leave a Reply

Your email address will not be published.

Back to top button
Flash News