ಸೋಮವಾರ ಕರ್ನಾಟಕ ಬಂದ್‌ಗೆ ರೈತ ಸಂಘಟನೆಗಳ ಕರೆ ..! ರಾಜ್ಯದೆಲ್ಲೆಡೆ ಕಾವೇರಲಿದೆ ಅನ್ನದಾತರ ಪ್ರತಿಭಟನೆ..! ಆಟೋ, ಟ್ಯಾಕ್ಸಿ ಮಾಲೀಕರಿಂದ ಬಂದ್ ಗೆ ಬೆಂಬಲ: ಹೋಟೆಲ್ ಉದ್ಯಮಿಗಳಿಂದ ಪರೋಕ್ಷ ಬೆಂಬಲ..

0

ಬೆಂಗಳೂರು: ಕೇಂದ್ರ ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ವಿರುದ್ಧ ರೈತ ಸಂಘಟನೆಗಳು ಸೆಪ್ಟೆಂಬರ್ 25 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ,ವಿದ್ಯುತ್ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದ್ಯಂತ ರೈತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಇದೊಂದು ಕಾರ್ಪೊರೇಟ್ ಸರ್ಕಾರ ಎಂದು ಟೀಕಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಎಪಿಎಂಸಿ ಮಸೂದೆ ರೈತರ ಪಾಲಿಗೆ ಮರಣ ಶಾಸನ ಅಂತ ಕಿಡಿಕಾರಿದ್ದಾರೆ.

ನಮ್ಮ ಒತ್ತಾಯಕ್ಕೆ ಮಣಿದು ಸರ್ಕಾರ ಮಸೂದೆಯನ್ನ ತಡೆಹಿಡಿಯಬಹುದಿತ್ತು ಅನ್ನೋ ವಿಶ್ವಾಸ ರೈತರಲ್ಲಿ ಇತ್ತು, ನಾವು ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮನ್ನು ಮಾತನಾಡಿಸಲು ಸರ್ಕಾರ ಮುಂದಾಗಿಲ್ಲ, ಈ ಸರ್ಕಾರದ್ದು ಮೊಸಳೆ ಕಣ್ಣೀರು ಅನ್ನೋದು ಖಚಿತವಾಗಿದೆ, ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಬಿಎಸ್ ಯಡಿಯೂರಪ್ಪನವರ ಮುಖವಾಡ ಬಯಲಾಗಿದೆ ಅಂತ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತವಾಗಿವೆ.

ಅಖಿಲ ಭಾರತ ಕೃಷಿ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ 9 ಕ್ಕೂ ಹೆಚ್ಚು ರೈತ ಸಂಘಟನೆಗಳು, 10 ಕ್ಕೂ ಹೆಚ್ಚು ದಲಿತ ಸಂಘಟನೆಗಳು ಹಾಗೂ ಹಲವುಕಾರ್ಮಿಕ ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿವೆ ಅಂತ ರೈತ ನಾಯಕ ನಾಗೇಂದ್ರ ತಿಳಿಸಿದ್ದಾರೆ. ಇನ್ನು ಸೋಮವಾರ ಬೆಂಗಳೂರಿನ ಮೈಸೂರು ಸರ್ಕಲ್ ನಲ್ಲಿ 5000 ಕ್ಖೂ ಹೆಚ್ಚು ರೈತರು ಧರಣಿ ನಡೆಸಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ, ಹಳ್ಳಿಗಳಲ್ಲಿ ಅಂದು ರಸ್ತೆ ತಡೆ ನಡೆಲಾಗುವುದು ಅಂತ ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಹೇಳಿದ್ದಾರೆ.

ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ 25 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡವೆ. ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ- ಉಬರ್, ಟ್ಯಾಕ್ಸಿ ಚಾಲಕರ ಸಂಘಟನೆಗಳು ಸೇರದಂತೆ 30 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬೆಂಬಲ ಘೋಷಿಸಿವೆ…ಇನ್ನೂ ಹೋಟೆಲ್ ಉದ್ಯಮಿಗಳು ಕೂಡ ಪರೋಕ್ಷವಾಗಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದ್ದಾರೆ. 

Spread the love
Leave A Reply

Your email address will not be published.

Flash News