ಬದಲಾಯ್ತಾ “ಪ್ರಜಾ ಟಿವಿ” ಕನ್ನಡ ಆಡಳಿತ..!? ಮಾದ್ಯಮ ಉದ್ಯಮಿ “ವಿಜಯತಾತಾ” ತೆಕ್ಕೆಗೆ ಜಾರಿತಾ..?

ಬೆಂಗಳೂರು:ಇದು ಕನ್ನಡ ಮಾದ್ಯಮ ಲೋಕದಲ್ಲಿ ನಡೆದಿರುವ ಮತ್ತೊಂದು ಬೆಳವಣಿಗೆ.ಕನ್ನಡ ಸುದ್ದಿ ವಾಹಿನಿಗಳ ಪೈಕಿ ಅನೇಕ ವರ್ಷಗಳಿಂದ  ಮುಂಚೂಣಿಯಲ್ಲಿದ್ದ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಒಂದಾದ ಪ್ರಜಾ ಟಿವಿ ಕನ್ನಡದ ಮಾಲಿಕತ್ವ ಬದಲಾಗಿರುವ ಸುದ್ದಿ ಹೊರಬಿದ್ದಿದೆ.ಪ್ರಸ್ತುತ ಮಾಲೀಕತ್ವದಿಂದ ಬೇರೊಬ್ಬರ ತೆಕ್ಕೆಗೆ ಮಗ್ಗಲು ಬದಲಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹೊಸ ಮಾಲೀಕತ್ವದಲ್ಲಿ ಪ್ರಜಾ ಟಿವಿ ಹೊಸ ರೂಪ-ಹೊಸ ವಿನ್ಯಾಸದಲ್ಲಿ ಹೊರಹೊಮ್ಮಲಿದೆ ಎನ್ನುವ ಮಾತು ಸಿಕ್ಕಾಪಟ್ಡೆ ಸುದ್ದಿ ಮಾಡುತ್ತಿದೆ. ಸರಿಸುಮಾರು ಒಂದು ದಶಕಕ್ಕಿಂತಲೂ ಹೆಚ್ಚಿನ  ಸಮಯದಿಂದಲೂ ಸುದ್ದಿ ಪ್ರಸಾರದಲ್ಲಿ ಮಂಚೂಣಿಯಲ್ಲಿತ್ತು ಪ್ರಜಾ ಟಿವಿ.ಸುದ್ದಿ … Read more

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಹೈಕಮಾಂಡ್ ಗೆ  ಪಕ್ಷದ ಇತಿಹಾಸದಲ್ಲೇ ಹಿಂದೆಂದು ಇಷ್ಟೊಂದು ಕಷ್ಟಕರವಾಗಿರಲಿಲ್ಲವೇನೋ ಅನ್ನಿಸುತ್ತೆ.ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿಕೊಂಡಿದೆ.ಯತ್ನಾಳ್ ಬಣದ ಬೇಡಿಕೆಯಂತೆ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಬೇಕೋ, ಬಿವೈ ವಿಜಯೇಂದ್ರ ಅವರನ್ನೇ ಮುಂದುವರೆಸಬೇಕೋ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ.ಇದೆಲ್ಲದರ ನಡುವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಎಲ್ಲವನ್ನು ಸರಿದೂಗಿಸಬಲ್ಲ ಕೆಪಾಸಿಟಿ ಇರುವ ಲೀಡರ್ಸ್ ಗಳು ಯಾರೆನ್ನುವ ಪ್ರಶ್ನೆಗೆ ಹೈಕಮಾಂಡ್ ಬಳಿ ಇರುವ ಕೆಲವೇ ಕೆಲವು ಹೆಸರುಗಳಲ್ಲಿ ಸಿ.ಟಿ ರವಿ,ಅರವಿಂದ ಬೆಲ್ಲದ್ ಮುಂಚೂಣಿಯಲ್ಲಿವೆ … Read more

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

ಬೆಂಗಳೂರು: ಇದು ಎಷ್ಟರ ಮಟ್ಟಿಗೆ ಸತ್ಯವೋ..ಸುಳ್ಳೋ ಗೊತ್ತಿಲ್ಲ.ಆದರೆ ರಾಜಕೀಯ ಪಡ ಸಾಲೆಯಲ್ಲಿ ಇಂತದ್ದೊಂದು ಮಾತು ತುಂಬಾ ಗಂಭೀರವಾಗಿ ಕೇಳಿಬರುತ್ತಿದೆ. ಬಣಜಗಳ ದಿಂದ ದಿಕ್ಕೆಟ್ಟು ಹೋಗಿರುವ ಬಿಜೆಪಿ ಪಕ್ಷವನ್ನು ಹಳಿಗೆ ತರೊಕ್ಕೆ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ ಎನ್ನುವ ಪರಿಸ್ತಿತಿ ನಿಜಕ್ಕೂ ಇದೆಯೇ..? ಆ ಪತ್ರಿಕಾ ದಿಗ್ಗಜರನ್ನೇ ಕರೆತಂದು ಸರಿ ಮಾಡ ಬೇಕೆನಿಸುವ ವಿಚಾರ ಏಕೆ ಬಂದಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿವೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಎನ್ನುವುದಕ್ಕಿಂತ ಏನೂ ಸರಿಯಿಲ್ಲ ಎನ್ನುವಂಥ ಪರಿಸ್ತಿತಿಯಿದೆ.ಬಣ ಜಗಳ ಸರಿ … Read more

ಮಾದ್ಯಮ ಲೋಕದ “ದಿಗಂತ”ದಲ್ಲಿ ಶಾಶ್ವತಕ್ಕೂ “ಅಸ್ತಂಗತ”ನಾದ “ಶಶಿ”ಧರ್

ಪಬ್ಲಿಕ್ ಟಿವಿ ಶಿವಮೊಗ್ಗ ವರದಿಗಾರ ಶಶಿಧರ್ ಇನ್ನು ಕೇವಲ ನೆನಪು-ಗೆಳೆಯನ ಅಗಲಿಕೆಗೆ ಮಾದ್ಯಮ ಸ್ನೇಹಿತರ ಕಂಬನಿ ಶಿವಮೊಗ್ಗ: ಕೆಲವರ ಸಾವುಗಳು ಅತೀವವಾಗಿ ಕಾಡುತ್ತವೆ. ನಮ್ಮಲ್ಲೇ ನಮ್ಮವರಾಗಿದ್ದ, ಹೃದಯಕ್ಕೆ ತೀರಾ ಹತ್ತಿರವಾಗಿದ್ದ ಜೀವವೊಂದು ದೂರವಾದಂತ ನೋವನ್ನು ಕೊಡುತ್ತವೆ. ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಸಾವು ಕೂಡ ಪತ್ರಕರ್ತರಾದಿಯಾಗಿ ಅವರೊಂದಿಗೆ ಒಡನಾಟ ವಿಟ್ಟುಕೊಂಡಿದ್ದವರನ್ನು ಶೋಕದ ಸಾಗರದಲ್ಲಿ ಮುಳುಗಿಸಿದೆ. ಕೆಲವೇ ವರ್ಷಗಳಲ್ಲಿ ಶಿವಮೊಗ್ಗದವರೇ ಆಗೋಗಿದ್ದ ಸ್ನೇಹಿತ-ಆತ್ಮೀಯ ಶಶಿಧರ್ ಗೆ ಕಣ್ಣೀರಾಕದವರೇ ಇಲ್ಲ. ಶಿವಮೊಗ್ಗ ಮಾದ್ಯಮ ಲೋಕದಲ್ಲಿ ಅತ್ಯಂತ ಸ್ನೇಹಪರ … Read more

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 830 ವಾಣಿಜ್ಯ ಕಟ್ಟಡಗಳು ಸೀಜ್..

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 830 ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ  ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ. ಪಾಲಿಕೆಯ 8 ವಲಯಗಳಲ್ಲಿ ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಈ ಪೈಕಿ ಆಯಾ ವಲಯಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ತ್ವರಿತಗತಿಯಲ್ಲಿ ಬಾಕಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು … Read more

ಕ್ರೈಸ್ತ ಧರ್ಮದ ಸಾರವೇ ಶಾಂತಿ,ಶಿಕ್ಷಣಕ್ಕೆ ಕ್ರೈಸ್ತರ ಕೊಡುಗೆ ಅಪಾರ: ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ,

ಬೆಂಗಳೂರು:ಕ್ರೈಸ್ತ ಸಮುದಾಯ ವಿಶ್ವಕ್ಕೆ ಶಾಂತಿ ಸಾರುವ ಧರ್ಮವಾಗಿದೆ. ಎಲ್ಲ ಧರ್ಮ ಮತ್ತು ವರ್ಗದವರಿಗೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳನ್ನು ತೆರದು ವಿದ್ಯಾವಂತ ಸಮಾಜ ನಿರ್ಮಾಣಕ್ಕೆ ಕ್ರೈಸ್ತ ಸಮುದಾಯ ಅಪಾರ ಕೊಡುಗೆ ನೀಡಿದೆ.ಕ್ರೈಸ್ತರನ್ನು ಗುರುತಿಸುವ ಕೆಲಸವಾಗಬೇಕು ಎಂದು  ಬೆಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ ಆಶಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ ವತಿಯಿಂದ ಡಾಕ್ಟರೇಟ್ ಪಡೆದ 72 ಕ್ರೈಸ್ತ  ಪದವೀಧರನ್ನು ಸನ್ಮಾನಿಸುವ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ … Read more

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ಯಾಂಪಸ್ ನಲ್ಲಿ ಇವತ್ತು ಒಂದೇ ವಿಷಯದ ಬಗ್ಗೆ ಚರ್ಚೆ..ಅದು ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಕಚೇರಿ ಮೇಲೆ ನಡೆದ ಇ.ಡಿ ರೇಡ್.. ಬಹುಷಃ  ಬಿಬಿಎಂಪಿಯಲ್ಲೇ ಪ್ರಹ್ಲಾದ್ ಅವರಷ್ಟು ಪ್ರಭಾವಶಾಲಿ ಅಧಿಕಾರಿ ಇನ್ನೊಬ್ಬನಿರಲಾರರೇನೋ..?!.ಅಂಥಾ ಅಧಿಕಾರಿಗೇನೆ ಇ.ಡಿ ತೋಡಿದ ಖೆಡ್ಡಾಕ್ಕೆ ಕೇವಲ ಬಿಬಿಎಂಪಿಯಷ್ಟೇ ಅಲ್ಲ, ಸರ್ಕಾರವೇ ಒಂದ್ ಕ್ಷಣ ಅದುರೋಗಿದೆ.ಏಕಂದ್ರೆ ಎಲ್ಲರಿಗು ಗೊತ್ತಿರುವಂತೆ ಪ್ರಹ್ಲಾದ್  ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಅತ್ಯಾಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಅಧಿಕಾರಿ. ನಿಮಗೆ ಗೊತ್ತಿರಲಿ ಅಂಥಾ ಹೇಳುತ್ತೇವೆ ಕೇಳಿ, … Read more

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಹೇಳಿ ಸಚಿವ ಕೃಷ್ಣಭೈರೇಗೌಡ ಅವರೇ, ದೊಡ್ಡಬಳ್ಳಾಪುರ AC ದುರ್ಗಶ್ರೀ, ತಹಸಿಲ್ದಾರ್  ವಿಭಾ ವಿದ್ಯಾ ರಾಥೋಡ್  ವಿರುದ್ಧ ಕ್ರಮ ಕೈಗೊಳ್ಳಲು ಇದಕ್ಕಿಂತ ಸಾಕ್ಷ್ಯಬೇಕಾ?!   ದೊಡ್ಡಬಳ್ಳಾಪುರ: ಯಾರೇ ಅಧಿಕಾರಿಗೆ ಆಗಲಿ,ಯಾವುದೇ ಹೊಸ ಸ್ಥಳಕ್ಕೆ ಬಂದು,ಹೊಸ ಜವಾಬ್ದಾರಿ ವಹಿಸಿಕೊಂಡರೂ ಅಲ್ಲಿನ ವಾತಾವರಣಕ್ಕೆ ಒಗ್ಗಿ ಹೋಗಲು,ಕೆಲಸ ಅರ್ಥ ಮಾಡಿಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ.ಆದರೆ ದೊಡ್ಡಬಳ್ಳಾಪುರ ಉಪವಿಭಾಗಕ್ಕೆ ಎಸಿ ಆಗಿ ಬಂದ ದುರ್ಗಶ್ರೀ ಅವರ ವಿಷಯದಲ್ಲಿ ಆಗಿದ್ದೇ ಸಂಪೂರ್ಣ ಉಲ್ಟಾ.ತಾಲುಕು ಕಚೇರಿ ಮೂಲಗಳ ಪ್ರಕಾರವೆ ಕಚೇರಿಗೆ ಬಂದು ತುಂಬಾ ಸಮಯವೇನು ಆಗದಿದ್ದರೂ ದುರ್ಗಶ್ರೀ ಮೇಡಮ್ … Read more

EXCLUSIVE..ತೆಲಂಗಾಣದ ನಂತರ ಉತ್ತರ ಪ್ರದೇಶ-ಆಂದ್ರಪ್ರದೇಶಗಳಲ್ಲೂ “ಶಕ್ತಿ” ಯೋಜನೆ ಅನುಷ್ಟಾನ..!

ಜನವರಿ ಮೊದಲ ವಾರದಲ್ಲಿ ಆಂದ್ರಪ್ರದೇಶ ಮತ್ತು ಫೆಬ್ರವರಿ 2ನೇ ವಾರದಲ್ಲಿ ಉತ್ತರ ಪ್ರದೇಶ ರಾಜ್ಯಗಳ ನಿಯೋಗ ಕರ್ನಾಟಕಕ್ಕೆ ಭೇಟಿ ಸಾಧ್ಯತೆ ಬೆಂಗಳೂರು/ತೆಲಂಗಾಣ: ಕರ್ನಾಟಕ(KARNATAKA)ವನ್ನು ಅನೇಕ ವಿಚಾರಗಳಲ್ಲಿ ಕೆಟ್ಟದಾಗಿ ಬಿಂಬಿಸುವ ಪ್ರವೃತ್ತಿ ರಾಜಕೀಯದಲ್ಲಿ ನಡೆಯುತ್ತಲೇ ಬಂದಿದೆ.ಕರ್ನಾಟಕದಲ್ಲಿ ಜಾರಿಗೊಳಿಸಲಾದ “ಉಚಿತ”ಗಳಿಂದ ರಾಜ್ಯ ಬರ್ಬಾದ್ ಆಗಿದೆ.ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಂಬಿಸಿ ಅದನ್ನು  ಚುನಾವಣೆ ವೇಳೆ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸೇರಿದಂತೆ ಅನೇಕ ವಿಪಕ್ಷಗಳು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದವು.ಆದರೆ ತೆಲಂಗಾಣ(TELANGANA) ದಲ್ಲಿ ಕಾಂಗ್ರೆಸ್(CONGRESS) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಘೋಷಿಸಿದ್ದ ಭರವಸೆಗಳನ್ನು  ಜಾರಿ ಮಾಡಿದ ಬೆನ್ನಲ್ಲೇ … Read more

Deepavali bumper: KSRTC ಗೆ 18 ಕೋಟಿ ಗಳಿಕೆ, ಒಂದೇ ದಿನ ಸಾರ್ವಕಾಲಿಕ ದಾಖಲೆಯ ಟಿಕೆಟ್ ಬುಕ್ಕಿಂಗ್

ಬೆಂಗಳೂರು: ನಷ್ಟದ ಹೊರೆಗೆ ಸಿಲುಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KARNATAKA STATE ROAD TRANSPORT CORPORATION) ಗೆ ದೀಪಾವಳಿ ಹಬ್ಬ(DEEPAWALI FESTIAVL) ಸ್ವಲ್ಪ ಮಟ್ಟದ ಚೇತರಿಕೆ ನೀಡಿದೆ.ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದ ಎನ್ನಬಹುದಾದ(ಆದರೆ ಸಾರ್ವಕಾಲಿಕ ದಾಖಲೆಯಲ್ಲ) ಗಳಿಕೆಯನ್ನು ಕೆಎಸ್ ಆರ್ ಟಿಸಿ ಮಾಡಿದೆ. ಗಳಿಕೆಯಲ್ಲಷ್ಟೇ ಅಲ್ಲ, ಪ್ರಯಾಣಿಕರ ಸಂಖ್ಯೆ ಮತ್ತು ಅವತಾರ್ ನಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲೂ ಹೊಸ ವಿಕ್ರಮವನ್ನೇ ಸಾಧಿಸಿದೆ. ದೀಪಾವಳಿ ಹಬ್ಬದಾಚರಣೆಯ ಹಿಂದೆ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಸಾಲು ಸಾಲು ರಜೆಗಳು ಬರುವುದರಿಂದ … Read more